Chikkaballapur News: ಏಡುಕೊಂಡುಲ ಶ್ರೀನಿವಾಸ್‌ಗೆ ಗೌರವ ಡಾಕ್ಟರೇಟ್: ಹಿತೈಷಿಗಳ ಸನ್ಮಾನ
ಸಮಾಜ ಸೇವೆ ಹಾಗೂ ದಾನ ಧರ್ಮದ ವಿಚಾರಗಳಿಗೆ ಪ್ರಚಾರ ಪಡೆಯ ಬಾರದು ಎಂದು ಬಯಸುವವನು ನಾನು.ಆದರೂ ನನ್ನ ಸಮಾಜ ಸೇವೆಯ ವಿಚಾರವನ್ನು ಮನಗಂಡು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿರುವುದು ಸಂತೋಷ ತಂದಿದೆ ಯಲ್ಲದೆ ಇದು ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ
-
ಚಿಕ್ಕಬಳ್ಳಾಪುರ: ಸಮಾಜ ಸೇವೆ ಹಾಗೂ ದಾನ ಧರ್ಮದ ವಿಚಾರಗಳಿಗೆ ಪ್ರಚಾರ ಪಡೆಯ ಬಾರದು ಎಂದು ಬಯಸುವವನು ನಾನು.ಆದರೂ ನನ್ನ ಸಮಾಜ ಸೇವೆಯ ವಿಚಾರವನ್ನು ಮನಗಂಡು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿರುವುದು ಸಂತೋಷ ತಂದಿದೆ ಯಲ್ಲದೆ ಇದು ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಏಡುಕೊಂಡಲ ಬ್ಯುಲ್ರ‍್ಸ್ ಶ್ರೀನಿವಾಸ್ ತಿಳಿಸಿದರು.
ನಗರದ ಡಿವೈನ್ ಸಿಟಿಯಲ್ಲಿರುವ ಏಡುಕೊಂಡಲ ಶ್ರೀನಿವಾಸ್ ಅವರ ನಿವಾಸದ ಎದುರು ಅಭಿಮಾನಿಗಳು ಹಿತೈಷಿಗಳು ಏರ್ಪಡಿಸಿದ್ದ ಅಭಿಮಾನದ ಸನ್ಮಾನ ಸ್ವೀಕರಿಸಿ ಮಾತನಾಡಿ ದರು.
ನಾನು ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಮಾಡಿರುವ ಸೇವೆಯನ್ನು ಪರಿಗಣಿಸಿ ಏಷ್ಯಾ ಇಂಟರ್ ನ್ಯಾಷನಲ್ ಕಲ್ಚರ್ ರೀಸರ್ಚ್ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಗಿದೆ.ಗ್ರಾಮೀಣ ಪರಿಸರದಿಂದ ಬಂದ ನನ್ನಂತಹವರನ್ನು ಗುರುತಿಸಿ ಗೌರವ ಸಲ್ಲಿಸುವುದಾದರೆ ನನ್ನಂತೆ ನೀವೂ ಕೂಡ ಇಂತಹ ಪದವಿಗಳಿಗೆ ಭಾಜನ ರಾಗಬೇಕು. ಆಗ ಮಾತ್ರ ಈ ಗೌರವಕ್ಕೆ ಸಾರ್ಥಕತೆ ಬರಲಿದೆ ಎಂದರು.
ನಾನು ಶಾಲೆ ಕಾಲೇಜುಗಳಲ್ಲಿ ಓದುವಾಗ ತೀರಾ ಬಡತನದ ಅನುಭವ ಉಂಡಿದ್ದೇನೆ. ಭಗವಂತ ನನಗೆ ಸಮಾಜ ಸೇವೆ ಮಾಡುವ ಅವಕಾಶ ಮಾಡಿಕೊಟ್ಟಿರುವ ಕಾರಣ ಕಷ್ಟ ಎಂದು ಹೇಳಿಕೊಂಡು ಬಂದವರ ಕಣ್ಣೀರು ಒರೆಸಿದ್ದೇನೆ.ಮುಂದೆ ಇನ್ನೂ ಹೆಚ್ಚಿನ ರೀತಿ ಯಲ್ಲಿ ಈ ಸೇವೆಯನ್ನು ಮುಂದುವರೆಸಿಕೊAಡು ಹೋಗುತ್ತೇನೆ. ನೀವು ತೋರಿಸಿರುವ ಗೌರವ ಪ್ರೀತಿ ಅಭಿಮಾನ ನನ್ನನ್ನು ಕುಬ್ಜನನ್ನಾಗಿ ಮಾಡಿದೆ ಎಂದರು.
ಇದೇ ವೇಳೆ ನಾನಾ ಸಮುದಾಯದ ಮುಖಂಡರು ಹಾರ ತುರಾಯಿ ಹಾಕಿ ಶ್ರೀನಿವಾಸ್ ಅವರನ್ನು ಸನ್ಮಾನಿಸಿದರು.ಕೇಕ್ ಕತ್ತರಿಸಿ ಸಿಹಿ ತಿನ್ನಿಸಿ ಸಂತೋಷಪಟ್ಟರು.
ಈ ವೇಳೆ ಎಸ್‌ಎಸ್‌ಡಿ ಮುಖಂಡ ವೆಂಕಟರೋಣಪ್ಪ, ಯಶ್ವಂತ್ ಕಲ್ಚರಲ್ ಅಕಾಡೆಮಿ ಅಧ್ಯಕ್ಷ ಮಂಚನಬಲೆ ಶ್ರೀನಿವಾಸ್, ಶಿಕ್ಷಕ ಶ್ರೀನಿವಾಸ್, ನಿವೃತ್ತ ಪ್ರಾಂಶುಪಾಲ ಚಂದ್ರಣ್ಣ, ಉಪ್ಪಾರ ಸಮಾಜದ ವೆಂಕಟೇಶ್, ಅರಿಕೆರೆ ಎಂ ಮುನಿರಾಜು, ಮತ್ತಿತರರು ಇದ್ದರು.