MLA SN Subbareddy: ಸಾಧಿಸಬೇಕು ಎನ್ನುವ ಛಲ ಇದ್ದರೆ ಯಾವುದೇ ಕ್ಷೇತ್ರದಲ್ಲಿ ಸಾಧಿಸಬಹುದು: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ
ಪರೀಕ್ಷೆಯಲ್ಲಿ ಅಂಕಗಳಿಗೆ ಮಾತ್ರ ಸೀಮಿತಗೊಳಿಸದೆ ಮಕ್ಕಳ ಚಲನವಲನಗಳ ಬಗ್ಗೆ ಕಾಳಜಿ ವಹಿಸಬೇಕಾದ ಅಗತ್ಯವಿದೆ. ಕೇವಲ ಅಂಕ ಪಡೆದರೆ ಸಾಲದು, ಕೆಟ್ಟ ಸಹವಾಸ ಗಳಿಂದ ದೂರ ಮಾಡುವ ಮೂಲಕ ಮಕ್ಕಳನ್ನ ಸರಿದಾರಿಗೆ ತಂದು ಅಡ್ಡ ದಾರಿ ಹಿಡಿಯುವುದನ್ನು ತಪ್ಪಿಸು ವಂತಹ ಕೆಲಸ ಮಾಡಬೇಕಾಗಿರುವುದು ಪೋಷಕರ ಜವಾಬ್ದಾರಿ ಎಂದು ಪೋಷಕರಿಗೆ ಕಿವಿಮಾತು ಹೇಳಿದರು
-
ಬಾಗೇಪಲ್ಲಿ: ಸಾಧಿಸಬೇಕು ಎನ್ನುವ ಛಲ ಇದ್ದರೆ ಯಾವುದೇ ಕ್ಷೇತ್ರದಲ್ಲಿ ಸಾಧಿಸಬಹುದು ಎಂದರಲ್ಲದೆ ಕೆಟ್ಟ ಸಹವಾಸದಿಂದ ದೂರ ಸರಿಯುವಂತೆ ಶಾಂತಿ ನಿಕೇತನ್‌ವಿದ್ಯಾ ಸಂಸ್ಥೆ ಟ್ರಸ್ಟ್ನ ಕಾರ್ಯದರ್ಶಿ ಹಾಗೂ ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ (MLA SN Subbareddy)ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಪಟ್ಟಣದ ಶಾಂತಿ ನಿಕೇತನ್ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಶಾಲೆಯ 26ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನನ್ನ ಜೀವನ ದಲ್ಲಿ ನಿರ್ದಿಷ್ಠವಾದಂತಹ ಕಠಿಣವಾದಂತಹ ನಿಲುವು ನಿಮ್ಮಲಿರಬೇಕು. ನಿಮ್ಮದೆ ಆದಂತಹ ತೀರ್ಮಾನ ಇರಬೇಕು ಅದರೆ ಯಾವುದೇ ಒಂದು ತೀರ್ಮಾನ ತೆಗೆದುಕೊಳ್ಳುವ ಸಂದರ್ಭದಲ್ಲಿ ನಮ್ಮ ತೀರ್ಮಾನವೇ ಅಂತಿಮವಾಗಿರಬೇಕು ಆಗ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪರೀಕ್ಷೆಯಲ್ಲಿ ಅಂಕಗಳಿಗೆ ಮಾತ್ರ ಸೀಮಿತಗೊಳಿಸದೆ ಮಕ್ಕಳ ಚಲನವಲನಗಳ ಬಗ್ಗೆ ಕಾಳಜಿವಹಿಸಬೇಕಾದ ಅಗತ್ಯವಿದೆ. ಕೇವಲ ಅಂಕ ಪಡೆದರೆ ಸಾಲದು, ಕೆಟ್ಟ ಸಹವಾಸ ಗಳಿಂದ ದೂರ ಮಾಡುವ ಮೂಲಕ ಮಕ್ಕಳನ್ನ ಸರಿದಾರಿಗೆ ತಂದು ಅಡ್ಡ ದಾರಿ ಹಿಡಿಯು ವುದನ್ನು ತಪ್ಪಿಸುವಂತಹ ಕೆಲಸ ಮಾಡಬೇಕಾಗಿರುವುದು ಪೋಷಕರ ಜವಾಬ್ದಾರಿ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.
ಇದನ್ನೂ ಓದಿ: MLA Subbareddy: 5 ಕೋಟಿ ವೆಚ್ಚದ ಸೇತುವೆ ಕಾಮಗಾರಿಗೆ ಶಾಸಕ ಸುಬ್ಬಾರೆಡ್ಡಿ ಚಾಲನೆ
ಕಷ್ಟಪಟ್ಟು ಓದುವ ಬದಲಿಗೆ ಇಷ್ಟಪಟ್ಟು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು, ಚೆನ್ನಾಗಿ ಓದಿ ವಿದ್ಯಾವಂತರಾಗಿ ಉನ್ನತ ಸ್ಥಾನಮಾನಗಳನ್ನು ಅಲಂಕರಿಸಬೇಕು, ಯಾವುದೇ ಕಾರಣಕ್ಕೂ ಹೆತ್ತ ತಂದೆ ತಾಯಿ, ಹುಟ್ಟಿದ ಊರು, ವಿದ್ಯೆ ಕಲಿಸಿದ ಗುರುಗಳನ್ನು ಯಾವುದೇ ಕಾರಣಕ್ಕೂ ಮರೆಯಬಾರದು ಅಲ್ಲದೆ ತಂದೆ ತಾಯಿ, ಗುರು ಹಿರಿಯರನ್ನು ಗೌರವಿಸುವುದನ್ನು ಬಾಲ್ಯದಿಂದಲ್ಲೇ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಶಾಂತಿ ನಿಕೇತನ್ ವಿದ್ಯಾ ಸಂಸ್ಥೆಯ ಅಧ್ಯಕ್ಷರು ಹಾಗೂ ಮಾಜಿ ಜಿ.ಪಂ ಅಧ್ಯಕ್ಷರಾದ ಎಂ.ಬಿ.ಚಿಕ್ಕನರಸಿಂಹಯ್ಯ ಮಾತನಾಡಿ, ಮಕ್ಕಳ ಶೈಕ್ಷಣಿಕ ಅಭಿವೃದ್ದಿಯ ವಿಚಾರದಲ್ಲಿ ಶಾಲೆಯಲ್ಲಿ ಶಿಕ್ಷಕರ ಪಾತ್ರ ಎಷ್ಟು ಮುಖ್ಯವೋ ಮನೆಯಲ್ಲಿ ಪೋಷಕರ ಪಾತ್ರವೂ ಸಹ ಅಷ್ಠೇ ಮುಖ್ಯವಾಗಿರುತ್ತೆ. ಪೋಷಕರು ತಮ್ಮ ಮಕ್ಕಳ ಚಲನವಲನಗಳ ಬಗ್ಗೆ ಗಮನ ಹರಿಸಬೇಕು. ನಮ್ಮ ಶಾಲೆಯಲ್ಲಿ 10ನೇ ತರಗತಿ ಪರೀಕ್ಷೆಯಲ್ಲಿ ಕಳೆದ ವರ್ಷ ನೂರಕ್ಕೆ ನೂರರಷ್ಟು ಫಲಿತಾಂತ ಬಂದಿದೆ ಈ ವರ್ಷವೂ ಸಹ ಇದೇ ರೀತಿಯ ಫಲಿತಾಂಶ ತರುವಲ್ಲಿ ಶಿಕ್ಷಕರು ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದ ಅವರು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಸುಲಭದ ಮಾತಲ್ಲ, ಸಾಧನೆ ಮಾಡಬೇಕಾದರೆ ಕಠಿಣ ಪರಿಶ್ರಮ, ಸಾಧಿಸಬೇಕು ಎನ್ನುವ ಛಲ ಇದ್ದರೆ ಮಾತ್ರ ಗುರಿಯನ್ನು ತಲುಪಲು ಸಾಧ್ಯ ಎಂದರು.
ಅರಣ್ಯ ಇಲಾಖೆಯ ಪ್ರಿನ್ಸಿಪಲ್ ಸೆಕರೇಟರಿ ಮನೋಜ್ ಕುಮಾರ್ ಮಾತನಾಡಿ, ಮಕ್ಕಳನ್ನು ಯಾವುದೇ ಕಾರಣಕ್ಕೂ ನಕಾರತ್ಮಕವಾಗಿ ಮಾತನಾಡುವುದರಿಂದ ತಮ್ಮ ಮಕ್ಕಳ
ಉಜ್ವಲ ಭವಿಷ್ಯಕ್ಕೆ ತೊಂದರೆ ಆಗುತ್ತೆ ಎಂದು ತಾಯಂದಿರಿಗೆ ಕಿವಿಮಾತು ಹೇಳಿದರು. ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಬೇಕು ಎನ್ನುವುದನ್ನು ಬಾಲ್ಯದಿಂದಲ್ಲೇ ಕಲಿಬೇಕಾಗಿದೆ. ಜೀವನ ಒಂದು ನಾಟಕ. ನಾಟಕದಲ್ಲಿ ಕಥೆಯನ್ನು ಬೆರೆಯವರು ಬರೆಯಬೇಕು ಆದರೆ ನಿಜಜೀವನದಲ್ಲಿ ನಮ್ಮ ಕಥೆಯನ್ನು ನಾವೇ ಬರೆದುಕೊಳ್ಳಬೇಕು. ನಾವು ಮಾಡುವ ಕೆಲಸದಲ್ಲಿ ನಂಭಿಕೆ ಇದ್ದರೆ ಮಾತ್ರ ಯಾವುದೇ ಕ್ಷೇತ್ರದಲ್ಲಿ ಸಾಧಿಸಲು ಸಾದ್ಯವಾಗುತ್ತೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳಿಂದನಾಟಕ, ನೃತ್ಯ ಸೇರಿದಂತೆ ಸಾಂಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಅಲ್ಲದೆ ವಿವಿಧ ಕ್ರೀಡೆಗಳಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿ ವಿ.ರಮೇಶ್, ಎಸ್.ಪಿ.ಡಿ ಅಧಿಕಾರಿ ಕೆ.ವೆಂಕಟೇಶ್, ಶಾಂತಿ ನಿಕೇತನ್ ಶಾಲೆಯ ಪ್ರಿನ್ಸಿಪಾಲ್ ನವೀನ್ ಕುಮಾರ್, ಶಾಲೆಯ ಮುಖ್ಯಸ್ಥರಾ ಡಿ.ಎನ್.ರಘುನಾಥ್ ಸೇರಿದಂತೆ ಶಾಲೆಯ ಶಿಕ್ಷಕರು ಮತ್ತಿತರರು ಇದ್ದರು.