Chikkaballapur News: ಚಿತ್ರಾವತಿ ಜಲಾಶಯಕ್ಕೆ ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಹೆಸರು ನಾಮಕರಣ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ
ಪಟ್ಟಣದ ಗೂಳೂರು ವೃತ್ತದಿಂದ ಹೊರಟ ಪ್ರತಿಭಟನೆಕಾರರು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಉಸ್ತು ವಾರಿ ಸಚಿವ ಎಂ.ಸಿ.ಸುಧಾಕರ್ ಹಾಗೂ ಜನಪ್ರತಿ ನಿಧಿಗಳ ವಿರುದ್ಧ ಧಿಕ್ಕಾರ ಕೂಗಿದರು, ತದನಂತರ ಪಟ್ಟಣದ ಮಾಜಿ ಶಾಸಕ ಜಿ.ವಿ.ಶ್ರೀರಾಮ ರೆಡ್ಡಿ ಪುತ್ಥಳಿ ಮುಂದೆ ಬಾಗೇಪಲ್ಲಿ ಚಿತ್ರಾವತಿ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿದರು.


ಬಾಗೇಪಲ್ಲಿ: ತಾಲ್ಲೂಕು ಪರಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿತ್ರಾವತಿ ಜಲಾಶಯಕ್ಕೆ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಎಂದು ಹೆಸರಿಡಲು ಆಗ್ರಹಿಸಿ ಪಟ್ಟಣದ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಮುಂಭಾಗದಲ್ಲಿರುವ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಪ್ರತಿಮೆ ಮುಂದೆ ಚಿತ್ರಾವತಿ ಅಣೆಕಟ್ಟು ಹೋರಾಟ ಸಮಿತಿವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಗೂಳೂರು ವೃತ್ತದಿಂದ ಹೊರಟ ಪ್ರತಿಭಟನೆಕಾರರು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಉಸ್ತುವಾರಿ ಸಚಿವ ಎಂ.ಸಿ.ಸುಧಾಕರ್ ಹಾಗೂ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗಿದರು, ತದನಂತರ ಪಟ್ಟಣದ ಮಾಜಿ ಶಾಸಕ ಜಿ.ವಿ.ಶ್ರೀರಾಮ ರೆಡ್ಡಿ ಪುತ್ಥಳಿ ಮುಂದೆ ಬಾಗೇಪಲ್ಲಿ ಚಿತ್ರಾವತಿ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರತಿಪರ ಚಿಂತಕ ಡಾ.ಅನಿಲ್‌ಕುಮಾರ್ ಅವುಲಪ್ಪ ಮಾತನಾಡಿ ಜಿ.ವಿ.ಶ್ರೀರಾಮ ರೆಡ್ಡಿ ಅವರು 1995ರಲ್ಲಿ ಶಾಸಕರಾಗಿದ್ದಾಗ ಅಂದಿನ ಮುಖ್ಯಮಂತ್ರಿ ಜೆ.ಹೆಚ್.ಪಟೇಲ್ ಅವರೊಂದಿಗೆ ಮಾತುಕತೆ ನಡೆಸಿ ಅನುದಾನ ತಂದಿದ್ದರು ಈ ಸಂದರ್ಭದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜಿ.ವಿ.ಶ್ರೀರಾಮರೆಡ್ಡಿ ಪರಾಭವಗೊಂಡ ನಂತರ ಚಿತ್ರಾವತಿ ಯೋಜನೆ ನೆನಗುದಿಗೆ ಬಿದ್ದಿತ್ತು ಸಿಪಿಐ(ಎಂ) ಪಕ್ಷದ ಆಶ್ರಯದಲ್ಲಿ ನಿರಂತರ ಹಗಲು, ರಾತ್ರಿ 68 ದಿನಗಳ ಯಶಸ್ವಿ ಹೋರಾಟ ನಡೆಯಿತು. ಅಗ ರಾಜ್ಯ ಸರಕಾರ ಎಚ್ಚೆತ್ತುಕೊಂಡು ಈ ಯೋಜನೆಗೆ ಹಸಿರು ನಿಶಾನೆ ತೋರಿತು.ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಬಾಗೇಪಲ್ಲಿ, ಚೇಳೂರು, ಗುಡಿಬಂಡೆ ತಾಲೂಕುಗಳಲ್ಲಿ ಜನರು ಪ್ಲೋರೈಡ್ ಸಮಸ್ಯೆಗಳಿಂದ ನರಳುತ್ತಿದ್ದರು.
ಮಳೆ ಅಭಾವದ ಈ ಕ್ಷೇತ್ರದಲ್ಲಿ 1000 ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿರಲಿಲ್ಲ ಸಿಕ್ಕರೂ ಪ್ಲೋರೈಡ್ ಅಂಶ ಹೆಚ್ಚಾಗಿತ್ತು ಈ ಹಿನ್ನೆಲೆಯಲ್ಲಿ ಈ ನೀರು ಕುಡಿದ ಜನರು ನಾನಾ ಖಾಯಿಲೆಗಳಿಂದ ಬಳಲುತ್ತಿದ್ದರು ಇದನ್ನು ಮನಗಂಡ ಜಿ.ವಿ.ಶ್ರೀರಾಮರೆಡ್ಡಿ ಅವರು ಚಿತ್ರಾವತಿ ನದಿ ಅಣೆಕಟ್ಟು ನಿರ್ಮಾಣ ಮಾಡಿ ಜನರಿಗೆ ಶುದ್ದ ಕುಡಿಯುವ ನೀರು ಒದಗಿಸಬೇಕೆಂಬ ಉದ್ದೇಶ ವಾಗಿತ್ತು. ಆದ್ದರಿಂದ ಚಿತ್ರಾವತಿ ಜಲಾಶಯಕ್ಕೆ ಜಿ.ವಿ.ಶ್ರೀರಾಮರೆಡ್ಡಿ ಅವರ ಹೆಸರನ್ನು ನಾಮಕರಣ ಮಾಡುವುದು ಸೂಕ್ತ ಎಂದು ಹೇಳಿದರು.
ಹಸಿರು ಸೇನೆ ಲಕ್ಷ್ಮೀನಾರಾಯಣ ರೆಡ್ಡಿ ಮಾತನಾಡಿ ಜಿ.ವಿ.ಶ್ರೀರಾಮರೆಡ್ಡಿ ಅವರ ಪ್ರತಿಮೆಯನ್ನು ಸ್ಥಾಪನೆ ಮಾಡಿದ್ದ ವಿರುದ್ದ ಜನಪ್ರತಿಯೊಬ್ಬರು ವಿರೋಧ ವ್ಯಕ್ತಪಡಿಸಿರುವುದನ್ನು ಪ್ರಸ್ಥಾಪಿಸಿದ ಅವರು ಎಲ್ಲಾ ರಾಜಕೀಯ ಪಕ್ಷಗಳ ಪಕ್ಷಾತೀತವಾಗಿ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗಿದೆಯೇ ವಿನಃ ಯಾವುದೇ ರಾಜಕೀಯ ಉದ್ದೇಶದಿಂದ ಅಲ್ಲ ಜನಪ್ರತಿನಿಧಿಗಳ, ಮಂತ್ರಿಗಳ ಕ್ಷುಲ್ಲಕ ರಾಜಕಾರದಿಂದ ಎಸ್.ಎಂ.ಕೃಷ್ಣ ಅವರ ಹೆಸರು ಇಡಲು ಮುಂದಾಗಿರುವುದು ಖಂಡನೀಯ ಒಂದು ವೇಳೆ ಚಿತ್ರಾವತಿ ಹೆಸರನ್ನು ಬದಲಾಯಿಸಲು ಮುಂದಾದರೆ ಜಿ.ವಿ.ಶ್ರೀರಾಮರೆಡ್ಡಿ ಹೆಸರನ್ನು ನಾಮಕರಣ ಮಾಡಬೇಕು ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿ ದರು.
ಕರ್ನಾಟಕ ರಾಜ್ಯ ಸಿಪಿಐ(ಎಂ) ಕಾರ್ಯದರ್ಶಿ ಮಂಡಳಿ ಸದಸ್ಯ ಎಂ.ಪಿ.ಮುನಿ ವೆಂಕಟಪ್ಪ ಮಾತನಾಡಿ ಪರಗೋಡು ಬಳಿ ಚಿತ್ರಾವತಿ ನದಿಗೆ ಅಣೆಕಟ್ಟು ನಿರ್ಮಾಣ ವಿಷಯ ಇಂದಿನದಲ್ಲ 1975ರಲ್ಲಿ ಮಾಜಿ ಶಾಸಕ ಎ.ವಿ.ಅಪ್ಪಸ್ವಾಮಿರೆಡ್ಡಿ ಅವರ ನೇತೃತ್ವದಲ್ಲಿ ಆಂಧ್ರಪ್ರದೇಶದ ಹಿಂದೂಪುರ ನಗರದ ಸಿಪಿಐ(ಎಂ) ಮುಖಂಡರು ಒತ್ತಾಯವಾಗಿತ್ತು ಎಂದರು.
ಚಿತ್ರಾವತಿ ನದಿ ಹೆಸರು ಪುರಾತನ ಕಾಲದಿಂದಲೂ ಇಲ್ಲಿನ ಜನತೆಯ ಭಾವನಾತ್ಮಕ ಬೆಸುಗೆ ಚಿತ್ರಾವತಿ ನದಿಗೆ ಅಣೆಕಟ್ಟು ನಿರ್ಮಾಣಕ್ಕೆ ಕಾರಣಕರ್ತರಾದ ಜಿ.ವಿ.ಶ್ರೀರಾಮರೆಡ್ಡಿ ಹೆಸರನ್ನು ಜನಮಾನಸದಿಂದ ದೂರ ಮಾಡುವ ಸಲುವಾಗಿ ಸ್ಥಳೀಯ ಕಾಂಗ್ರೆಸ್ ಆಡಳಿತ ಚಿತ್ರಾವತಿ ಹೆಸರನ್ನು ಎಸ್.ಎಂ.ಕೃಷ್ಣ ಜಲಾಶಯ ಎಂದು ನಾಮಕರಣ ಮಾಡಲು ಹೊರಟಿರುವುದು ಖಂಡನೀಯ ಎಂದರು.
ಸಿಪಿಐಎಂ ವಾಲ್ಕೀಕಿ ನಗರದ ಅಶ್ವತ್ಥಪ್ಪ,ರೈತ ಈ ಸಂದರ್ಭದಲ್ಲಿ ಚಿತ್ರಾವತಿ ಹೋರಾಟ ಸಮಿತಿ ಮುಖಂಡರಾದ ಚಲಪತಿ, ರಘುರಾಮರೆಡ್ಡಿ, ಡಿ.ಟಿ.ಮುನಿಸ್ವಾಮಿ, ಸಾವಿತ್ರಮ್ಮ, ಜಿ.ಮುಸ್ತಾಪ್, ಮಂಜೂರ್ ಆಹಮದ್, ದೇವಿಕುಂಟೆ ಸೀನಪ್ಪ, ಚನ್ನರಾಯಪ್ಪ, ಜಿ.ಎಂ.ರಾಮಕೃಷ್ಣಪ್ಪ, ಜಿ.ಕೃಷ್ಣಪ್ಪ, ಬಿ.ನರಸಿಂಹಾರೆಡ್ಡಿ, ಅಬ್ದುಲ್ ರಫೀಕ್, ತೋಳ್ಳಪಲ್ಲಿ ವೆಂಕಟೇಶ್, ಪರ್ವೀನ್ ತಾಜ್, ಜ್ಯೋತಿ, ರಂಗಪ್ಪ, ಈಶ್ವರ ರೆಡ್ಡಿ, ಲಕ್ಷ್ಮಣ್ ರೆಡ್ಡಿ, ಉಮಾ,ಕೆ.ವಿ.ರಾಮಚಂದ್ರಪ್ಪ, ಆದಿಶೇಷು, ರಾಮರೆಡ್ಡಿ,ಇಮ್ರಾನ್, ವೆಂಕಟರಾಮರೆಡ್ಡಿ,ಸುರೇಶ್, ಶ್ರೀನಿವಾಸ ರೆಡ್ಡಿ, ಸಾಯಿಜ್ಯೋತಿ, ಮತ್ತಿತರರು ಇದ್ದರು.
ತಾಲ್ಲೂಕು ಪರಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿತ್ರಾವತಿ ಜಲಾಶಯಕ್ಕೆ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಎಂದು ಹೆಸರಿಡಲು ಆಗ್ರಹಿಸಿ ಪಟ್ಟಣದ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ದಲ್ಲಿ ಮುಂಭಾಗದಲ್ಲಿರುವ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಪ್ರತಿಮೆ ಮುಂದೆ ಚಿತ್ರಾವತಿ ಅಣೆಕಟ್ಟು ಹೋರಾಟ ಸಮಿತಿವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.