Gauribidanur News: ಶಿಕ್ಷಕರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಎಚ್.ಟಿ.ಶ್ರೀಧರ್ ಮತ್ತು ಫಯಾಜ್ ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳಾದ ಕೆ.ಎಲ್.ಸಿಂಹಾದ್ರಿ 9 ಮತಗಳನ್ನು ಪಡೆದು ವಿಜೇತರಾಗಿದ್ದು, ಆರ್.ಜಿ.ಜನಾರ್ಧನಮೂರ್ತಿ ಮತಗಳನ್ನು ಪರಾಭವಗೊಂಡಿದ್ದಾರೆ. ಪ್ರಧಾನ ಕಾರ್ಯದರ್ಶಿ ಸ್ಥಾನದ ಅಭ್ಯರ್ಥಿಗಳಾದ ಎಚ್.ಟಿ.ಶ್ರೀಧರ್ 10 ಮತಗಳು ಪಡೆದು ಆಯ್ಕೆಯಾಗಿದ್ದು, ಫಯಾಜ್ ೩ ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.
-
ಗೌರಿಬಿದನೂರು: ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಕೆ.ಎಲ್.ಸಿಂಹಾದ್ರಿ ಅಧ್ಯಕ್ಷರಾಗಿ ಹಾಗೂ ಎಚ್.ಟಿ. ಶ್ರೀಧರ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಜಿ.ಸಿ.ರಾಮಚಂದ್ರಯ್ಯ ತಿಳಿಸಿದರು.
ನಗರದ ಬಿ.ಆರ್.ಸಿ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕೆ.ಎಲ್.ಸಿಂಹಾದ್ರಿ ಮತ್ತು ಆರ್.ಜಿ.ಜನಾರ್ಧನಮೂರ್ತಿ ಅವರುಗಳು ನಾಮಪತ್ರ ಸಲ್ಲಿಸಿ ದ್ದರು.
ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಎಚ್.ಟಿ. ಶ್ರೀಧರ್ ಮತ್ತು ಫಯಾಜ್ ನಾಮಪತ್ರ ಸಲ್ಲಿಸಿ ದ್ದರು. ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳಾದ ಕೆ.ಎಲ್. ಸಿಂಹಾದ್ರಿ 9 ಮತಗಳನ್ನು ಪಡೆದು ವಿಜೇತರಾಗಿದ್ದು, ಆರ್.ಜಿ.ಜನಾರ್ಧನಮೂರ್ತಿ ಮತಗಳನ್ನು ಪರಾಭವಗೊಂಡಿದ್ದಾರೆ. ಪ್ರಧಾನ ಕಾರ್ಯದರ್ಶಿ ಸ್ಥಾನದ ಅಭ್ಯರ್ಥಿಗಳಾದ ಎಚ್.ಟಿ.ಶ್ರೀಧರ್ 10 ಮತಗಳು ಪಡೆದು ಆಯ್ಕೆಯಾಗಿದ್ದು, ಫಯಾಜ್ 3 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.
ಇದನ್ನೂ ಓದಿ: Gauribidanur News: ಇಂಟೆಕ್ ಉಪಾಧ್ಯಕ್ಷರಾಗಿ ಕುದುರೇಬ್ಯಾಲ್ಯದ ಪದ್ಮರಾಜ್ ಆಯ್ಕೆ
ಉಳಿದಂತೆ ಉಪಾಧ್ಯಕ್ಷರಾಗಿ ವೈ.ಎನ್.ಅಂಬಿಕಾ, ಖಜಾಂಚಿಯಾಗಿ ಎಚ್.ಎನ್.ಮುನಿರಾಜು, ಸಹ ಕಾರ್ಯದರ್ಶಿಗಳಾಗಿ ಎಂ.ಶಿವಪ್ರಸಾದ್ ಹಾಗೂ ಎಸ್.ಮಂಜುಳಾ, ಸಂಘಟನಾ ಕಾರ್ಯದರ್ಶಿಗಳಾಗಿ ಟಿ.ಲಕ್ಷ್ಮಿನಾರಾಯಣ ಹಾಗೂ ಎ.ಜಿ.ಚಂದ್ರಕಳಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾ ಅಧಿಕಾರಿ ಜಿ.ಸಿ.ರಾಮಚಂದ್ರಯ್ಯ ಅವರು ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು, ಮುಂದಿನ ಐದು ವರ್ಷಗಳ ಕಾಲ ದಕ್ಷ ಹಾಗೂ ಪಾರದರ್ಶಕ ಆಡಳಿತ ನೀಡುವ ಮೂಲಕ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸು ವಂತೆ ಹಾಗೂ ಶಿಕ್ಷಣ ಕ್ಷೇತ್ರದ ಪ್ರಗತಿಗೆ ಶ್ರಮಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಎನ್.ಜಿ.ರೆಡ್ಡಪ್ಪ, ಬಾಲಪ್ಪ, ಉಮೇಶ್, ವೆಂಕಟರವಣಪ್ಪ, ಪ್ರಸಾದ್, ಬಾಬಾಜಾನ್, ಲಕ್ಷ್ಮೀನರಸಯ್ಯ, ಗೋಪಾಲ್, ಟಿ.ಎನ್. ಎಂ.ಎಸ್.ಗೋಪಾಲ್, ಎಸ್.ಜಿ.ಜಯಮ್ಮ, ಜೆ.ರವಿಕುಮಾರ್, ಚಂದ್ರಕಳಾ, ಶ್ಯಾಮಲಾ, ಸರಳಾ, ಲಕ್ಷ್ಮೀನಾರಾಯಣ ಶೆಟ್ಟಿ, ಕೆ.ಸಿ.ಪ್ರಕಾಶ್, ಜಿ.ನಾಗರಾಜ್, ಎ.ಗೋಪಾಲ್, ಹರೀಶ್, ಡಿ.ಕೃಷ್ಣಮೂರ್ತಿ, ಎಚ್.ಟಿ. ರವಿಕುಮಾರ್, ಎಚ್.ಟಿ.ವೆಂಕಟೇಶ್ ಟೇಶ್ ಪ್ರಸಾದ್, ಮುನೀರ್, ಗಂಗಾಧರಯ್ಯ, ಗೀತಾ ಲಕ್ಷ್ಮೀ, ನಾಗಾರ್ಜುನ, ಜಿ.ಟಿ.ರಾಜಶೇಖರ್, ಗೋಪಾಲಗೌಡ, ಗಿರಿಧರ್, ಎನ್.ರಘು, ಭಾಗ್ಯಮ್ಮ, ಎಸ್.ಚಂದ್ರಶೇಖರ, ಶ್ರೀಧರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.