ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gauribidanur News: ಬಡಾವಣೆಗೆ ಅಟಲ್ ಜೀ ಹೆಸರು ನಾಮಕರಣ

ಸುಮಾರು ಆರು ದಶಕಗಳ ಕಾಲ ಸುಧೀರ್ಘವಾದ ರಾಜಕಾರಣ ನಡೆಸಿದ ಅವರು ತಮ್ಮ ಸಾರ್ವ ಜನಿಕ ಜೀವನದಲ್ಲಿ ಎಂದೂ ಕಪ್ಪುಚುಕ್ಕೆ ಬರದಂತೆ ಬದುಕಿದವರು, ಎಂತಹ ಕಠಿಣ ಪರಿಸ್ಥಿತಿಯಲ್ಲೂ ತಾವು ನಂಬಿದ ತತ್ವ ಸಿದ್ದಾಂತಗಳಿಗೆ ರಾಜೀಯಾಗದೆ ಎಲ್ಲವನ್ನೂ ಮೆಟ್ಟಿ ನಿಂತು ಕೊನೆಗೆ ಈ ದೇಶದ ಪ್ರಧಾನಿಯಾಗಿ ನಮ್ಮೆಲ್ಲರಿಗೂ ಆದರ್ಶ ಪ್ರಾಯರಾದವರು.

ಬಡಾವಣೆಗೆ ಅಟಲ್ ಜೀ ಹೆಸರು ನಾಮಕರಣ

-

Ashok Nayak
Ashok Nayak Dec 25, 2025 11:24 PM

ಗೌರಿಬಿದನೂರು: ಅಜಾತ ಶತ್ರು ದೇಶದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ(
Former Prime Minister Atal Bihari Vajpayee) ಅವರು ದೇಶದ ಅಭಿವೃದ್ಧಿಗೆ ಮುನ್ನುಡಿ ಬರೆದವರು ಎಂದು ಭಾರತೀಯ ಜನತಾ ಪಾರ್ಟಿ(BJP)ಯ ಮುಖಂಡರಾದ ಡಾ.ಹೆಚ್ಎಸ್ ಶಶಿಧರ್ ತಿಳಿಸಿದರು.

ಅವರು ನಗರದ ಹಂದಿ ಜೋಗಿ ಕಾಲೋನಿಗೆ, ಅಟಲ್ ಬಿಹಾರಿ ವಾಜಪೇಯಿ ಬಡಾವಣೆ (Atal Bihari Vajpayee Layout) ಎಂದು ಹೊಸದಾಗಿ ನಾಮಕರಣ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸುಮಾರು ಆರು ದಶಕಗಳ ಕಾಲ ಸುಧೀರ್ಘವಾದ ರಾಜಕಾರಣ ನಡೆಸಿದ ಅವರು ತಮ್ಮ ಸಾರ್ವ ಜನಿಕ ಜೀವನದಲ್ಲಿ ಎಂದೂ ಕಪ್ಪುಚುಕ್ಕೆ ಬರದಂತೆ ಬದುಕಿದವರು, ಎಂತಹ ಕಠಿಣ ಪರಿಸ್ಥಿತಿ ಯಲ್ಲೂ ತಾವು ನಂಬಿದ ತತ್ವ ಸಿದ್ದಾಂತಗಳಿಗೆ ರಾಜೀಯಾಗದೆ ಎಲ್ಲವನ್ನೂ ಮೆಟ್ಟಿ ನಿಂತು ಕೊನೆಗೆ ಈ ದೇಶದ ಪ್ರಧಾನಿಯಾಗಿ ನಮ್ಮೆಲ್ಲರಿಗೂ ಆದರ್ಶ ಪ್ರಾಯರಾದವರು.

ಇದನ್ನೂ ಓದಿ: Gauribidanur News: ಜಗತ್ತಿಗೆ ಶಾಂತಿಯನ್ನು ಸಂವರ್ಧನೆ ಮಾಡಲು ಧ್ಯಾನದ ಅಗತ್ಯವಿದೆ: ಡಾ.ಕೆ.ವಿ. ಪ್ರಕಾಶ್

ಇಂತಹ ಒಬ್ಬ ಶ್ರೇಷ್ಠ ವ್ಯಕ್ತಿಯ ಹೆಸರನ್ನು ನಮ್ಮ ನಗರದ ಬಡಾವಣೆಗೆ ನಾಮಕಾರಣ ಮಾಡುತ್ತಿರು ವುದು ನೀವುಗಳು ಅವರಿಗೆ ತೋರಿಸುತ್ತಿರುವ ಕೃತಜ್ಞತೆಗೆ ಸಾಕ್ಷಿ ಎಂದರು.

ಬಿಜೆಪಿ ಪಕ್ಷದ ಮುಖಂಡ ಹಾಗೂ ವೈನ್ ಬೋರ್ಡ್ ಮಾಜಿ ಅಧ್ಯಕ್ಷರಾದ ಎನ್ಎಂ.ರವಿನಾರಾಯಣ ರೆಡ್ಡಿ ಅವರು ಮಾತನಾಡುತ್ತಾ ಇಂದು ಅಟಲ್ ಜೀ ಅವರ 101ನೇ ಜನ್ಮದಿನವನ್ನು ದೇಶದೆಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದೇವೆ. ವಾಜಪೇಯಿ ಅವರು ತೋರಿದ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಗಬೇಕಿದೆ,ಪ್ರತಿಯೊಬ್ಬ ಕಾರ್ಯಕರ್ತನೂ ವಾಜಪೇಯಿ ಅವರ ಬದುಕನ್ನು ಅಧ್ಯ ಯನ ಮಾಡಬೇಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯ ಸುಮಾರು ನಲವತ್ತು ಕುಟುಂಬ ಗಳಿಗೆ ಚಳಿಯಿಂದ ರಕ್ಷಣೆ ಪಡೆಯಲು ಉಲ್ಲನ್ ಬೆಡ್ ಶೀಟುಗಳನ್ನು ನೀಡಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಈ ಸಂಧರ್ಭದಲ್ಲಿ ನಗರಸಭೆ ಸದಸ್ಯೆ ಪುಣ್ವತಿ ,ಎಪಿಎಂಸಿ ಮಾಜಿ ಅಧ್ಯಕ್ಷೆ ಮುನಿಲಕ್ಷ್ಮಮ್ಮ,ನಗರ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಮೃತ್ಯುಂಜಯ, ಲೋಕೇಶ್, ರವಿಕುಮಾರ್, ರಾಮು, ಕೃಷ್ಣಪ್ಪ, ರಾಜು, ಚಂದ್ರಶೇಖರ, ಅನಿಲ್ ಕುಮಾರ್, ಸುಬ್ರಮಣ್ಯ, ವಿನೋದ್ ಹಾಗೂ ಅಟಲ್ ಜೀ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.