Shidlaghatta News: ಶಿಡ್ಲಘಟ್ಟದಲ್ಲಿ ಪೂಜಮ್ಮ ದೇವಿ ಕರಗ ಮಹೋತ್ಸವ ವೈಭವ: ಭಕ್ತರ ಸಾಗರ
ಕರಗ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಭಕ್ತರ ಹರ್ಷೋದ್ಗಾರಗಳ ನಡುವೆ ಸಾಗಿತು. ಮನೆಮನೆಗಳ ಮುಂದೆ ಭಕ್ತರು ಹೂವಿನ ಹಾರ ಹಾಗೂ ಕರ್ಪೂರ ಆರತಿ ನೀಡಿ ಕರಗವನ್ನು ಭಕ್ತಿಯಿಂದ ಸ್ವಾಗತಿಸಿದರು. ಮಹೋತ್ಸವವು ನಗರದಲ್ಲಿ ಧಾರ್ಮಿಕ ಸಂಭ್ರಮ ವನ್ನು ಮೂಡಿಸಿ ಭಕ್ತರಲ್ಲಿ ಏಕತೆ ಮತ್ತು ಭಕ್ತಿಭಾವವನ್ನು ಗಟ್ಟಿಗೊಳಿಸಿತು.
ನಗರದ ಬೈಪಾಸ್ ರಸ್ತೆಯಲ್ಲಿ ನೆಲೆಸಿರುವ ಶ್ರೀ ಪೂಜಮ್ಮ ದೇವಿ ಕರಗ ಮಹೋತ್ಸವವು ಭಕ್ತಿಭಾವ ಮತ್ತು ಸಂಭ್ರಮದ ವಾತಾವರಣದಲ್ಲಿ ಅದ್ದೂರಿಯಾಗಿ ಜರುಗಿತು. ಬೆಳಗ್ಗಿನಿಂದಲೇ ಭಕ್ತರು ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ, ಆರತಿ ಹಾಗೂ ಕರಗದ ದರ್ಶನ ಪಡೆದು ದೇವಿಯ ಆಶೀರ್ವಾದ ಪಡೆದರು. -
ಶಿಡ್ಲಘಟ್ಟ: ನಗರದ ಬೈಪಾಸ್ ರಸ್ತೆಯಲ್ಲಿ ನೆಲೆಸಿರುವ ಶ್ರೀ ಪೂಜಮ್ಮ ದೇವಿ ಕರಗ ಮಹೋ ತ್ಸವ(Sri Pujamma Devi Karaga Festival)ವು ಭಕ್ತಿಭಾವ ಮತ್ತು ಸಂಭ್ರಮದ ವಾತಾವರಣ ದಲ್ಲಿ ಅದ್ದೂರಿಯಾಗಿ ಜರುಗಿತು. ಬೆಳಗ್ಗಿನಿಂದಲೇ ಭಕ್ತರು ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ, ಆರತಿ ಹಾಗೂ ಕರಗದ ದರ್ಶನ ಪಡೆದು ದೇವಿಯ ಆಶೀರ್ವಾದ ಪಡೆದರು.
ಮಹೋತ್ಸವದ ಅಂಗವಾಗಿ ನಗರದಲ್ಲಿ ನಾಲ್ಕು ಕಡೆ ಭವ್ಯವಾದ ವಾದ್ಯಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿತ್ತು. ಕೆಇಬಿ ವೃತ್ತ, ಮಾರಮ್ಮ ವೃತ್ತ, ಕೋಟೆ ವೃತ್ತ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ತಾಳ–ಡೊಳ್ಳುಗಳ ಘರ್ಜನೆ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು. ವಾದ್ಯಗಳ ನಾದಕ್ಕೆ ಭಕ್ತರು ಭಕ್ತಿಮಯವಾಗಿ ಸ್ಪಂದಿಸಿದರು.
ವಾದ್ಯಗೋಷ್ಠಿಗಳ ವೇದಿಕೆಯಲ್ಲಿ ಕರಗದ ಪೂಜಾರಿ ಶಿವರಾಜ್ ಅವರು ಭಕ್ತಿಪರ ನೃತ್ಯ ಹಾಗೂ ಸಾಂಪ್ರದಾಯಿಕ ಆಚರಣೆಗಳ ಮೂಲಕ ಜನರನ್ನು ಆಕರ್ಷಿಸಿದರು. ಅವರ ಪ್ರದರ್ಶನ ಭಕ್ತರಲ್ಲಿ ಭಾವಭರಿತ ವಾತಾವರಣವನ್ನು ಸೃಷ್ಟಿಸಿತು.
ಕರಗ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಭಕ್ತರ ಹರ್ಷೋದ್ಗಾರಗಳ ನಡುವೆ ಸಾಗಿತು. ಮನೆಮನೆಗಳ ಮುಂದೆ ಭಕ್ತರು ಹೂವಿನ ಹಾರ ಹಾಗೂ ಕರ್ಪೂರ ಆರತಿ ನೀಡಿ ಕರಗವನ್ನು ಭಕ್ತಿಯಿಂದ ಸ್ವಾಗತಿಸಿದರು. ಮಹೋತ್ಸವವು ನಗರದಲ್ಲಿ ಧಾರ್ಮಿಕ ಸಂಭ್ರಮ ವನ್ನು ಮೂಡಿಸಿ ಭಕ್ತರಲ್ಲಿ ಏಕತೆ ಮತ್ತು ಭಕ್ತಿಭಾವವನ್ನು ಗಟ್ಟಿಗೊಳಿಸಿತು.
ಮಹೋತ್ಸವದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜಿಲ್ಲಾ ಪೊಲೀಸ್ ಅಧೀಕ್ಷಕ ಕುಶಾಲ್ ಚೌಕ್ಸ ಅವರ ಆದೇಶದ ಮೇರೆಗೆ ಸಿಪಿಐ ಆನಂದ್ ನೇತೃತ್ವದಲ್ಲಿ ಪಿಎಂಗಳಾದ ವೇಣುಗೋಪಾಲ್, ಸತೀಶ್, ಶ್ಯಾಮಲಾ ಹಾಗೂ ಪೊಲೀಸ್ ಸಿಬ್ಬಂದಿ ಬಿಗಿ ಭದ್ರತೆ ಒದಗಿಸಿದರು. ಮೆರವಣಿಗೆ ಸಾಗಿದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ನಿಯೋಜನೆಗೊಂಡು ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಿದರು.
ಈ ಸಂದರ್ಭದಲ್ಲಿ ಶಾಸಕ ಬಿ.ಎನ್. ರವಿಕುಮಾರ್, ಕಾಂಗ್ರೆಸ್ ಮುಖಂಡ ರಾಜೀವ್ ಗೌಡ, ಸಹನಾ ರಾಜೀವ್ ಗೌಡ, ಪುಟ್ಟು ಆಂಜಿನಪ್ಪ, ಮಾಜಿ ಶಾಸಕ ಎಂ. ರಾಜಣ್ಣ, ಬಿಜೆಪಿ ತಾಲೂಕು ಅಧ್ಯಕ್ಷ ಸೀಕಲ್ ಆನಂದ ಗೌಡ, ಮುಖಂಡರಾದ ನಾಗ ನರಸಿಂಹ, ನರಸಿಂಹ ಮೂರ್ತಿ ಎನ್‌ಟಿಆರ್, ಮಂಜುನಾಥ್, ರಾಮದಾಸ್ ಸೇರಿದಂತೆ ದೇವಾಲಯದ ಟ್ರಸ್ಟ್ ಪದಾಧಿಕಾರಿಗಳು ಉಪಸ್ಥಿತರಿದ್ದರು.