ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Raksha Ramaiah: ರಕ್ಷಾ ರಾಮಯ್ಯ ಜನ್ಮದಿನ: ಆಸ್ಪತ್ರೆ ಒಳರೋಗಿಗಳಿಗೆ ಹಣ್ಣು, ಹಾಲು ವಿತರಣೆ

ಎಐಸಿಸಿ(AICC) ಸದಸ್ಯ ಹಾಗೂ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ರಕ್ಷಾ ರಾಮಯ್ಯ (Raksha Ramaiah) ಅವರ 40ನೇ ಜನ್ಮದಿನದ ಅಂಗವಾಗಿ ಯುವ ಕಾಂಗ್ರೆಸ್ ಮುಖಂಡರು ವಿವಿಧ ಸಮಾಜಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ನಗರದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆವರಣದಲ್ಲಿರುವ ಪಂಚಮುಖಿ ಆಂಜನೇಯ ಹಾಗೂ ಗಣೇಶ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು, ಹಾಲು ಮತ್ತು ಬ್ರೆಡ್ ವಿತರಿಸಿದರು.

ರಕ್ಷಾ ರಾಮಯ್ಯ ಜನ್ಮದಿನ: ಆಸ್ಪತ್ರೆ ಒಳರೋಗಿಗಳಿಗೆ ಹಣ್ಣು, ಹಾಲು ವಿತರಣೆ

-

Profile
Ashok Nayak Oct 25, 2026 8:31 PM

ಚಿಕ್ಕಬಳ್ಳಾಪುರ: ಎಐಸಿಸಿ(AICC) ಸದಸ್ಯ ಹಾಗೂ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ರಕ್ಷಾ ರಾಮಯ್ಯ(Raksha Ramaiah) ಅವರ 40ನೇ ಜನ್ಮದಿನದ ಅಂಗವಾಗಿ ಯುವ ಕಾಂಗ್ರೆಸ್ ಮುಖಂಡರು ವಿವಿಧ ಸಮಾಜಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು.

ನಗರದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆವರಣದಲ್ಲಿರುವ ಪಂಚಮುಖಿ ಆಂಜನೇಯ ಹಾಗೂ ಗಣೇಶ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು, ಹಾಲು ಮತ್ತು ಬ್ರೆಡ್ ವಿತರಿಸಿದರು.

ಇದನ್ನೂ ಓದಿ: Raksha Bandhan: ಸಿಎಂ ಡಿ.ಕೆ. ಶಿವಕುಮಾರ್‌ ಕೈಗೆ ಆರ್‌ಎಸ್‌ಎಸ್‌ ರಾಖಿ ಕಟ್ಟಿದ ಬಿಜೆಪಿ ರಾಜ್ಯಸಭಾ ಸದಸ್ಯ!

ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ 40 ಕೆ.ಜಿ. ತೂಕದ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿದ ಕಾರ್ಯಕರ್ತರು, ಸುಮಾರು ಮೂರು ಸಾವಿರ ಜನರಿಗೆ ಚಿಕನ್ ಬಿರಿಯಾನಿ ವಿತರಿಸಿದರು. ರಕ್ಷಾ ರಾಮಯ್ಯ ಅವರ ರಾಜಕೀಯ ಜೀವನ ಮತ್ತಷ್ಟು ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕುಬೇರ ಅಚ್ಚು, ಎಂ.ಎಸ್. ರಾಮಯ್ಯ ಕುಟುಂಬ ಅವಳಿ ಜಿಲ್ಲೆಗಳ ಶೈಕ್ಷಣಿಕ ಅಭಿವೃದ್ಧಿ ಮತ್ತು ಆರೋಗ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದೆ. ಕಳೆದ ಚುನಾವಣೆಯಲ್ಲಿ ರಕ್ಷಾ ರಾಮಯ್ಯ ಸೋಲು ಅನುಭವಿಸಿದ್ದರೂ, ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಮತ್ತಷ್ಟು ಬೆಳೆಯುವ ವಿಶ್ವಾಸವಿದೆ ಎಂದರು.

25cbpm2rk Raksha

ರಕ್ಷಾ ರಾಮಯ್ಯ ಅವರ ಜನ್ಮದಿನವನ್ನು ಸಮಾಜಸೇವೆಯ ಮೂಲಕ ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಯುವ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಅಹಿಂದ ವರ್ಗದ ಅಭಿಮಾನಿಗಳು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡರಾದ ಅಲ್ಲು ಅನಿಲ್, ಜಗದೀಶ್, ಕೊಡೇಸ್ ವೆಂಕಟೇಶ್, ಮಂಡಕಲ್ ಶಂಕರ್, ನುಗಿತಹಳ್ಳಿ ರವಿ, ಡೈರಿ ಗೋಪಿ, ಶಾಹೀದ್, ಮುದಸೀರ್ ಪಾಷಾ, ಮಂಗಳಾ ಪ್ರಕಾಶ್, ಆವಲರೆಡ್ಡಿ, ಸಂದೀಪ್, ರಾಜೇಶ್, ನಾರಾಯಣಮ್ಮ, ಸುಮಿತ್ರಮ್ಮ, ದಯಾನಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.