Chikkaballapur News: ಕರ್ನಾಟಕ ರಿಪಬ್ಲಿಕನ್ ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆ
ಸಮಾಜದಲ್ಲಿ ಅನೇಕ ಸಂಘಟನೆಗಳಿದ್ದು ಎಲ್ಲಾ ಸಂಘಟನೆಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಕಾನೂ ನಾತ್ಮಕ ಚೌಕಟ್ಟಿನಲ್ಲಿ ನೊಂದವರ ಪರ ಕೆಲಸ ಮಾಡುತ್ತಿದ್ದು ಅದೇ ರೀತಿ ಈ ಸಂಘಟನೆಯು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮೊಮ್ಮಗ ಸ್ಥಾಪನೆ ಮಾಡಿದ್ದು ಬಹುಜನರ ಉದ್ಧಾರಕ್ಕಾಗಿ ಈ ಸಂಘಟನೆ ದಿನನಿತ್ಯ ಫಲಿತಾಪಿಸುತ್ತಿದ್ದು ಅನೇಕ ಸಮಸ್ಯೆಗಳನ್ನು ಪರಿಹರಿಸಿದೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗ ಸ್ಥಾಪಿಸಿರುವ ಕರ್ನಾಟಕ ರಿಪಬ್ಲಿಕನ್ ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆಯು ಚಿಕ್ಕಬಳ್ಳಾಪುರದ ಅಂಬೇಡ್ಕರ್ ಭವನದಲ್ಲಿ ಸುಸೂತ್ರವಾಗಿ ನೆರವೇರಿಸಿದರು. -
ಚಿಕ್ಕಬಳ್ಳಾಪುರ : ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗ ಸ್ಥಾಪಿಸಿರುವ ಕರ್ನಾಟಕ ರಿಪಬ್ಲಿಕನ್ ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆಯು ಚಿಕ್ಕಬಳ್ಳಾಪುರದ ಅಂಬೇಡ್ಕರ್ ಭವನದಲ್ಲಿ ಸುಸೂತ್ರವಾಗಿ ನೆರವೇರಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಮುರಳಿ ನೇತೃತ್ವದಲ್ಲಿ ಕಾರ್ಯ ಕ್ರಮವನ್ನು ಆಯೋಜಿಸಿ ಸಂಘಟನೆಯನ್ನು ಬಲಪಡಿಸಲು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ತಮ್ಮ ಸಂಘಟನೆ ಖಾತೆಯನ್ನು ತೆರೆಯುವ ಉದ್ದೇಶದಿಂದ ತಾಲೂಕು ಸಂಚಾಲಕರನ್ನು ಆಯ್ಕೆ ಮಾಡಿದರು.
ಈ ವೇಳೆ ಮಾತನಾಡಿದ ಕರ್ನಾಟಕ ರಿಪಬ್ಲಿಕನ್ ಸಂಘಟನೆಯ ರಾಜ್ಯಾಧ್ಯಕ್ಷ ಬೆಳತೂರು ವೆಂಕಟೇಶ್ ಮಾತನಾಡಿ, ಸಮಾಜದಲ್ಲಿ ಅನೇಕ ಸಂಘಟನೆಗಳಿದ್ದು ಎಲ್ಲಾ ಸಂಘಟನೆಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಕಾನೂನಾತ್ಮಕ ಚೌಕಟ್ಟಿನಲ್ಲಿ ನೊಂದವರ ಪರ ಕೆಲಸ ಮಾಡುತ್ತಿದ್ದು ಅದೇ ರೀತಿ ಈ ಸಂಘಟನೆಯು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮೊಮ್ಮಗ ಸ್ಥಾಪನೆ ಮಾಡಿದ್ದು ಬಹುಜನರ ಉದ್ಧಾರಕ್ಕಾಗಿ ಈ ಸಂಘಟನೆ ದಿನನಿತ್ಯ ಫಲಿತಾಪಿಸುತ್ತಿದ್ದು ಅನೇಕ ಸಮಸ್ಯೆಗಳನ್ನು ಪರಿಹರಿಸಿದೆ.
ಇದನ್ನೂ ಓದಿ: Chikkaballapur News: ಮೇ.31ರ ಪ್ರತಿಭಾ ಪೂರ್ವಭಾವಿ ಸಭೆ : ಸಮಿತಿಗಳಿಗೆ ಜವಾಬ್ದಾರಿ ಹಂಚಿಕೆ
ಇನ್ನು ಮುಂದೆ ಈ ಜಿಲ್ಲೆಯಲ್ಲಿ ಜಿಲ್ಲಾಧ್ಯಕ್ಷರಾದ ಮುರುಳಿ, ಮಹಿಳಾ ಜಿಲ್ಲಾಧ್ಯಕ್ಷರಾಗಿ ಸಿಂಧುಶ್ರೀ ಅವರು ಮಹಿಳೆಯರ ರಕ್ಷಣೆಗೆ ಸದಾ ಮಿಡಿಯುತ್ತಿರುತ್ತಾರೆ. ಇವರುಗಳ ನಾಯಕತ್ವದಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಧ್ವನಿಯಾಗಿ ಅಧಿಕಾರಿ ವರ್ಗಗಳ ಜೊತೆ ಕೆಲಸ ಮಾಡಿಸುವ ಭರವಸೆಯನ್ನು ಕೊಡುತ್ತಿದ್ದೇನೆ ಎಂದು ತಿಳಿಸಿದರು.
ರಾಜ್ಯ ಸಂಘಟನಾ ಸಂಚಾಲಕರಾದ ಮ್ಯಾಥೂಮುನಿಯಪ್ಪ ಮಾತನಾಡಿ, ಅಂಬೇಡ್ಕರ್ ಅವರ ಹೆಸರಿನಲ್ಲಿ ಹಲವಾರು ಸಂಘಟನೆಗಳು ಇದ್ದು ಅವರು ಕೆಲವೊಂದು ಸಂಘಟನೆಗಳು ತಮ್ಮ ಸ್ವಾರ್ಥ ಕ್ಕೆ ಬಳಸಿಕೊಂಡು ದಿನನಿತ್ಯದ ಕಾಯಕವಾಗಿ ಸಂಘಟನೆಯನ್ನು ಅವಲಂಬಿತರಾಗಿರುವುದು ನಿಷ್ಠಾವಂತ ಸಂಘಟನೆಗಳಿಗೆ ತೊಂದರೆಯಾಗುತ್ತಿದೆ.
ಆದ್ದರಿಂದ ನಮ್ಮ ಸಂಘಟನೆಯಲ್ಲಿ ಹೆಚ್ಚಿನ ಜನಸಂಖ್ಯೆ ಇಲ್ಲದಿದ್ದರೂ ಇರುವ ಜನಸಂಖ್ಯೆಯೇ ಪ್ರಾಮಾಣಿಕವಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಸಂಘಟನೆಯ ಉದ್ದೇಶಗಳನ್ನು ಉಳಿಸಿ ಬಡವರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಸರ್ಕಾರದಿಂದ ಸಿಗುವಂತಹ ಎಲ್ಲ ರೀತಿಯ ಸೌಲಭ್ಯ ಗಳನ್ನು ಕೊಡಿಸುವಲ್ಲಿ ಸಂಘಟನೆಯು ಕೆಲಸ ಮಾಡುತ್ತದೆ ಎಂದು ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ಮುರಳಿ ಮಾತನಾಡಿ ಜಿಲ್ಲೆಯಲ್ಲಿನ ಜ್ವಲಂತ ಸಮಸ್ಯೆಗಳಾದ ನೀರಾವರಿ ಕುಡಿಯುವ ನೀರಿನ ಸಮಸ್ಯೆ, ನಗರದಲ್ಲಿ ಆಗುತ್ತಿರುವಂತಹ ಅನೇಕ ನಿವೇಶನಗಳ ಸಮಸ್ಯೆ, ಕಂದಾಯ ಸಮಸ್ಯೆ, ಮುಂತಾದವುಗಳ ಬಗ್ಗೆ ನಮ್ಮ ಸಂಘಟನೆಯು ಧ್ವನಿಯಾಗಿ ಬಡವರ ಪರ ನಿಲ್ಲುತ್ತೇವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನೂತನ ಮಹಿಳಾ ಜಿಲ್ಲಾಧ್ಯಕ್ಷ ಸಿಂಧುಶ್ರೀ ಮಾತನಾಡಿ, ಮಹಿಳೆಯರಿಗೆ ಸಮಾಜದಲ್ಲಿ ಯಾವುದೇ ರೀತಿಯ ರಕ್ಷಣೆ ಇಲ್ಲದಂತಾಗಿದೆ ಮುಖ್ಯವಾಗಿ ರಕ್ಷಕರೇ ಭಕ್ಷಕರಾಗು ವಂತಹ ಸ್ಥಿತಿ ನಿರ್ಮಾಣವಾಗಿರುವುದು ದುರಂತ. ಆದ್ದರಿಂದ ಮಹಿಳೆಯರು ಒಗ್ಗಟ್ಟು ಪ್ರದರ್ಶನ ದಿಂದ ಮಾತ್ರ ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳಬೇಕು. ಅದಕ್ಕೆ ಸೂಕ್ತ ವೇದಿಕೆ ಎಂದರೆ ಕರ್ನಾಟಕ ರಿಪಬ್ಲಿಕನ್ ಸಂಘಟನೆ ಎಂದು ಈ ಮೂಲಕ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ನೂತನ ಪದಾಧಿಕಾರಿಗಳ ಪಟ್ಟಿ : ನೂತನ ತಾಲ್ಲೂಕು ಅಧ್ಯಕ್ಷರು ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷರಾಗಿ ಶಿವು, ಶಿಡ್ಲಘಟ್ಟ -ಅಶ್ವಿನಿ, ಗುಡಿಬಂಡೆ -ಶೋಭಾ, ಮಂಚೇನಹಳ್ಳಿ -ನರಸಮ್ಮ, ಮುನಿರಾಜು, ನೇಮಕವಾಗಿದ್ದಾರೆ.
ಈ ಸಂದರ್ಭದಲ್ಲಿ ಶಾಂತ, ಯುವಕರು ಮುನಿರಾಜು, ಮದುಕುಮಾರ್ ಸೇರಿ ಹಲವಾರು ಕಾರ್ಯಕರ್ತರ ಹಾಜರಿದ್ದರು.