Chinthamani News: ಶಿಕ್ಷಕರ ಸಂಘದ ಚುನಾವಣೆ: ಅಶೋಕ್ ಕುಮಾರ್ ಬಣದ ಅಭ್ಯರ್ಥಿಗಳ ದಿಗ್ವಿಜಯ
ಪುರುಷ ಅಭ್ಯರ್ಥಿ ಗಳ ವಿಭಾಗದಲ್ಲಿ ರವಣಪ್ಪ ಕೆ.323 ಮತಗಳನ್ನು ಪಡೆಯುವ ಮೂಲಕ ಅತ್ಯಧಿಕ ಮತ ಗಳೊಂದಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಉಳಿದಂತೆ ಸಿ.ಮಂಜುನಾಥ್ 310 ಮತಗಳನ್ನು ಶಿವರಾಜ ಕೆ.306 ಮತಗಳನ್ನು ಹಾಗೂ ಬಣದ ನೇತೃತ್ವ ವಹಿಸಿದ್ದ ಅಶೋಕ ಕುಮಾರ್ ಆರ್.305 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಜಯ ಸಾಧಿಸಿದ್ದಾರೆ.
-
ಚಿಂತಾಮಣಿ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕಕ್ಕೆ ನಡೆದ ಚುನಾವಣೆಯಲ್ಲಿ ಆರ್.ಅಶೋಕ್ ಕುಮಾರ್ ನೇತೃತ್ವದ ಬಣವು ಭರ್ಜರಿ ಜಯ ದಾಖಲಿಸಿದೆ.
ಒಟ್ಟು13 ಸ್ಥಾನಗಳ ಪೈಕಿ ಪುರುಷರ ವಿಭಾಗದಲ್ಲಿ 4 ಹಾಗೂ ಮಹಿಳಾ ವಿಭಾಗದಲ್ಲಿ 3 ಸ್ಥಾನ ಗಳು ಸೇರಿದಂತೆ ಪ್ರಮುಖ ಸ್ಥಾನಗಳನ್ನು ಗೆಲ್ಲುವ ಮೂಲಕ ಅಶೋಕ್ ಕುಮಾರ್ ಬಣವು ಸಂಘದ ಆಡಳಿತ ಚುಕ್ಕಾಣಿ ಹಿಡಿಯುವುದು ಈಗ ಅಧಿಕೃತಗೊಂಡಂತಾಗಿದೆ.
ಹೈಕೋರ್ಟ್ ಆದೇಶದ ಅನ್ವಯ ನಡೆದ ಈ ಚುನಾವಣೆಯ ಮತ ಎಣಿಕೆಯು ತಡರಾತ್ರಿ ಯವರೆಗೆ ನಡೆದಿದ್ದು, ಪ್ರತಿ ಮತದ ಮೇಲೆ ಕುತೂಹಲ ಮನೆ ಮಾಡಿತ್ತು.
ಇದನ್ನೂ ಓದಿ: Chinthamani News: ಭಾಗವತವು ಭಗವಂತನಲ್ಲಿ ನಂಬಿಕೆ ಹೆಚ್ಚಿಸುತ್ತದೆ: ಧರ್ಮಾಧಿಕಾರಿ ಡಾ||ಎಂ.ಆರ್.ಜಯರಾಮ್
ಪುರುಷ ಅಭ್ಯರ್ಥಿ ಗಳ ವಿಭಾಗದಲ್ಲಿ ರವಣಪ್ಪ ಕೆ.323 ಮತಗಳನ್ನು ಪಡೆಯುವ ಮೂಲಕ ಅತ್ಯಧಿಕ ಮತ ಗಳೊಂದಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.ಉಳಿದಂತೆ ಸಿ.ಮಂಜುನಾಥ್ 310 ಮತಗಳನ್ನು ಶಿವರಾಜ ಕೆ.306 ಮತಗಳನ್ನು ಹಾಗೂ ಬಣದ ನೇತೃತ್ವ ವಹಿಸಿದ್ದ ಅಶೋಕ ಕುಮಾರ್ ಆರ್.305 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಜಯ ಸಾಧಿಸಿದ್ದಾರೆ.
ಇವರೊಂದಿಗೆ ಮಸ್ತಾನ್ ವಲಿ (288),ಜಯದೇವ ಎಂ.ವಿ.(269)ದಾಮೋದರರೆಡ್ಡಿ ಎನ್.(243)ರಮೇಶ್ ವಿ.(235)ಮತ್ತು ವಸಂತರಡ್ಡಿ ಕೆ.ಎನ್.(230)ಅವರುಗಳು ಕೂಡ ಹೆಚ್ಚಿನ ಮತಗಳನ್ನು ಪಡೆದು ಆಯ್ಕೆಯ ಹಾದಿಯಲ್ಲಿದ್ದಾರೆ.
ಮಹಿಳಾ ಅಭ್ಯರ್ಥಿಗಳ ವಿಭಾಗದಲ್ಲಿಯೂ ಅಶೋಕ್ ಕುಮಾರ್ ಬಣದ ಮಹಿಳೆಯರು ಪಾರುಪತ್ಯ ಮೆರೆದಿದ್ದಾರೆ.
ಮಂಜುಳಾದೇವಿ ಎನ್.311 ಮತಗಳನ್ನು ಪಡೆಯುವ ಮೂಲಕ ಮಹಿಳಾ ವಿಭಾಗದಲ್ಲಿ ಅಗ್ರಸ್ಥಾನಿಯಾಗಿದ್ದಾರೆ.ನಾಗರತ್ನಮ್ಮ ಎಂ.306 ಮತಗಳನ್ನು,ಚಂದ್ರಮ್ಮ ಕೆ.ಸಿ.298 ಮತಗಳನ್ನು ಹಾಗೂ ಮಂಜುಳಾಕುಮಾರಿ ಎನ್.ಕೆ.270 ಮತಗಳನ್ನು ಪಡೆದು ಯಶಸ್ವಿ ಯಾಗಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ತನುಜಾ ಈ ಕುರಿತು ಮಾಹಿತಿ ನೀಡಿ, ಚುನಾವಣಾ ಪ್ರಕ್ರಿಯೆಯು ಪಾರದರ್ಶಕವಾಗಿ ನಡೆದಿದೆ. 2026-31 ಸಾಲಿನ ಈ ನೂತನ ಪದಾಧಿಕಾರಿಗಳ ಆಯ್ಕೆಗೆ ಸಂಬಂಧಿಸಿದಂತೆ ಮೇಲಧಿಕಾರಿಗಳ ಅಧಿಕೃತ ಅನುಮೋದನೆ ದೊರೆತ ತಕ್ಷಣ ಗೆಲುವು ಸಾಧಿಸಿದವರ ಬಿಡುಗಡೆ ಪಟ್ಟಿಯನ್ನು ಅಧಿಕೃತವಾಗಿ ಮಾಡಲಾಗುವುದು ಎಂದು ತಿಳಿಸಿ ದ್ದಾರೆ.
ತಾಲ್ಲೂಕಿನ ಶಿಕ್ಷಕರ ಹಿತರಕ್ಷಣೆಗಾಗಿ ಹೋರಾಡಲಿರುವ ಈ ನೂತನ ತಂಡಕ್ಕೆ ಶಿಕ್ಷಕ ವಲಯದಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.