Protest against polluted water: ಪುರಸಭೆ ಕಲುಷಿತ ನೀರು ಪೂರೈಕೆ : ಸಾಂಕ್ರಾಮಿಕ ರೋಗ ಹರಡುವ ಭೀತಿ ಜನತೆ ಆಕ್ರೋಶ
ನೀರಿಗಾಗಿ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ ಪುರಸಭೆ ಸರಬರಾಜು ಮಾಡುವ ನೀರನ್ನು ಕಡ್ಡಾಯ ಬಳಕೆ ಮಾಡಿಕೊಳ್ಳುವುದು ಈ ವಾರ್ಡಿನ ಜನತೆಗೆ ಅನಿವಾರ್ಯವಾಗಿದೆ. ಅದರೇ ಕಳೆದ ನಾಲೈದು ದಿನಗಳಿಂದ ಪುರಸಭೆಯಿಂದ ಸರಬರಾಜು ಮಾಡುತ್ತಿರುವ ನೀರಿನಲ್ಲಿ ತ್ಯಾಜ್ಯ ಮಿಶ್ರಣ ಗೊಂಡು ಕಲುಷಿತವಾಗಿ ಸಾರ್ವಜನಿಕರ ಬಳಕೆ ಯೋಗ್ಯವಿಲ್ಲದ ಕಲುಷಿತ ನೀರನ್ನೆ ಮನೆಗಳಿಗೆ ಸರಬರಾಜು ಮಾಡಿರುತ್ತಾರೆ
-
ಬಾಗೇಪಲ್ಲಿ: ಪಟ್ಟಣದ ಜನತೆಗೆ ಸಕಾಲಕ್ಕೆ ಶುದ್ದ ಕುಡಿಯುವ ನೀರು ಪೂರೈಸಬೇಕಾಗಿರುವ ಪುರಸಭೆ ಆಡಳಿತ ಯಂತ್ರಾಂಗ ತ್ಯಾಜಮಿಶ್ರ ಕಲುಷಿತ ನೀರು ಸರಬರಾಜು ಮಾಡಿ ಜನರ
ಆರೋಗ್ಯದೊಂದಿಗೆ ಚಲ್ಲಾಟವಾಡುತ್ತಿದೆ ಎಂದು ಪುರಸಭೆ ಆಧಿಕಾರಿಗಳ ವಿರುದ್ದ ಪಟ್ಟಣದ ನಾಗರೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಗೇಪಲ್ಲಿ ಪಟ್ಟಣದ ಹೃದಯ ಭಾಗದಲ್ಲಿರುವ 15ನೇವಾರ್ಡಿನಲ್ಲಿ 200ಕ್ಕೂ ಹೆಚ್ಚು ಕುಟುಂಬ ಗಳಿದ್ದು ಕೂಲಿ ಕಾರ್ಮಿಕರು, ಬಡವರೇ ಹೆಚ್ಚಿನ ಪ್ರಮಾಣದಲ್ಲಿ ವಾಸವಿರುವ ಪ್ರದೇಶವಾಗಿರುತ್ತದೆ. ಪುರಸಭೆವತಿಯಿಂದ ವಾರಕ್ಕೊಮ್ಮೆ ಪೈಪ್ ಲೈನ್ ಮೂಲಕ ಸರಬರಾಜು ಮಾಡುವ ನೀರನ್ನೆ ಈ ಭಾಗದ ಜನತೆ ಆಹಾರ ಸಿದ್ದಪಡಿಸಲು, ಕುಡಿಯಲು ಹಾಗೂ ನಿತ್ಯ ಬಳಕೆಗೆ ಉಪಯೋಗಿಸಿ ಕೊಳ್ಳುತ್ತಾರೆ. ಏನಾದರೂ ಅಪಾಯ ಆದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ನೀರಿಗಾಗಿ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ ಪುರಸಭೆ ಸರಬರಾಜು ಮಾಡುವ ನೀರನ್ನು ಕಡ್ಡಾಯ ಬಳಕೆ ಮಾಡಿಕೊಳ್ಳುವುದು ಈ ವಾರ್ಡಿನ ಜನತೆಗೆ ಅನಿವಾರ್ಯವಾಗಿದೆ. ಅದರೇ ಕಳೆದ ನಾಲೈದು ದಿನಗಳಿಂದ ಪುರಸಭೆಯಿಂದ ಸರಬರಾಜು ಮಾಡುತ್ತಿರುವ ನೀರಿನಲ್ಲಿ ತ್ಯಾಜ್ಯ ಮಿಶ್ರಣಗೊಂಡು ಕಲುಷಿತವಾಗಿ ಸಾರ್ವಜನಿಕರ ಬಳಕೆ ಯೋಗ್ಯವಿಲ್ಲದ ಕಲುಷಿತ ನೀರನ್ನೆ ಮನೆಗಳಿಗೆ ಸರಬರಾಜು ಮಾಡಿರುತ್ತಾರೆ ಎಂದು ದೂರಿದರು.
ಇದನ್ನೂ ಓದಿ: Chikkaballapur News: ಶಾಲಾ ಮಕ್ಕಳ ಹಸಿವು ನಿವಾರಣೆಗೆ ‘ಸಾಯಿ ಶ್ಯೂರ್’: ಪೌಷ್ಟಿಕ ಉಪಹಾರದಿಂದ ಶಿಕ್ಷಣದ ಬಲವರ್ಧನೆ
ಕಲುಷಿತ ಕಪ್ಪು ಬಣ್ಣದ ತ್ಯಾಜ್ಯ ನೀರು ಮನೆಗಳ ತೊಟ್ಟಿ ಮತ್ತು ಸಂಪುಗಳಿಗೆ ಬಂದು ತುಂಬಿರುವು ದರಿಂದ ಗಬ್ಬು ವಾಸನೆ ಬೀರುವುದರ ಜತೆಗೆ ಮನೆ ಮಂದಿಯ ಅನಾರೋಗ್ಯಕ್ಕೂ ಕಾರಣವಾಗುತ್ತಿದೆ. ನೀರಿನ ತೊಟ್ಟಿ, ಸಂಪುಗಳಿಗೆ ತ್ಯಾಜ್ಯದ ನೀರು ತುಂಬಿರುವುದರ ಬಗ್ಗೆ ಮಾಹಿತಿ ಇಲ್ಲದ ಬಹುತೇಖರು ಕಲುಷಿತ ನೀರನ್ನು ನಿತ್ಯ ಬಳಕೆ ಮಾಡಿರುವ ಪ್ರಸಂಗವೂ ನಡೆದಿದೆ.
ಸಾರ್ವಜನಿಕ ಕೊಳವೆಬಾವಿಗಳಿಂದ ಶುದ್ದ ನೀರು ಪೂರೈಸಬೇಕಾಗಿರುವ ಪುರಸಭೆ ಆಡಳಿತ ಮಂಡಳಿಯ ಕಾರ್ಯವೈಖರಿಗೆ 15ನೇ ವಾರ್ಡ್ ನಾಗರೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಂಕ್ರಾಮಿಕ ರೋಗಳು ಹರಡುವ ಬೀತಿಯಲ್ಲಿದ್ದು ಅಂತಕ್ಕೆ ಗುರಿಯಾಗಿದ್ದಾರೆ. ಮತ್ತೊಂದು ಕಡೆ ತ್ಯಾಜ್ಯದ ನೀರಿನಿಂದ ತುಂಬಿಕೊಂಡಿರುವ ತೊಟ್ಟಿ ಮತ್ತು ಸಂಪುಗಳನ್ನು ಸ್ವಚ್ಛಗೊಳಿಸಲು ಹರ ಸಾಹಸ ಪಡುವಂತಾಗಿದೆ.
ಈ ಸಂದರ್ಭದಲ್ಲಿ ವಾರ್ಡಿನ ನಾಗರೀಕರಾದ ಪಾರ್ವತಿ, ಅಲಿವೇಲಮ್ಮ, ರೀಹಾನಾ, ಸಿಮ್ರಾನ್, ಹರ್ಷೀಯಾ, ಮಂಜುಳಾ, ಜಾಹೇದಾ, ಅಜಯ್ ಕುಮಾರ್, ಮಮತಾ, ಸಿ.ದೇವರಾಜು, ಕಾರ್ತಿಕ್ ಮತ್ತಿತರರು ಇದ್ದರು.
*
ಬಾಗೇಪಲ್ಲಿ ಪಟ್ಟಣದ 15ನೇ ವಾರ್ಡ್ನ ಜನತೆಗೆ ತ್ಯಾಜ್ಯದಿಂದ ಮಲೀನಗೊಂಡಿರುವ ನೀರನ್ನು ಸರಬರಾಜು ಮಾಡಿರುವುದು ಅತ್ಯಂತ ಖಂಡನೀಯವಾಗಿದ್ದು ಈ ಘಟನೆ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯತನವನ್ನು ಎತ್ತಿ ತೋರಿಸುತ್ತಿದೆ. ಶುದ್ದ ಕುಡಿಯುವ ನೀರು ಸರಬರಾಜು ಮಾಡಬೇಕಾ ಗಿರುವ ಪುರಸಭೆ ಜನರ ಆರೋಗ್ಯಕ್ಕೆ ಮಾರಕವಾಗುವ ಕೊಳಚೆ ನೀರು ಸರಬರಾಜು ಮಾಡಿದ್ದು, ಇದಕ್ಕೆ ಕಾರಣರಾಗಿರುವವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸುತ್ತೇವೆ.
- ಡಾ.ಮಹಮದ್ ನೂರುಲ್ಲಾ ಪುರಸಭೆ ಮಾಜಿ ಸದಸ್ಯರು