ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

New Shaadi Mahal: ಶಾಸಕ ಪ್ರದೀಪ್ ಈಶ್ವರ್ ವಾಗ್ದಾನ ರಂಜಾನ್ ಹಬ್ಬದ ಉಡುಗೊರೆಯಾಗಿ ಹುಟ್ಟೂರಿಗೆ ಒಂದು ಕೋಟಿ ವೆಚ್ಚದ ಶಾದಿ ಮಹಲ್ ನಿರ್ಮಾಣ

ಶಾಸಕರ ಭರವಸೆಯಿಂದ ಸಂತೋಷಗೊಂಡ ಮುಸಲ್ಮಾನ್ ಬಂಧುಗಳು, ಮತ್ತು ಕಾಲೋನಿಯ ಜನತೆ ನಿಮ್ಮಂತಹ ಸರಳ ಸಜ್ಜನಿಕೆಯ ಶಾಸಕರನ್ನು ಪಡೆದಿರುವುದು ನಮ್ಮ ಪುಣ್ಯ. ಕಾಂಗ್ರೆಸ್ ಪಕ್ಷದ ವರಿಷ್ಠರು ನಿಮಗೆ ಇನ್ನೂ ಹೆಚ್ಚಿನ ರಾಜಕೀಯ ಶಕ್ತಿ ಕೊಟ್ಟು ಜನಸೇವೆ ಮಾಡುವ ಅವಕಾಶವನ್ನು ಒದಗಿಸಲಿ

ಒಂದು ಕೋಟಿ ವೆಚ್ಚದ ಶಾದಿ ಮಹಲ್ ನಿರ್ಮಾಣ

-

Ashok Nayak
Ashok Nayak Mar 21, 2026 9:01 PM

ಚಿಕ್ಕಬಳ್ಳಾಪುರ: ರಂಜಾನ್ ಹಬ್ಬದ ದಿನವೇ ತಮ್ಮ ಹುಟ್ಟೂರು ಪೆರೇಸಂದ್ರ ಗ್ರಾಮದ ದರ್ಗಾಗೆ ಭೇಟಿ ನೀಡಿದ್ದ ಶಾಸಕ ಪ್ರದೀಪ ಈಶ್ವರ್(MLA Pradeep Eshwar) ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯಗಳು. 

ಈ ವೇಳೆ ಶಾಸಕರಿಗೆ ಮನವಿ ಸಲ್ಲಿಸಿದ ಮುಸ್ಲಿಂ ಸಮುದಾಯದ ಮುಖಂಡರು ಈ ಭಾಗ‌ ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರಿದ್ದೇವೆ. ನಾವೆಲ್ಲರೂ ಕೂಡ ನಿಮ್ಮ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದೇವೆ. ನಮಗೆ ಸುಸಜ್ಜಿತವಾದ ಶಾದಿ ಮಹಲ್ (Shaadi Mahal) ಅಗತ್ಯವಿದ್ದು, ಈ ಹಿಂದೆಯ ನಿರ್ಮಾಣಕ್ಕೆ ಮುಂದಾಗಿದ್ದರೂ ಅರ್ಧಂ ಬರ್ಧ ಕಾಮಗಾರಿಯಾಗಿ ಈ ಕಾರ್ಯ ನೆನೆಗುದಿಗೆ ಬಿದ್ದಿದೆ. ದಯವಿಟ್ಟು ಇದಕ್ಕೆ ಹಿಡಿದಿರುವ ವಿಘ್ನವನ್ನು ನಿವಾರಿಸಿ ಸಹಾಯ ಮಾಡಬೇಕು ಎಂದು ಕೋರಿದರು.

ಸಮುದಾಯದ ಮುಖಂಡರ ಕೋರಿಕೆ ಆಲಿಸಿದ ಶಾಸಕರು ಮುಂಬರುವ 2027 ರ ರಂಜಾನ್ ಹಬ್ಬದ ಒಳಗೆ ಸುಮಾರು ಒಂದು ಕೋಟಿ ವೆಚ್ಚದಲ್ಲಿ ನೂತನ ಶಾದಿ ಮಹಲ್( New Shaadi Mahal at a cost of one crore) ನಿರ್ಮಿಸಿ ಕೊಡಲು ಕ್ರಮ ವಹಿಸುತ್ತೇನೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಹಾರೈಕೆ ನನ್ನ ಮೇಲಿರಲಿ. ಜಾತಿ ಧರ್ಮ ಕುಲ ಗೋತ್ರಗಳೆನ್ನದೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಎಲ್ಲರಿಗೂ ರಂಜಾನ್ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ ಎಂದರು.

ಇದನ್ನೂ ಓದಿ: MLA Pradeep Eshwar: ಶಾಸಕರಾಗಿ ನೀಡಿರುವ ಭರವಸೆಗಳನ್ನು ಈಡೇರಿಸಿ, ಇಲ್ಲವೇ ಪ್ರತಿಭಟನೆ ಎದುರಿಸಿ : ಸುಷ್ಮಾ ಶ್ರೀನಿವಾಸ್ ಆಗ್ರಹ

ಇದೆ ವೇಳೆ ಶಾಸಕ ಪ್ರದೀಪ್ ಈಶ್ವರ್ ಪೆರೆಸಂದ್ರ ಗ್ರಾಮದಲ್ಲಿ ಮನೆ ಮನೆಗೆ ಭೇಟಿ ನೀಡಿ ಜನತೆಯ ಕಷ್ಟ ಸುಖಗಳನ್ನು ಆಲಿಸಿದರು. ಅಲ್ಲಿನ ಕಾಲೋನಿಗೂ ಭೇಟಿ ನೀಡಿ ಅವರಿಂದಲೂ ಆಹ್ವಾನ ಸ್ವೀಕರಿಸಿ ಆಗಬೇಕಾದ ಕೆಲಸಗಳ ಬಗ್ಗೆ ಮಾಹಿತಿ ಪಡೆದರು. 

ಶಾಸಕರ ಭರವಸೆಯಿಂದ ಸಂತೋಷಗೊಂಡ ಮುಸಲ್ಮಾನ್ ಬಂಧುಗಳು, ಮತ್ತು ಕಾಲೋನಿಯ ಜನತೆ ನಿಮ್ಮಂತಹ ಸರಳ ಸಜ್ಜನಿಕೆಯ ಶಾಸಕರನ್ನು ಪಡೆದಿರುವುದು ನಮ್ಮ ಪುಣ್ಯ. ಕಾಂಗ್ರೆಸ್ ಪಕ್ಷದ ವರಿಷ್ಠರು ನಿಮಗೆ ಇನ್ನೂ ಹೆಚ್ಚಿನ ರಾಜಕೀಯ ಶಕ್ತಿ ಕೊಟ್ಟು ಜನಸೇವೆ ಮಾಡುವ ಅವಕಾಶವನ್ನು ಒದಗಿಸಲಿ ಎಂದು ಹಾರೈಸಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಕ್ಷಿತ್ ರೆಡ್ಡಿ ಮಂಡಿಕಲ್ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್ ಮುಸ್ಲಿಂ ಮುಖಂಡರಾದ ಮಾರ್ಗಾನುಕುಂಟೆ ಬಾಬು, ಷುಕೂರ್ ಸಾಬ್ ಮತ್ತು ಮಕ್ಕಳು. ಕಾಂಗ್ರೆಸ್ ಮುಖಂಡರಾದ ರಾಮಾಂಜಿ ಮತ್ತು ಮುಸ್ಲಿಂ ಬಾಂಧವರು ಇದ್ದರು 

ಇದೆ ವೇಳೆ ಚಿಕ್ಕಬಳ್ಳಾಪುರ ತಾಲೂಕು ಶೇಟ್ ದಿನ್ನೆ ಬಳಿಯ ಸರಕಾರಿ ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸ ಮಾಡುತ್ತಿರುವ 150ಕ್ಕೂ ಹೆಚ್ಚು ಮನೆ ಇಲ್ಲದ ನಿರ್ಗತಿಕರ ಕಾಲೋನಿಗೆ ಶನಿವಾರ ಭೇಟಿ ನೀಡಿದ್ದ ಶಾಸಕರು ಅವರಿಂದ ಅಹವಾಲು ಸ್ವೀಕರಿಸಿದರು.

 ಈ ವೇಳೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್ ಹಾಗೂ ತಹಶೀಲ್ದಾರ್ ರಶ್ಮಿ(Tahsildar Rashmi) ಅವರಿಗೆ ತಿಳಿಸಿದ ಶಾಸಕರು ಯಾರ್ಯಾರು ಇಲ್ಲಿ ಗುಡಿಸಲು ನಿರ್ಮಿಸಿ ಕೊಂಡು ಸ್ಥಳೀಯರಾಗಿದ್ದುಕೊಂಡು ಮನೆ ಇಲ್ಲದೆ ಜೀವನ ನಡೆಸು ತ್ತಿದ್ದಾರೋ ಅಂತಹ ಅರ್ಹರ ಪಟ್ಟಿ ತಯಾರಿಸಿ ಅವರಿಗೆ ನಿವೇಶನ ನೀಡುವ ಕೆಲಸವನ್ನು ತುರ್ತಾಗಿ ಮಾಡಬೇಕು ಎಂದು ನಿರ್ದೇಶನ ನೀಡಿದರು. ಶಾಸಕರ ಈ ನಡೆ ನಿರ್ಗತಿಕರ ಬಾಳಿಗೆ ಬೆಳಕು ತರುವ ಮಾರ್ಗವಾಗಿದೆ. ಶಾಸಕರಿಗೆ ಇನ್ನೂ ಹೆಚ್ಚಿನ ರಾಜಕೀಯ ಅಧಿಕಾರ ದೊರೆತು ಬಡವರ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಜನತೆ ತಿಳಿಸಿದರು.