Chikkaballapur News: ಚಿತ್ರಾವತಿ ಅಣೆಕಟ್ಟ ನಿರ್ಮಾಣ ಆಗಲು ಮೂಲಕ ಕಾರಣ ಜಿ.ವಿ.ಶ್ರೀರಾಮರೆಡ್ಡಿ: ಜಯರಾಮರೆಡ್ಡಿ
ಗಡಿ ಭಾಗವಾಗಿರುವ ಬಾಗೇಪಲ್ಲಿ, ಗುಡಿಬಂಡೆಯ ಜನರಿಗೆ ನೀರಿಗೆ ಸಮಸ್ಯೆಯಾಗಬಾರದೆಂದು ಮುಂದಾ ಲೋಚನೆ ಮಾಡಿ, ಸುಮಾರು ೧೯೯೮ ರ ಸಮಯದಲ್ಲಿ ಶ್ರೀರಾಮರೆಡ್ಡಿಯವರೇ ಚಿತ್ರಾವತಿ ನದಿಗೆ ಅಡ್ಡಲಾಗಿ ಡ್ಯಾಂ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದರು. ಈ ಡ್ಯಾಂ ನಿರ್ಮಾಣದ ಸಮಯ ದಲ್ಲಿ ಪಕ್ಕದ ಆಂಧ್ರದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ಬಾಗೇಪಲ್ಲಿಯಲ್ಲಿನ ಚಿತ್ರಾವತಿ ಡ್ಯಾಂ ನಿರ್ಮಾಣಕ್ಕೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ರವರ ಹೆಸರು ನಾಮಕರಣವನ್ನು ವಿರೋಧಿಸಿ ಗುಡಿಬಂಡೆ ಸಿಪಿಎಂ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿ.

ಗುಡಿಬಂಡೆ: ಮಾಜಿ ಶಾಸಕರಾದ ದಿವಂಗತ ಜಿ.ವಿ.ಶ್ರೀರಾಮರೆಡ್ಡಿ ರವರ ಮುಂದಾಲೋಚನೆ ಹಾಗೂ ಅವಿರಥ ಹೋರಾಟದಿಂದ ಬಾಗೇಪಲ್ಲಿಯಲ್ಲಿ ಚಿತ್ರಾವತಿ ಅಣೆಕಟ್ಟು ನಿರ್ಮಾಣವಾಗಿದೆ. ಈ ಡ್ಯಾಂಗೆ ದಿವಂಗತ ಜಿ.ವಿ.ಶ್ರೀರಾಮರೆಡ್ಡಿ ರವರ ಹೆಸರನ್ನಿಡುವುದು ಸೂಕ್ತವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಬಿ.ಜಯರಾಮರೆಡ್ಡಿ ತಿಳಿಸಿದ್ದಾರೆ.
ಪಟ್ಟಣದ ಸಿಪಿಎಂ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಗಡಿ ಭಾಗವಾಗಿರುವ ಬಾಗೇಪಲ್ಲಿ, ಗುಡಿಬಂಡೆಯ ಜನರಿಗೆ ನೀರಿಗೆ ಸಮಸ್ಯೆಯಾಗಬಾರದೆಂದು ಮುಂದಾ ಲೋಚನೆ ಮಾಡಿ, ಸುಮಾರು ೧೯೯೮ ರ ಸಮಯದಲ್ಲಿ ಶ್ರೀರಾಮರೆಡ್ಡಿಯವರೇ ಚಿತ್ರಾವತಿ ನದಿಗೆ ಅಡ್ಡಲಾಗಿ ಡ್ಯಾಂ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದರು. ಈ ಡ್ಯಾಂ ನಿರ್ಮಾಣದ ಸಮಯದಲ್ಲಿ ಪಕ್ಕದ ಆಂಧ್ರದಿAದ ತೀವ್ರ ವಿರೋಧ ವ್ಯಕ್ತವಾಗಿತ್ತು, ಜೊತೆಗೆ ದೊಡ್ಡ ಹೋರಾಟಕ್ಕೆ ಬಾಗೇಪಲ್ಲಿಗೆ ಬಂದಿದ್ದರು. ಆದರೆ ಅಂದು ಜಿ.ವಿ.ಶ್ರೀರಾಮರೆಡ್ಡಿಯವರೇ ಮುಂದೆ ನಿಂತು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಿದರು ಎಂದರು.
ಇದನ್ನೂ ಓದಿ: China Border: ಚೀನಾ ಗಡಿಯ ಬಳಿ ಸೈನಿಕರ ಸಂಚಾರ ಸುಧಾರಿಸಲು ಭೂತಾನ್‌ನಲ್ಲಿ ರಸ್ತೆ ನಿರ್ಮಿಸಿದ ಭಾರತ
ಘಟಾನುಘಟಿಗಳಾದ ಆಂಧ್ರ ರಾಜಕೀಯ ನಾಯಕರುನ್ನು ಹಿಮ್ಮೆಟ್ಟಿಸಿದರು. ಚಿತ್ರಾವತಿ ಡ್ಯಾಂ ನಿರ್ಮಾಣದ ಹಿಂದೆ ದೊಡ್ಡ ಹೋರಾಟಗಳೇ ಇದೆ. ಆದರೆ ಕೆಲವು ದಿನಗಳ ಹಿಂದೆಯಷ್ಟೆ ಸಚಿವ ಸುಧಾಕರ್ ರವರು ಚಿತ್ರಾವತಿ ಡ್ಯಾಂಗೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ರವರ ಹೆಸರು ನಾಮಕರಣ ಮಾಡಲು ಮುಂದಾಗಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಚಿತ್ರಾವತಿ ಡ್ಯಾಂ ನಿರ್ಮಾಣಕ್ಕೆ ಕಾರಣಕರ್ತರಾದ ಶ್ರೀರಾಮರೆಡ್ಡಿಯವರು ಹೆಸರು ಮಾಡಲು ಬಯಸಿದವರಲ್ಲ. ಇದೀಗ ಅವರು ನಿಧನರಾಗಿದ್ದಾರೆ. ಅವರು ಹೆಸರು ಕ್ಷೇತ್ರದಲ್ಲಿ ಅಳಿಸಿ ಹಾಕಲು ಕೆಲ ರಾಜಕೀಯ ನಾಯಕರು ಮುಂದಾಗಿರುವುದು ಡ್ಯಾಂ ನ ನಾಮಕರಣದ ಮೂಲ ಉದ್ದೇಶ ಎಂದರು.
ಬಳಿಕ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೋಡಿಹಳ್ಳಿ ಚಂದ್ರಶೇಖರ್ ಬಣದ ಜಿಲ್ಲಾಧ್ಯಕ್ಷ ಹೆಚ್.ಪಿ.ರಾಮನಾಥ್ ಮಾತನಾಡಿ, ರಾಜ್ಯ ಕಾಂಗ್ರೇಸ್ ಸರ್ಕಾರ ಈ ಭಾಗಕ್ಕೆ ಜಲ ಜೀವನ್ ಮಿಷನ್ ಯೋಜನೆಯಡಿ ನೀರು ನೀಡಲು ಯೋಜನೆ ರೂಪಿಸಿ ಅನುದಾನ ನೀಡಿದೆ. ಆದರೆ ಈ ಯೋಜನೆಗೆ ಕೇಂದ್ರ ಶೇ.೫೦, ರಾಜ್ಯ ಸರ್ಕಾರ ಶೇ.೪೦ರಷ್ಟು ಹಾಗೂ ಸ್ಥಳೀಯ ಆಡಳಿತಗಳು ಶೇ.10ರಷ್ಟು ಅನುದಾನ ನೀಡಬೇಕು. ಸದ್ಯ ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ದೂರಿದರು.
ಈಗಾಗಲೇ ವಿವಿಧ ಸಾರಿಗೆ ಸಂಸ್ಥೆಗಳಿಗೆ ಸಾವಿರಾರು ಕೋಟಿಗಳು ಬಾಕಿ ನೀಡಬೇಕಿದೆ. ಈ ನಡುವೆ ಶೇ.40ರಷ್ಟು ಅನುದಾನ ಜಲ ಜೀವನ್ ಮಿಷನ್ ಯೋಜನೆಗೆ ಯಾವ ರೀತಿ ನೀಡುತ್ತಾರೆ. ಅನುದಾನ ನೀಡಲು ಆಗದೇ ಸ್ಥಳೀಯ ಕಾಂಗ್ರೇಸ್ ನಾಯಕರನ್ನು ಬಳಸಿಕೊಂಡು ಚಿತ್ರಾವತಿ ಡ್ಯಾಂ ಗೆ ಹೆಸರು ಬದಲಾವಣೆಯ ಪ್ರಸ್ತಾಪ ಮಾಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೇಸ್ ನವರಿಗೆ ಜಿ.ವಿ.ಶ್ರೀರಾಮರೆಡ್ಡಿ ಹೆಸರು ಕಂಡರೇ ಸಾಕು ಭಯ ಹುಟ್ಟುತ್ತೆ. ಅವರ ಮರಣದ ಬಳಿಕ ಕಾಂಗ್ರೇಸ್ ನಾಯಕರೆಲ್ಲಾ ಅಭಿವೃದ್ದಿಯ ಹರಿಕಾರ ಎಂದು ಬಣ್ಣಿಸಿದ್ದರು. ಆದರೂ ಸಹ ಇದೀಗ ಅವರ ಹೆಸರನ್ನು ಅಳಿಸಿ ಹಾಕಲು ಈ ರೀತಿಯ ಕೆಲಸಗಳಿಗೆ ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದರು.
ಇದೇ ಸಮಯದಲ್ಲಿ ದಲಿತ ಮುಖಂಡ ರಾಜು ಹಾಗೂ ಡಿವೈಎಫ್ ಐ ಮುಖಂಡ ಶ್ರೀನಿವಾಸ್ ಮಾತನಾಡಿ, ಬಾಗೇಪಲ್ಲಿಯ ಚಿತ್ರಾವತಿ ಡ್ಯಾಂ ಹೆಸರು ಹಾಗೆಯೇ ಉಳಿಯಲಿ ಒಂದು ವೇಳೆ ಹೆಸರು ಬದಲಿಸಬೇಕಾದರೇ ಅದಕ್ಕೆ ಜಿ.ವಿ.ಶ್ರೀರಾಮರೆಡ್ಡಿ ರವರ ಹೆಸರನ್ನು ಇಡಬೇಕು. ಈ ಸಂಬAಧ ಬಾಗೇಪಲ್ಲಿಯ ಪುರಸಭೆಯ ಮುಂಭಾಗ ಆ.೨ ರಂದು ಸಿಪಿಎಂ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ಈ ಹೋರಾಟಕ್ಕೆ ಎಲ್ಲರೂ ಮುಂದಾಗಬೇಕೆಂದರು. ಈ ವೇಳೆ ಸಿಪಿಎಂ ಪಕ್ಷದ ತಾಲೂಕು ಕಾರ್ಯದರ್ಶಿ ವೆಂಟಕರಾಜು, ತಾಲೂಕು ಸಮಿತಿ ಸದಸ್ಯರಾದ ರಮಣ, ದೇವರಾಜು, ಲಕ್ಷ್ಮೀನಾರಾಯಣ, ಆದಿನಾರಾಯಣ ಸೇರಿದಂತೆ ಹಲವರು ಇದ್ದರು.