ಬೈಕ್‌ಗೆ ಕಾರು ಡಿಕ್ಕಿ;ತಂದೆ-ಮಗನಿಗೆ ಗಾಯ, ಚಾಲಕ ಪರಾರಿ!
ರಸ್ತೆಯಲ್ಲಿ ಬಿದ್ದಿದ್ದ ಗಾಯಾಳುಗಳನ್ನು ಸಾರ್ವಜನಿಕರು ತಕ್ಷಣವೇ ಆಟೋ ಒಂದರಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.ಬಳಿಕ ವೈದ್ಯಾಧಿಕಾರಿಗಳ ಸಲಹೆಯ ಮೇರೆಗೆ ತೀವ್ರ ಗಾಯ ಗೊಂಡಿದ್ದ ಅಕ್ರಂಪಾಷಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ.
-
ಚಿಂತಾಮಣಿ: ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವೈಜಕೂರು ಗೇಟ್ ಬಳಿ ಬೈಕ್‌ನಲ್ಲಿ ಚಲಿಸುತ್ತಿದ್ದ ತಂದೆ ಮತ್ತು ಮಗನಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು, ಚಾಲಕನು ಗಾಯಾಳುಗಳಿಗೆ ನೆರವಾಗದೆ ಕಾರಿನೊಂದಿಗೆ ಪರಾರಿಯಾಗಿದ್ದಾನೆ.
ಅಪಘಾತದಲ್ಲಿ ಸೂಲಿಬೆಲೆ ಗ್ರಾಮದ ನಿವಾಸಿ ಅಕ್ರಂಪಾಷಾ ಅವರಿಗೆ ತಲೆ,ಮುಖ,ಕೈ ಮತ್ತು ಕಾಲು ಗಳಿಗೆ ತೀವ್ರ ಗಾಯಗಳಾಗಿದ್ದು,ಅವರ ಮಗ ಮೊಹಮ್ಮದ್ ಹಿಜರ್ ಅವರಿಗೂ ಕೈಗಳಿಗೆ ಗಾಯ ಗಳಾಗಿವೆ.
ಮಧ್ಯಾಹ್ನ ಸುಮಾರು 12 ಗಂಟೆಗೆ ಅಕ್ರಂಪಾಷಾ ಅವರು ಚಿಂತಾಮಣಿಗೆ ಬರುತ್ತಿರುವುದಾಗಿ ಫೋನ್ ಮೂಲಕ ತಿಳಿಸಿದ್ದರು.ತದನಂತರ ಮಧ್ಯಾಹ್ನ 3:00 ಗಂಟೆಯ ಸುಮಾರಿಗೆ ಅಕ್ರಂಪಾಷಾ ಅವರು ತಮ್ಮ ಮಗ ಮೊಹಮ್ಮದ್ ಹಿಜರ್‌ನನ್ನು ಟಿ.ವಿ.ಎಸ್ ಎಕ್ಸ್‌ಎಲ್ ದ್ವಿಚಕ್ರ ವಾಹನ ಹಿಂಬದಿಯಲ್ಲಿ ಕೂರಿಸಿಕೊಂಡು ವೈಜಕೂರು ಗೇಟ್ ಬಳಿ ರಸ್ತೆಯ ಎಡಬದಿಯಲ್ಲಿ ಬರುತ್ತಿದ್ದರು.ಈ ವೇಳೆ ಅಲ್ಲಿನ ಬಾರ್ ಕಡೆಯಿಂದ ಅತಿ ವೇಗವಾಗಿ ಬಂದ ಕಾರು, ಇವರ ದ್ವಿಚಕ್ರ ವಾಹನಕ್ಕೆ ಜೋರಾಗಿ ಡಿಕ್ಕಿ ಹೊಡೆದಿದೆ.
ಇದನ್ನೂ ಓದಿ: Chinnaswamy Stadium: ಚಿನ್ನಸ್ವಾಮಿ ಸ್ಟೇಡಿಯಂಗೆ ಹೈಟೆಕ್ ಟಚ್; ಆಸನ ಸಾಮರ್ಥ್ಯ 55,000ಕ್ಕೆ ಹೆಚ್ಚಳ
ಡಿಕ್ಕಿಯ ರಭಸಕ್ಕೆ ಇಬ್ಬರೂ ದ್ವಿಚಕ್ರ ವಾಹನ ಸಮೇತ ಕೆಳಗೆ ಬಿದ್ದಿದ್ದು,ವಾಹನ ಜಖಂಗೊಂಡಿದೆ. ಅಪಘಾತವೆಸಗಿದ ಕಾರಿನ ಚಾಲಕನು ಗಾಯಾಳುಗಳನ್ನು ಉಪಚರಿಸದೆ,ಮಾನವೀಯತೆಯನ್ನೂ ಮರೆತು ಸ್ಥಳದಿಂದ ಕಾರನ್ನು ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ ಎನ್ನಲಾಗಿದೆ.
ರಸ್ತೆಯಲ್ಲಿ ಬಿದ್ದಿದ್ದ ಗಾಯಾಳುಗಳನ್ನು ಸಾರ್ವಜನಿಕರು ತಕ್ಷಣವೇ ಆಟೋ ಒಂದರಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.ಬಳಿಕ ವೈದ್ಯಾಧಿಕಾರಿಗಳ ಸಲಹೆಯ ಮೇರೆಗೆ ತೀವ್ರ ಗಾಯಗೊಂಡಿದ್ದ ಅಕ್ರಂಪಾಷಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ.
ಈ ಕುರಿತು ಗಾಯಾಳು ಅಕ್ರಂಪಾಷಾ ಅವರ ಮೈದುನ ಬಾಬಾ ಬಿನ್ ಲೇಟ್ ಮೊಹಮ್ಮದ್ ಅಲಿ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತವೆಸಗಿ ಪರಾರಿಯಾಗಿರುವ ಕಾರು ಮತ್ತು ಅದರ ಚಾಲಕನ ಪತ್ತೆಗಾಗಿ ಜಾಲ ಬೀಸಿದ್ದಾರೆ