ವಾಪಸಂದ್ರದಲ್ಲಿ ಶ್ರದ್ಧಾಭಕ್ತಿಯಿಂದ ಓಂ ಶಕ್ತಿ ಪೂರಂ ಗಂಜಿ ಮಹೋತ್ಸವ
ಚಂಡಿಕಾ ಹೋಮದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡರು. ಭಾನುವಾರ ಬೆಳಿಗ್ಗೆ ನೂರಾರು ಮಹಿಳೆಯರು ಗಂಜಿ ಮಡಿಕೆಗಳನ್ನು ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿ ದರು. ಬಿಬಿ ರಸ್ತೆ, ಬಜಾರ್ ರಸ್ತೆ ಹಾಗೂ ಗಂಗಮ್ಮ ಗುಡಿ ರಸ್ತೆಯ ಮೂಲಕ ಸಾಗಿದ ಮೆರವಣಿಗೆಯಲ್ಲಿ ಭಕ್ತರು ದೇವಿಯ ನಾಮಸ್ಮರಣೆ, ಭಜನೆ ಹಾಗೂ ಧಾರ್ಮಿಕ ಆಚರಣೆಗಳ ಮೂಲಕ ಭಕ್ತಿಭಾವ ಮೆರೆದರು.
-
ಚಿಕ್ಕಬಳ್ಳಾಪುರ: ನಗರದ ವಾಪಸಂದ್ರದ ಶ್ರೀ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಓಂ ಶಕ್ತಿಯ 12ನೇ ವರ್ಷದ ಪೂರಂ ಗಂಜಿ ಮಹೋತ್ಸವವನ್ನು ಶ್ರದ್ಧೆ, ಭಕ್ತಿಭಾವದಿಂದ ಆಚರಿಸ ಲಾಯಿತು.
ಚಂಡಿಕಾ ಹೋಮದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡರು. ಭಾನುವಾರ ಬೆಳಿಗ್ಗೆ ನೂರಾರು ಮಹಿಳೆಯರು ಗಂಜಿ ಮಡಿಕೆಗಳನ್ನು ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿ ದರು. ಬಿಬಿ ರಸ್ತೆ, ಬಜಾರ್ ರಸ್ತೆ ಹಾಗೂ ಗಂಗಮ್ಮ ಗುಡಿ ರಸ್ತೆಯ ಮೂಲಕ ಸಾಗಿದ ಮೆರವಣಿಗೆಯಲ್ಲಿ ಭಕ್ತರು ದೇವಿಯ ನಾಮಸ್ಮರಣೆ, ಭಜನೆ ಹಾಗೂ ಧಾರ್ಮಿಕ ಆಚರಣೆಗಳ ಮೂಲಕ ಭಕ್ತಿಭಾವ ಮೆರೆದರು.
ವಾಪಸಂದ್ರದ ಮುಖಂಡ ಜೆ.ಸಿ.ಬಿ. ಮಂಜುನಾಥ್ ಮಾತನಾಡಿ, “ನಗರದಲ್ಲಿ ಪ್ರತ್ಯೇಕ ಓಂ ಶಕ್ತಿ ದೇವಸ್ಥಾನ ಇಲ್ಲದಿದ್ದರೂ ಕಳೆದ 12 ವರ್ಷಗಳಿಂದ ಮಹಿಳೆಯರು ಒಗ್ಗೂಡಿ ಗಂಜಿ ಮಹೋತ್ಸವ ಆಚರಿಸಿಕೊಂಡು ಬರುತ್ತಿದ್ದಾರೆ. ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ಜನರಿಗೆ ಸುಖ-ಸಮೃದ್ಧಿ ದೊರೆಯಲಿ ಎಂಬ ಆಶಯದಿಂದ ಉತ್ಸವ ನಡೆಸಲಾಗುತ್ತಿದೆ” ಎಂದರು.
ಸೂಕ್ತ ಸ್ಥಳ ಲಭಿಸಿದಲ್ಲಿ ಎಲ್ಲರ ಸಹಕಾರದೊಂದಿಗೆ ಓಂ ಶಕ್ತಿ ದೇವಸ್ಥಾನ ನಿರ್ಮಿಸಲು ಪ್ರಯತ್ನಿಸ ಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಹಾಗೂ ಭಕ್ತರು ಪಾಲ್ಗೊಂಡಿದ್ದು, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.