ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sadhguru Shri Madhusudan Sai: ಯಶಸ್ಸಿಗೆ ಯಾವುದೇ ಶಾರ್ಟ್ಕಟ್ ಇರುವುದಿಲ್ಲ: ಸದ್ಗುರು ಶ್ರೀ ಮಧುಸೂದನ ಸಾಯಿ

ಯಾರೊಬ್ಬರೂ ಬೇರೆಯವರಿಗೆ ಮೋಸ ಮಾಡಲು ಸಾಧ್ಯವಿಲ್ಲ. ನಿಮ್ಮ ಶಿಕ್ಷಕರು, ಪಾಲು ದಾರರು, ಹೆತ್ತವರಿಗೆ ಮೋಸ ಮಾಡಲು ಹೋದರೆ ಕೊನೆಗೆ ಅದು ನಿಮಗೆ ನೀವೇ ಮೋಸ ಮಾಡಿಕೊಂಡAತೆ ಆಗುತ್ತದೆ. ಇದರಿಂದ ಕೊನೆಯಲ್ಲಿ ದುಃಖವೇ ಸಿಗುತ್ತದೆ. ಯಶಸ್ಸು ಗಳಿಸ ಬೇಕು ಎಂದುಕೊಳ್ಳುವವರು ಸತತ ಪರಿಶ್ರಮದಿಂದ ಪ್ರಯತ್ನಿಸಬೇಕು

ಯಶಸ್ಸಿಗೆ ಯಾವುದೇ ಶಾರ್ಟ್ಕಟ್ ಇರುವುದಿಲ್ಲ

ಅನ್ನಪೂರ್ಣ ಟ್ರಸ್ಟ್ಗೆ ನೆರವಾಗುತ್ತಿರುವ 'ಹೆಲ್ದೀಫಾರ್ಮ್ ಫುಡ್ಸ್' ಕಂಪನಿಯ ನಿರ್ದೇಶಕರಾದ ಪ್ರವೀಣಾ ಬಲುಸು ಮತ್ತು ರಾಘವುಲು ಬಲುಸು ಅವರಿಗೆ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು 'ಸಿಎಸ್‌ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ' ನೀಡಿ ಗೌರವಿಸಿದರು. -

Ashok Nayak Ashok Nayak Nov 6, 2025 12:23 AM

ಚಿಕ್ಕಬಳ್ಳಾಪುರ: ಕಠಿಣ ಪರಿಶ್ರಮದಿಂದ ಮಾತ್ರವೇ ಒಬ್ಬರು ಯಶಸ್ಸು ಗಳಿಸಲು ಸಾಧ್ಯ. ಯಶಸ್ಸಿಗೆ ಶಾರ್ಟ್ಕಟ್ ಇಲ್ಲ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು. ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಬುಧವಾರ  ನಡೆದ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ'ದಲ್ಲಿ ಅವರು ಆಶೀರ್ವಚನ ನೀಡಿದರು.

ಯಾರೊಬ್ಬರೂ ಬೇರೆಯವರಿಗೆ ಮೋಸ ಮಾಡಲು ಸಾಧ್ಯವಿಲ್ಲ. ನಿಮ್ಮ ಶಿಕ್ಷಕರು, ಪಾಲು ದಾರರು, ಹೆತ್ತವರಿಗೆ ಮೋಸ ಮಾಡಲು ಹೋದರೆ ಕೊನೆಗೆ ಅದು ನಿಮಗೆ ನೀವೇ ಮೋಸ ಮಾಡಿಕೊಂಡAತೆ ಆಗುತ್ತದೆ. ಇದರಿಂದ ಕೊನೆಯಲ್ಲಿ ದುಃಖವೇ ಸಿಗುತ್ತದೆ. ಯಶಸ್ಸು ಗಳಿಸಬೇಕು ಎಂದುಕೊಳ್ಳುವವರು ಸತತ ಪರಿಶ್ರಮದಿಂದ ಪ್ರಯತ್ನಿಸಬೇಕು ಎಂದು ಕಿವಿಮಾತು ಹೇಳಿದರು.

ಇದನ್ನೂ ಓದಿ: Chikkaballapur News: ಚಿತ್ತ ಚಾಪಲ್ಯಕ್ಕೆ ಆಸೆಯೇ ಕಾರಣ : ಚಿಂತೆಯಿಲ್ಲದ ಸ್ಥಿರ ಮನಸ್ಸುಳ್ಳವರಾಗಬೇಕು

ಭಾರತೀಯ ಜ್ಞಾನ ಪದ್ಧತಿಯನ್ನು ಜನಪ್ರಿಯಗೊಳಿಸಲು ಇದೀಗ ಕೃತಕ ಬುದ್ಧಿಮತ್ತೆಯ ಬಳಕೆ ಆರಂಭವಾಗಿದೆ. ಇಂದಿನ ಯುವಜನರಿಗೆ ಎಲ್ಲವೂ ತತ್‌ಕ್ಷಣಕ್ಕೆ ಬೇಕು. ಅವರು ಅಧ್ಯಾತ್ಮ ಗುರುವಿಗೆ ಪ್ರಶ್ನೆ ಕೇಳುವುದಿಲ್ಲ. ಅಥವಾ ಧ್ಯಾನದಿಂದ ತಮ್ಮೊಳಗೆ ಉತ್ತರ ಕಂಡುಕೊಳ್ಳಲು ಪ್ರಯತ್ನ ಪಡುವುದಿಲ್ಲ. ಅವರು ಒಂದು ಆಪ್‌ಗೆ ಪ್ರಶ್ನೆ ಕೇಳುತ್ತಾರೆ. ತಕ್ಷಣಕ್ಕೆ ಉತ್ತರ ಸಿಗದಿದ್ದರೆ ಹುಡುಕಾಟವನ್ನೇ ನಿಲ್ಲಿಸುತ್ತಾರೆ. ಯುವ ಜನರ ನಿರೀಕ್ಷೆ, ಆಶೋತ್ತರಗಳನ್ನು ಅರ್ಥ ಮಾಡಿಕೊಂಡು ಅದರಂತೆ ಅಧ್ಯಾತ್ಮ ಜ್ಞಾನವನ್ನು ಹರಡು ವುದು ಅತ್ಯಗತ್ಯ ಎಂದು ಹೊಸ ತಲೆಮಾರಿನ ಮನೋಭಾವದ ಬಗ್ಗೆ ವಿವರಿಸಿದರು.

ಕೃತಕ ಬುದ್ಧಿಮತ್ತೆಯು ಪ್ರವರ್ಧಮಾನಕ್ಕೆ ಬಂದೇ ಬರುತ್ತದೆ. ಆದರೆ ಅದು ನಿಮ್ಮನ್ನು ಪ್ರೀತಿಸುವುದಿಲ್ಲ, ನಿಮಗಾಗಿ ಸಹಾನುಭೂತಿ ತೋರಿ ಮಾರ್ಗದರ್ಶನ ಮಾಡುವುದಿಲ್ಲ. ಹೀಗಾಗಿ ನಿಮಗೆ ಗುರುವಿನ ಅಗತ್ಯ ಇದ್ದೇ ಇರುತ್ತದೆ ಎಂದು ಎಚ್ಚರಿಸಿದರು.

ಎಚ್‌ಸಿಎಲ್ ಸಮೂಹದ ಸಹ ಸಂಸ್ಥಾಪಕ ಅರ್ಜುನ್ ಮಲ್ಹೋತ್ರ ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ನಾಯಕತ್ವ ಪುರಸ್ಕಾರ' ನೀಡಿ ಗೌರವಿಸಲಾಯಿತು. ಅನ್ನಪೂರ್ಣ ಟ್ರಸ್ಟ್ಗೆ ನೆರವಾಗುತ್ತಿರುವ 'ಹೆಲ್ದೀಫಾರ್ಮ್ ಫುಡ್ಸ್' ಕಂಪನಿಯ ನಿರ್ದೇಶಕ ರಾದ ಪ್ರವೀಣಾ ಬಲುಸು ಮತ್ತು ರಾಘವುಲು ಬಲುಸು ಅವರಿಗೆ 'ಸಿಎಸ್‌ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ' ನೀಡಿ ಗೌರವಿಸಲಾಯಿತು. ಕೆನಡಾ ದೇಶದಲ್ಲಿ ಸಂಗೀತ ಮತ್ತು ಚಿತ್ರಕಲೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡೇನಿಯಲ್ ಲಾಪ್ ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಮಾನವೀಯ ಪುರಸ್ಕಾರ' ನೀಡಿ ಅಭಿನಂದಿಸಲಾಯಿತು.