ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gauribidanur News: ವಿಧುರಾಶ್ವತ್ಥದಲ್ಲಿ ದೇಶಿ ಸಾಂಸ್ಕೃತಿಕ ಸಂಭ್ರಮ; ಜಾನಪದ ಕಲೆಗಳ ವೈಭವ ಅನಾವರಣ

ನಮ್ಮ ನಾಡಿನ ಮಣ್ಣಿನ ವಾಸನೆ, ಜೀವನ ಮೌಲ್ಯಗಳು ಹಾಗೂ ಸ್ಥಳೀಯ ಸಂಸ್ಕೃತಿಯ ಜೀವಂತ ಪ್ರತೀಕವೇ ಜಾನಪದ ಕಲೆಗಳಾಗಿವೆ. ಹಬ್ಬ-ಹರಿದಿನಗಳು, ಕೃಷಿ ಚಟುವಟಿಕೆಗಳು ಹಾಗೂ ಶುಭ ಸಮಾ ರಂಭಗಳಲ್ಲಿ ಮೊಳಗುತ್ತಿದ್ದ ಜಾನಪದ ಹಾಡುಗಳು, ಲಾವಣಿ, ಸೋಬಾನೆ ಪದಗಳು, ಡೊಳ್ಳು ಕುಣಿತ, ವೀರಗಾಸೆ, ಗಾಡಿಗೊಂಬೆ, ತಮಟೆ ಮತ್ತು ಕಹಳೆಗಳು ನಮ್ಮ ಇತಿಹಾಸ ಹಾಗೂ ಸಾಮಾಜಿಕ ಮೌಲ್ಯ ಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜೀವಂತ ಪರಂಪರೆಯಾಗಿವೆ

ದೇಶಿ ಸಂಸ್ಕೃತಿ ಉಳಿದರೆ ಮಾತ್ರ ನಾಡಿನ ಆತ್ಮ ಉಳಿಯುತ್ತದೆ

-

Profile
Ashok Nayak Jul 23, 2026 8:33 PM

ಗೌರಿಬಿದನೂರು: ಆಧುನಿಕತೆ ಮತ್ತು ಜಾಗತೀಕರಣದ ಅಬ್ಬರದ ನಡುವೆ ನಮ್ಮ ದೇಶಿ ಸಂಸ್ಕೃತಿ, ಜಾನಪದ ಕಲೆ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ ಯಾಗಿದೆ ಎಂದು ಆಡಳಿತಾಧಿಕಾರಿ ಹಾಗೂ ಸಾಹಿತಿ ಎನ್.ಆರ್. ಚಂದ್ರಶೇಖರ್ ರೆಡ್ಡಿ ಹೇಳಿದರು.

ತಾಲೂಕಿನ ವಿಧುರಾಶ್ವತ್ಥ ಸತ್ಯಾಗ್ರಹ ಸ್ಮಾರಕ ಪ್ರೌಢಶಾಲೆ ಆವರಣದಲ್ಲಿ ಗೌತಮ ಬುದ್ಧ ಸಾಮಾ ಜಿಕ ಮತ್ತು ಸಾಂಸ್ಕೃತಿಕ ಸಂಘ, ಇಡಗೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ ದಲ್ಲಿ ಆಯೋಜಿಸಿದ್ದ 'ದೇಶಿ ಸಾಂಸ್ಕೃತಿಕ ಸಂಭ್ರಮ' ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ನಾಡಿನ ಮಣ್ಣಿನ ವಾಸನೆ, ಜೀವನ ಮೌಲ್ಯಗಳು ಹಾಗೂ ಸ್ಥಳೀಯ ಸಂಸ್ಕೃತಿಯ ಜೀವಂತ ಪ್ರತೀಕವೇ ಜಾನಪದ ಕಲೆಗಳಾಗಿವೆ. ಹಬ್ಬ-ಹರಿದಿನಗಳು, ಕೃಷಿ ಚಟುವಟಿಕೆಗಳು ಹಾಗೂ ಶುಭ ಸಮಾರಂಭಗಳಲ್ಲಿ ಮೊಳಗುತ್ತಿದ್ದ ಜಾನಪದ ಹಾಡುಗಳು, ಲಾವಣಿ, ಸೋಬಾನೆ ಪದಗಳು, ಡೊಳ್ಳು ಕುಣಿತ, ವೀರಗಾಸೆ, ಗಾಡಿಗೊಂಬೆ, ತಮಟೆ ಮತ್ತು ಕಹಳೆಗಳು ನಮ್ಮ ಇತಿಹಾಸ ಹಾಗೂ ಸಾಮಾಜಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜೀವಂತ ಪರಂಪರೆಯಾಗಿವೆ. ಇಂತಹ ಸಾಂಸ್ಕೃತಿಕ ಸಂಪತ್ತನ್ನು ಸಂರಕ್ಷಿಸುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Gauribidanur News: ರಾಯರೇಕಲಹಳ್ಳಿಯಲ್ಲಿ ಭಕ್ತಿ ಸಂಭ್ರಮದ ದೀಪೋತ್ಸವ; ಗ್ರಾಮದೇವತೆಗಳಿಗೆ ವಿಶೇಷ ಪೂಜೆ

ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಕೆ.ವಿ. ನಾಯಕ್ ಮಾತನಾಡಿ, ಭಾರತದ ದೇಶಿ ಸಂಸ್ಕೃತಿ ನಮ್ಮ ಜೀವನಶೈಲಿ, ಕಲೆ, ಆಹಾರ ಪದ್ಧತಿ ಹಾಗೂ ಸಂಪ್ರದಾಯಗಳ ಪ್ರತಿಬಿಂಬವಾಗಿದೆ. ಇದು ಕೇವಲ ಇತಿಹಾಸವಲ್ಲ; ಪ್ರಕೃತಿಯೊಂದಿಗೆ ಬೆಸೆದುಕೊಂಡಿರುವ ಜೀವಂತ ಕಲಾ ಪರಂಪರೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಶಿಕ್ಷಕ ನರಸಿಂಹ ರೆಡ್ಡಿ ಮಾತನಾಡಿ, ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಯುವಜನತೆಗೆ ಪರಿಚಯಿಸಿ ಉಳಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಇಂತಹ ಕಾರ್ಯಕ್ರಮಗಳು ಯುವ ಪೀಳಿಗೆಯಲ್ಲಿ ಸಂಸ್ಕೃತಿಯ ಬಗ್ಗೆ ಹೆಮ್ಮೆ ಮತ್ತು ಅರಿವು ಮೂಡಿಸುತ್ತವೆ ಎಂದರು.

ಶ್ರೀಮತಿ ದಿವ್ಯ ಶಿವನಾರಾಯಣ ಮಾತನಾಡಿ, ಕರ್ನಾಟಕದ ಭಾಷೆ, ಸಾಹಿತ್ಯ, ಕಲೆ ಹಾಗೂ ಶಿಲ್ಪ ಕಲೆಗಳು ವಿಶಿಷ್ಟ ಸಾಂಸ್ಕೃತಿಕ ಇತಿಹಾಸವನ್ನು ಹೊಂದಿದ್ದು, ವೈವಿಧ್ಯತೆಯಲ್ಲಿ ಏಕತೆಯ ಸಂದೇಶ ಸಾರುತ್ತಿವೆ ಎಂದು ಹೇಳಿದರು.

ಗೌತಮ ಬುದ್ಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ವೈ.ಟಿ. ಪ್ರಸನ್ನಕುಮಾರ್ ಮಾತನಾಡಿ, ದೇಶಿ ಜಾನಪದ ಕಲೆ ಮತ್ತು ಸಂಸ್ಕೃತಿಯನ್ನು ಜನಮಾನಸದಲ್ಲಿ ಬಿತ್ತುವ ಉದ್ದೇಶ ದಿಂದ ಸಂಘ ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಮೂಹ ನೃತ್ಯರೂಪಕ, ಜಾನಪದ ಗಾಯನ, ವೀರಗಾಸೆ, ನಾಸಿಕ್ ಡೊಳ್ಳು, ಗಾಡಿಗೊಂಬೆ, ಸಾಮಾಜಿಕ ನಾಟಕ, ಲಾವಣಿ ಪದಗಳು ಹಾಗೂ ಪರಿಸರ ಗೀತೆಗಳ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಶ್ರೀ ಚಂದ್ರು ಸೂರಪಲ್ಲಿ, ಲಕ್ಷ್ಮಿ (ಹಿರೇಬಿದನೂರು), ನರಸಿಂಹಮೂರ್ತಿ, ಕಲಾವಿದ ರಾಮಕೃಷ್ಣ, ಶಿಕ್ಷಕರಾದ ಬಿ.ಜಿ. ನಳಿನ, ನಾಗರತ್ನಮ್ಮ, ಬಿ.ಎನ್. ನರಸಿಂಹಮೂರ್ತಿ, ಭಾಗ್ಯವತಿ, ಗಂಗರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.