ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಕನ್ನಡ ಭವನದಲ್ಲಿ ಡಿ.27-29ರಂದು ಕುವೆಂಪು ನಾಟಕೋತ್ಸವ ಯಶಸ್ವಿಗೊಳಿಸೋಣ : ಕೋಡಿರಂಗಪ್ಪ ಮನವಿ

ವಿಶ್ವ ಮಾನವ ಸಂದೇಶ ಸಾರುವ ನಾಟಕಗಳು ದೇಶಾದ್ಯಂತ ಎಲ್ಲರಿಗೂ ತಲುಪಬೇಕೆಂಬ ಉದ್ದೇಶ ದಿಂದ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಕ್ಕಳ ಸಂಸ್ಥೆ 'ರಂಗ ಕಹಳೆ'ಯು ಪ್ರತಿ ವರ್ಷ ಮಕ್ಕಳ ನಾಟಕೋ ತ್ಸವವೂ ಸೇರಿದಂತೆ ಕುವೆಂಪು ನಾಟಕೋತ್ಸವವನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಈಗಾಗಲೇ, ಕರ್ನಾ ಟಕದ 19 ಜಿಲ್ಲೆ ಸೇರಿದಂತೆ ಮುಂಬಯಿ, ದೆಹಲಿ, ಮಧ್ಯಪ್ರದೇಶ, ಮೇಘಾಲಯ, ಕಾಸರಗೋಡಿನಲ್ಲೂ ಉತ್ಸವಗಳು ಜರುಗಿವೆ.

ಕನ್ನಡ ಭವನದಲ್ಲಿ ಡಿ.27-29ರಂದು ಕುವೆಂಪು ನಾಟಕೋತ್ಸವ ಯಶಸ್ವಿಗೊಳಿಸೋಣ

-

Ashok Nayak
Ashok Nayak Dec 25, 2025 11:04 PM

ಚಿಕ್ಕಬಳ್ಳಾಪುರ: ವಿಶ್ವಮಾನವತೆಯ ಸಂದೇಶ ಸಾರಿದ ಮಹಾನ್ ದಾರ್ಶನಿಕ ಕವಿ, ಜ್ಞಾನಪೀಠ ಪ್ರಶಸ್ತಿ ವಿಜೇತ ಶ್ರೀ ಕುವೆಂಪು ಅವರ ಜನ್ಮದಿನೋತ್ಸವದ ಸವಿನೆನೆಪಿನಲ್ಲಿ ಡಿ.27,28.29ರಂದು ಕನ್ನಡ ಭವನದಲ್ಲಿ 24ನೇ ಕುವೆಂಪು ನಾಟಕೋತ್ಸವದ ಅಂಗವಾಗಿ ನಡೆಯುತ್ತಿದ್ದು ಇದನ್ನು ಯಶಸ್ವಿಗೊಳಿಸೋಣ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ.ಕೋಡಿರಂಗಪ್ಪ(Kasapa District President Dr. Kodirangappa) ಮನವಿ ಮಾಡಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ರಂಗಕಹಳೆ ಬೆಂಗಳೂರು ಆಯೋಜಿಸಿರುವ 24ನೇ ಕುವೆಂಪು ನಾಟಕೋತ್ಸವ-2024ರ ಸಂಬಂಧ ಗುರುವಾರ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಇದನ್ನೂ ಓದಿ: Chikkaballapur News: ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಾಲನೆ

ಇದೇ ಪ್ರಥಮ ಬಾರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ,ಕನ್ನಡ ಭವನದ ರಂಗಕಹಳೆ ಬೆಂಗಳೂರು ಆಯೋಜಿಸಿರುವ 24ನೇ ಕುವೆಂಪು ನಾಟಕೋತ್ಸವ-2025ರ ವತಿಯಿಂದ ಮೂರು ದಿನಗಳ ಕಾಲ ಕುವೆಂಪು ವಿರಚಿತ ಬೊಮ್ಮಹಳ್ಳಿಯ ಕಿಂದರಿಜೋಗಿ, ಮೋಡಣ್ಣನ ತಮ್ಮ, ಬಾಲಕ ಕುವೆಂಪು, ಸ್ಮಶಾನ ಕುರುಕ್ಷೇತ್ರ, ಯಮನ ಸೋಲು, ಶುದ್ರತಪಸ್ವಿ ನಾಟಕಗಳ ಪ್ರದರ್ಶನವಿದೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ, ಮಕ್ಕಳ ರಂಗಕರ್ಮಿ ದಿ|| ಸಿ.ಲಕ್ಷಣರವರು ಈ ಸಂಸ್ಥೆಯ ಸಂಸ್ಥಾಪಕರು. 49 ವರ್ಷ ಗಳಿಂದ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಾ, ರಾಜ್ಯ, ರಾಷ್ಟ್ರ,ಅಂತರರಾಷ್ಟ್ರೀಯ ಮಟ್ಟ ದಲ್ಲಿ ಕೀರ್ತಿಯನ್ನುಗಳಿಸಿ “ರಂಗಕಹಳೆ”ಯನ್ನು ಒಂದು ಉತ್ತಮ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಈ ಕಹಳೆಯ ಧನಿಯನ್ನು ನಿಲ್ಲಿಸಬಾರದೆಂದು ಅವರ ಪುತ್ರ ಓಹಿಲೇಶ ಲಕ್ಷ್ಮಣ ಈ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ ಎಂದರು.

ಓಹಿಲೇಶ ಲಕ್ಷ್ಮಣ ಮಾತನಾಡಿ ಬೆಂಗಳೂರಿನ ರಂಗ ಕಹಳೆ ಸಂಸ್ಥೆ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಸಹಕಾರದೊಂದಿಗೆ, ಪ್ರತಿಷ್ಠಿತ ತಂಡಗಳೊಂದಿಗೆ ಇದೇ ಮೊದಲ ಬಾರಿಗೆ ಚಿಕ್ಕಬಳ್ಳಾಪುರದಲ್ಲಿ ಕುವೆಂಪು ನಾಟಕೋತ್ಸವ-2025 ಹೆಸರಿನಲ್ಲಿ ನಾಟಕೋತ್ಸವವು ಜರುಗುತ್ತಿದೆ. ವಿಶ್ವ ಮಾನವ ಸಂದೇಶ ಸಾರುವ ನಾಟಕಗಳು ದೇಶಾದ್ಯಂತ ಎಲ್ಲರಿಗೂ ತಲುಪಬೇಕೆಂಬ ಉದ್ದೇಶ ದಿಂದ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಕ್ಕಳ ಸಂಸ್ಥೆ 'ರಂಗ ಕಹಳೆ'ಯು ಪ್ರತಿ ವರ್ಷ ಮಕ್ಕಳ ನಾಟಕೋ ತ್ಸವವೂ ಸೇರಿದಂತೆ ಕುವೆಂಪು ನಾಟಕೋತ್ಸವವನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಈಗಾಗಲೇ, ಕರ್ನಾಟಕದ 19 ಜಿಲ್ಲೆ ಸೇರಿದಂತೆ ಮುಂಬಯಿ, ದೆಹಲಿ, ಮಧ್ಯಪ್ರದೇಶ, ಮೇಘಾಲಯ, ಕಾಸರ ಗೋಡಿನಲ್ಲೂ ಉತ್ಸವಗಳು ಜರುಗಿವೆ. ಕುವೆಂಪು ನಾಟಕಗಳ ಜೊತೆಗೆ, ಸಾಧಕರಿಗೆ ಗೌರವಾರ್ಪಣೆ, ಕಿರುಚಿತ್ರ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಯಲುವಹಳ್ಳಿ ಸೊಣ್ಣೇಗೌಡ, ನಿವೃತ್ತ ಶಿಕ್ಷಕ ಕೆ.ಎಂ.ರೆಡ್ಡಪ್ಪ, ಅಣ್ಣಮ್ಮ, ಸಾಹಿತಿ ಗೋಪಾಲಗೌಡ ಕಲ್ವಮಂಜಲಿ, ಕೋಡಿರಂಗಪ್ಪ ಮಾತನಾಡಿದರು.