Bigg Boss Kannada 12 Winner: ಕರುನಾಡಿನ ಮನೆ ಮಗ ಗಿಲ್ಲಿ ನಟನ ಕೈಸೇರಿತು ಟ್ರೋಫಿ; ಮಾತಿನ ಮಲ್ಲನಿಗೆ ಸಿಕ್ಕ ವೋಟ್ ಎಷ್ಟು ಗೊತ್ತಾ?
Gilli Nata: ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ನೆರವೇರಿದೆ. ಗಿಲ್ಲಿ ನಟ ಈ ಸೀಸನ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಕೊನೆಗೂ ಗಿಲ್ಲಿ ಫ್ಯಾನ್ಸ್ ಅಂದುಕೊಂಡಂತೆ ಟ್ರೋಫಿ ಗೆದ್ದಿದ್ದಾರೆ ಮಾತಿನ ಮಲ್ಲ. ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ , ಮ್ಯೂಟೆಂಟ್ ರಘು, ಕಾವ್ಯಾ ಶೈವ, ಧನುಷ್ ಹಾಗೂ ಗಿಲ್ಲಿ ನಟ ಅವರು ಫಿನಾಲೆ ತಲುಪಿದ್ದರು. ಸೀಸನ್ ಆರಂಭದಲ್ಲಿಯೇ ಗಿಲ್ಲಿಯೇ ವಿನ್ನರ್ ಎಂದು ವೀಕ್ಷಕರು ಕಮೆಂಟ್ ಮಾಡುತ್ತಲೇ ಇದ್ದರು. ಫಿನಾಲೆ ಸಮೀಪಿಸುತ್ತಿದ್ದಂತೆ ಗಿಲ್ಲಿ ಕ್ರೇಜ್ ಕೂಡ ಜಾಸ್ತಿ ಆಗಿತ್ತು. ಅದರಂತೆ ಗೆದ್ದು ಬೀಗಿದ್ದಾರೆ ಗಿಲ್ಲಿ ನಟ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಕನ್ನಡ ಸೀಸನ್ 12ರ (Bigg Boss Kannada Season 12) ಗ್ರ್ಯಾಂಡ್ ಫಿನಾಲೆ (Grand Finale) ಅದ್ಧೂರಿಯಾಗಿ ನೆರವೇರಿದೆ. ಗಿಲ್ಲಿ ನಟ ಈ ಸೀಸನ್ ವಿನ್ನರ್ (Gilli Nata Winner) ಆಗಿ ಹೊರಹೊಮ್ಮಿದ್ದಾರೆ. ಕೊನೆಗೂ ಗಿಲ್ಲಿ ಫ್ಯಾನ್ಸ್ (Gilli Fans) ಅಂದುಕೊಂಡಂತೆ ಟ್ರೋಫಿ ಗೆದ್ದಿದ್ದಾರೆ ಮಾತಿನ ಮಲ್ಲ. ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ (Rakshitha Shetty), ಮ್ಯೂಟೆಂಟ್ ರಘು, ಕಾವ್ಯಾ ಶೈವ, ಧನುಷ್ ಹಾಗೂ ಗಿಲ್ಲಿ ನಟ (Gilli Nata) ಅವರು ಫಿನಾಲೆ ತಲುಪಿದ್ದರು. ಸೀಸನ್ ಆರಂಭದಲ್ಲಿಯೇ ಗಿಲ್ಲಿಯೇ ವಿನ್ನರ್ ಎಂದು ವೀಕ್ಷಕರು ಕಮೆಂಟ್ ಮಾಡುತ್ತಲೇ ಇದ್ದರು. ಫಿನಾಲೆ ಸಮೀಪಿಸುತ್ತಿದ್ದಂತೆ ಗಿಲ್ಲಿ ಕ್ರೇಜ್ (Gilli Nata Craze) ಕೂಡ ಜಾಸ್ತಿ ಆಗಿತ್ತು. ಅದರಂತೆ ಗೆದ್ದು ಬೀಗಿದ್ದಾರೆ ಗಿಲ್ಲಿ ನಟ.
ವೋಟುಗಳ ಅಂಕಿ ಅಂಶ
ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ ವಿನ್ನರ್ ಪಡೆದ ವೋಟುಗಳ ಅಂಕಿ ಅಂಶವನ್ನು ತೋರಿಸಿದರು. ಅದರಲ್ಲಿ ವಿನ್ನರ್ ಗೆ ಸಿಕ್ಕಿದ್ದು ಬರೋಬ್ಬರಿ 37 ಕೋಟಿಗೂ ಹೆಚ್ಚು ಮತಗಳು ಬಂದಿದೆ. ಅಲ್ಲದೆ ವಿನ್ನರ್ ಗೂ ರನ್ನರ್ ಗೂ ಮಧ್ಯೆ ಅಂತರ ಕಡಿಮೆ ಇದೆ ಎಂದು ಸುದೀಪ್ ಹೇಳಿದ್ದರು.
ಕಳೆದ ಆವೃತ್ತಿಯಲ್ಲಿ ಹನುಮಂತ ವಿನ್ನರ್ ಆಗಿದ್ದು ಅವರು 5 ಕೋಟಿಗೂ ಹೆಚ್ಚು ಮತಗಳನ್ನು ಪಡೆದಿದ್ದರು. ಆದರೆ ಈ ಬಾರಿ ಯಾರೂ ಮುಟ್ಟಲಾಗದಂತ ದಾಖಲೆಯ ವೋಟುಗಳು ವಿನ್ನರ್ ಗೆ ಸಿಕ್ಕಿದೆ. ಅದುವೇ ಗಿಲ್ಲಿ ಎಂಬುದು ಅಂತೂ ಸಾಬೀತಾಗಿದೆ.
ಡೈಲಾಗ್‌ನಲ್ಲಿ ಪಂಚಿಂಗ್ ಪಂಟರ್!
‘ಬಿಗ್ ಬಾಸ್’ ಮನೆಯೊಳಗೆ ಜಂಟಿ ಆಗಿ ಕಾಲಿಟ್ಟವರು ಗಿಲ್ಲಿ ನಟ. ತಮ್ಮ ಪೇರ್ ಆಗಿದ್ದ ಕಾವ್ಯ ಅವರನ್ನ ಈವರೆಗೂ ಗಿಲ್ಲಿ ನಟ ಎಲ್ಲೂ, ಎಂದೂ ಬಿಟ್ಟುಕೊಟ್ಟಿಲ್ಲ. ಬಿಗ್ ಬಾಸ್ ಸ್ಪರ್ಧಿಯಾಗಿದ್ದುಕೊಂಡು ಅತೀ ಕಡಿಮೆ ಸಮಯದಲ್ಲಿ ಇನ್ಟಾಗ್ರಾಮ್‌ನಲ್ಲಿ 1M ಫಾಲೋವರ್ಸ್ ಪಡೆದ ಮೊದಲ ಸ್ಪರ್ಧಿಯಾಗಿ ಗಿಲ್ಲಿ ದಾಖಲೆ ಬರೆದರು.
ಟ್ಯಾಟೂನಿಂದ ಹಿಡಿದುಕೊಂಡು, ಪ್ರತಿ ಗಲ್ಲಿಯಲ್ಲಿ ಗಿಲ್ಲಿ ಬ್ಯಾನರ್ ಹಾಕಿ ಸ್ವತಃ ಅಭಿಮಾನಿಗಳೇ ಪ್ರಚಾರ ಮಾಡಿದ್ದರು. ಈ ಮೊದಲು ಅಶ್ವಿನಿ ಹಾಗೂ ಜಾನ್ವಿಗೆ ಬಳಕೆ ಮಾಡಿದ್ದ ‘ದೊಡ್ಡವ್ವ..’ ಡೈಲಾಗ್ ಹಾಡು ಸಖತ್ ಫೇಮಸ್ ಕೂಡ ಆಯ್ತು. ಸಾಂಗ್ ಆಗಿಯೂ ಪರಿವರ್ತನೆ ಆಗಿ ರೀಲ್ಸ್ ಮಾಡಲು ಶುರು ಮಾಡಿದ್ದರು ಅಭಿಮಾನಿಗಳು.
ಡಮಾಲ್ ಡಿಮಿಲ್ ಡಕ್ಕ ಗಿಲ್ಲಿ ಗೆಲ್ಲೋದು ಪಕ್ಕಾ! ಹೇಳಿದ ಡೈಲಾಗ್ ಇಂದಿಗೂ ಗಿಲ್ಲಿ ಫ್ಯಾನ್ಸ್ ಹೇಳುತ್ತಾರೆ.ಗಿಲ್ಲಿ ನಟ ಅವರ ಸಮಯ ಪ್ರಜ್ಞೆ, ಹಾಸ್ಯ ಪ್ರಜ್ಞೆ, ಕಾಮಿಡಿ ಟೈಮಿಂಗ್ ವೀಕ್ಷಕರಿಗೆ ಬಹಳ ಇಷ್ಟವಾಗಿದೆ. ಕಾಮಿಡಿ ಮೂಲಕವೇ ಕಹಿಸತ್ಯವನ್ನ ಹೊರಗೆ ಹಾಕಿ ಎಲ್ಲರ ಮುಖವಾಡಗಳನ್ನ ಗಿಲ್ಲಿ ನಟ ಕಳಚುತ್ತಿದ್ದ ರೀತಿ ವೀಕ್ಷಕರಿಗೆ ತುಂಬಾ ಇಷ್ಟ ಆಗಿತ್ತು.
ಗಿಲ್ಲಿ ಈ ಸೀಸನ್‌ನಲ್ಲಿ ವೀಕ್ಷಕರನ್ನು ನಗಿಸಿದ್ದಾರೆ. ಮನರಂಜನೆ ನೀಡಿದ್ದಾರೆ. ಲೀಲಾಜಾಲವಾಗಿ ಯಾವುದೇ ಬಿಗ್ ಬಾಸ್ ಚಟುವಟಿಕೆ ನೀಡಿದರೂ ನಿಭಾಯಿಸಿದ್ದಾರೆ. ಹಾಡನ್ನು ಬರೆದಿದ್ದಾರೆ. ಡ್ಯಾನ್ಸ್ ಮಾಡಿದ್ದಾರೆ, ಹಾಡಿದ್ದಾರೆ. ಒಟ್ಟಾರೆ All Rounder ನಮ್ಮ ಗಿಲ್ಲಿ ಅಂತಿದ್ದಾರೆ ಫ್ಯಾನ್ಸ್,