ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಲಾ ಪ್ರತಿಭೋತ್ಸವಕ್ಕೆ ನೋಂದಣಿ ಅವಕಾಶ

8ರಿಂದ 14 ವರ್ಷದ ಬಾಲಪ್ರತಿಭೆ, 14ರಿಂದ 18 ವರ್ಷದ ಕಿಶೋರಪ್ರತಿಭೆ ಹಾಗೂ 18ರಿಂದ 30 ವರ್ಷದ ಯುವಪ್ರತಿಭೆ ವಿಭಾಗಗಳಲ್ಲಿ ಶಾಸ್ತ್ರೀಯ ನೃತ್ಯ, ಸಂಗೀತ, ಚಿತ್ರಕಲೆ, ಜಾನಪದ ಗೀತೆ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ಸಮೂಹ ವಿಭಾಗದಲ್ಲಿ ನಾಟಕ ಮತ್ತು ಜನಪದ ನೃತ್ಯ ಸ್ಪರ್ಧೆಗಳಿರುತ್ತವೆ.

ಕಲಾ ಪ್ರತಿಭೋತ್ಸವಕ್ಕೆ ನೋಂದಣಿ ಅವಕಾಶ

-

Profile
Ashok Nayak Nov 11, 2026 10:33 AM

ಚಿಕ್ಕಬಳ್ಳಾಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಕ್ಕಳ ಹಾಗೂ ಯುವಜನರ ಕಲಾ ಪ್ರತಿಭೆ ಪ್ರೋತ್ಸಾಹಿಸಲು ನ.21ರಂದು ನಗರದ ಕನ್ನಡ ಭವನದಲ್ಲಿ ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವ ಆಯೋಜಿಸಲಾಗಿದೆ.

8ರಿಂದ 14 ವರ್ಷದ ಬಾಲಪ್ರತಿಭೆ, 14ರಿಂದ 18 ವರ್ಷದ ಕಿಶೋರಪ್ರತಿಭೆ ಹಾಗೂ 18ರಿಂದ 30 ವರ್ಷದ ಯುವಪ್ರತಿಭೆ ವಿಭಾಗಗಳಲ್ಲಿ ಶಾಸ್ತ್ರೀಯ ನೃತ್ಯ, ಸಂಗೀತ, ಚಿತ್ರಕಲೆ, ಜಾನಪದ ಗೀತೆ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ಸಮೂಹ ವಿಭಾಗದಲ್ಲಿ ನಾಟಕ ಮತ್ತು ಜನಪದ ನೃತ್ಯ ಸ್ಪರ್ಧೆಗಳಿರುತ್ತವೆ.

ಇದನ್ನೂ ಓದಿ: Sub Registrar Office: ರಾಜ್ಯದಲ್ಲಿ ಇಂದು, ನಾಳೆ ರಜೆ ಇದ್ದರೂ ಉಪನೋಂದಣಾಧಿಕಾರಿ ಕಚೇರಿ ಓಪನ್‌

ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಪ್ರಥಮ ಸ್ಥಾನ ವಿಜೇತರು ವಲಯ ಮಟ್ಟಕ್ಕೆ ಆಯ್ಕೆ ಯಾಗಲಿದ್ದಾರೆ. ರಾಜ್ಯಮಟ್ಟದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳಿಗೆ ಕ್ರಮವಾಗಿ 50 ಸಾವಿರ, 40 ಸಾವಿರ ಮತ್ತು 30 ಸಾವಿರ ನಗದು ಬಹುಮಾನ ನೀಡಲಾಗುವುದು.

ಆಸಕ್ತರು ವಯಸ್ಸಿನ ದೃಢೀಕರಣ ಪತ್ರದೊಂದಿಗೆ ನವೆಂಬರ್ 16ರ ಸಂಜೆ 5 ಗಂಟೆಯೊಳಗೆ ಕನ್ನಡ ಭವನದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್ ತಿಳಿಸಿದ್ದಾರೆ.