B.Y. Vijayendra's birthday celebration: ಎ.ಪಿ.ಎಂ.ಸಿ ಆವರಣದಲ್ಲಿ ಕಾರ್ಮಿಕರಿಗೆ ರಗ್ಗು ಮತ್ತು ಆಹಾರಧಾನ್ಯಗಳ ಕಿಟ್ ವಿತರಣೆ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಾರ್ಗದಲ್ಲಿಯೇ ದೃಢವಾದ ಹೆಜ್ಜೆಗಳಿನ್ನಿಟ್ಟು ಸಾಗುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಜನಪರ ಕಾಳಜಿಯುಳ್ಳ ಯುವ ಚೇತನವಾಗಿದ್ದಾರೆ. ಅನೇಕ ಏರಿಳಿತಗಳ ನಡುವೆ ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ಬಿಲಿಷ್ಟವಾಗಿ ಕಟ್ಟುವಲ್ಲಿ ಮುಂಚೂಣಿಯಲ್ಲಿದ್ದಾರೆ.ಇವರಿಗೆ ಭಗವಂತ ಆಯುರಾರೋಗ್ಯ ಭಾಗ್ಯ ಕಲ್ಪಿಸಿ ನೂರಾರು ವರ್ಷಗಳ ಕಾಲ ಜನಸೇವೆಯನ್ನು ಮಾಡುವ ಶಕ್ತಿ ನೀಡಲಿ
-
Ashok Nayak
Nov 6, 2025 12:00 AM
ಚಿಕ್ಕಬಳ್ಳಾಪುರ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ( BJP State President B.Y. Vijayendra) ಅವರ ಜನ್ಮದಿನಾಚರಣೆ ಯನ್ನು ಭಗತ್‌ಸಿಂಗ್ ಚಾರಿಟೇಬಲ್ ಟ್ರಸ್ಟ್ವತಿಯಿಂದ ಸಂದೀಪ್ ಬಿ.ರೆಡ್ಡಿ ಅವರ ತಂಡ ವಿಶಿಷ್ಟ ಸೇವಾಕಾರ್ಯಕ್ರಮಗಳ ಮೂಲಕ ಆಚರಿಸಿದರು.
ನಗರದ ಎ.ಪಿ.ಎಂ.ಸಿ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನೂರಾರು ಮಂದಿ ಹಮಾಲಿಗಳಿಗೆ, ಕಾರ್ಮಿಕರಿಗೆ ಆಹಾರದ ಕಿಟ್ ಜತೆಗೆ ಚಳಿಗಾಲದಿಂದ ದೇಹವನ್ನು ರಕ್ಷಣೆ ಮಾಡುವ ರಗ್ಗುಗಳನ್ನು ವಿತರಿಸುವ ಮೂಲಕ ವಿಶಿಷ್ಟವಾಗಿ ಆಚರಣೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಭಗತ್ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್.ಬಿ.ರೆಡ್ಡಿ ಮಾತನಾಡಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಾರ್ಗದಲ್ಲಿಯೇ ದೃಢವಾದ ಹೆಜ್ಜೆಗಳಿನ್ನಿಟ್ಟು ಸಾಗುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಜನಪರ ಕಾಳಜಿಯುಳ್ಳ ಯುವ ಚೇತನವಾಗಿದ್ದಾರೆ. ಅನೇಕ ಏರಿಳಿತಗಳ ನಡುವೆ ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ಬಿಲಿಷ್ಟವಾಗಿ ಕಟ್ಟುವಲ್ಲಿ ಮುಂಚೂಣಿಯಲ್ಲಿದ್ದಾರೆ.ಇವರಿಗೆ ಭಗವಂತ ಆಯುರಾರೋಗ್ಯ ಭಾಗ್ಯ ಕಲ್ಪಿಸಿ ನೂರಾರು ವರ್ಷಗಳ ಕಾಲ ಜನಸೇವೆಯನ್ನು ಮಾಡುವ ಶಕ್ತಿ ನೀಡಲಿ ಎಂದು ಶ್ರಮಿಕರಿಗೆ ಅನ್ನ, ಆಹಾರ ಬಟ್ಟೆ ನೀಡುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.
ಇದನ್ನೂ ಓದಿ: BY Vijayendra: ರಾಜ್ಯ ಸರ್ಕಾರಕ್ಕೆ ಅಧಿಕಾರದ ಮದ ಏರಿದೆ: ಬಿ.ವೈ. ವಿಜಯೇಂದ್ರ ಕಿಡಿ
ಬಿ.ಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ರಾಜ್ಯ ರಾಜ್ಯಕಾರಣದಲ್ಲಿ ಉತ್ತಮ ಭವಿಷ್ಯ ವಿರುವ ನಾಯಕರಾಗಿ ಹೊರಹೊಮ್ಮಿದ್ದಾರೆ. ನಮ್ಮ ನಿಮ್ಮೆಲ್ಲರ ಭವಿಷ್ಯದ ಅಶಾಕಿರಣ ವಾಗಿರುವ ನನ್ನ ಹಿರಿಯಣ್ಣನಂತಿರುವ ವಿಜಯೇಂದ್ರಣ್ಣ ಅವರ ಹುಟ್ಟು ಹಬ್ಬವನ್ನು ಕಾರ್ಮಿಕರ ಜತೆಗೂಡಿ ಆಚರಿಸಬೇಕು ಎಂಬ ಅಧಮ್ಯ ಬಯಕೆಯಿಂದ ಈ ಕಾರ್ಯಕ್ರಮ ವನ್ನು ಆಯೋಜನೆ ಮಾಡಲಾಗಿದೆ.ನಿಮ್ಮ ಕಷ್ಟಗಳನ್ನು ಪರಿಹರಿಸುವ ಶಕ್ತಿಯನ್ನು ಭಗವಂತ ನನಗೆ ನೀಡಿಲ್ಲ.ನಿಮ್ಮೆಲ್ಲರ ಪ್ರೀತಿ ವಿಶ್ವಾಸದಿಂದ ಆ ಶಕ್ತಿ ಬಂದೇ ಬರಲಿದ್ದು ನಿಮ್ಮ ಕಷ್ಟಗಳಿಗೆ ಹೆಗಲಾಗಿ ನಿಲ್ಲುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ೩೦೦ಕ್ಕೂ ಹೆಚ್ಚು ಮಂದಿಗೆ ಅನ್ನದಾನ ಮಾಡಲಾಗಿದ್ದು, ೧೫೦ಕ್ಕೂ ಹೆಚ್ಚು ಮಂದಿಗೆ ಫುಡ್‌ಕಿಟ್ ಜತೆಗೆ ರಗ್ಗುಗಳನ್ನು ವಿತರಣೆ ಮಾಡಲಾಯಿತು. ಈ ವೇಳೆ ಯುವ ಮುಖಂಡ ಮಧು, ಹರೀಶ್ ಮತ್ತಿತರರು ಇದ್ದರು.