Sri Madhusudan Sai: ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಎಲ್ಲರಿಗೂ ಲಭ್ಯವಾಗಬೇಕು: ಶ್ರೀ ಮಧುಸೂದನ ಸಾಯಿ
Sathya Sai Grama: ಆರೋಗ್ಯ ಸೇವೆಯು ಎಲ್ಲರಿಗೂ ನ್ಯಾಯಯುತವಾಗಿ ಸಿಗಬೇಕು. ಇದು ವ್ಯವಹಾರವಾಗಲು ಸಾಧ್ಯವಿಲ್ಲ, ಜನರಿಗೆ ಈ ಸೇವೆಯನ್ನು ಪಡೆಯಲು ಸ್ವಾತಂತ್ರ್ಯವಿರಬೇಕು, ಹಣ ಪಾವತಿಸುವ ಶಕ್ತಿ ಇಲ್ಲ ಎನ್ನುವ ಕಾರಣಕ್ಕೆ ಇದನ್ನು ನಿರಾಕರಿಸುವಂತಿಲ್ಲ, ಸಾಕಷ್ಟು ಮಂದಿಗೆ ಈ ಸೇವೆ ಸಿಗುತ್ತಿಲ್ಲ. ಇದಕ್ಕಾಗಿ ಉಚಿತ ಆರೋಗ್ಯ ಸೇವೆ ನೀಡುವ ಬೃಹತ್ ಆಸ್ಪತ್ರೆ ನಿರ್ಮಿಸುತ್ತಿದ್ದೇವೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ತಿಳಿಸಿದ್ದಾರೆ.

-

ಚಿಕ್ಕಬಳ್ಳಾಪುರ: ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಪ್ರತಿಯೊಬ್ಬರಿಗೂ ಲಭ್ಯವಾಗಬೇಕು ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ (Sadguru Sri Madhusudan Sai) ಹೇಳಿದರು. ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಸಾಂಸ್ಕೃತಿಕ ಉತ್ಸವ'ದ 54ನೇ ದಿನವಾದ ಬುಧವಾರ ಆಶೀರ್ವಚನ ನೀಡಿದರು. ಆರೋಗ್ಯ ಸೇವೆಯು ಎಲ್ಲರಿಗೂ ನ್ಯಾಯಯುತವಾಗಿ ಸಿಗಬೇಕು. ಇದು ವ್ಯವಹಾರವಾಗಲು ಸಾಧ್ಯವಿಲ್ಲ, ಜನರಿಗೆ ಈ ಸೇವೆಯನ್ನು ಪಡೆಯಲು ಸ್ವಾತಂತ್ರ್ಯವಿರಬೇಕು, ಹಣ ಪಾವತಿಸುವ ಶಕ್ತಿ ಇಲ್ಲ ಎನ್ನುವ ಕಾರಣಕ್ಕೆ ಇದನ್ನು ನಿರಾಕರಿಸುವಂತಿಲ್ಲ, ಸಾಕಷ್ಟು ಮಂದಿಗೆ ಈ ಸೇವೆ ಸಿಗುತ್ತಿಲ್ಲ. ಇದಕ್ಕಾಗಿ ಉಚಿತ ಆರೋಗ್ಯ ಸೇವೆ ನೀಡುವ ಬೃಹತ್ ಆಸ್ಪತ್ರೆ ನಿರ್ಮಿಸುತ್ತಿದ್ದೇವೆ ಎಂದು ಹೇಳಿದರು.
ಹೊಸದಾಗಿ ನಿರ್ಮಿಸಲಾಗುತ್ತಿರುವ ಆಸ್ಪತ್ರೆಯು ಅಮೆರಿಕದ ಕ್ಯಾಪಿಟಲ್ ಹಿಲ್‌ನ ಮಾದರಿಯಲ್ಲಿ ಇರಲಿದೆ. ಇದು ಸ್ವಾತಂತ್ರ್ಯ, ಸಮಾನತೆ ಹಾಗೂ ನ್ಯಾಯದ ಸಂಕೇತವಾಗಿದೆ. ಅದ್ಭುತವಾದ ಮಾನವೀಯ ಮೌಲ್ಯಗಳ ಸಂಕೇತಗಳನ್ನು ಪ್ರತಿನಿಧಿಸುತ್ತದೆ. ಆರೋಗ್ಯ ರಕ್ಷಣೆಯು ಎಲ್ಲರಿಗೂ ಸಮಾನವಾಗಿ ಸಿಗಬೇಕು ಎಂದು ಪ್ರತಿಪಾದಿಸಿದರು.

ಕೌಶಲ ತರಬೇತಿ ಮತ್ತು ಅಭಿವೃದ್ಧಿ ವಿಭಾಗವನ್ನು ಬಹಳ ಮೊದಲೇ ಸ್ಥಾಪಿಸಿದ್ದೇವೆ. ಏಕೆಂದರೆ ಮಕ್ಕಳು ವಿಭಿನ್ನ ಹಿನ್ನೆಲೆಯಿಂದ ಬಂದಿದ್ದಾರೆ ಎಂಬುದು ನಮಗೆ ತಿಳಿದಿತ್ತು. ಅವರು ನಿರ್ವಹಣೆ ಅಥವಾ ವೃತ್ತಿಪರ ಕೌಶಲ್ಯಗಳಿಗೆ ಒಡ್ಡಿಕೊಳ್ಳುವುದಿಲ್ಲ. ಹೆಚ್ಚಿನವರು ಗ್ರಾಮೀಣ ಪ್ರದೇಶದಿಂದ ಬಂದವರಾಗಿದ್ದು, ಗುಣಮಟ್ಟದ ಮಾನದಂಡಗಳು ಅರ್ಥವಾಗುವುದಿಲ್ಲ. ಇದೇ ಕಾರಣಕ್ಕಾಗಿ ಮಕ್ಕಳಿಗೆ ಅರ್ಥವಾಗುವಂತಹ, ಕಲಿಯಲು ಆಸಕ್ತಿ ಇರುವ ಕೋರ್ಸ್‌ಗಳನ್ನೇ ಆರಂಭಿಸಿದ್ದೇವೆ ಎಂದರು.
ಅತಿಥಿ ರಾಷ್ಟ್ರ ಫ್ರಾನ್ಸ್ ಬಗ್ಗೆ ಮಾತನಾಡಿ, ಫ್ರಾನ್ಸ್ ತುಂಬಾ ಸುಂದರವಾದ ದೇಶ. ಭೂಮಿಯ ಮೇಲಿನ ಅತ್ಯಂತ ಸುಂದರ ನಗರ ಪ್ಯಾರಿಸ್. ಫ್ರಾನ್ಸ್‌ನ ಜನರು ತಮ್ಮ ಫ್ಯಾಷನ್ ಮತ್ತು ಶೈಲಿಗೆ ಹೆಸರುವಾಸಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸುದ್ದಿಯನ್ನೂ ಓದಿ | Sadguru Sri Madhusudan Sai: ಸತ್ಯ ಸಾಯಿ ವೈದ್ಯಕೀಯ ಕಾಲೇಜು ಕೇವಲ ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಕೊಡುಗೆ: ಶ್ರೀ ಮಧುಸೂದನ ಸಾಯಿ
'ಈಚ್ ಒನ್ ಎಜುಕೇಟ್ ಒನ್ ಸ್ಕಾಲರ್ ಶಿಪ್' ಯೋಜನೆಗೆ ಬೆಂಬಲ ನೀಡುತ್ತಿರುವ 'ರೆಂಕ್ ಗೇರ್ಸ್ ಪ್ರೈವೇಟ್ ಲಿಮಿಟೆಡ್' ಗೆ 'ಸಿಎಸ್ಆರ್ ಸರ್ಕಲ್ ಆಫ್ ಹಾನರ್' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಂಪನಿಯ ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗದ ಮುಖ್ಯಸ್ಥರಾದ ನಾಗರತ್ನ ಬಿವಿ ಪ್ರಶಸ್ತಿ ಸ್ವೀಕರಿಸಿದರು. ಬಾಂಗ್ಲಾದೇಶದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಫ್ರಾನ್ಸ್‌ನ ಯಸ್ ಮಾರ್ರೆ (Yves Marre) ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಮಾನವೀಯ' ಪುರಸ್ಕಾರ ನೀಡಿ ಗೌರವಿಸಲಾಯಿತು. ಫ್ರಾನ್ಸ್ ಪ್ರತಿನಿಧಿಗಳಾದ ಅರೋಸಾ ಕ್ಯಾಂಬ್ಲಾಂಗ್ (Arrosa Camblong) ಸತ್ಯ ಲೂಯಿಸ್ (Sathya Louis) ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.