ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

11th Kannada Literary Conference: ಕನ್ನಡದ ಅಸ್ಮಿತೆ  ಹಳ್ಳಿಗಳಲ್ಲಿದೆ; ಭಾಷೆಯ ಉಳಿವು ಮಕ್ಕಳ ಕೈಯಲ್ಲಿದೆ

ಅಂಬೇಡ್ಕರ್ ಅವರ ಅರಿವಿನ ಕೇಂದ್ರದಲ್ಲಿ ನಡೆಯುತ್ತಿರುವ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಹೊಸ ಇತಿಹಾಸ ಬರೆದಿದೆ. ಕನ್ನಡ ಭಾಷೆ ಕೇವಲ ಸಂವಹನದ ಸಾಧನವಲ್ಲ. ಅದು ಪರಿಸರ, ವನಸಿರಿ, ಜಲಸಿರಿ, ಹಬ್ಬ-ಜಾತ್ರೆ ಸೇರಿದಂತೆ ಬಹುತ್ವವನ್ನು ಒಳಗೊಂಡ ಮಾನವ ಜೀವನದ ಜೀವಂತ ಸಾಕ್ಷಿಯಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಅಭಿಪ್ರಾಯಪಟ್ಟರು.

ಮನೆಯಿಂದಲೇ ಕನ್ನಡ ಕಟ್ಟುವ ಕೆಲಸವಾಗಲಿ: ಜಿಲ್ಲಾಧಿಕಾರಿ ಜಿ.ಪ್ರಭು

ಚಿಂತಾಮಣಿಯಲ್ಲಿ ನಡೆದ ೧೧ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲಾಧಿಕಾರಿ ಜಿ. ಪ್ರಭು ಮಾತನಾಡಿದರು. -

Profile
Ashok Nayak Nov 19, 2026 11:48 PM

ಚಿಕ್ಕಬಳ್ಳಾಪುರ: ಕನ್ನಡದ ಅಸ್ಮಿತೆ ಜಾನಪದ ಸಂಸ್ಕೃತಿಯಲ್ಲಿದೆ, ಹಳ್ಳಿಗಳಲ್ಲಿದೆ. ಕನ್ನಡ ಭಾಷೆಯ ಉಳಿವು ಮಕ್ಕಳ ಕೈಯಲ್ಲಿದೆ. ಒಂದನೇ ತರಗತಿಯ ಮಕ್ಕಳಿಗೇ ಕನ್ನಡದ ಸಾಹಿತಿಗಳ ಪರಿಚಯ ಮಾಡಿಕೊಡುವ ಕೆಲಸವಾಗಬೇಕು. ಕನ್ನಡ ಬಳಸುವ ಕೈಗಳು ಮತ್ತು ಮಾತನಾಡುವ ಬಾಯಿಗಳ ಸಂಖ್ಯೆ ಹೆಚ್ಚಾಗಬೇಕು. ಭಾಷೆಯ ಇತಿಹಾಸವನ್ನು ಅರಿತು ಶಿಕ್ಷಕರು ಬೋಧನೆಯಲ್ಲಿ ತೊಡಗಿಸಿ ಕೊಳ್ಳಬೇಕು. ಮನೆಗಳಲ್ಲಿಯೂ ಮೂಲತಃ ಕನ್ನಡ ಉಸಿರಾಗಬೇಕು ಎಂದು ಜಿಲ್ಲಾಧಿಕಾರಿ ಜಿ ಪ್ರಭು ಹೇಳಿದರು.

ಚಿಂತಾಮಣಿ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ 11ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು.

ಅಂಬೇಡ್ಕರ್ ಅವರ ಅರಿವಿನ ಕೇಂದ್ರದಲ್ಲಿ ನಡೆಯುತ್ತಿರುವ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಹೊಸ ಇತಿಹಾಸ ಬರೆದಿದೆ. ಕನ್ನಡ ಭಾಷೆ ಕೇವಲ ಸಂವಹನದ ಸಾಧನವಲ್ಲ. ಅದು ಪರಿಸರ, ವನಸಿರಿ, ಜಲಸಿರಿ, ಹಬ್ಬ-ಜಾತ್ರೆ ಸೇರಿದಂತೆ ಬಹುತ್ವವನ್ನು ಒಳಗೊಂಡ ಮಾನವ ಜೀವನದ ಜೀವಂತ ಸಾಕ್ಷಿಯಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಅಭಿಪ್ರಾಯಪಟ್ಟರು.

ಇದನ್ನೂ ಓದಿ: Chikkaballapur Accident: ಚಿಕ್ಕಬಳ್ಳಾಪುರದ ಬಳಿ ಭೀಕರ ಅಪಘಾತ; ಬೊಲೆರೊಗೆ ಕಾರು ಡಿಕ್ಕಿಯಾಗಿ ನಾಲ್ವರ ದುರ್ಮರಣ!

ಬಿಂದುವನ್ನು ಸಿಂಧುವಾಗಿಸುವ ಶಕ್ತಿ ಕನ್ನಡ ಭಾಷೆಗಿದೆ. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವಿದೆ.ಗೋವಿನ ಹಾಡಿನಲ್ಲಿ ಸತ್ಯ, ನಿಷ್ಠೆ, ಪ್ರೀತಿ, ವಾತ್ಸಲ್ಯ ಹಾಗೂ ಕರುಣೆಯಂತಹ ಮೌಲ್ಯಗಳಿವೆ. ಆ ಕಥೆಯಲ್ಲಿ ಹುಲಿಯೇ ಪ್ರಾಣತ್ಯಾಗ ಮಾಡುವ ಮೂಲಕ ಮಾನವೀಯ ಮೌಲ್ಯವನ್ನು ಸಾರುತ್ತದೆ. ಇಂತಹ ರಸಗಟ್ಟಿಯಾದ ಪದ್ಯವನ್ನು ಪಠ್ಯದಿಂದ ಏಕೆ ತೆಗೆದು ಹಾಕಲಾಗಿದೆ ಎಂಬುದರ ಬಗ್ಗೆ ಚಿಂತನೆ ನಡೆಸಬೇಕಿದೆ. ಶಿಕ್ಷಣ ವ್ಯವಸ್ಥೆಯೊಂದಿಗೆ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಅವಿನಾಭಾವ ಸಂಬಂಧ ಇರಬೇಕು ಎಂದು ತಿಳಿಸಿದರು.

ಕನ್ನಡ ಭಾಷಾ ಸಮ್ಮೇಳನಗಳು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರಗಳೂ ಚಿಂತನೆ ನಡೆಸಬೇಕು. ಶ್ರಮಜೀವಿಗಳ, ರೈತ ಪರಂಪರೆಯ ಜಿಲ್ಲೆ ಎಂಬ ಹೆಗ್ಗಳಿಕೆ ಚಿಕ್ಕಬಳ್ಳಾಪುರಕ್ಕಿದೆ. ಎಚ್. ನರಸಿಂಹಯ್ಯ, ತಾತಯ್ಯ ಹಾಗೂ ಜಚನಿ ಅವರ ಬದುಕು ಮತ್ತು ಸಾಧನೆಗಳು ಇಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದರು.

ಬಾಲ್ಯದಲ್ಲಿ ಮಕ್ಕಳಿಗೆ ಯಾವ ಭಾಷೆಯ ಮೇಲೆ ಹೆಚ್ಚು ಒಲವು ಮೂಡುತ್ತದೆಯೋ ಅದೇ ಅವರ ಭಾವಕೋಶದ ಭಾಗವಾಗುತ್ತದೆ. ಆದ್ದರಿಂದ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಪ್ರತಿಯೊಬ್ಬರಿಂದಲೂ ಮನೆಯಲ್ಲಿಯೇ ಆರಂಭವಾಗಬೇಕು. ನಾವೆಲ್ಲರೂ ಮನೆಯಿಂದಲೇ ಕನ್ನಡ ಕಟ್ಟುವ ಕೆಲಸ ಮಾಡೋಣ ಎಂದು ಕರೆ ನೀಡಿದರು.