Chikkaballapur News: ಬೇಸಿಗೆ ಶಿಬಿರಗಳು ರಜಾ ಅವಧಿಯಲ್ಲಿ ಮಕ್ಕಳಲ್ಲಿ ಸೃಜನಶೀಲತೆ, ಕೌಶಲ್ಯ, ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ : ಪಿಡಿಒ ಲೋಕೇಶ್ ಬಣ್ಣನೆ
ಮಕ್ಕಳು ವರ್ಷವೆಲ್ಲ ಶಾಲೆಯಲ್ಲಿ ಓದು, ಪಾಠ ಪ್ರವಚನ, ಪರೀಕ್ಷೆಯೆಂದು ಹೆಚ್ಚು ತಲ್ಲೀನ ರಾಗಿರುತ್ತಾರೆ. ಪರೀಕ್ಷೆಯ ನಂತರ ಬರುವ ಬೇಸಿಗೆ ರಜೆಯಲ್ಲಿ ಈ ರೀತಿಯ ಬೇಸಿಗೆ ಶಿಬಿರ ಆಯೋಜಿಸುವುದರಿಂದ ಮಕ್ಕಳಲ್ಲಿ ಹೆಚ್ಚಿನ ಉತ್ಸಾಹ, ಚೈತನ್ಯ ಮೂಡಲು ಹಾಗೂ ಲವಲವಿಕೆ ಯಿಂದ ಇರುತ್ತಾರೆ. ಆದ್ದರಿಂದ ಲೇ ಬೇಸಿಗೆ ಶಿಬಿರಗಳು ಮಕ್ಕಳಿಗೆ ಸಹಕಾರಿ ಎಂದರು
ಬೇಸಿಗೆ ಶಿಬಿರಗಳು ರಜಾ ಅವಧಿಯಲ್ಲಿ ಮಕ್ಕಳಲ್ಲಿ ಸೃಜನಶೀಲತೆ, ಕೌಶಲ್ಯ ಮತ್ತು ವ್ಯಕ್ತಿತ್ವ ವಿಕಸನವನ್ನು ಪ್ರೋತ್ಸಾಹಿಸುವ ರಚನಾತ್ಮಕ ಕಾರ್ಯಕ್ರಮಗಳಾಗಿವೆ ಎಂದು ಪಿಡಿಒ ಲೋಕೇಶ್ ಬಣ್ಣಿಸಿದರು. -
ಚಿಕ್ಕಬಳ್ಳಾಪುರ : ಬೇಸಿಗೆ ಶಿಬಿರಗಳು ರಜಾ ಅವಧಿಯಲ್ಲಿ ಮಕ್ಕಳಲ್ಲಿ ಸೃಜನಶೀಲತೆ, ಕೌಶಲ್ಯ ಮತ್ತು ವ್ಯಕ್ತಿತ್ವ ವಿಕಸನವನ್ನು ಪ್ರೋತ್ಸಾಹಿಸುವ ರಚನಾತ್ಮಕ ಕಾರ್ಯಕ್ರಮಗಳಾಗಿವೆ ಎಂದು ಪಿಡಿಒ ಲೋಕೇಶ್ ಬಣ್ಣಿಸಿದರು.
ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿ ಗ್ರಾಮ ಪಂಚಾಯಿತಿಯ ಅರಿವು ಕೇಂದ್ರದಲ್ಲಿ ಶನಿವಾರ ನಡೆದ ಮಕ್ಕಳ ಗ್ರಾಮೀಣ ಬೇಸಿಗೆ ಶಿಬಿರದ ಉದ್ಘಾಟನೆ ಮಾಡಿ ಮಾತನಾಡಿದರು.
ಮಕ್ಕಳು ವರ್ಷವೆಲ್ಲ ಶಾಲೆಯಲ್ಲಿ ಓದು, ಪಾಠ ಪ್ರವಚನ, ಪರೀಕ್ಷೆಯೆಂದು ಹೆಚ್ಚು ತಲ್ಲೀನ ರಾಗಿರುತ್ತಾರೆ. ಪರೀಕ್ಷೆಯ ನಂತರ ಬರುವ ಬೇಸಿಗೆ ರಜೆಯಲ್ಲಿ ಈ ರೀತಿಯ ಬೇಸಿಗೆ ಶಿಬಿರ ಆಯೋಜಿ ಸುವುದರಿಂದ ಮಕ್ಕಳಲ್ಲಿ ಹೆಚ್ಚಿನ ಉತ್ಸಾಹ, ಚೈತನ್ಯ ಮೂಡಲು ಹಾಗೂ ಲವಲವಿಕೆ ಯಿಂದ ಇರುತ್ತಾರೆ. ಆದ್ದರಿಂದಲೇ ಬೇಸಿಗೆ ಶಿಬಿರಗಳು ಮಕ್ಕಳಿಗೆ ಸಹಕಾರಿ ಎಂದರು.
ಬೇಸಿಗೆ ಶಿಬಿರದಲ್ಲಿ ಮಕ್ಕಳು ಭಾಗವಹಿಸಿ ಕೃಷಿ, ಸ್ಥಳೀಯ ಕಲೆ, ಸಂಸ್ಕೃತಿ, ಆಟಗಳು ಮತ್ತು ಪರಿಸರ ಅಧ್ಯಯನದ ಮೇಲೆ ಗಮನಹರಿಸುವುದರಿಂದ ಮೊಬೈಲ್ ಬಳಕೆ ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಆದ್ದರಿಂದ ಮಕ್ಕಳು ಈ ಬೇಸಿಗೆ ಶಿಬಿರದಂತಹ ಕಾರ್ಯಕ್ರಮಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಇದನ್ನೂ ಓದಿ: Chikkaballapur News: ಸಮಾಧಾನ ರಾಜೀ ಮೂಲಕ ನ್ಯಾಯದಾನ ಸಕಾಲದಲ್ಲಿ ಕಾನೂನಿನ ಉಚಿತ ನೆರವು: ನ್ಯಾ. ಶಿಲ್ಪ.ಬಿ.
ಶಿಕ್ಷಕ ಗೋಪಾಲಕೃಷ್ಣ ಸಿಂಗ್ ಮಾತನಾಡಿ, ಸುಮಾರು 15 ದಿನಗಳ ಕಾಲ ನಡೆಯುವ ಈ ಶಿಬಿರವು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ನಡೆಯುತ್ತದೆ, ಈ ವೇಳೆ ಕಲಿಕೆಗೆ ಹೆಚ್ಚು ಒತ್ತು ನೀಡುವುದರ ಜತೆಗೆ ಗ್ರಾಮೀಣ ಕ್ರೀಡೆ, ವಿವಿಧ ಆಟಿಕೆ ಗಳನ್ನು ಆಡಿಸುವುವ ಕಾರ್ಯಕ್ರಮಗಳಿರುತ್ತದೆ.
ನಗರ ಪ್ರದೇಶಗಳಲ್ಲಿ ಮಕ್ಕಳಿಗೆ ಬೇಸಿಗೆಯಲ್ಲಿ ಅವರ ಪಾಲಕರು ಈಜು ಕೊಳ, ಖಾಸಗಿ ಶಿಬಿರಗಳು ಸೇರಿದಂತೆ ಹಲವಾರು ರೀತಿಯ ಮನರಂಜನಾ ಕೇಂದ್ರಗಳಿಗೆ ಸೇರಿಸಿರುತ್ತಾರೆ. ಆದರೆ ಗ್ರಾಮೀಣ ಪ್ರದೇಶದ ಮಕ್ಕಳು ಮನೆಯಲ್ಲಿಯೇ ಇರುತ್ತಾರೆ. ಆದ್ದರಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್ ರಾಜ್ ಇಲಾಖೆವತಿಯಿಂದ ಈ ಶಿಬಿರವನ್ನು ನಡೆಸುತ್ತಿರುವುದು ಒಳ್ಳೆಯ ಕೆಲಸವೆಂದರು.
ಮಕ್ಕಳಿಗೆ ವಿದ್ಯಾರ್ಥಿ ದೆಸೆಯಲ್ಲೇ ಆಚಾರ, ವಿಚಾರ, ಸಂಸ್ಕೃತಿ ಹಾಗೂ ಮಾನವೀಯತೆಯ ಮೌಲ್ಯ ಗಳನ್ನು ಕಲಿಸಿ ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪೋಷಕರು ಸೂಚನೆ ನೀಡಬೇಕು ಎಂದ ಅವರು ಈ ಶಿಬಿರಗಳು ಗ್ರಾಮೀಣ ಭಾಗದ ಮಕ್ಕಳಿಗೆ ಸಮಾನ ಕಲಿಕೆಯ ಅವಕಾಶಗಳನ್ನು ಒದಗಿಸುವ ಮೂಲಕ ಅವರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಕೇಶ್ ಹಾಗೂ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎನ್.ಗೋಪಾಲ ಕೃಷ್ಣ ಸಿಂಗ್, ತಾಲ್ಲೂಕು ಐಇಸಿ ಸಂಯೋಜಕ ರಾಮಾಂಜಿ, ಗ್ರಂಥಪಾಲಕ ನಾರಾಯಣಸ್ವಾಮಿ ಮಾತನಾಡಿದರು.