ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

MLA B.N.Ravikumar: ಸ್ಲಂ ಬೋರ್ಡ್ ಮನೆ ಹಂಚಿಕೆಯಲ್ಲಿ ಅಕ್ರಮ: ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ರವಿಕುಮಾರ್

2018–19ನೇ ಸಾಲಿನಲ್ಲಿ ಸುಮಾರು 500 ಮನೆಗಳನ್ನು ಮಂಜೂರು ಮಾಡಲಾಗಿತ್ತು. ನಂತರ 2021–22ನೇ ಸಾಲಿ ನಲ್ಲಿ 612 ಮನೆಗಳನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು. ಆದರೆ ಈ ಮನೆಗಳ ಹಂಚಿಕೆ ಹಾಗೂ ನಿರ್ಮಾಣ ಪ್ರಕ್ರಿಯೆಯಲ್ಲಿ ಹಲವು ಅಕ್ರಮಗಳು ನಡೆದಿರು ವುದು ಗಮನಕ್ಕೆ ಬಂದಿದೆ

ಸ್ಲಂ ಬೋರ್ಡ್ ಮನೆ ಹಂಚಿಕೆಯಲ್ಲಿ ಅಕ್ರಮ: ಶಾಸಕ ರವಿಕುಮಾರ್

ನಗರದಲ್ಲಿ ಸ್ಲಂ ಬೋರ್ಡ್ ಮನೆಗಳ ಮಂಜೂರು ಹಾಗೂ ಹಂಚಿಕೆ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ ಶಿಡ್ಲಘಟ್ಟ ಕ್ಷೇತ್ರದ ಶಾಸಕ ಬಿ.ಎನ್. ರವಿಕುಮಾರ್ ಅವರು ರಾಜ್ಯ ವಿಧಾನಸಭೆಯಲ್ಲಿ ಸರ್ಕಾರದ ಗಮನ ಸೆಳೆದರು. -

Ashok Nayak
Ashok Nayak Mar 10, 2026 10:40 PM

ಶಿಡ್ಲಘಟ್ಟ : ನಗರದಲ್ಲಿ ಸ್ಲಂ ಬೋರ್ಡ್ ಮನೆಗಳ ಮಂಜೂರು ಹಾಗೂ ಹಂಚಿಕೆ ಪ್ರಕ್ರಿಯೆ ಯಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ ಶಿಡ್ಲಘಟ್ಟ ಕ್ಷೇತ್ರದ ಶಾಸಕ ಬಿ.ಎನ್.ರವಿಕುಮಾರ್( MLA B.N.Ravikumar) ರಾಜ್ಯ ವಿಧಾನಸಭೆಯಲ್ಲಿ ಸರ್ಕಾರದ ಗಮನ ಸೆಳೆದರು.

ಸದನದಲ್ಲಿ ಮಾತನಾಡಿದ ಅವರು ಈ ವಿಷಯ ಪ್ರಸ್ತಾಪಿಸಿ 2018–19ನೇ ಸಾಲಿನಲ್ಲಿ ಸುಮಾರು 500 ಮನೆಗಳನ್ನು ಮಂಜೂರು ಮಾಡಲಾಗಿತ್ತು. ನಂತರ 2021–22ನೇ ಸಾಲಿ ನಲ್ಲಿ 612 ಮನೆಗಳನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು. ಆದರೆ ಈ ಮನೆಗಳ ಹಂಚಿಕೆ ಹಾಗೂ ನಿರ್ಮಾಣ ಪ್ರಕ್ರಿಯೆಯಲ್ಲಿ ಹಲವು ಅಕ್ರಮಗಳು ನಡೆದಿರು ವುದು ಗಮನಕ್ಕೆ ಬಂದಿದೆ ಎಂದು ಆರೋಪಿಸಿದರು.

ಕೆಲವರ ಹೆಸರಿನಲ್ಲಿ ಒಬ್ಬನೇ ವ್ಯಕ್ತಿಗೆ ಐದು ಮನೆಗಳವರೆಗೆ ಮಂಜೂರು ಮಾಡಿರುವುದು ಕಂಡುಬಂದಿದ್ದು. ಒಂದೇ ಸರ್ವೇ ನಂಬರ್‌ನಲ್ಲಿ ಸುಮಾರು 70 ಮನೆಗಳನ್ನು ನಿರ್ಮಿಸಿರು ವುದೂ ಕಂಡುಬಂದಿದೆ. ಈ ಕುರಿತು ಸಂಬAಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: MLA BN Ravikumar: ಕಾನೂನು ರೀತಿಯಲ್ಲಿ ಹೋರಾಟ ಮಾಡೋಣ: ಶಾಸಕ ಬಿ ಎನ್ ರವಿಕುಮಾರ್

ಸ್ಲಂ ಬೋರ್ಡ್ ಯೋಜನೆಯ ನಿಜವಾದ ಫಲಾನುಭವಿಗಳಾದ ಬಡಜನರಿಗೆ ಮನೆಗಳು ತಲುಪದೆ, ಅನರ್ಹರು ಹಾಗೂ ಶ್ರೀಮಂತರು ಇದರ ಲಾಭ ಪಡೆದುಕೊಳ್ಳುತ್ತಿರುವುದು ದುಃಖಕರ ಸಂಗತಿ ಎಂದು ಹೇಳಿದರು.

ಶಾಸಕರ ಹೇಳಿಕೆ: “ನಾನು ಸದನದಲ್ಲಿ ಜಗಳ ಮಾಡಲು ಬಂದಿಲ್ಲ. ಶಿಡ್ಲಘಟ್ಟದ ಬಡ ಜನರಿಗೆ ನ್ಯಾಯ ಸಿಗಬೇಕೆಂಬ ಉದ್ದೇಶದಿಂದಲೇ ಈ ವಿಷಯವನ್ನು ಪ್ರಸ್ತಾಪಿಸಿದ್ದೇನೆ. ಸ್ಲಂ ಬೋರ್ಡ್ ಮನೆಗಳು ನಿಜವಾದ ಫಲಾನುಭವಿಗಳಿಗೆ ತಲುಪುವಂತೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು,” ಎಂದು ಶಾಸಕ ಬಿ.ಎನ್. ರವಿಕುಮಾರ್ ಹೇಳಿದರು.

ಸಚಿವರ ಪ್ರತಿಕ್ರಿಯೆ: ಈ ಕುರಿತು ಪ್ರತಿಕ್ರಿಯಿಸಿದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಶಿಡ್ಲಘಟ್ಟದ ಸ್ಲಂ ಬೋರ್ಡ್ ಸಂಬAಧಿಸಿದ ಸಮಸ್ಯೆಗಳ ಬಗ್ಗೆ ಕೆಎಂಡಿಸಿ ಹಾಗೂ ಸ್ಲಂ ಬೋರ್ಡ್ ಅಧಿಕಾರಿಗಳ ಸಭೆಯನ್ನು ನಾಳೆ ಕರೆದಿದ್ದೇನೆ. ಶಾಸಕರಾದ ನೀವು ಕೂಡ ಸಭೆಗೆ ಹಾಜರಾಗಿ ಸಮಸ್ಯೆಗಳ ಬಗ್ಗೆ ವಿವರಿಸಿ. ಎಲ್ಲ ವಿಚಾರಗಳನ್ನು ಪರಿಶೀಲಿಸಿ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ  ಎಂದು ಸದನದಲ್ಲಿ ಉತ್ತರಿಸಿದರು.