KKR vs PBKS ಪಂದ್ಯವನ್ನು ಬಲಿ ಪಡೆದ ಮಳೆರಾಯ, ತಂಡಗಳಿಗೆ ಒಂದೊಂದು ಅಂಕ!
KKR vs PBKS Match Abondoned: ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವಣ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸೋಮವಾರದ ಪಂದ್ಯ ಮಳೆಗೆ ಬಲಿಯಾಯಿತು. ಈ ಪಂದ್ಯದಲ್ಲಿ ಕೇವಲ 3.4 ಓವರ್‌ಗಳನ್ನು ಮಾತ್ರ ಬೌಲ್ ಮಾಡಲಾಯಿತು. ಅಂತಿಮಾಗಿ ಎರಡೂ ತಂಡಳಿಗೆ ಒಂದೊಂದು ಅಂಕವನ್ನು ನೀಡಲಾಗಿದೆ.
ಕೋಲ್ಕತಾ vs ಪಂಜಾಬ್ ನಡುವಣ ಪಂದ್ಯ ಮಳೆಗೆ ಬಲಿ. -
ಕೋಲ್ಕತಾ: ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ (KKR vs PBKS) ನಡುವಣ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ 12ನೇ ಪಂದ್ಯ ಮಳೆಯಿಂದ ಫಲಿತಾಂಶವಿಲ್ಲದೆ ರದ್ದಾಯಿತು. ಕೊನೆಯವರೆಗೂ ಈ ಪಂದ್ಯವನ್ನು ಕನಿಷ್ಠ 5 ಓವರ್‌ಗಳಲ್ಲಿ ನಡೆಸಬೇಕೆಂದು ಅಂಪೈರ್‌ಗಳು ಬಯಸಿದ್ದರು. ಆದರೆ, ಎಡೆ ಬಿಡದೆ ಸುರಿದ ಮಳೆಯಿಂದ ಕನಿಷ್ಠ ಐದು ಓವರ್‌ಗಳಿಗೂ ಪಂದ್ಯವನ್ನು ನಡೆಸಲು ಸಾಧ್ಯವಾಗದೆ ಅಂಪೈರ್‌ಗಳು ಪಂದ್ಯವನ್ನು ರದ್ದು ಮಾಡಿದರು. ಇದರ ಪರಿಣಾಮವಾರಿ ಕೋಲ್ಕತಾ ಹಾಗೂ ಪಂಜಾಬ್ ತಂಡಗಳಿಗೆ ಒಂದೊಂದು ಅಂಕವನ್ನು ನೀಡಲಾಯಿತು.
ಪಂದ್ಯ ರದ್ದತಿಯಿಂದ ಪಂಜಾಬ್ ಕಿಂಗ್ಸ್‌ಗೆ ಹೆಚ್ಚಿನ ಲಾಭವಾಗಿದೆ. ಮೂರು ಪಂದ್ಯಗಳಲ್ಲಿ ಎರಡು ಗೆಲುವು ಮತ್ತು ಒಂದು ಡ್ರಾ (ರದ್ದಾದ ಪಂದ್ಯ)ದೊಂದಿಗೆ, ಪಂಜಾಬ್ ತಂಡವು ಈಗ 5 ಅಂಕಗಳನ್ನು ತಲುಪಿದೆ ಮತ್ತು ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಟಾಸ್ ಸೋತು ಮೊದಲು ಬೌಲ್ ಮಾಡಲು ಅವಕಾಶ ಪಡೆದ ನಂತರ ಪಂಜಾಬ್ ಕಿಂಗ್ಸ್ ಪರ ಕ್ಸೇವಿಯರ್ ಬಾರ್ಟ್ಲೆಟ್, ಎರಡನೇ ಓವರ್‌ನಲ್ಲಿ ಕೆಕೆಆರ್ ತಂಡದ ಎರಡು ನಿರ್ಣಾಯಕ ವಿಕೆಟ್‌ಗಳನ್ನು ಪಡೆದರು. ಆ ಮೂಲಕ ಪಂಜಾಬ್‌ಗೆ ಅದ್ಭುತ ಆರಂಭವನ್ನು ನೀಡಿದರು. ಪಂದ್ಯ ಮುಗಿದಿದ್ದರೆ, ಪಂಜಾಬ್ ಗೆಲುವು ದಾಖಲಿಸಲು ಮತ್ತು ಪೂರ್ಣ ಎರಡು ಅಂಕಗಳನ್ನು ಪಡೆಯಲು ಸುವರ್ಣಾವಕಾಶವನ್ನು ಪಡೆಯುತ್ತಿತ್ತು; ಆದಾಗ್ಯೂ, ಅವರು ಪಡೆದ ಒಂದು ಪಾಯಿಂಟ್ ಅವರನ್ನು ಟೇಬಲ್‌ನ ಅಗ್ರಸ್ಥಾನಕ್ಕೆ ಕೊಂಡೊಯ್ಯಿತು.
KKR vs PBKS: 25 ಕೋಟಿ ರು ಆಟಗಾರ ಕ್ಯಾಮೆರಾನ್ ಗ್ರೀನ್ ಮತ್ತೆ ಫ್ಲಾಫ್! ಫ್ಯಾನ್ಸ್ ಕಿಡಿ..
8ನೇ ಸ್ಥಾನಕ್ಕೆ ಏರಿದ ಕೆಕೆಆರ್
ಮತ್ತೊಂದೆಡೆ, ಈ ಒಂದು ಅಂಕವು ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಜೀವಸೆಲೆಯಾಗಿದೆ. ಕೆಕೆಆರ್ ತನ್ನ ಆರಂಭಿಕ ಎರಡೂ ಪಂದ್ಯಗಳನ್ನು ಸೋತು ಪಾಯಿಂಟ್ಸ್ ಟೇಬಲ್‌ನಲ್ಲಿ ಒಂಬತ್ತನೇ ಸ್ಥಾನದಲ್ಲಿ ಕುಸಿದಿತ್ತು. ಈ ಪಂದ್ಯ ರದ್ದಾದ ಕಾರಣ ಒಂದು ಅಂಕ ಪಡೆದಿರುವ ಕೆಕೆಆರ್ ಈ ಋತುವಿನಲ್ಲಿ ಖಾತೆ ತೆರೆದಿದೆ. ಇದರಿಂದಾಗಿ ಕೆಕೆಆರ್ ಈಗ 8ನೇ ಸ್ಥಾನಕ್ಕೆ ಏರಿದೆ. ಗುಜರಾತ್ ಟೈಟನ್ಸ್‌ಗಿಂತ ಕೆಕೆಆರ್ ಮುಂದಿದೆ. ಆದಾಗ್ಯೂ, ನಾಯಕ ರಹಾನೆ ಅವರ ಕಳವಳಕ್ಕೆ ಕಾರಣವೆಂದರೆ ಅವರ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಮತ್ತೊಮ್ಮೆ ವಿಫಲರಾಗಿದ್ದಾರೆ; ಮಳೆಯಿಂದ ಪಂದ್ಯ ನಿಲ್ಲುವ ಹೊತ್ತಿಗೆ, ತಂಡ ಎರಡು ನಿರ್ಣಾಯಕ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 25 ರನ್‌ಗಳನ್ನು ಗಳಿಸಿತ್ತು.
Match 1⃣2⃣ between @KKRiders and @PunjabKingsIPL has been called off due to wet outfield 🌧️
— IndianPremierLeague (@IPL) April 6, 2026
Both teams get a point each.#TATAIPL | #KhelBindaas | #KKRvPBKS pic.twitter.com/FpRpfljBpo
10ನೇ ಸ್ಥಾನದಲ್ಲಿ ಸಿಎಸ್‌ಕೆ
ಆರ್‌ಸಿಬಿ, ರಾಜಸ್ಥಾನ ಮತ್ತು ಡೆಲ್ಲಿ ತಂಡಗಳು ತಲಾ 4 ಅಂಕಗಳನ್ನು ಹೊಂದಿದ್ದು ಅಗ್ರ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸುತ್ತಿವೆ. ಪಂಜಾಬ್ ಕಿಂಗ್ಸ್ ಅಗ್ರ ಸ್ಥಾನಕ್ಕೆ ಏರಿರುವುದು ಓಟವನ್ನು ಇನ್ನಷ್ಟು ರೋಮಾಂಚನಗೊಳಿಸಿದೆ. ಇದರ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಮೂರು ಸೋಲುಗಳನ್ನು ಅನುಭವಿಸಿ 10 ನೇ ಸ್ಥಾನಕ್ಕೆ ಕುಸಿದಿದೆ.
IPL 2026: ʻನಾನಿನ್ನೂ ಆಡಬೇಕಾಗಿತ್ತುʼ-ಐಪಿಎಲ್ ನಿವೃತ್ತಿಗೆ ಕಾರಣ ತಿಳಿಸಿದ ಆರ್ ಅಶ್ವಿನ್!
ಈಗ ಪಂಜಾಬ್ ಕಿಂಗ್ಸ್ ತಂಡವು ತನ್ನ ಪ್ರಾಬಲ್ಯವನ್ನು ಕಾಯ್ದುಕೊಳ್ಳುವ ಗುರಿಯನ್ನು ಹೊಂದಿದ್ದು, ಮುಂಬರುವ ಪಂದ್ಯಗಳಲ್ಲಿ ಕೆಕೆಆರ್ ತನ್ನ ಮೊದಲ ಗೆಲುವಿನ ಹುಡುಕಾಟದಲ್ಲಿದೆ. ಮಳೆಯು ಆಟದ ಆನಂದವನ್ನು ಕುಂಠಿತಗೊಳಿಸಿದ್ದರೂ, ಪಾಯಿಂಟ್ ಪಟ್ಟಿಯಲ್ಲಿ ಇದು ಖಂಡಿತವಾಗಿಯೂ ಗಮನಾರ್ಹ ಬದಲಾವಣೆಗೆ ಕಾರಣವಾಗಿದೆ.