ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪುಟ್ಟಾಪುರ್ಲಹಳ್ಳಿ ಸಮೀಪದ ಮೂಗನಹಳ್ಳಕ್ಕೆ 1.95 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ

ಸುಮಾರು ಮೂವತ್ತು ವರ್ಷಗಳಿಂದ ಪುಟ್ಟಾಪುರ್ಲಹಳ್ಳಿ ಗ್ರಾಮಸ್ಥರ ಬಹು ಬೇಡಿಕೆಯ ಸೇತುವೆ ಕಾಮಗಾರಿಗೆ ಚಾಲನೆ ನೀಡುವುದರ ಜೊತೆಗೆ ಬೆಂಗಳೂರು ರಸ್ತೆಯಿಂದ ಪುಟ್ಟಾ ಪುರ್ಲಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನೂ ಮಂಜೂರು ಮಾಡಿಸ ಲಾಗುತ್ತದೆ.

ನಾನು ನೀಡಿದ ಭರವಸೆ ಈಡೇರಿಸಿದ ತೃಪ್ತಿ ನನಗಿದೆ

-

Ashok Nayak
Ashok Nayak Feb 25, 2026 12:59 AM

ಗೌರಿಬಿದನೂರು: ವಿಧಾನಸಭೆಯ ಚುನಾವಣೆಗೂ ಮುನ್ನ ಪುಟ್ಟಾಪುರ್ಲಹಳ್ಳಿ ಗ್ರಾಮಸ್ಥ ರಿಗೆ ನಾನು ನೀಡಿದ ಭರವಸೆಯನ್ನು ಈಡೇರಿಸಿದ ತೃಪ್ತಿ ನನಗಿದೆ ಎಂದು ಶಾಸಕ ಕೆಎಚ್.ಪುಟ್ಟಸ್ವಾಮಿಗೌಡ(MLA KH Puttaswamy Gowda)ರು ಹರ್ಷ ವ್ಯಕ್ತಪಡಿಸಿದರು.

ಅವರು ನಗರದ ಪುಟ್ಟಾಪುರ್ಲಹಳ್ಳಿ ಗ್ರಾಮಕ್ಕೆ ಸಮೀಪದ ಮೂಗನಹಳ್ಳಕ್ಕೆ ಸುಮಾರು 1.95 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸೇತುವೆ ನಿರ್ಮಿಸುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

okk

ಸುಮಾರು ಮೂವತ್ತು ವರ್ಷಗಳಿಂದ ಪುಟ್ಟಾಪುರ್ಲಹಳ್ಳಿ ಗ್ರಾಮಸ್ಥರ ಬಹು ಬೇಡಿಕೆಯ ಸೇತುವೆ ಕಾಮಗಾರಿಗೆ ಚಾಲನೆ ನೀಡುವುದರ ಜೊತೆಗೆ ಬೆಂಗಳೂರು ರಸ್ತೆಯಿಂದ ಪುಟ್ಟಾ ಪುರ್ಲಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನೂ ಮಂಜೂರು ಮಾಡಿಸಲಾಗುತ್ತದೆ. ಇಂದು ಒಂದೇ ದಿನದಲ್ಲಿ ವಿಜೆಎನ್ಎಲ್ ಯೋಜನೆ ಯಡಿಯಲ್ಲಿ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಸುಮಾರು ಏಳು ಕೋಟಿ ರೂಪಾಯಿಗಳ ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಲಾಗುತ್ತಿದೆ ಎಂದರು. 

ಇದನ್ನೂ ಓದಿ: Chikkaballapur News: ಮುಖ್ಯಮಂತ್ರಿಗಳು, ಬಾಕಿ ಬಿಡುಗಡೆಗೆ ಶೀಘ್ರವೇ ಅಧಿಕಾರಿಗಳು, ಗುತ್ತಿಗೆದಾರರ ಸಭೆ ಕರೆಯಲಿ : ಆರ್.ಮಂಜುನಾಥ್ ಆಗ್ರಹ

ಮುಂದಿನ ಎರಡೂವರೆ ತಿಂಗಳೊಳಗೆ ಸುಮಾರು ನೂರ ಇಪ್ಪತ್ತು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ ಶಾಸಕರು ಇತ್ತೀಚೆಗೆ ನಮ್ಮ ರಾಜಕೀಯ ವಿರೋಧಿಗಳು ಅನಾವಶ್ಯಕವಾಗಿ ನಮ್ಮ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿರುವುದನ್ನು ಮಾಧ್ಯಮಗಳಲ್ಲಿ ನೋಡಿ ದ್ದೇನೆ, ಇವರ ಆರೋಪಗಳಿಗೆ, ಟೀಕೆಗಳಿಗೆ,ಪ್ರಚೋದನೆಗಳಿಗೆ ಅಭಿವೃದ್ಧಿ ಕೆಲಸಗಳ ಮೂಲಕವೇ ಇವರಿಗೆ ಉತ್ತರ ನೀಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ನಾನು ಕ್ಷೇತ್ರದಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳನ್ನು ನೋಡಿಯೇ ನನ್ನ ರಾಜಕೀಯ ವಿರೋಧಿಗಳಿಗೆ ಇನ್ನು ಮುಂದೆ ರಾತ್ರಿ ಹೊತ್ತಿನಲ್ಲಿ ನಿದ್ದೆ ಬರುವುದಿಲ್ಲ ಎಂದು ತಮ್ಮ ರಾಜಕೀಯ ವಿರೋಧಿಗಳನ್ನು ಕುಟುಕಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕಿ ಎನ್.ಜ್ಯೋತಿರೆಡ್ಡಿ(Former MLA N. Jyotireddy), ನಗರಸಭೆ ಮಾಜಿ ಅಧ್ಯಕ್ಷ ಲಕ್ಷ್ಮೀ ನಾರಾಯಣಪ್ಪ, ನಗರಸಭೆ ಮಾಜಿ ಸದಸ್ಯ ರಾಜಕುಮಾರ, ಮುಖಂಡರಾದ ಆರ್.ಅಶೋಕ್ ಕುಮಾರ್, ಗಂಗಲಕ್ಷ್ಮಮ್ಮ, ಬೈಪಾಸ್ ನಾಗರಾಜ್, ಕಲ್ಲೂಡಿ ಸುರೇಶ್, ಮಂಜುನಾಥ್, ಮದನ್, ಮಹೇಶ್, ಕೃಷ್ಣಪ್ಪ, ವೆಂಕಟಾಚಲ, ಗಂಗರಾಜು ಹಾಗೂ ಇನ್ನಿತರರು ಉಪಸ್ಥಿತರಿದ್ದರು.