ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MLA Subbareddy: 5 ಕೋಟಿ ವೆಚ್ಚದ ಸೇತುವೆ ಕಾಮಗಾರಿಗೆ ಶಾಸಕ ಸುಬ್ಬಾರೆಡ್ಡಿ ಚಾಲನೆ

ನಲ್ಲಗೊಂಡಯ್ಯಗಾರಿ ಹಳ್ಳಿ ಹಾಗೂ ಪುಲಸಾನಿವೊಡ್ಡು ಗ್ರಾಮದ ಜನತೆಗೆ ಈ ಮಾರ್ಗದಲ್ಲಿ ಸಂಚರಿಸಲು ತುಂಬಾ ಸಮಸ್ಯೆಯಾಗಿತ್ತು, ಅದರಲ್ಲೂ ಮಳೆಗಾಲದಲ್ಲಿ ಈ ಮಾರ್ಗದಲ್ಲಿ ಓಡಾಡುವುದೇ ಕಷ್ಟಕರವಾಗಿತ್ತು. ಈ ಭಾಗದಲ್ಲಿ ಒಂದು ಕಾಲುವೆ ಹರಿಯುತ್ತಿದ್ದು ಅದರ ಮೇಲೆ ಸೇತುವೆ ನಿರ್ಮಾಣ ಮಾಡಿಕೊಡಲು ಗ್ರಾಮಸ್ಥರು ಮನವಿ ಮಾಡಿದ್ದರು.

5 ಕೋಟಿ ವೆಚ್ಚದ ಸೇತುವೆ ಕಾಮಗಾರಿಗೆ ಶಾಸಕ ಸುಬ್ಬಾರೆಡ್ಡಿ ಚಾಲನೆ

ತಾಲೂಕಿನ ಹಂಪಸಂದ್ರ ಗ್ರಾಪಂ ವ್ಯಾಪ್ತಿಯ ನಲ್ಲಗೊಂಡಯ್ಯಗಾರಿ ಹಳ್ಳಿ ಹಾಗೂ ಪುಲಸಾನಿವೊಡ್ಡು ಮಾರ್ಗದ ಮಧ್ಯೆ 5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಸುಬ್ಬಾರೆಡ್ಡಿ ಭೂಮಿ ಪೂಜೆ ನೆರವೇರಿಸಿದರು. -

Ashok Nayak
Ashok Nayak Dec 27, 2025 9:09 PM

ಗುಡಿಬಂಡೆ: ತಾಲೂಕಿನ ಹಂಪಸಂದ್ರ ಗ್ರಾಪಂ ವ್ಯಾಪ್ತಿಯ ನಲ್ಲಗೊಂಡಯ್ಯಗಾರಿ ಹಳ್ಳಿ ಹಾಗೂ ಪುಲಸಾನಿವೊಡ್ಡು ಮಾರ್ಗದ ಮಧ್ಯೆ 5 ಕೋಟಿ ವೆಚ್ಚ(5 crore cost)ದಲ್ಲಿ ನಿರ್ಮಾಣವಾಗಲಿರುವ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಸುಬ್ಬಾರೆಡ್ಡಿ(MLA Subbareddy) ಭೂಮಿ ಪೂಜೆ ನೆರವೇರಿಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಲ್ಲಗೊಂಡಯ್ಯಗಾರಿ ಹಳ್ಳಿ ಹಾಗೂ ಪುಲಸಾನಿವೊಡ್ಡು ಗ್ರಾಮದ ಜನತೆಗೆ ಈ ಮಾರ್ಗದಲ್ಲಿ ಸಂಚರಿಸಲು ತುಂಬಾ ಸಮಸ್ಯೆ ಯಾಗಿತ್ತು, ಅದರಲ್ಲೂ ಮಳೆಗಾಲದಲ್ಲಿ ಈ ಮಾರ್ಗದಲ್ಲಿ ಓಡಾಡುವುದೇ ಕಷ್ಟಕರ ವಾಗಿತ್ತು. ಈ ಭಾಗದಲ್ಲಿ ಒಂದು ಕಾಲುವೆ ಹರಿಯುತ್ತಿದ್ದು ಅದರ ಮೇಲೆ ಸೇತುವೆ ನಿರ್ಮಾಣ ಮಾಡಿಕೊಡಲು ಗ್ರಾಮಸ್ಥರು ಮನವಿ ಮಾಡಿದ್ದರು. ಅವರ ಮನವಿಯಂತೆ ಇಂದು 5 ಕೋಟಿ ಅನುದಾನದಲ್ಲಿ ಸೇತುವೆ ಕಾಮಗಾರಿ ನಿರ್ಮಾಣವಾಗಲಿದೆ. ಇದರ ಜೊತೆಗೆ ಗುಂಡ್ಲಹಳ್ಳಿ, ಭತ್ತಲಹಳ್ಳಿ ಭಾಗದಲ್ಲೂ ಸಹ ಸೇತುವೆ ನಿರ್ಮಾಣ ಮಾಡಲು ಅನುದಾನಕ್ಕಾಗಿ ಮನವಿ ಮಾಡಲಾಗಿದೆ. ಆದಷ್ಟು ಶೀಘ್ರ ಆ ಕಾಮಗಾರಿಗಳಿಗೂ ಚಾಲನೆ ನೀಡಲಾಗುವುದು ಎಂದರು.

ಇದನ್ನೂ ಓದಿ: Gudibande News: ಸರಕಾರಗಳಿಂದ ರೈತರ ಬದುಕನ್ನು ಹಸನು ಮಾಡುವ ಕೆಲಸ ನಡೆಯಬೇಕಿದೆ : ಮಂಜುನಾಥ್

ಇನ್ನೂ ಗ್ರಾಮಸ್ಥರು ಈ ಕಾಮಗಾರಿ ನಡೆಯುವಾಗ ಪರಿಶೀಲಿಸಬೇಕು. ಕಾಮಗಾರಿಯಲ್ಲಿ ಏನಾದರೂ ಲೋಪ ಕಂಡುಬಂದರೇ ಕೂಡಲೇ ನನಗೆ ಮಾಹಿತಿ ನೀಡಬೇಕು. ಗುಣಮಟ್ಟದ ಕಾಮಗಾರಿ ನಿರ್ವಹಿಸದೇ ಇದ್ದರೇ ಕಾಮಗಾರಿಯ ಬಿಲ್ ಮಾಡಲು ಬಿಡುವುದಿಲ್ಲ. ಜನರೂ ಸಹ ಕಾಮಗಾರಿಯ ಗುಣಮಟ್ಟವನ್ನು ಆಗಿದ್ದಾಂಗೆ ಪರಿಶೀಲನೆ ಮಾಡುತ್ತಿರಬೇಕು. ಇನ್ನೂ ಗುಡಿಬಂಡೆ ಕೆರೆ ಕಟ್ಟೆಯ ಅಲ್ಲಲ್ಲಿ ರಸ್ತೆ ಕುಸಿದಿರುವ ಬಗ್ಗೆ ವರದಿಯಾಗಿತ್ತು. ಈಗಾಗಲೇ ಈ ಕುರಿತು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೂ ತಿಳಿಸಿದ್ದು, ಅನುದಾನಕ್ಕಾಗಿ ಮನವಿ ಸಲ್ಲಿಸಿದ್ದಾರೆ. ಒಂದು ವಾರದಲ್ಲಿ ಅನುದಾನ ಬಿಡುಗಡೆಯಾಗುವ ಮಾಹಿತಿ ಯಿದ್ದು, ಈ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದರು.

ಈ ಸಮಯದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಆದಿರೆಡ್ಡಿ, ಸಣ್ಣ ನೀರಾವರಿ ಇಲಾಖೆಯ ಸುನೀಲ್, ಮುಖಂಡರಾದ ಲಕ್ಷ್ಮೀನಾರಾಯಣ, ಆದಿನಾರಾಯಣಪ್ಪ, ಬಾಲಕೃಷ್ಣಾರೆಡ್ಡಿ, ನಾರಾಯಣಸ್ವಾಮಿ ಸೇರಿದಂತೆ ಹಲವರು ಇದ್ದರು.