ಶಾಸಕ ಸುಬ್ಬಾರೆಡ್ಡಿ ನೂರಾರು ಎಕರೆಯ ಭೂ ಹಗರಣದ ದಾಖಲೆಗಳನ್ನು ಬಿಡುಗಡೆ ಮಾಡಿ ಬೀದಿಗಿಳಿದು ಹೋರಾಟ: ಸಿ.ಮುನಿರಾಜು
ರಾಜ್ಯ ಕಾಂಗ್ರೆಸ್ ಸರ್ಕಾರದ ಮಂತ್ರಿಗಳ ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರು ದಾಖಲೆ ಬಿಡುಗಡೆ ಮಾಡಿ ಕಾಂಗ್ರೆಸ್ಸಿಗರ ಭ್ರಷ್ಟಾಚಾರದ ವಿರುದ್ದ ಬಿಜೆಪಿ ಹೋರಾಟ ನಡೆಸಿದೆ, ಇದೀಗ ಕಂದಾಯ ಸಚಿವರು ಕೆರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ತೋಟ ಮಾಡಿ ಕೊಂಡಿರುವ ಬಗ್ಗೆ ದಾಖಲೆ ಬಿಡುಗಡೆಗೊಳಿಸಿ ಬಿಜೆಪಿ ರಾಜ್ಯಾದ್ಯಂತ ಹೋರಾಟಕ್ಕೆ ಮುಂದಾಗಿದೆ.
ಬಾಗೇಪಲ್ಲಿಯ ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿರವರ ನೂರಾರು ಎಕರೆಯ ಭೂ ಹಗರಣದ ದಾಖಲೆಗಳನ್ನು ಬಿಡುಗಡೆ ಮಾಡಿ ಬೀದಿಗಿಳಿದು ಹೋರಾಟ ನಡೆಸಿ ಬಡವರಿಗೆ ನ್ಯಾಯ ದೊರಕಿಸಿಕೊಡಲು ರಾಜ್ಯ ಬಿಜೆಪಿ ಸನ್ನದ್ದವಾಗುತ್ತಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ತಿಳಿಸಿದ್ದಾರೆ. -
ಬಾಗೇಪಲ್ಲಿ: ಬಾಗೇಪಲ್ಲಿಯ ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ(Congress MLA Subbareddy)ರವರ ನೂರಾರು ಎಕರೆಯ ಭೂ ಹಗರಣದ ದಾಖಲೆಗಳನ್ನು ಬಿಡುಗಡೆ ಮಾಡಿ ಬೀದಿಗಿಳಿದು ಹೋರಾಟ ನಡೆಸಿ ಬಡವರಿಗೆ ನ್ಯಾಯ ದೊರಕಿಸಿಕೊಡಲು ರಾಜ್ಯ ಬಿಜೆಪಿ ಸನ್ನದ್ದವಾಗುತ್ತಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ತಿಳಿಸಿದ್ದಾರೆ.
ಬಾಗೇಪಲ್ಲಿ ಪಟ್ಟಣದ ಟಿ.ಬಿ.ಕ್ರಾಸ್‌ನಲ್ಲಿರುವ ಬಿಜೆಪಿಯ ಸಿ.ಮುನಿರಾಜು ಗೃಹ ಕಚೇರಿ ಬಳಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿರವರ ಹುಟ್ಟುಹಬ್ಬದ ಪ್ರಯುಕ್ತ ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದ ಜನತೆಗೆ ಹೆಲ್ಮೆಟ್ ವಿತರಿಸಿ ಮಾತನಾಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಮಂತ್ರಿಗಳ ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ(Muda scam, Valmiki Corporation scam)ದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರು ದಾಖಲೆ ಬಿಡುಗಡೆ ಮಾಡಿ ಕಾಂಗ್ರೆಸ್ಸಿಗರ ಭ್ರಷ್ಟಾಚಾರದ ವಿರುದ್ದ ಬಿಜೆಪಿ ಹೋರಾಟ ನಡೆಸಿದೆ, ಇದೀಗ ಕಂದಾಯ ಸಚಿವರು ಕೆರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ತೋಟ ಮಾಡಿಕೊಂಡಿರುವ ಬಗ್ಗೆ ದಾಖಲೆ ಬಿಡುಗಡೆ ಗೊಳಿಸಿ ಬಿಜೆಪಿ ರಾಜ್ಯಾದ್ಯಂತ ಹೋರಾಟಕ್ಕೆ ಮುಂದಾಗಿದೆ.
ಇನ್ನು ಬಾಗೇಪಲ್ಲಿಯ ಕಾಂಗ್ರೆಸ್ ಶಾಸಕರು ಗುಡಿಬಂಡೆ, ಬಾಗೇಪಲ್ಲಿಯ ಹೊಸಹುಡ್ಯ, ಜಿಲಾಜಿರ್ಲ, ಚೇಳೂರಿನ ರಾಶ್ಚೇರುವು ಕಡೆ ಸಾವಿರಾರು ಎಕರೆ ಜಮೀನುಗಳನ್ನು ಕಬಳಿಸಿ ಶಾಸಕರ ಮಾಲೀ ಕತ್ವದ ಹೋಟೆಲ್‌ಗಳಲ್ಲಿ ಕೆಲಸ ಮಾಡುವವರ, ಸಂಬಂಧಿಕರ ಹೆಸರಿನಲ್ಲಿ ನೊಂದಣಿ ಮಾಡಿಸಿ ದ್ದಾರೆ.
ಇದನ್ನೂ ಓದಿ: Chikkaballapur News: ಕನ್ನಡ ಭವನದಲ್ಲಿ ಡಿ.27-29ರಂದು ಕುವೆಂಪು ನಾಟಕೋತ್ಸವ ಯಶಸ್ವಿಗೊಳಿಸೋಣ : ಕೋಡಿರಂಗಪ್ಪ ಮನವಿ
ಸರ್ಕಾರ ಮುಟ್ಟುಗೋಲಿಗೆ ಅದೇಶ ಮಾಡಿರುವ ಹೊಸಹುಡ್ಯ ಗ್ರಾಮದ ನೂರಾರು ಎಕರೆ ಸರ್ಕಾರಿ ಜಮೀನುಗಳಿಗೆ ನಕಲಿ ದಾಖಲೆ ಸೃಷ್ಠಿಸಿ ತನ್ನ ಕುಟುಂಬ ಸದಸ್ಯರ ಹೆಸರಿಗೆ ನೊಂದಣಿ ಮಾಡಿಸಿ ಕೊಂಡು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ನಿಗಮದಿಂದ ನೂರಾರು ಕೋಟಿ ಹಣ ಪಡೆಯಲು ಮುಂದಾಗಿರುವ ಬಗ್ಗೆ ಶೀಘ್ರದಲ್ಲೇ ದಾಖಲೆ ಬಿಡುಗಡೆ ಮಾಡಿ ಶಾಸಕ ಸುಬ್ಬಾರೆಡ್ಡಿಯ ಭ್ರಷ್ಟಾಚಾರ ಬಯಲು ಮಾಡಿದ ನಂತರ ರಾಜ್ಯ ನಾಯಕರೊಂದಿಗೆ ಬಾಗೇಪಲ್ಲಿಯಲ್ಲಿ ಬಿಜೆಪಿ ಬೃಹತ್ ಹೋರಾಟ ನಡೆಸಲಿದೆ. ಬಾಗೇಪಲ್ಲಿಯ ಶಾಸಕರ ಭೂ ಹಗರಣಗಳ ಬಗ್ಗೆ ದಾಖಲೆ ಸಮೇತ ರಾಜ್ಯ ಬಿಜೆಪಿ ಹೋರಾಟ ನಡೆಸುವುದುದಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರವರ ಸೂಚನೆಯಂತೆ ಸಂಸದ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಜಿಲ್ಲೆಯಾಧ್ಯಂತ ಹೆಲ್ಮೆಟ್ ವಿತರಣೆ ಕಾರ್ಯಕ್ರಮಕ್ಕೆ ಇಂದು ಸಾಂಕೇತಿಕವಾಗಿ ಚಾಲನೆ ನೀಡಿದ್ದೇವೆ, ಇದರ ಭಾಗವಾಗಿ ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ತಾಲೂಕುಗಳ ವ್ಯಾಪ್ತಿಯ ನಾಲ್ಕು ಸಾವಿರ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ವಿತರಿಸಲಾಗಿದ್ದು,
ಮುಂದುವರೆದ ಭಾಗವಾಗಿ ಸ್ಥಳೀಯ ಬಿಜೆಪಿ ಮುಖಂಡರ, ಕಾರ್ಯಕರ್ತರ ಮೂಲಕ ಹಳ್ಳಿಯಲ್ಲಿ ರುವ ಪ್ರತಿಯೊಬ್ಬ ದ್ವಿಚಕ್ರ ವಾಹನ ಸವಾರರಿಗೂ ಹೆಲ್ಮೆಟ್ ವಿತರಿಸುವ ಕಾರ್ಯಕ್ರಮ ಮಾಡಲಿದ್ದೇವೆ. ದೇಶಕ್ಕೆ ಬೆನ್ನೆಲುಬಾಗಿರುವ ಯುವಕರ ಪ್ರಾಣಕ್ಕೆ ಬೆಲೆ ಕಟ್ಟು ಸಾಧ್ಯವಿಲ್ಲ, ಅವರ ರಕ್ಷಣೆಯೇ ನಮ್ಮ ರಕ್ಷಣೆ ಆಗಿದ್ದು, ದ್ವಿಚಕ್ರ ವಾಹನ ಚಾಲನೆ ಸಮಯದಲ್ಲಿ ಸವಾರರ ಪ್ರಾಣವನ್ನು ಉಳಿಸುವ ಹೆಲ್ಮೆಟ್‌ವನ್ನು ಪ್ರತಿಯೊಬ್ಬರು ಧರಿಸಿ ಸಂಚಾರಿ ನಿಯಮಗಳನ್ನು ಪಾಲಿಸಿ ಎಂದು ಕರೆ
ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಗುಜ್ಜೇಪಲ್ಲಿ ಸುಧಾಕರರೆಡ್ಡಿ, ಆರ್.ಪ್ರತಾಪ್, ಗುಡಿಬಂಡೆ ಗಂಗಿರೆಡ್ಡಿ, ಆಧಿರೆಡ್ಡಿ, ಕೆ.ಟಿ.ವೀರಾಂಜನೇಯ, ಮರವಪಲ್ಲಿ ಕೃಷ್ಣಾರೆಡ್ಡಿ, ಆರ್.ವೆಂಕಟೇಶ್, ಚೇಳೂರು ಆಂಜನೇಯರೆಡ್ಡಿ, ಎಂ.ಬಿ.ಲಕ್ಷ್ಮೀ ನರಸಿಂಹಪ್ಪ, ಜಿನ್ನಿ, ಚಿನ್ನಪೂಜಪ್ಪ, ಸೆಂಟ್ರಿಂಗ್ ಸೀನಾ, ಗಂಗರಾಜು, ಕೊತ್ತಕೋಟೆ ಲೋಕೇಶ್, ರಾಮಚಂದ್ರ, ಈಶ್ವರರೆಡ್ಡಿ, ರಂಗಾರೆಡ್ಡಿ, ರವಿ ಕುಮಾರ್, ಮಂಜುಳಾ, ರೂಪ, ನಂದಿನಿ, ಕೃಷ್ಣವೇಣಿ ಮತ್ತಿತರರು ಇದ್ದರು.