ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

MP Dr. K. Sudhakar: ಕಾಂಗ್ರೆಸ್‌ನಿಂದ ನರೇಗಾ ಬಚಾವೋ ಅಲ್ಲ ಕರ್ನಾಟಕ ಬಚಾವೋ" ಆಂದೋಲನದ ಅಗತ್ಯ ಇದೆ : ಸಂಸದ ಡಾ.ಕೆ.ಸುಧಾಕರ್

ಪ್ರಧಾನಿ ನರೇಂದ್ರ ಮೋದಿ ಮನರೇಗಾ ಯೋಜನೆಗೆ ಹೊಸ ರೂಪ ನೀಡಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ), ಇದನ್ನು ಸಂಕ್ಷಿಪ್ತ ವಾಗಿ ವಿಬಿ ಜಿ ರಾಮ್ ಜಿ ಎಂದು ಕರೆಯುತ್ತಾರೆ. ಇದರಲ್ಲಿ ಮಹಾತ್ಮ ಗಾಂಧೀಜಿ ಹೆಸರು ತೆಗೆದು ಹಾಕಿದ್ದಾರೆ ಎಂಬುದು ಕಾಂಗ್ರೆಸ್ ಆರೋಪ ಕಳೆದ 60 ವರ್ಷಗಳಲ್ಲಿ 400 ಕ್ಕೂ ಅಧಿಕ ಯೋಜನೆಗಳಿಗೆ, ಸಂಸ್ಥೆಗಳಿಗೆ ನೆಹರು, ರಾಜೀವ್ ಗಾಂಧಿ, ಇಂದಿರಾಗಾಂಧಿ, ಸಂಜಯಗಾಂಧಿ ಹೆಸರು ನಾಮಕರಣ ಮಾಡಿದ್ದಾರೆ. ಆಗ ಇವರಿಗೆ ಮಹಾತ್ಮ ಗಾಂಧೀಜಿಯ ನೆನಪಾಗಲೇ ಇಲ್ಲ

ಕಾಂಗ್ರೆಸ್‌ನಿಂದ ಕರ್ನಾಟಕ ಬಚಾವೋ" ಆಂದೋಲನದ ಅಗತ್ಯ ಇದೆ

ಕಾಂಗ್ರೆಸ್ ನಾಯಕರು ಚಿಕ್ಕಬಳ್ಳಾಪುರದಲ್ಲಿ ಫೆ.23ರಂದು ನರೇಗಾ ಬಚಾವೋ ಆಂದೋಲನ ನಡೆಸುತ್ತಿದ್ದಾರೆ. ಆದರೆ ಈಗ "ಕಾಂಗ್ರೆಸ್‌ನಿಂದ ಕರ್ನಾಟಕ ಬಚಾವೋ" ಎಂಬ ಆಂದೋಲನದ ಅಗತ್ಯ ಇದೆ ಎಂದು ವ್ಯಂಗ್ಯವಾಡಿದರು. -

Ashok Nayak
Ashok Nayak Feb 22, 2026 10:54 PM

ಚಿಕ್ಕಬಳ್ಳಾಪುರ : ಕಾಂಗ್ರೆಸ್ ನಾಯಕರು ಚಿಕ್ಕಬಳ್ಳಾಪುರದಲ್ಲಿ ಫೆ.23 ರಂದು ನರೇಗಾ ಬಚಾವೋ ಆಂದೋಲನ(MGNREGA Bachao Andolan ನಡೆಸುತ್ತಿದ್ದಾರೆ. ಆದರೆ ಈಗ "ಕಾಂಗ್ರೆಸ್‌ನಿಂದ ಕರ್ನಾಟಕ ಬಚಾವೋ" ಎಂಬ ಆಂದೋಲನದ ಅಗತ್ಯ ಇದೆ ಎಂದು ಸಂಸದ ಡಾ.ಕೆ.ಸುಧಾಕರ್ (MP Dr. K. Sudhakar) ವ್ಯಂಗ್ಯವಾಡಿದರು.

ನಗರದ ಸಂಸದರ ಸ್ವಗೃಹದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕಾಂಗ್ರೆಸ್ ನಾಯಕರು ಹಾಗೂ ಸರ್ಕಾರ ಮಾಡುತ್ತಿರುವ ಅವಾಂತರಗಳಿಂದಾಗಿ ಕರ್ನಾಟಕ ಹಾಗೂ ವಿಶೇಷವಾಗಿ ಚಿಕ್ಕಬಳ್ಳಾಪುರ ಅಪಾಯದ ಸ್ಥಿತಿಯಲ್ಲಿದೆ. ಆದರೆ ಇಂತಹ ಸ್ಥಿತಿಯಲ್ಲಿ ನರೇಗಾ ಬಚಾವೋ ಬದಲು ಬಯಲುಸೀಮೆ ಬಚಾವೋ ಆಂದೋಲನ ಮಾಡಬೇಕು. ಆದರೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಸುಧಾಕರ್( Congress MLA Pradeep Eshwar, District In-charge Minister Dr. Sudhakar), ಜಿಲ್ಲೆಯ ಅಭಿವೃದ್ಧಿಗೆ ಏನೂ ಮಾಡುತ್ತಿಲ್ಲ ಎಂದು ದೂರಿದ ಅವರು ಶಾಸಕರು ಹಾಗೂ ಸಚಿವರಿಗೆ ಕಾಂಗ್ರೆಸ್‌ನ ಹೈಕಮಾಂಡ್ ಮೆಚ್ಚಿಸಬೇಕು. ಜನರ ಮೆಚ್ಚುಗೆ ಇವರಿಗೆ ಬೇಕಿಲ್ಲ. ಜನರು ಮೆಚ್ಚುವುದನ್ನು ಮೊದಲು ಮಾಡಿ. ಹೈಕಮಾಂಡ್ ಮೆಚ್ಚುವುದು ಬದಿಗಿಡಿ ಎಂದು ಕಿವಿ ಮಾತು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಮನರೇಗಾ ಯೋಜನೆಗೆ ಹೊಸ ರೂಪ ನೀಡಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ), ಇದನ್ನು ಸಂಕ್ಷಿಪ್ತವಾಗಿ ವಿಬಿ ಜಿ ರಾಮ್ ಜಿ ಎಂದು ಕರೆಯುತ್ತಾರೆ. ಇದರಲ್ಲಿ ಮಹಾತ್ಮ ಗಾಂಧೀಜಿ ಹೆಸರು ತೆಗೆದು ಹಾಕಿದ್ದಾರೆ ಎಂಬುದು ಕಾಂಗ್ರೆಸ್ ಆರೋಪ ಕಳೆದ 60 ವರ್ಷಗಳಲ್ಲಿ 400 ಕ್ಕೂ ಅಧಿಕ ಯೋಜನೆಗಳಿಗೆ, ಸಂಸ್ಥೆಗಳಿಗೆ ನೆಹರು, ರಾಜೀವ್ ಗಾಂಧಿ, ಇಂದಿರಾಗಾಂಧಿ, ಸಂಜಯಗಾಂಧಿ ಹೆಸರು ನಾಮಕರಣ ಮಾಡಿದ್ದಾರೆ. ಆಗ ಇವರಿಗೆ ಮಹಾತ್ಮ ಗಾಂಧೀಜಿಯ ನೆನಪಾಗಲೇ ಇಲ್ಲ ಎಂದು ದೂರಿದರು.

ಇದನ್ನೂ ಓದಿ: MNREGA Row: ಸಂಸತ್ತಿನಲ್ಲಿ ಮನರೇಗಾ ಗದ್ದಲ; ಹೊಸ ಯೋಜನೆಗಳಿಗೆ ಹಿಂದಿ ಹೆಸರು: ಉತ್ತರ-ದಕ್ಷಿಣ ಜಟಾಪಟಿ

ಗಲ್ಲಿಗೆ ಒಂದು ಬೀದಿಗೆ ಒಂದು ಬಾರ್ ತೆರೆಯಲು ಅವಕಾಶ ಮಾಡಿದ್ದಾರೆ. ಆ ಗಾಂಧೀಜಿ ನೆನಪಾಗಲಿಲ್ಲ ಗಾಂಧೀಜಿ ಪಾನ ನಿಷೇಧ ಅಂದೋಲನ ಮಾಡಿದ್ದರು.ಗೋ ಹತ್ಯೆಯನ್ನು ಕಾಂಗ್ರೆಸ್ ನಾಯುಕರು ಸಮರ್ಥನೆ ಮಾಡಿಕೊಳ್ಳುತ್ತಾರೆ. ಗಾಂಧೀಜಿ ಗೋ ಸಂರಕ್ಷಣೆ ಮಾಡಿ ಎಂದು ತಾಕೀತು ಮಾಡಿದರು.

ನರೇಗಾದಲ್ಲಿ ವೇತನ ಪಾವತಿ ಮಾಡಲು ಕಾಲದ ಮಿತಿ ಇರಲಿಲ್ಲ. ಎಷ್ಟೋ ತಿಂಗಳ ನಂತರ ಸಂಬಳ ಕೊಡುತ್ತಿದ್ದರು. ಈಗ 15 ದಿನಗಳ ಒಳಗೆ ವೇತನ ಪಾವತಿಸಬೇಕು ಎಂಬ ನಿಯಮ ಇದೆ. ಇದು ಸುಧಾರಣೆ ಅಲ್ಲವೇ?. ಹಿಂದಿನ ಯೋಜನೆಯಲ್ಲಿ  ಫಲಾನುಭವಿ  ಅಲ್ಲದವರೂ ಹಣ ಪಡೆಯುತ್ತಿದ್ದರು, ಕೋಟ್ಯಂತರ ರೂಪಾಯಿ ಲೂಟಿ ನಡೆದಿತ್ತು. ಅದನ್ನು ತಡೆಗಟ್ಟಲು ತಂತ್ರ ಜ್ಞಾನ ಬಳಸಲಾಗುತ್ತಿದೆ .ಯೋಜನೆಯಲ್ಲಿ ಕೆಂದ್ರ ಸರ್ಕಾರ ಶೇ.80 ರಾಜ್ಯ ಸರ್ಕಾರ ಶೇ.೪೦ ರಷ್ಟು ಅನುದಾನ ಭರಿಸುತ್ತದ. ಆದರೆ ಕಾಂಗ್ರೆಸ್ ಸರ್ಕಾರದ ಬಳಿ ಹಣ ಇಲ್ಲ ಅದಕ್ಕೆ ಇಷ್ಟೊಂದು ವಿರೋಧ ವ್ಯೆಕ್ತ ಪಡಿಸುತ್ತಿದೆ.ಜಿಪಿಎಸ್ ಬಳಕೆ ಮಾಡಿ ಫಲಾನುಭವಿಗಳಿಗೆ ನೇರ ಹಣ ಪಾವತಿಯಾಗುತ್ತದೆ ಇದು ಅಕ್ರಮ ತಡಗಟ್ಟಲಾಗುತ್ತದೆ. ಆದರೆ ಕಾಂಗ್ರೆಸ್ ಎಂಜೆಂಟರಿಗೆ ಹಣ ಲೂಟಿ ಮಾಡಲು ಅವಕಾಶ ಸಿಗುವುದಿಲ್ಲಾ ಎಂದರು.

ಈ ಸರ್ಕಾರ ಅಧಿಕಾರಕ್ಕೆ ಬಂದಾಗಲೇ ನಾನು ಅನೇಕ ಅಂಶಗಳನ್ನು ಹೇಳಿ ಆಗ್ರಹ ಮಾಡಿದ್ದೆ. ಆದರೆ ಈವರೆಗೆ ಜನರ ನಿರೀಕ್ಷೆಗೆ ತಕ್ಕಂತೆ ಯಾವ ಕೆಲಸವೂ ಆಗಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.  ಇತ್ತೀಚೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳ ಸಭೆ ನಡೆಸಿದ್ದಾರೆ. 2027ರೊಳಗೆ ಕೋಲಾರ, ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ನೀರು ಹರಿಸಬೇಕೆಂದು ಸೂಚನೆ ನೀಡಿದ್ದಾರೆ. ಹೀಗೆಯೇ ಗಾಳಿ ಗೋಪುರ ಕಟ್ಟುತ್ತಾ ಹೋದರೆ ನಮಗೆ ನೀರು ಸಿಗಲ್ಲ. ಕಾವೇರಿಯಂತೆಯೇ ನಮಗೂ ಪ್ರತ್ಯೇಕವಾಗಿ ನದಿಯಿಂದ ನೀರು ಪೂರೈಸುವ ಯೋಜನೆ ಬೇಕಿದೆ ಎಂದರು.

ಎಚ್.ಎನ್.ವ್ಯಾಲಿ ಹಾಗೂ ಕೆ.ಸಿ.ವ್ಯಾಲಿ ಯೋಜನೆಯ  ತೃತೀಯ ಹಂತದ ಸಂಸ್ಮರಣಾ ತಂತ್ರಜ್ಞಾನವನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಸರ್ಕಾರಕ್ಕಿದೆ ಆ ಬಗ್ಗೆ ಸ್ಥಳೀಯ ಶಾಸಕರು, ಸಚಿವರು ಯೋಚನೆ ಮಾಡುತ್ತಿಲ್ಲ. ಚಿಕ್ಕಬಳ್ಳಾಪುರದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಹೂವಿನ ಮಾರುಕಟ್ಟೆ ನಿರ್ಮಿಸಲಾಗುವುದು ಎಂದು ಬಿಜೆಪಿ ಆಡಳಿತದ ಕೊನೆಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿ ದ್ದರು. ನಂತರ ಬಂದ ಕಾಂಗ್ರೆಸ್ ಸರ್ಕಾರ, 'ಹೂವಿನ ಮಾರುಕಟ್ಟೆ ಘೋಷಣೆ ಮಾಡಿದ್ದಾರೆ, ಹಣ ಮೀಸಲಿಟ್ಟಿಲ್ಲ' ಎಂದು ಆರೋಪ ಮಾಡಿತ್ತು ಬಳಿಕ ಕೂಡ ಇವರು ಅನುದಾನ ನೀಡಿಲ್ಲ ಎಂದರು.

ಚಿಕ್ಕಬಳ್ಳಾಪುರದ ಜನರಿಗೆ ಈಗ ಬದುಕು ಬೇಕಿದೆ. ರಾಜಕೀಯ ಅಲ್ಲ, 2028ರ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಬೇಕು ಅಂದರೆ, ಅಭಿವೃದ್ಧಿ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕೆ ಮಾಡಿದರೆ ಜನರು ಮತ ಕೊಡಲ್ಲ.ಕೇವಲ ರಾಜಕೀಯ ಚರ್ಚೆ, ಸಿನಿಮಾ ಡೈಲಾಗ್‌ಗಳಿಂದ ಆಡಳಿತ ಮಾಡಬಾರದು, ಜನರ ಮನಸ್ಸು ಗೆಲ್ಲಲು ಕೆಲಸ ಮಾಡಬೇಕು.

ಮಾತು ಬೆಳ್ಳಿ ಮೌನ ಬಂಗಾರ ಎನ್ನುತ್ತಾರೆ. ಆದರೆ ರಾಜಕೀಯದಲ್ಲಿ ಮಾತು ಬೆಳ್ಳಿ ಕೆಲಸವೇ ಬಂಗಾರ. ಕೆಲಸ ಮಾಡಿದರೆ ಮಾತ್ರ ಜನರು ಮತ ಕೊಡುತ್ತಾರೆ. ಆ ಬಗ್ಗೆ ಕಾಂಗ್ರೆಸ್ ನಾಯ ಕರು ಗಮನ ಕೊಡಿ. ಮಾತು ಬೆಳ್ಳಿ ಮೌನ ಬಂಗಾರ ಎನ್ನುತ್ತಾರೆ. ಆದರೆ ರಾಜಕೀಯ ದಲ್ಲಿ ಮಾತು ಬೆಳ್ಳಿ ಕೆಲಸವೇ ಬಂಗಾರ. ಕೆಲಸ ಮಾಡಿದರೆ ಮಾತ್ರ ಜನರು ಮತ ಕೊಡುತ್ತಾರೆ. ಆ ಬಗ್ಗೆ ಕಾಂಗ್ರೆಸ್ ನಾಯಕರು ಗಮನ ಕೊಡಿ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ, ಚಿಮುಲ್ ನಿರ್ಧೇಶಕ ಕೆ.ವಿ.ನಾಗರಾಜ್, ನಗರಸಭೆ ಮಾಜಿ ಅಧ್ಯಕ್ಷ ಎ.ಗಜೇಂದ್ರ, ಮುಖಂಡರಾದ ಮರಳಕುಂಟೆ ಕೃಷ್ಣಮೂರ್ತಿ, ಅವುಲಕೊಂಡರಾಯಪ್ಪ, ಚನ್ನಪ್ಪರೆಡ್ಡಿ, ಸೀಕಲ್ ಆನಂದಗೌಡ, ಲಿಂಗಾರೆಡ್ಡಿ ಮತ್ತಿತರರು ಇದ್ದರು.