ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

AI Technology: ಎಐ ತಂತ್ರಜ್ಞಾನ ಮಾನವಜನ್ಯ ತಂತ್ರಜ್ಞಾನ : ಉದ್ಯೋಗ ಕಳೆಯುತ್ತದೆ ಎಂಬುದು ಅಪಕಲ್ಪನೆ : ಎಸ್‌ಎಸ್ ಐಯ್ಯಂಗಾರ್

ಎಐ ತಂತ್ರಜ್ಞಾನದ ಕ್ರಾಂತಿಯು ಜಗತ್ತನ್ನು ಆಳುತ್ತಿರುವ ಈ ಹೊತ್ತಿನಲ್ಲಿ ವಿಶ್ವದ ಅತಿಹೆಚ್ಚು ಯುವ ಶಕ್ತಿಯನ್ನು ಹೊಂದಿರುವ ಭಾರತವು ಕೂಡ ಇದರ ಜತೆಗೆ ಮುನ್ನಡೆಯುವುದು ಅನಿವಾರ್ಯವಾಗಿದೆ. ಕೈಗಾರಿಕೆ, ಕೃಷಿ ಇರಲಿ, ಶಿಕ್ಷಣವೇ ಸೇರಿದಂತೆ ಯಾವುದೇ ಕ್ಷೇತ್ರವಿರಲಿ ಅಲ್ಲೆಲ್ಲಾ ಎಐ ಹಾಜರಾಗಿದೆ.ಎಐ ಕಲಿಯದಿದ್ದರೆ ಖಂಡಿತವಾಗಿ ಇದರ ಗುಲಾಮರಾಗ ಬೇಕಾಗುತ್ತದೆ

ಎಐ ತಂತ್ರಜ್ಞಾನ ಮಾನವಜನ್ಯ ತಂತ್ರಜ್ಞಾನ

ನಾಗಾರ್ಜುನ ಕಾಲೇಜಿನಲ್ಲಿ ನಡೆದ ಎಐ ಶೃಂಗಸಭೆಯನ್ನು ಉದ್ಘಾಟಿಸಿ ಮಾತನಾಡಿದರು. -

Ashok Nayak
Ashok Nayak Dec 27, 2025 9:32 PM

ಚಿಕ್ಕಬಳ್ಳಾಪುರ : ಎಐ ತಂತ್ರಜ್ಞಾನ(AI technology) ವಿಶ್ವವನ್ನು ಮುನ್ನಡೆಸುತ್ತಿದ್ದರೂ ಇದೊಂದು ಮಾನವ ಜನ್ಯ ತಂತ್ರಜ್ಞಾನವಾಗಿದೆ. ಯುವಜನತೆ ಈ ತಂತ್ರಜ್ಞಾನ ಕೌಶಲ್ಯದ ಜತೆಗೆ ಪ್ರಯಾಣಿಸುವುದು ಕಲಿತರೆ ಯಾವ ಕ್ಷೇತ್ರದಲ್ಲಿಯೂ ನಿರುದ್ಯೋಗ ಸೃಷ್ಟಿಯಾಗುವು ದಿಲ್ಲ ಎಂದು ಎ.ಐ ತಂತ್ರಜ್ಞಾನದ ಪಿತಾಮಹ ಅಮೆರಿಕಾ ಫ್ಲೋರಿಡಾ ಇಂಟರ್‌ನ್ಯಾಷನಲ್ ಯೂನಿವರ್ಸಿಟಿ ಪ್ರಾಧ್ಯಾಪಕ ಎಸ್.ಎಸ್. ಅಯ್ಯಂಗಾರ್(The father of AI technology is Professor S.S. Iyengar of Florida International University, USA) ತಿಳಿಸಿದರು.

ನಗರ ಹೊರವಲಯ ನಾಗಾರ್ಜುನ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಎಐ ಇಂಪ್ಯಾಕ್ಟ್ಪೂರ್ವಭಾವಿ ಶೃಂಗಸಭೆ ಉದ್ಘಾಟಿಸಿ ಮಾತನಾಡಿದರು.

ಎಐ ತಂತ್ರಜ್ಞಾನದ ಕ್ರಾಂತಿಯು ಜಗತ್ತನ್ನು ಆಳುತ್ತಿರುವ ಈ ಹೊತ್ತಿನಲ್ಲಿ ವಿಶ್ವದ ಅತಿಹೆಚ್ಚು ಯುವ ಶಕ್ತಿಯನ್ನು ಹೊಂದಿರುವ ಭಾರತವು ಕೂಡ ಇದರ ಜತೆಗೆ ಮುನ್ನಡೆಯುವುದು ಅನಿವಾರ್ಯವಾಗಿದೆ. ಕೈಗಾರಿಕೆ, ಕೃಷಿ ಇರಲಿ, ಶಿಕ್ಷಣವೇ ಸೇರಿದಂತೆ ಯಾವುದೇ ಕ್ಷೇತ್ರವಿರಲಿ ಅಲ್ಲೆಲ್ಲಾ ಎಐ ಹಾಜರಾಗಿದೆ.ಎಐ ಕಲಿಯದಿದ್ದರೆ ಖಂಡಿತವಾಗಿ ಇದರ ಗುಲಾಮರಾಗಬೇಕಾಗುತ್ತದೆ. ಹೀಗಾಗಿ ಇದರ ಮಹತ್ವವನ್ನು ಅರಿತು ಇದರೊಟ್ಟಿಗೆ ಪ್ರಯಾಣಿಸುವುದೇ ನಮಗಿರುವ ಏಕೈಕ ಮಾರ್ಗವಾಗಿದೆ ಎಂದರು.

ಇದನ್ನೂ ಓದಿ: Chikkaballapur News: ಏಡುಕೊಂಡುಲ ಶ್ರೀನಿವಾಸ್‌ಗೆ ಗೌರವ ಡಾಕ್ಟರೇಟ್: ಹಿತೈಷಿಗಳ ಸನ್ಮಾನ

ಡೀಪ್ ಫೇಕ್ ಬಗ್ಗೆ ಇನ್ನೂ ಆಳದ ಸಂಶೋಧನೆ ಆಗಬೇಕಿದೆ. ಇದಾಗಬೇಕಾದರೆ ಇದನ್ನು ಬಳಸಲು ಅನುವಾಗುವ ಶಕ್ತಿಶಾಲಿ ಸಾಧನಗಳನ್ನು ತರಬೇಕು. ಈ ದಿಸೆಯಲ್ಲಿ ವಿದ್ಯಾರ್ಥಿ ಗಳು, ಉಪನ್ಯಾಸಕರು, ಸಮಾಜ ಒಟ್ಟುಗೂಡಿ ಇಂತಹ ಸವಾಲಿನ ತಂತ್ರಜ್ಞಾನವನ್ನು ಸಾಧುವಾಗಿಸುವತ್ತ ಕೆಲಸ ಮಾಡಬೇಕಿದೆ. ಅಲೆಕ್ಸಾ ಎಂಬುದು ಕೂಡ ಆಶ್ಚರ್ಯಕಾರಕ ಸಂಶೋಧನೆಯಾಗಿದೆ. ಹೀಗಾಗಿ ಎಐ ಅನ್ನು ಸರಿಯದ ರೀತಿಯಲ್ಲಿ ಬಳಿಸಿದರೆ ಒಳ್ಳೆಯದೇ ಆಗಲಿದೆ. ತಪ್ಪಾಗಿ ಬಳಸಿದರೆ ಕೆಡುಕು ಖಚಿತ ಎಂದು ಎಚ್ಚರಿಸಿದರು.

ಎಐ ಮಾನವ ಸಮಾಜದ ಬಳಕೆಯ ಸಾಧನವಾಗಬೇಕೇ ವಿನಃ ನಾವು ಅದರ ಗುಲಾಮ ರಾಗಬಾರದು. ಮುಂದಿನ 5 ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಗಳಾಗುತ್ತವೆ. ಈಗಾಗಲೇ ಚಾಲಕ ರಹಿತ ಕಾರುಗಳು, ಪೈಲಟ್ ರಹಿತ ವಿಮಾನ, ಅಮೆರಿಕಾ ದಂತಹ ದೇಶದಲ್ಲಿ ರೋಬೋಟಿಕ್ ಸರ್ಜರಿ ಸಾಮಾನ್ಯವಾಗಿದೆ. ಬ್ರೈನ್ ಸರ್ಜರಿ ಕೂಡ ಇದೇ ರೀತಿಯಿದೆ.ಆದರೆ ಈ ದಿಕ್ಕಿನಲ್ಲಿ ಒಳ್ಳೆಯದಿರುವಂತೆ ಕೆಟ್ಟದ್ದುನ ಕೂಡ ಇರುವು ದರಿಂದ ಬಳಕೆಯಲ್ಲಿ ಎಚ್ಚರ ಅಗತ್ಯ ಎಂದರು.

ಎಐ ಇಂಪ್ಯಾಕ್ಟ್ ಪೂರ್ವಭಾವಿ ಶೃಂಗಸಭೆಯ ಉದ್ದೇಶವೇ ಎಐ ತಂತ್ರಜ್ಞಾನವನ್ನು ಎಲ್ಲಾ ಕ್ಷೇತ್ರಗಳಲ್ಲಿ ಬಳಕೆಗೆ ತರುವುದು ಮತ್ತು ಅದರ ಕೆಲಸವನ್ನು ಅತ್ಯಂತ ಖಚಿತವಾಗಿ, ದೋಷ ರಹಿತವಾಗಿ ನಿರ್ವಹಿಸುವುದು ಹೇಗೆ ಎಂದು ತಿಳಿಯುವುದೇ ಆಗಿದೆ. ಅಲ್ಲದೆ ಮಾನವ ಸಂಪನ್ಮೂಲವನ್ನು ಬಳಸಿಕೊಂಡು ಹೇಗೆಲ್ಲಾ ಎಐ ಅನ್ನು ಸಂಶೋಧನೆ ಮಾಡಬೇಕು ಎಂ ಬುದೇ ಆಗಿದೆ.ಈ ಶೃಂಗಸಭೆಯು ಈ ನಿಟ್ಟಿನಲ್ಲಿ ಗುಣಾತ್ಮಕ ಫಲಿತಾಂಶವನ್ನು ದೇಶಕ್ಕೆ ನೀಡುವ ವಿಶ್ವಾಸವಿದೆ ಎಂದು ಹೇಳಿದರು.

cbpm1l

ಸ್ವಂತಿಕೆ ನಾಶ

ಯುವ ಜನತೆ ಮತ್ತು ವಿದ್ಯಾರ್ಥಿವರ್ಗ ಎಐ ತಂತ್ರಜ್ಞಾನದ ಫಲಿತವಾದ ಚಾಟ್‌ಜಿಪಿಟಿ, ಜೆಮಿನಿ ಜತೆ ಮಾಡುತ್ತಾ ಕುಳಿತರೆ ಸಾಲದು.ಈ ತಂತ್ರಜ್ಞಾನವು ನನ್ನ ಮೆದುಳು ಏನನ್ನು ಚಿಂತಿಸುತ್ತಿದೆ ಎಂಬುದನ್ನು ಅರಿತು ಕೆಲಸ ಮಾಡುತ್ತದೆ.ಇದಕ್ಕೆ ಕಟ್ಟು ಬಿದ್ದರೆ ಸ್ವಂತಿಕೆ ಇಲ್ಲದಾಗುತ್ತದೆ. ಅಂತಹ ಸಮಯದಲ್ಲಿ ಮಾನವ ತನ್ನ ಬುದ್ಧಿಮತ್ತೆಯನ್ನು ಇದರೊಂದಿಗೆ ಬಳಸಬೇಕಾಗುತ್ತದೆ ಇಲ್ಲದಿದ್ದರೆ ಅಪಾಯಕಾರಿ ಫಲಿತಾಂಶ ಹೆಚ್ಚು. 30 ವರ್ಷಗಳ ಹಿಂದೆ ನಾನು ಎಐ ಸಂಶೋಧನೆ ಮಾಡಿದಾಗ ಈ ಮಟ್ಟಿಗಿನ ಫಲಿತಾಂಶ ನಿರೀಕ್ಷೆ ಮಾಡಲಾಗು ತ್ತಿರಲಿಲ್ಲ. ಈಗ ನಾನು ಊಹೆ ಮಾಡಲಾಗದಷ್ಟು ಬೆಳೆದಿದ್ದು ನನ್ನ ಬ್ರೈನ್ ನ ತದ್ರೂಪ ಸೃಷ್ಟಿಸುವ ಹಂತದಲ್ಲಿದ್ದೇವೆ ಎಂದರು.

ನಿರುದ್ಯೋಗ ಸುಳ್ಳು

ಎಐ ತಂತ್ರಜ್ಞಾನ ನಿರುದ್ಯೋಗ ಸೃಷ್ಟಿ ಮಾಡಲಿದೆ ಎಂಬುದೆಲ್ಲಾ ಸುಳ್ಳು. ಶಿಕ್ಷಣ ಕ್ರಮ ಬದಲಾಗಬೇಕು. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಸರಿಯಾದ ರೀತಿಯಲ್ಲಿ ತರಬೇತುಗೊಳಿಸಬೇಕು.ಇಂಜನಿಯರಿAಗ್ ಅಂದರೆ ಸಾಂಪ್ರದಾಯಿಕ ಶಿಕ್ಷಣ ಎಂದರೆ ಆಗಲ್ಲ, ಎ.ಐ ಏನೇನು ಮಾಡುತ್ತೋ ಅದು ಸೃಷ್ಟಿ ಮಾಡುವ ಸ್ಪರ್ಧೆಯ ವಿರುದ್ದ ಪ್ರೋಗ್ರಾ ಮಿಂಗ್ ಮಾಡಿ ತೋರಿಬೇಕು.ಪೈಥಾನ್ ಲಾಂಗ್ವೇಜ್ ಹೈಸ್ಕೂಲ್ ಹಂತದಿಂದ ಕಾಲೇಜು ವರೆಗೆ ಎಲ್ಲರಿಗೂ ಕಲಿಸಬೇಕು.ಆಗ ಮಾತ್ರ ಎಐ ತಂತ್ರಜ್ಞಾನದೊಟ್ಟಿಗೆ ಈಜುಲು ಸಾಧ್ಯ ಎಂದರು.

ಬುದ್ಧಿವಂತ ಹ್ಯಾರ‍್ಸ್

ಡೀಫ್‌ಎಕ್ಸ್ ,ಹ್ಯಾಕಥಾನ್ ತಡೆಯಲು ಬಲಿಷ್ಟ ಟೂಲ್ಸ್, ಟೆಕ್ನಿಕ್ಸ್ ಹೇಳಿಕೊಟ್ಟು ಯುವಶಕ್ತಿ ಯನ್ನು ಕಟ್ಟಬೇಕಿದೆ. ಏಕೆಂದರೆ ಹ್ಯಾರ‍್ಸ್ ಅತೀ ಬುದ್ದಿವಂತರಿರುತ್ತಾರೆ.ಅಜ್ಞಾತ ಸ್ಥಳದಲ್ಲಿ ಕುಳಿತು ಕಾರ್ಯಾಚರಣೆ ಮಾಡುವಷ್ಟು ಕುಶಲಿಗಳಿರುತ್ತಾರೆ.ನನಗೇ ಹ್ಯಾಕಿಂಗ್ ಬಿಸಿ ತಟ್ಟಿದೆ. ಪಾಸ್‌ವರ್ಡ್ ಮರೆಯುವುದು,ಐಪಿ ವಿಳಾಸ ಪಡೆಯುವುದು ಹೀಗೆ ಸಾಧ್ಯತೆಗಳನ್ನು ಅಲ್ಲ ಗಳೆಯುವಂತಿಲ್ಲ. ವಿಶ್ವದಲ್ಲಿ ಸೈಬರ್ ಸೆಕ್ಯುರಿಟಿ ದೊಡ್ಡ ಸವಾಲಾಗಿದೆ. ಸೋಷಿಯಲ್ ಸೆಕ್ಯುರಿಟಿಗಾಗಿ ಕ್ರಿಪ್ಟೋಗ್ರಫಿ ಆಲ್ಗರಿದಂ ಬೇಕಾಗಿದೆ ಎಂದರು.

55 ವರ್ಷಗಳ ಹಿಂದೆ ನಾನು ಅಮೆರಿಕಾದಲ್ಲಿ ಹೋಗಿ ಸೆಟಲ್ ಆಗಿರುವುದರಿಂದ ನನ್ನ ಮನಸ್ಸು ಯಾವಾಗಲೂ ಕೂಡ ಜನ್ಮಭೂಮಿ ಇಂಡಿಯಾ ಅದರಲ್ಲೂ ಬೆಂಗಳೂರನ್ನು ನೆನೆಸುತ್ತದೆ.ನನ್ನ ಹೆಂಡತಿ ಮಕ್ಕಳನ್ನು ಕೇಳಿದರೆ ಹೀಗೆ ಹೇಳುತ್ತಾರೆ ಎಂದು ಹೇಳಲಾಗದು. ನನ್ನ ಸೇವೆಯನ್ನು ದೇಶ ಬಯಸಿದಾಗಲೆಲ್ಲಾ ಕೊಡಲು ಸಿದ್ಧನಿದ್ದೇನೆ ಎಂದರು.

2026ಕ್ಕೆ ಗ್ಲೋಬಲ್ ಎಐ ಸಮಿಟ್

ನವದೆಹಲಿಯ ಎಐಸಿಟಿಇಯ ಸಲಹೆಗಾರ ಡಾ.ಸಿದ್ಧಲಿಂಗಸ್ವಾಮಿ ಮಾತನಾಡಿ, ಭಾರತ ದಲ್ಲಿ 2026ರ ಫೆಬ್ರವರಿಯಲ್ಲಿ ಎಐ ಜಾಗತಿಕ ಶೃಂಗಸಭೆ ನಡೆಯಲಿದೆ. 100 ದೇಶಗಳು ಇದರಲ್ಲಿ ಭಾಗಿಯಾಗಲಿವೆ. ಇದಕ್ಕೆ ಪೂರ್ವದಲ್ಲಿ ಎಐಸಿಟಿಯು ಸಂಯೋಜಿತ  ದೇಶದ 10 ತಾಂತ್ರಿಕ ಕಾಲೇಜುಗಳಲ್ಲಿ ಈ ಶೃಂಗಸಭೆ ನಡೆಯುತ್ತಿದೆ. ದೇಶದ 10 ಪ್ರತಿಷ್ಟಿತ ತಾಂತ್ರಿಕ ಕಾಲೇಜುಗಳಲ್ಲಿ ಕರ್ನಾಟಕದಲ್ಲಿ ನಾಗಾರ್ಜುನ ಕಾಲೇಜು ಆಯ್ಕೆಯಾಗಿರುವುದು ವಿಶೇಷ. ಎಐನ ಪಿತಾಮಹ ಎಸ್‌ಎಸ್ ಐಯ್ಯಂಗಾರ್ ರೀತಿಯಲ್ಲಿಯೇ ಜಾಗತಿಕ ಶೃಂಗಸಭೆಯಲ್ಲಿ ಮಾನವ ಸಂಪನ್ಮೂಲ ಮತ್ತು ಎಐ ತಂತ್ರಜ್ಞಾನ ವಿಷಯವನ್ನು ಮುನ್ನಡೆಸುತ್ತಿರುವವರು ಪ್ರೊ.ಟಿ.ಜಿ.ಸೀತಾರಾಮ್ ಎನ್ನುವ ಮತ್ತೊಬ್ಬ ಕನ್ನಡಿಗರೇ ಆಗಿರುವುದು ದೇಶದ ಹೆಮ್ಮೆ ಯಾಗಿದೆ ಎಂದರು.

ನಿಯಂತ್ರಣ ಅಗತ್ಯ.

ಎಐ ತಂತ್ರಜ್ಞಾನವಿರಲಿ, ಅಥವಾ ಯಾವುದೇ ಹೊಸ ಕೌಶಲ್ಯವಿರಲಿ ಅದನ್ನು ನಿರ್ಮಾಣ ಮಾಡುವುದು ಮನುಷ್ಯನೇ ಆಗಿರುತ್ತಾನೆ.ಅವನನ್ನು ಮೀರಿ ಅದು ಬೆಳೆಯಲು ಸಾಧ್ಯವಿಲ್ಲ. ಆದರೆ ಮನುಷ್ಯ ಅದನ್ನು ಯಾವತ್ತೂ ಕೂಡ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಅದು ಯೋಚನೆ ಮಾಡುವ ರೀತಿಗಿಂತ ನೂರುಪಟ್ಟು ಮುಂದೆ ಹೋಗಿ ನಾವು ಯೋಚನೆ ಮಾಡಬೇಕು.ಆಗ ಮಾತ್ರ ಅದು ಮಾನವ ಸಮಾಜಕ್ಕೆ ಒಳಿತನ್ನು ಮಾಡಲಿದೆ. ಈ ನಿಟ್ಟಿನಲ್ಲಿ ಇಂತಹ ಶೃಂಗಸಭೆಗಳು ಹೊಸ ಚಿಂತನೆ ಮತ್ತು ಸಂಶೋಧನೆ ಬೆಳೆಯಲು ಸಹಾಯ ಮಾಡಲಿದೆ ಎಂದರು.

ಎಐ ಬದುಕಿನ ಭಾಗವಾಗಿದೆ

ಎಐಸಿಟಿಯು ತನ್ನ ಎಲ್ಲಾ ಪದವಿ ಪಠ್ಯಗಳಲ್ಲಿ ಎಐ ವಿಷಯವನ್ನು ಸೇರಿಸಿದೆ. ಕಾರಣ ವಿಶ್ವದಲ್ಲಿಯೇ ಭಾರತ ಅತಿಹೆಚ್ಚು ಯುವಶಕ್ತಿಯನ್ನು ಹೊಂದಿರುವ ದೇಶವಾಗಿದೆ. ಇದನ್ನು ಸಮರ್ಥವಾಗಿ ಬಳಸಿಕೊಂಡಿದ್ದೇ ಆದಲ್ಲಿ ಮುಂದಿನ 25 ವರ್ಷಗಳಲ್ಲಿ ಭಾರತದ ಚಿತ್ರಣವೇ ಬದಲಾಗಿದೆ.ಹೀಗಾಗಿ ಯುವ ತಲೆಮಾರಿಗೆ ಸರಿಯಾದ ರೀತಿಯಲ್ಲಿ ಎಐ ತಂತ್ರಜ್ಞಾನವನ್ನು ಬೋಧಿಸಿದರೆ, ಶಕ್ತಿಶಾಲಿ ರಾಷ್ಟ್ರವಾಗುವುದರಲ್ಲಿ ಅನುಮಾನವೇ ಇಲ್ಲ. 90ರ ದಶಕದಲ್ಲಿ ಕಂಪ್ಯೂಟರ್ ಕ್ರಾಂತಿ ಆದಾಗಲೂ ಕೂಡ ಜನರಲ್ಲಿ ಅನುಮಾನ ಇತ್ತು. ತಂತ್ರಜ್ಞಾನದ ಬಳಕೆ ಗೊತ್ತಿಲ್ಲ ಎಂದರೆ,ಈ ಕ್ಷೇತ್ರದಿಂದ ಅನಾನುಕೂಲವನ್ನೇ ಪಡೆಯುತ್ತೇವೆ ಎಂದರು.

ಪ್ರೋತ್ಸಾಹಧನ ಬಳಸಿ

ತಾಂತ್ರಿಕ ಕಾಲೇಜುಗಳಲ್ಲಿ ಉದ್ಯೋಗ ಕೊಡಿಸಿದರೆ ಸಾಕು ಎಂಬಂತಿದ್ದವು. ಇಲ್ಲಿ ಸಂಶೋ ಧನೆಗೆ ವಿಪುಲ ಅವಕಾಶ ಇದ್ದರೂ ಆರ್ಥಿಕತೆಯ ಕಾರಣ ಪ್ರೋತ್ಸಾಹ ಕಡಿಮೆಯಿತ್ತು. ಆದರೆ ಇತ್ತೀಚೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಎಐ ತಂತ್ರಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆಗೆ ಆರ್ಥಿಕ ನೆರವು ನೀಡುತ್ತಿದೆ.ಇದನ್ನು ಕಾಲೇಜುಗಳು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

ವೇದಿಕೆಯಲ್ಲಿ ನಾಗಾರ್ಜುನ ಶಿಕ್ಷಣ ಸಂಸ್ಥೆಗಳ ಸಿಒಒ ಭಾನುಚೈತನ್ಯವರ್ಮ, ನಿರ್ದೇಶಕ ಗೋಪಾಲಕೃಷ್ಣ, ಪ್ರಾಂಶುಪಾಲ ಡಾ.ತಿಪ್ಪೇಸ್ವಾಮಿ, ಡಾ.ಲೋಹಿತ್, ಡಾ.ಸಂಜೀವ ಕುಮಾರ್ ಅತುರೆ ಮತ್ತಿತರರು ಇದ್ದರು.