ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gudibande News: ಲಕ್ಷ್ಮೀಸಾಗರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

ಲಕ್ಷ್ಮೀಸಾಗರ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಬೆಳೆಸಲು ಎಲ್ಲರೂ ಶ್ರಮಿಸುತ್ತೇವೆ. ಸಂಘದ ಷೇರುದಾರರು ಉತ್ತಮ ಹಾಗೂ ಗುಣಮಟ್ಟದ ಹಾಲನ್ನು ಪೂರೈಸಬೇಕು. ಜೊತೆಗೆ ಸಂಘಕ್ಕೆ ಒಂದು ಕಟ್ಟಡದ ಅವಶ್ಯಕತೆಯಿದೆ. ಈ ನಿಟ್ಟಿನಲ್ಲೂ ನಾವೆಲ್ಲರೂ ಶ್ರಮಿಸುತ್ತೇವೆ. ಆದಷ್ಟು ಶೀಘ್ರವಾಗಿ ಸಂಘಕ್ಕೆ ಹೊಸ ನಿವೇಶನ ಹಾಗೂ ಕಟ್ಟಡವನ್ನು ಕಟ್ಟಲು ಎಲ್ಲಾ ರೀತಿಯಲ್ಲೂ ಶ್ರಮಿಸುತ್ತೇವೆ

ಲಕ್ಷ್ಮೀಸಾಗರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

-

Ashok Nayak
Ashok Nayak Dec 20, 2025 11:36 PM

ಗುಡಿಬಂಡೆ: ತಾಲೂಕಿನ ಲಕ್ಷ್ಮೀಸಾಗರ ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ ಆಡಳಿತ ಮಂಡಳಿ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ನಡೆದಿದ್ದು, ಅಧ್ಯಕ್ಷರಾಗಿ ಬಿಸ್ಮಿಲ್ಲಾ ಮಕ್ತರ್ ಬಾಷಾ ಹಾಗೂ ಉಪಾಧ್ಯಕ್ಷರಾಗಿ ಆದಿನಾರಾಯಣ ಅವರುಗಳು ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪ್ರೇಮ್ ಕುಮಾರ್ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: Gudibande News: ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಸಿಪಿಎಂ ಪಕ್ಷದಿಂದ ಡಿ.21 ರಂದು ಬೃಹತ್ ಪ್ರತಿಭಟನೆ

ಈ ವೇಳೆ ಸಂಘದ ಉಪಾಧ್ಯಕ್ಷ ಆದಿನಾರಾಯಣ ಮಾತನಾಡಿ, ಲಕ್ಷ್ಮೀಸಾಗರ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಬೆಳೆಸಲು ಎಲ್ಲರೂ ಶ್ರಮಿಸುತ್ತೇವೆ. ಸಂಘದ ಷೇರುದಾರರು ಉತ್ತಮ ಹಾಗೂ ಗುಣಮಟ್ಟದ ಹಾಲನ್ನು ಪೂರೈಸಬೇಕು. ಜೊತೆಗೆ ಸಂಘಕ್ಕೆ ಒಂದು ಕಟ್ಟಡದ ಅವಶ್ಯಕತೆಯಿದೆ. ಈ ನಿಟ್ಟಿನಲ್ಲೂ ನಾವೆಲ್ಲರೂ ಶ್ರಮಿಸುತ್ತೇವೆ. ಆದಷ್ಟು ಶೀಘ್ರವಾಗಿ ಸಂಘಕ್ಕೆ ಹೊಸ ನಿವೇಶನ ಹಾಗೂ ಕಟ್ಟಡವನ್ನು ಕಟ್ಟಲು ಎಲ್ಲಾ ರೀತಿಯಲ್ಲೂ ಶ್ರಮಿಸುತ್ತೇವೆ ಎಂದರು.

ಈ ಸಮಯದಲ್ಲಿ ಸಂಘದ ಕಾರ್ಯದರ್ಶಿ ನರಸಿಂಹಮೂರ್ತಿ, ಪಾಪಮ್ಮ, ರಾಮಚಂದ್ರಪ್ಪ, ಬೀಬಿಜಾನ್, ಬಾಷಾಸಾಬ್, ಆದಿನಾರಾಯಣ, ಸೋಮಶೇಖರ್, ಅಶ್ವತ್ಥಪ್ಪ, ನಾರಾಯಣಸ್ವಾಮಿ, ಮಕ್ತರ್ ಬಾಷಾ, ಆಕಾಶ್ ಸೇರಿದಂತೆ ಹಲವರು ಇದ್ದರು.