ZIMW vs INDW: ಜಿಂಬಾಬ್ವೆ ವಿರುದ್ಧ ಟೀಮ್ ಇಂಡಿಯಾ ವನಿತೆಯರಿಗೆ ಭರ್ಜರಿ ಜಯ; ಸರಣಿ ಗೆದ್ದ ಸ್ಮೃತಿ ಮಂಧನಾ ಪಡೆ
ಆತಿಥೇಯ ಭಾರತ ಹಾಗೂ ಜಿಂಬಾಬ್ವೆ ಮಹಿಳಾ ತಂಡಗಳ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ 3 ಪಂದ್ಯಗಳ ಸರಣಿಯನ್ನು ಗೆದ್ದುಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 102 ರನ್ ಗಳಿಸಲಷ್ಟೇ ಶಕ್ತವಾಯ್ತು. ಜವಾಬಿತ್ತ ಭಾರತ ತಂಡ ಕೇವಲ 8.5 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 104 ರನ್ ಬಾರಿಸಿ ಜಯ ಗಳಿಸಿತು.
ಭಾರತದ ಮಹಿಳಾ ತಂಡ -
ರಾಯ್ಪುರ, ಅ. 18: ಆತಿಥೇಯ ಭಾರತ ಹಾಗೂ ಜಿಂಬಾಬ್ವೆ ಮಹಿಳಾ ತಂಡಗಳ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ (ZIMW vs INDW). ಆ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಇನ್ನೂ 1 ಪಂದ್ಯ ಬಾಕಿ ಇರುವಾಗಲೇ ಭಾರತ 2-0 ಅಂತರದಿಂದ ಸರಣಿ ಗೆದ್ದುಕೊಂಡಿದೆ. ಭಾನುವಾರ (ಅಕ್ಟೋಬರ್ 18) ಛತ್ತೀಸ್ಗಢದ ರಾಯ್ಪುರ ಶಹೀದ್ ವೀರ್ ನಾರಾಯಣ್ ಸಿಂಗ್ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 2ನೇ ಪಂದ್ಯದಲ್ಲಿ ಸ್ಮೃತಿ ಮಂಧನಾ ಪಡೆ 9 ವಿಕೆಟ್ಗಳಿಂದ ಭರ್ಜರಿ ಜಯ ದಾಖಲಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 102 ರನ್ ಗಳಿಸಲಷ್ಟೇ ಶಕ್ತವಾಯ್ತು. ಸುಲಭ ಗುರಿಯನ್ನು ಬೆಂಬತ್ತಿದ ಭಾರತ ತಂಡ ಕೇವಲ 8.5 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 104 ರನ್ ಬಾರಿಸಿ ಗೆಲುವಿನ ಕೇಕೆ ಹಾಕಿತು.
ಜಿಂಬಾಬ್ವೆ ವಿರುದ್ಧ ಜಯ ಗಳಿಸಿದ ಭಾರತ ತಂಡ:
Skipper Smriti Mandhana finishes it off in style 👏 #TeamIndia with a clinical 9️⃣-wicket win to clinch the series 2-0 🇮🇳 Scorecard ▶️ https://t.co/kECmCQJzty #INDvZIM | @mflone_ https://t.co/O7MAN9o4J3
— BCCI Women (@BCCIWomen) October 18, 2026
ಶಫಾಲಿ ವರ್ಮ, ಸ್ಮೃತಿ ಮಂಧಾನ ಸ್ಫೋಟಕ ಬ್ಯಾಟಿಂಗ್
ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮ ಹಾಗೂ ನಾಯಕಿ ಸ್ಮೃತಿ ಮಂಧಾನ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಶಫಾಲಿ ವರ್ಮ 25 ಬಾಲ್ಗಳಲ್ಲಿ 55 ರನ್ ಕಲೆ ಹಾಕಿ ವಿಕೆಟ್ ಒಪ್ಪಿಸಿದರು. ಅವರ ಬ್ಯಾಟ್ನಿಂದ 4 ಸಿಕ್ಸರ್, 6 ಫೋರ್ ಸಿಡಿಯಿತು. ಇನ್ನು ನಾಯಕಿ ಸ್ಮ್ರತಿ ಮಂದನಾ 25 ಬಾಲ್ಗಳಲ್ಲಿ 47 ರನ್ ಗಳಿಸಿ ಅಜೇಯರಾಗಿ ಉಳಿದರು. ಇತ್ತೀಚೆಗಷ್ಟೇ ನಾಯಕಿಯಾಗಿ ಆಯ್ಕೆಯಾದ ಸ್ಮೃತಿ ಮಂಧಾನ ಸರಣಿ ಗೆಲ್ಲುವ ಮೂಲಕ ಶುಭಾರಂಭ ಮಾಡಿದರು.
ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡ ಭಾರತದ ಕರಾರುವಕ್ಕಾದ ದಾಳಿಗೆ ನಲುಗಿ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 102 ಗಳಿಸಿತು. ಚಿಪೊ ಮುಗೆರಿ-ತಿರಿಪಾನೊ 32 ಎಸೆತಗಳಲ್ಲಿ 34 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಭಾರತದ ಪರ ಕನ್ನಡತಿ ನಿಕಿ ಪ್ರಸಾದ್ 2 ಓವರ್ಗಳಲ್ಲಿ ಕೇವಲ 7 ರನ್ ನೀಡಿ 2 ವಿಕೆಟ್ ಪಡೆದರೆ, ನಂದಿನಿ ಶರ್ಮ, ಕ್ರಾಂತಿ ಗೌಡ್, ದೀಪ್ತಿ ಶರ್ಮ ಮತ್ತು ಶ್ರೀ ಚರಣಿ ತಲಾ 1 ವಿಕೆಟ್ ಪಡೆದರು. ಶಫಾಲಿ ವರ್ಮ ಪ್ಲೇಯರ್ ಆಫ್ ದಿ ಮ್ಯಾಚ್ ಎನಿಸಿಕೊಂಡರು.
ಭಾರತ-ನ್ಯೂಜಿಲೆಂಡ್ ಸರಣಿಯ ವೇಳಾಪಟ್ಟಿ, ಪಂದ್ಯದ ನೇರ ಪ್ರಸಾರದ ಮಾಹಿತಿ
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪೂರ್ಣಾವಧಿ ನಾಯಕಿಯಾದ ಸ್ಮೃತಿ ಮಂಧಾನ ಅವರಿಗೆ ಇದು ಮೊದಲ ಟಿ20 ಅಂತಾರಾಷ್ಟ್ರೀಯ ಸರಣಿ ಎನ್ನುವುದು ವಿಶೇಷ. ಶುಕ್ರವಾರ ಜಿಂಬಾಬ್ವೆ ವಿರುದ್ಧ ನಡೆದ ಮೊದಲ ಪಂದ್ಯವನ್ನು ಭಾರತ ತಂಡ ಜಯ ಸಾಧಿಸಿತ್ತು. ಮಂಗಳವಾರ 3ನೇ ಪಂದ್ಯ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್
ಜಿಂಬಾಬ್ವೆ ತಂಡ: 102/8(20)
ಭಾರತ ತಂಡ: 104/1(8.5)