Chikkaballapur News: ನೂರಾರು ಭಕ್ತರ ಸಮ್ಮುಖದಲ್ಲಿ: ವಾಪಸಂದ್ರದ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಕಲ್ಯಾಣ ಮಹೋತ್ಸವ
ನಮ್ಮ ಪೂರ್ವಜರ ಪ್ರಕಾರ ಈ ದೇವಾಲಯಕ್ಕೆ ಸುಮಾರು 300 ವರ್ಷಗಳ ಇತಿಹಾಸವಿದ್ದು, ಚಿಕ್ಕ ಬಳ್ಳಾಪುರದ ‘ದೇವರ ಮೂಲೆ’ ಎಂದೇ ಪ್ರಸಿದ್ಧವಾಗಿದೆ.ಇಲ್ಲಿ ನಿಷ್ಠೆಯಿಂದ ಹರಕೆ ಸಲ್ಲಿಸಿದರೆ ಅದು ಖಂಡಿತವಾಗಿಯೂ ನೆರವೇರುತ್ತದೆ ಎಂಬ ದೃಢ ನಂಬಿಕೆ ಭಕ್ತರಲ್ಲಿ ಇದೆ. ಹೀಗಾಗಿ ಈ ದೇವರಿಗೆ ಶ್ರದ್ಧಾ ಭಕ್ತಿಯಿಂದ ನಡೆದುಕೊಂಡು ಬಂದಿದ್ದೇವೆ
-
ಚಿಕ್ಕಬಳ್ಳಾಪುರ: ನಗರದ ವಾಪಸಂದ್ರದಲ್ಲಿರುವ ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಇಂದು ಶ್ರೀದೇವಿ, ಭೂದೇವಿ ಸಮೇತ ಶ್ರೀ ರಂಗನಾಥಸ್ವಾಮಿ ಯ ಕಲ್ಯಾಣ ಮಹೋತ್ಸವವನ್ನು ಅತ್ಯಂತ ಶ್ರದ್ಧಾ, ಭಕ್ತಿಭಾವದಿಂದ ನೆರವೇರಿಸಲಾಯಿತು. ಈ ಮಹೋತ್ಸವದಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಧಾರ್ಮಿಕ ಸಂಭ್ರಮಕ್ಕೆ ಸಾಕ್ಷಿ ಯಾದರು.
ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆ, ಅಲಂಕಾರ, ಹೋಮ–ಹವನ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಶ್ರದ್ಧಾಪೂರ್ವಕವಾಗಿ ನಡೆಯಿತು. ದೇವರ ದರ್ಶನಕ್ಕೆ ಆಗಮಿಸಿದ ಭಕ್ತರು ಪೂಜೆಗಳಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಭಕ್ತ ಸೇವಾಕರ್ತರಾದ ಜೆಸಿಬಿ ಮಂಜುನಾಥ್ ಮಾತನಾಡಿ, ನಮ್ಮ ಪೂರ್ವಜರ ಪ್ರಕಾರ ಈ ದೇವಾಲಯಕ್ಕೆ ಸುಮಾರು 300 ವರ್ಷಗಳ ಇತಿಹಾಸವಿದ್ದು,ಚಿಕ್ಕಬಳ್ಳಾಪುರದ ‘ದೇವರ ಮೂಲೆ’ ಎಂದೇ ಪ್ರಸಿದ್ಧವಾಗಿದೆ.ಇಲ್ಲಿ ನಿಷ್ಠೆಯಿಂದ ಹರಕೆ ಸಲ್ಲಿಸಿದರೆ ಅದು ಖಂಡಿತವಾಗಿಯೂ ನೆರವೇರುತ್ತದೆ ಎಂಬ ದೃಢ ನಂಬಿಕೆ ಭಕ್ತರಲ್ಲಿ ಇದೆ. ಹೀಗಾಗಿ ಈ ದೇವರಿಗೆ ಶ್ರದ್ಧಾಭಕ್ತಿಯಿಂದ ನಡೆದುಕೊಂಡು ಬಂದಿದ್ದೇವೆ ಎಂದರು.
ಇದನ್ನೂ ಓದಿ: Chikkaballapur News: ಏಡುಕೊಂಡುಲ ಶ್ರೀನಿವಾಸ್‌ಗೆ ಗೌರವ ಡಾಕ್ಟರೇಟ್: ಹಿತೈಷಿಗಳ ಸನ್ಮಾನ
ವೈಕುAಠ ಏಕಾದಶಿ ಪ್ರಯುಕ್ತ ಲೋಕ ಕಲ್ಯಾಣ ಹಾಗೂ ಸರ್ವಜನರ ಹಿತಕ್ಕಾಗಿ,ವಿಶೇಷವಾಗಿ ವಾಪಸಂದ್ರ ನಿವಾಸಿಗಳ ಒಳಿತಿಗಾಗಿ ದೇವರ ಅನುಗ್ರಹ ಇರಲೆಂದು ಒಂದು ದಿನ ಮುಂಚಿತವಾಗಿ ಕಲ್ಯಾಣ ಮಹೋತ್ಸವವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ದೇವಾ ಲಯದಲ್ಲಿ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಶಾಸ್ತ್ರೋಕ್ತವಾಗಿ ನಡೆಸಲಾಗುತ್ತಿದೆ ಎಂದ ಅವರು ಅನ್ನದಾನದ ವ್ಯವಸ್ಥೆ ಬಗ್ಗೆಯೂ ತಿಳಿಸಿದರು.
ಇನ್ನು ಡಿ.30 ರಂದು(ಮಂಗಳವಾರ) ನಡೆಯಲಿರುವ ವೈಕುಂಠ ಏಕಾದಶಿ ಪ್ರಯುಕ್ತ ಶ್ರೀ ರಂಗನಾಥ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ, ದೀಪಾಲಂಕಾರ, ಪಂಚಾಮೃತ ಅಭಿಷೇಕ, ಮಹಾ ಮಂಗಳಾರತಿ, ವೈಕುಂಠದ್ವಾರ ದರ್ಶನ ಹಾಗೂ ಮುಕ್ಕೋಟಿ ದ್ವಾದಶಿ ಪೂಜೆಗಳನ್ನು ಭಕ್ತಿಭಾವ ದಿಂದ ಏರ್ಪಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ದೇವರ ಕೃಪೆಗೆ ಪಾತ್ರ ರಾಗಬೇಕೆಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ದೇವಾಲಯದ ಅರ್ಚಕರಾದ ವೆಂಕಟೇಶ್, ಚಂದ್ರಶೇಖರ್, ಬಾಬು, ಅಂಬಿಕಾ ನಾರಾಯಣಸ್ವಾಮಿ, ಸಿ.ಎಸ್.ರವಿ, ಕೆ.ಎನ್.ಟಿ. ರಾಮಣ್ಣ, ಲಕ್ಷ್ಮಣ್ಣ, ನಾರಾಯಣಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.