ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಶಾಸಕರ ಬಗ್ಗೆ ಅಪಪ್ರಚಾರ ಹಾಗೂ ತೇಜೋವಧೆ ಮಾಡುವುದು ಸರಿಯಲ್ಲ: ಕಾಂಗ್ರೆಸ್ ಮುಖಂಡರ ಎಚ್ಚರಿಕೆ

ಈ ಭೂಮಿ ಈ ಹಿಂದೆ ಶ್ಯಾನುಭೋಗರು ಹಾಗೂ ಪಟೇಲರ ಹೆಸರಲ್ಲಿತ್ತು. ಈ ಭಾಗದಲ್ಲಿ ಕೆಲ ಪರಿಶಿಷ್ಟರು ಉಳುಮೆ ಮಾಡುತ್ತಿದ್ದರು. ಅದನ್ನು ಬೇರೆಯವರು ಖರೀದಿಸಿದ್ದಾರೆ. ಆದರೆ ಅದನ್ನು ಶಾಸಕ ಸುಬ್ಬಾ ರೆಡ್ಡಿಯವರೇ ಖರೀದಿ ಮಾಡಿದಂತೆ, ಅಲ್ಲಿನ ಸರ್ಕಾರಿ ಜಮೀನು ಒತ್ತುವರಿ ಮಾಡಿ ಕೊಂಡಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಇಂತಹ ಆಧಾರ ರಹಿತ ಆರೋಪಗಳನ್ನು ಕೂಡಲೇ ನಿಲ್ಲಿಸಬೇಕು

ಶಾಸಕರ ಬಗ್ಗೆ ಅಪಪ್ರಚಾರ ಹಾಗೂ ತೇಜೋವಧೆ ಮಾಡುವುದು ಸರಿಯಲ್ಲ

ತಾಲೂಕಿನ ಸೋಮಲಾಪುರ ಗ್ರಾಮದ ಬಳಿಯ ಸರ್ಕಾರಿ ಗೋಮಾಳ ಜಮೀನನ್ನು ಶಾಸಕರು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪದ ಕುರಿತು ಕಾಂಗ್ರೇಸ್ ಮುಖಂಡರು ಪತ್ರಿಕಾಗೊಷ್ಟಿಯನ್ನು ನಡೆಸಿದರು. -

Profile
Ashok Nayak Jul 16, 2026 1:35 PM

ಗುಡಿಬಂಡೆ: ಇತ್ತೀಚಿಗೆ ತಾಲೂಕಿನ ಸೋಮಲಾಪುರ ಗ್ರಾಮದ ಬಳಿಯ ಸರ್ಕಾರಿ ಗೋಮಾಳ ಜಮೀನನ್ನು ಶಾಸಕರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಕೆಲ ಮಾದ್ಯಮಗಳು ವರದಿ ಮಾಡುತ್ತಿದ್ದು, ಇದು ಸತ್ಯಕ್ಕೆ ದೂರವಾದುದು ಹಾಗೂ ಶಾಸಕರ ವಿರುದ್ದ ವಿರೋಧಿಗಳು ಮಾಡು ತ್ತಿರುವ ಅಪಪ್ರಚಾರವಷ್ಟೆ, ಇದನ್ನು ಕೂಡಲೇ ನಿಲ್ಲಿಸಬೇಕು, ಇಲ್ಲವಾದಲ್ಲಿ ಸರಿಯಾದ ಪಾಠ ಕಲಿಸುತ್ತೇವೆ ಎಂದು ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರು ವಿರೋಧಿಗಳಿಗೆ ಎಚ್ಚರಿಕೆ ನೀಡಿದರು.

ಈ ಸಮಯದಲ್ಲಿ ಮುಖಂಡ ಹೆಚ್.ಪಿ.ಲಕ್ಷ್ಮೀನಾರಾಯಣ ಮಾತನಾಡಿ, ಸೋಮಲಾಪುರ ಗ್ರಾಮದ ಜಮೀನಿನ ಕುರಿತು ಇತ್ತೀಚಿಗೆ ಸಾಕಷ್ಟು ವರದಿಗಳು ಹೊರಬರುತ್ತಿದೆ. ಅದರಲ್ಲೂ ಸುಖಾಸುಮ್ಮನೆ ಶಾಸಕರ ಹೆಸರನ್ನು ತರಲಾಗುತ್ತಿದೆ ಎಂದು ದೂರಿದರು.

ಇದನ್ನೂ ಓದಿ: Gudibande News: ಸರ್ಕಾರಿ ಶಾಲೆಗಳಿಗೆ ದಾನಿಗಳ ಸಂಖ್ಯೆ ಹೆಚ್ಚಾಗಲಿ: ಎಸ್‌.ಡಿ.ಎಂ.ಸಿ ಅಧ್ಯಕ್ಷ ನಂಜುಂಡಪ್ಪ

ಈ ಭೂಮಿ ಈ ಹಿಂದೆ ಶ್ಯಾನುಭೋಗರು ಹಾಗೂ ಪಟೇಲರ ಹೆಸರಲ್ಲಿತ್ತು. ಈ ಭಾಗದಲ್ಲಿ ಕೆಲ ಪರಿಶಿಷ್ಟರು ಉಳುಮೆ ಮಾಡುತ್ತಿದ್ದರು. ಅದನ್ನು ಬೇರೆಯವರು ಖರೀದಿಸಿದ್ದಾರೆ. ಆದರೆ ಅದನ್ನು ಶಾಸಕ ಸುಬ್ಬಾರೆಡ್ಡಿಯವರೇ ಖರೀದಿ ಮಾಡಿದಂತೆ, ಅಲ್ಲಿನ ಸರ್ಕಾರಿ ಜಮೀನು ಒತ್ತುವರಿ ಮಾಡಿ ಕೊಂಡಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಇಂತಹ ಆಧಾರ ರಹಿತ ಆರೋಪಗಳನ್ನು ಕೂಡಲೇ ನಿಲ್ಲಿಸಬೇಕು. ಅಲ್ಲಿನ ಪರಿಶಿಷ್ಟ ವರ್ಗದ ರೈತರ ಜಮೀನು ಉಳಿಸಲು ಶಾಸಕರೂ ಸಹ ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದಾರೆ. ಅವರ ವಿರುದ್ದ ಅಪಪ್ರಚಾರ ಸರಿಯಲ್ಲ ಎಂದರು.

ಬಳಿಕ ದಲಿತ ಮುಖಂಡ ಜಿ.ವಿ.ಗಂಗಪ್ಪ ಮಾತನಾಡಿ, ಸೋಮಲಾಪುರ ಗ್ರಾಮದ ವ್ಯಾಪ್ತಿಯ ಸ.ನಂ. 1 ರಲ್ಲಿ ಸುಮಾರು 163 ಎಕರೆ ಜಮೀನಿದ್ದು, ಅದರಲ್ಲಿ 63 ಎಕರೆ ಜಮೀನು ಬೇರೆಯವರು ಖರೀದಿ ಮಾಡಿದ್ದಾರೆ. ಈ ಹಿಂದೆ ಅದು ಗುಡಿಬಂಡೆ ಹಾಗೂ ಇಡ್ರಹಳ್ಳಿ ಗ್ರಾಮದ ಜೋಡಿದಾರರ ಹೆಸರಲ್ಲಿತ್ತು. ಅಲ್ಲಿ ಸುಮಾರು ವರ್ಷಗಳಿಂದ ಭೂ ರಹಿತ ದಲಿತರು ಸ್ವಾಧೀನದಲ್ಲಿದ್ದರು. ಈ ಹಿಂದೆ ಅಲ್ಲಿ ಕೆಲವರಿಗೆ ಜಮೀನು ಸಹ ಮಂಜೂರು ಮಾಡಲಾಗಿದೆ. ಇನ್ನೂ ಹಲವರಿಗೆ ಜಮೀನು ಮಂಜೂರು ಮಾಡಬೇಕಿದೆ. ಆದರೆ ಇತ್ತೀಚಿಗೆ ಅಲ್ಲಿನ ಸರ್ಕಾರಿ ಜಮೀನನ್ನು ಶಾಸಕರು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಕೆಲವೊಂದು ಮಾದ್ಯಮಗಳಲ್ಲಿ ವರದಿ ಪ್ರಸಾರವಾಗಿದೆ. 

ನಾನೂ ಸಹ ಶಾಸಕರ ಬಳಿ ಈ ಜಮೀನನ್ನು ಅರ್ಹರಿಗೆ ಸಿಗುವಂತೆ ಮಾಡಲಿ ಎಂದು ಮನವಿ ಮಾಡಿದ್ದೆ. ಅಲ್ಲಿನ ದಲಿತರಿಗೆ ಜಮೀನು ಸಿಗುವಂತೆ ಮಾಡಲು ಶಾಸಕರೂ ಸಹ ಸಾಕಷ್ಟು ಪ್ರಯತ್ನ ಗಳನ್ನು ಮಾಡುತ್ತಿದ್ದಾರೆ. ಅಲ್ಲಿ ಶಾಸಕರ ಹೆಸರಿನಲ್ಲಿ ಕೇವಲ ಒಂದು ಗುಂಟೆ ಜಮೀನು ಸಹ ಇಲ್ಲ. ಅಂತಹುದರಲ್ಲಿ ಅವರು ಯಾವ ರೀತಿಯಲ್ಲಿ ಜಮೀನು ಒತ್ತುವರಿ ಮಾಡಲು ಸಾಧ್ಯ. ಶಾಸಕರು ಸದಾ ಬಡವರ. ದಲಿತರ ಪರ ಕೆಲಸ ಮಾಡುತ್ತಿದ್ದಾರೆ ವಿನಃ ಅವರ ಜಮೀನು ಕಸಿದುಕೋಳ್ಳುವ ಕೆಲಸ ಮಾಡೋಲ್ಲ ಎಂದರು. 

ಅಲ್ಲಿನ ಜನರ ಜೊತೆ ಶಾಸಕರು ನಾಲ್ಕು ಬಾರಿ ಸಭೆ ಸಹ ಮಾಡಿದ್ದಾರೆ. ಆದರೆ ಕೆಲವರ ಮಾತು ಗಳನ್ನು ಕೇಳಿ ಕೆಲವರು ವಿರುದ್ದ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಸಮಯದಲ್ಲಿ ಕಾಂಗ್ರೇಸ್ ಹಿರಿಯ ಮುಖಂಡರಾದ ಕೃಷ್ಣೇಗೌಡ, ಸುಬ್ಬರಾಯಪ್ಪ, ರಿಯಾಜ್ ಭಾಷ ರವರು ಮಾತನಾಡಿದರು. ಈ ಪತ್ರಿಕಾಗೋಷ್ಟಿಯಲ್ಲಿ ಯೂತ್ ಕಾಂಗ್ರೇಸ್ ನ ಅಂಬರೀಶ್, ಯರಲಕ್ಕೇನಹಳ್ಳಿ ಮಂಜುನಾಥ್ ಸೇರಿದಂತೆ ಹಲವರು ಇದ್ದರು.