Chikkaballapur News: ಯುವಶಕ್ತಿಯಲ್ಲಿ ಸೇವಾ ಮನೋಭಾವ ಜಾಗೃತವಾದಲ್ಲಿ ದೇಶದ ಅಭಿವೃದ್ಧಿ ಸಾಧ್ಯ : ಡಾ.ಟಿ.ಶ್ರೀನಿವಾಸಪ್ಪ ಅಭಿಮತ
ಶ್ರೀರಾಂಪುರ ಗ್ರಾಮದ ವಿಶೇಷ ಚೇತನರಿಗೆ ಕಷ್ಟವಿದೆ ಎಂಬ ವಿಚಾರ ತಿಳಿದು ಅವರಿಗೆ ದಿನಸಿ ಪದಾರ್ಥ ಗಳನ್ನು ವಿತರಿಸುವ ಜೊತೆಗೆ ಎಸ್.ಎಸ್. ಎಲ್ ಸಿ, ಪಿ.ಯು.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ತೋರಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಡುವ ಮೂಲಕ ಅವರ ಭವಿಷ್ಯ ಉಜ್ವಲವಾಗಿರ ಲೆಂದು ಹಾರೈಸಿದ್ದೇನೆ
-
ಚಿಕ್ಕಬಳ್ಳಾಪುರ: ವಿಶ್ವದಲ್ಲಿ ಅತಿ ಹೆಚ್ಚು ಯುವ ಸಂಪನ್ಮೂಲ ಹೊಂದಿರುವ ಭಾರತದಲ್ಲಿ ಸೇವಾ ಮನೋಭಾವದ ಕೊರತೆಯಿದೆ. ಯುವಶಕ್ತಿಯಲ್ಲಿ ಈ ಗುಣ ಜಾಗೃತವಾದಲ್ಲಿ ಮಾತ್ರ ಬಲಿಷ್ಠ ಭಾರತವನ್ನು ಕಟ್ಟಲು ಸಾಧ್ಯ ಎಂದು ಏಡುಕೊಂಡಲ ಬಿಲ್ಡರ್ಸ್ ಸಂಸ್ಥೆಯ ಸಂಸ್ಥಾಪಕ ಡಾ.ಟಿ. ಶ್ರೀನಿವಾಸಪ್ಪ ಅಭಿಪ್ರಾಯಪಟ್ಟರು
ತಾಲೂಕಿನ ಶ್ರೀರಾಮಪುರ ಗ್ರಾಮದಲ್ಲಿ ಏಡು ಕೊಂಡಲ ಬಿಲ್ಡರ್ಸ್ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ವಿಶೇಷ ಚೇತನರಿಗೆ ಸವಲತ್ತು ವಿತರಣೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಎಲ್ಲರಿಗೂ ಶ್ರೀಮಂತಿಕೆ ಬರಲು ಸಾಧ್ಯವಿಲ್ಲ.ಈ ಶಕ್ತಿ ಬಂದವರು ಸಂಪತ್ತಿನ ಮೂಲಕ ಅಹಂಕಾರ ಪ್ರದರ್ಶಿಸದೆ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ನಾವು ನಡೆದು ಬಂದ ದಾರಿಯನ್ನು ಮರೆಯದೆ ಕಷ್ಟಗಳಿಗೆ ನೆರವಾಗುವ ಮೂಲಕ ಭಗವಂತನ ಪ್ರೀತಿಗೆ ಪಾತ್ರರಾಗಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ: Chikkaballapur News: ಮೊಬೈಲ್ ಬಳಕೆ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ: ಮುಖ್ಯೋಪಾಧ್ಯಾಯ ಹರೀಶ್
ಕಷ್ಟಗಳಿಂದ ಬೆಳೆದು ಬಂದ ನಾನು ಇಂದು ದೇವರ ದಯೆಯಿಂದ ಸಮಾಜ ಸೇವಕನಾಗಿ ಬೆಳೆದಿ ದ್ದೇನೆ. ಈ ಎಚ್ಚರದಲ್ಲಿಯೇ ನಾನು ಓದುವ ಮಕ್ಕಳಿಗೆ ಸಹಾಯ ಮಾಡುವುದು, ವಿಶೇಷ ಚೇತನರಿಗೆ ನೆರವನ್ನು ಒದಗಿಸುವ ಕೆಲಸವನ್ನು ಪ್ರಚಾರದ ಹಂಗಿಲ್ಲದೆ ಮಾಡಿಕೊಂಡು ಬಂದಿ ದ್ದೇನೆ ಎಂದು ಹೇಳಿದರು.
ಶ್ರೀರಾಂಪುರ ಗ್ರಾಮದ ವಿಶೇಷ ಚೇತನರಿಗೆ ಕಷ್ಟವಿದೆ ಎಂಬ ವಿಚಾರ ತಿಳಿದು ಅವರಿಗೆ ದಿನಸಿ ಪದಾರ್ಥಗಳನ್ನು ವಿತರಿಸುವ ಜೊತೆಗೆ ಎಸ್.ಎಸ್. ಎಲ್ ಸಿ, ಪಿ.ಯು.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ತೋರಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಡುವ ಮೂಲಕ ಅವರ ಭವಿಷ್ಯ ಉಜ್ವಲವಾಗಿರಲೆಂದು ಹಾರೈಸಿದ್ದೇನೆ ಎಂದರು.
ನನ್ನ ದುಡಿಮೆಯ ಒಂದಷ್ಟು ಭಾಗವನ್ನು ಸೇವಾ ಕಾರ್ಯಗಳಿಗೆ ವಿನಯೋಗಿಸುವ ಸಂಕಲ್ಪ ತೊಟ್ಟಿದ್ದೇನೆ. ಈ ನಿಟ್ಟಿನಲ್ಲಿ ಹತ್ತಾರು ವರ್ಷಗಳಿಂದ ಎಲೆಮರೆಕಾಯಿಯಂತೆ ಈ ಕಾರ್ಯವನ್ನು ಮುನ್ನಡೆಸಿಕೊಂಡು ಬಂದಿದ್ದೇನೆ. ಶ್ರೀರಾಂಪುರ ಗ್ರಾಮದ ಯುವಕರು ನನ್ನೊಟ್ಟಿಗೆ ಕೈಜೋಡಿಸಿ ಸೇವಾ ಕಾರ್ಯಗಳ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಸಂಕ್ರಾಂತಿಯ ಈ ಶುಭ ಸಂದರ್ಭದಲ್ಲಿ ಭಗವಂತ ರೈತರು ಕೃಷಿ ಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗಗಳಿಗೆ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸಿದರು.
ಈ ವೇಳೆ ಮಾತನಾಡಿದ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ ಗ್ರಾಮ ಅಭಿವೃದ್ಧಿಗೆ ಹೊತ್ತು ನೀಡಿರುವ ಏಡುಕುಂಡಲ ಶ್ರೀನಿವಾಸಣ್ಣ ಅವರ ಸಮಾಜ ಸೇವೆ ಕ್ಷೇತ್ರ ದಾದ್ಯಂತ ವಿಸ್ತರಿಸಲಿ. ಅಶಕ್ತರಿಗೆ ಮತ್ತು ಅರ್ಹರಿಗೆ ಈ ಸೇವೆ ತಲುಪಲಿ. ಸಮಾಜ ಸೇವೆ ಮಾಡುವ ಶಕ್ತಿಯನ್ನು ಭಗವಂತ ಅವರಿಗೆ ನೀಡಲಿ. ಸೇವೆ ಪಡೆದವರು ಕೂಡ ಸಮರ್ಥರಾದ ದಿನ ಉಳಿದವರಿಗೆ ನೆರವಾಗಲಿ ಎಂದರು.
ಜಿಲ್ಲೆಯಲ್ಲಿ ಅಧಿಕಾರಿಗಳಿಗೆ ಧಮ್ಕಿ ಹಾಕಿರುವ ವಿಚಾರ ಕೇಳಿ ಮನಸ್ಸಿಗೆ ತುಂಬಾ ನೋವಾಗಿದೆ
ರಾಜಕೀಯದ ಮದದಲ್ಲಿ
ಮಹಿಳಾ ಅಧಿಕಾರಿಗೆ ಮಾನಸಿಕ ಹಿಂಸೆ ನೀಡಿರುವುದು ಅಕ್ಷಮ್ಯ ಅಪರಾಧ. ಇಂತಹ ಮನೋಭಾವ ಹೊಂದಿರುವವರು ಯಾರೇ ಆಗಲಿ ಸಾರ್ವಜನಿಕ ಜೀವನದಲ್ಲಿ ಇರಬಾರದು. ತಪ್ಪಿತಸ್ಥರ ವಿರುದ್ಧ ಸರ್ಕಾರ ಕೂಡಲೇ ಕ್ರಮ ವಹಿಸಬೇಕು ಎಂದು ಅಗ್ರಹಿಸಿದರು.
ಕಾರ್ಯಕ್ರಮದಲ್ಲಿ ಯಶ್ವಂತ್ ಸ್ಕೂಲ್ ಆಫ್ ಕಲ್ಚರಲ್ ಅಕಾಡೆಮಿ ಸಂಸ್ಥಾಪಕ ಮಂಚನಬಲೆ ಡ್ಯಾನ್ಸ್ ಶ್ರೀನಿವಾಸ್ ತಂಡದಿಂದ ಶಿವ ತಾಂಡವ ನೃತ್ಯ ಸೇರಿದಂತೆ ನಾನಾ ಸಾಂಸ್ಕೃತಿಕ ಕಾರ್ಯ ಕ್ರಮಗಳು ಮೂಡಿ ಬಂದು ಗ್ರಾಮಸ್ಥರನ್ನು ರಂಜಿಸಿದವು.
ಈ ಸಂದರ್ಭದಲ್ಲಿ ಶ್ರೀರಾಂಪುರ ಗ್ರಾಮಸ್ಥರಾದ ಅರವಿಂದ, ಶಿವನಾಗು, ಕಣಜೇನಹಳ್ಳಿ ನಾರಾಯಣ ಸ್ವಾಮಿ ಅಗಲಗುರ್ಕಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಣ್ಣ, ವಕೀಲ ಜಗದೀಶ್, ಟಿ.ಟಿ .ನರಸಿಂಹಪ್ಪ, ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಹನುಮಂತಪ್ಪ, ಗಾಯತ್ರಿ ರಾಮಕ್ಕ ರೈತ ಸಂಘದ ಬಿ .ಎಚ್. ನರಸಿಂಹಪ್ಪ, ರಾಮಕೃಷ್ಣಪ್ಪ ಇತರರು ಇದ್ದರು.
18news1: ಚಿಕ್ಕಬಳ್ಳಾಪುರ ತಾಲೂಕಿನ ಶ್ರೀರಾಮಪುರ ಗ್ರಾಮದಲ್ಲಿ 7 ಕೊಂಡಲ ಬಿಲ್ಡರ್ಸ್ ವತಿಯಿಂದ ಏರ್ಪಡಿಸಿದ್ದ ವಿಶೇಷ ಚೇತನರಿಗೆ ದಿನಸಿ ಪದಾರ್ಥ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಡಾ.ಟಿ. ಶ್ರೀನಿವಾಸಪ್ಪ ಮಾತನಾಡಿದರು
18news2 ಕಾರ್ಯಕ್ರಮದಲ್ಲಿ ಯಶ್ವಂತ್ ಕೂಲ್ ಆಫ್ ಡ್ಯಾನ್ಸ್ ಅಂಡ್ ಕಲ್ಚರಲ್ ಅಕಾಡೆಮಿ ಅಧ್ಯಕ್ಷ ಮಂಚನ ಬಲೆ ಡ್ಯಾನ್ಸ್ ಶ್ರೀನಿವಾಸ್ ಅವರಿಂದ ಶಿವ ತಾಂಡವ ನೃತ್ಯ ಪ್ರದರ್ಶನವಾಯಿತು.