Tomato Price Rise: ಏರಿಕೆಯ ಹಾದಿಗೆ ಮರಳಿದ ಟೊಮೆಟೋ ಬೆಳೆ : ರೈತರ ಮೊಗದಲ್ಲಿ ಹರ್ಷ
ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೋ ಕೆಜಿಗೆ 40, 50 ರೂಗೆ ಮಾರಾಟವಾಗುತ್ತಿದೆ. ತೀವ್ರ ಬಿಸಿಲಿನ ಪರಿಣಾಮ ತೇವಾಂಶ ಬತ್ತುತ್ತಿದ್ದು ಇಳುವರಿ ಕೂಡ ಕಡಿಮೆಯಾಗಿರುವುದೇ ಬೆಲೆಯೇರಿಕೆ ಕಾಣಲು ಪ್ರಮುಖಕಾರಣವಾಗಿದೆ. ಮೇಲಾಗಿ ಕಳೆದ 6 ತಿಂಗಳಿಂದ ಈ ಬೆಳೆ ರೈತರ ಕೈಹಿಡಿಯದ ಪರಿಣಾಮ ಬೆಳೆಯಿಡುವವರು ಕೂಡ ಕಡಿಮೆಯಾಗಿದ್ದಾರೆ.
ಟೊಮೆಟೋ ಸಂಗ್ರಹ ಚಿತ್ರ -
ಚಿಕ್ಕಬಳ್ಳಾಪುರ: ಕಳೆದ 6 ತಿಂಗಳಿಗೂ ಹೆಚ್ಚುಕಾಲದಿಂದ ಬೆಲೆ ಕುಸಿತಕ್ಕೆ ಕಾರಣವಾಗಿದ್ದ ಟೊಮೆಟೋಗೆ ಶುಕ್ರದೆಸೆ ಪ್ರಾರಂಭವಾವಾಗುವ ಲಕ್ಷಣ ಗೋಚರಿಸಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡುವಂತಾಗಿದೆ.
ಕೆಲ ದಿನಗಳ ಹಿಂದೆಯಷ್ಟೇ 15 ಕೆ.ಜಿ. ಬಾಕ್ಸ್ ಕೇವಲ 100, 150 ರೂಗೆ ಮಾರಾಟವಾಗು ತ್ತಿದ್ದು ಬೆಳೆಗೆ ಹಾಕುವ ಬಂಡವಾಳವೂ ಕೂಡ ರೈತರ ಕೈಸೇರದೆ, ಹಣ್ಣು ಕೀಳದೆ ತೋಟ ಗಳಲ್ಲಿ ಬಿಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಎರಡು, ಮೂರು ದಿನಗಳಿಂದ ಮಾರು ಕಟ್ಟೆಯಲ್ಲಿ ಬೆಲೆಯೇರಿಕೆ ಆಗುತ್ತಿದೆ. 15 ಕೆ.ಜಿ. ಬಾಕ್ಸ್ 500 ರೂ.ಗಡಿ ದಾಟಿದ್ದು ಬೇಸಿಗೆ ಯಾದ ಕಾರಣ ಇನ್ನಷ್ಟು ಬೆಲೆ ಏರಿಕೆ ಆಗುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ: Tomato Price Fall: ಏಕಾಏಕಿ ಕುಸಿದ ಟೊಮೇಟೊ ದರ: ರೈತರು ಕಂಗಾಲು
ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೋ ಕೆಜಿಗೆ 40, 50 ರೂಗೆ ಮಾರಾಟವಾಗುತ್ತಿದೆ. ತೀವ್ರ ಬಿಸಿಲಿನ ಪರಿಣಾಮ ತೇವಾಂಶ ಬತ್ತುತ್ತಿದ್ದು ಇಳುವರಿ ಕೂಡ ಕಡಿಮೆಯಾಗಿರುವುದೇ ಬೆಲೆಯೇರಿಕೆ ಕಾಣಲು ಪ್ರಮುಖಕಾರಣವಾಗಿದೆ. ಮೇಲಾಗಿ ಕಳೆದ 6 ತಿಂಗಳಿಂದ ಈ ಬೆಳೆ ರೈತರ ಕೈಹಿಡಿಯದ ಪರಿಣಾಮ ಬೆಳೆಯಿಡುವವರು ಕೂಡ ಕಡಿಮೆಯಾಗಿದ್ದಾರೆ. ಇವೆಲ್ಲ ವುಗಳ ಪರಿಣಾಮ ಟೊಮೆಟೋ ಬೆಲೆ ಏರಿದೆ ಎನ್ನುವುದು ರೈತಾಪಿಗಳ ಮಾತಾಗಿದೆ.
ಚಿಕ್ಕಬಳ್ಳಾಪುರ ಟೊಮೆಟೋ ಮಾರುಕಟ್ಟೆಯಲ್ಲಿ ಅವಕ ಕಡಿಮೆಯಾಗುತ್ತಿರುವ ಹಿನ್ನೆಲೆ ಯಲ್ಲಿ ತಾತ್ಕಾಲಿಕವಾಗಿ ಬೆಲೆಯೇರಿಕೆಯಾಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ಟೊಮೆಟೋ ಬೆಳೆಯುವ ಚಿಂತಾಮಣಿ ಹಾಗೂ ಚಿಕ್ಕಬಳ್ಳಾಪುರ ಮಾರುಕಟ್ಟೆಯಲ್ಲಿ 15 ಕೆ.ಜಿ. ಬಾಕ್ಸ್ 500ರೂ ಗೆ ಮಾರಾಟವಾದರೆ ಉತ್ತಮ ಗುಣಮಟ್ಟದ್ದು 500 ರಿಂದ 700 ರೂ, ವರೆಗೂ ಮಾರಾಟ ಕಂಡಿದೆ.
ದರ ಕುಸಿದಿದ್ದನ್ನು ನೋಡಿ ರೈತರು ಲಕ್ಷಾಂತರ ಸಂಖ್ಯೆಯಲ್ಲಿ ಟೊಮೆಟೋ ಸಸಿಗಳನ್ನು ಪೈಪೋಟಿಗೆ ಇಳಿದು ನಾಟಿ ಮಾಡಿದರು. ಇದೀಗ ಫಸಲು ಆರಂಭವಾಗಿ ಮಾರುಕಟ್ಟೆಗೆ ನಿರೀಕ್ಷೆಗೆ ತಕ್ಕಷ್ಟು ಬರದೇ ಇರುವುದು ಕೂಡ ದರ ಏರಿಕೆಗೆ ಕಾರಣಗಿರುವುದು ರೈತರಿಗೆ ಮೊಗದಲ್ಲಿ ನಗೆ ಮೂಡಿಸಿದೆ.
ಕೆಲ ತಿಂಗಳ ಹಿಂದೆ ಹಾಕಿದ್ದ ಬಂಡವಾಳ ಕೂಡ ಕೈ ಸೇರಿದೆ ಸಾಲ, ಸೋಲ ಮಾಡಿ ಟೊಮೆಟೋ ಬೆಳೆ ಇಟ್ಟಿದ್ದ ರೈತರು ಕೈ ಕೊಳ್ಳುವಂತಾಗಿತ್ತು. ಈಗ ದರ ಏರಿಕೆಯಿಂದ ಮಾಡಿರುವ ಸಾಲ ತೀರಿಸ ಬಹುದೆಂಬ ವಿಶ್ವಾಸದಲ್ಲಿ ಟೊಮೆಟೋ ಬೆಳಗಾರರಿದ್ದಾರೆ.
![]()
ಎರಡು ವಾರಗಳಿಂದ ಟೊಮೆಟೋ ದರ ಏರಿಕೆ ಕಂಡಿದೆ. 15 ಕೆಜಿ ಟೊಮೆಟೋ ಬಾಕ್ಸ್ ಎರಡು ವಾರಗಳ ಹಿಂದೆ ಕೇವಲ 150 ಇತ್ತು. ಗುಣಮಟ್ಟದ ಟೊಮೆಟೋ 200 ರೂ ವರೆಗೂ ಮಾರಾಟ ಆಗುತ್ತಿತ್ತು. ಈಗ 15 ಕೆಜಿ ಟೊಮೆಟೋ ಬಾಕ್ಸ್ 500 ರಿಂದ 700 ರೂ.ವರೆಗೂ ಮಾರಾಟ ಆಗುತ್ತಿದೆ. ಟೊಮೆಟೋ ದರ ಇನ್ನು ಹೆಚ್ಚಾಗುವ ಸಾಧ್ಯತೆ ಇರುವುದು ಹೆಮ್ಮೆಯ ವಿಷಯ.
-–ಮೋಹನ್, ಎಪಿಎಂಸಿ ವರ್ತಕ, ಚಿಕ್ಕಬಳ್ಳಾಪುರ