ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಖಚಿತ, ಪಕ್ಷೇತರ ಅಭ್ಯರ್ಥಿಯಾಗಿ ಜನರ ಬಳಿ ಹೋಗುವೆ: ಡಿ.ಜೆ.ನಾಗರಾಜರೆಡ್ಡಿ
ನಾನು ಕ್ಷೇತ್ರದಲ್ಲಿ ನಿರಂತರವಾಗಿ ಜನರ ಸಂಪರ್ಕ ದಲ್ಲಿದ್ದೇನೆ. ಜನರ ಕಷ್ಟಸುಖಗಳಲ್ಲಿ ಭಾಗಿ ಯಾಗುತ್ತಿದ್ದೇನೆ. ಜನರಿಗೆ ನನ್ನ ಮೇಲೆ ಒಲವು ಇದೆ. ಕಳೆದ ಚುನಾವಣೆಯಲ್ಲೂ ಸಹ ನಾನು ಅಭ್ಯರ್ಥಿಯ ಆಕಾಂಕ್ಷಿಯಾಗಿದ್ದೆ. ಆದರೆ ಕೆಲವೊಂದು ಕಾರಣಗಳಿಂದ ನಾನು ಚುನಾವಣಾ ಕಣದಿಂದ ಹಿಂದೆ ಸರಿಯಬೇಕಾಯ್ತು. ಇದೇ ರೀತಿ ಪ್ರತೀ ಚುನಾವಣೆಯಲ್ಲೂ ನಡೆಯುತ್ತಿದೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮುಖಂಡ ಡಿ.ಜೆ.ನಾಗರಾಜರೆಡ್ಡಿ ಮಾದ್ಯಮಗಳೊಂದಿಗೆ ಚುನಾವಣೆಯ ಕುರಿತು ಮಾತನಾಡಿದರು. -
ಗುಡಿಬಂಡೆ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಬಾಗೇಪಲ್ಲಿ-ಗುಡಿ ಬಂಡೆ ವಿಧಾನಸಭಾ ಕ್ಷೇತ್ರ(Bagepalli-Gudibande Assembly Constituency)ದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದು ಖಚಿತ, ಸದಾ ಜನರ ಬಳಿಯಿರುವ ನಾನು ಜನರ ಬಳಿಗೆ ಹೋಗಿ ಮತ ಹಾಕುವಂತೆ ಕೇಳಿ ಕೊಳ್ಳು ತ್ತೇನ, ಜನ ನನಗೆ ಆರ್ಶೀವಾದ ಮಾಡುತ್ತಾರೆ ಎಂದು ಮುಖಂಡ ಡಿ.ಜೆ.ನಾಗರಾಜರೆಡ್ಡಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ಕ್ಷೇತ್ರದಲ್ಲಿ ನಿರಂತರವಾಗಿ ಜನರ ಸಂಪರ್ಕ ದಲ್ಲಿದ್ದೇನೆ. ಜನರ ಕಷ್ಟಸುಖಗಳಲ್ಲಿ ಭಾಗಿಯಾಗುತ್ತಿದ್ದೇನೆ. ಜನರಿಗೆ ನನ್ನ ಮೇಲೆ ಒಲವು ಇದೆ. ಕಳೆದ ಚುನಾವಣೆಯಲ್ಲೂ ಸಹ ನಾನು ಅಭ್ಯರ್ಥಿಯ ಆಕಾಂಕ್ಷಿಯಾಗಿದ್ದೆ. ಆದರೆ ಕೆಲವೊಂದು ಕಾರಣಗಳಿಂದ ನಾನು ಚುನಾವಣಾ ಕಣದಿಂದ ಹಿಂದೆ ಸರಿಯಬೇಕಾಯ್ತು. ಇದೇ ರೀತಿ ಪ್ರತೀ ಚುನಾವಣೆಯಲ್ಲೂ ನಡೆಯುತ್ತಿದೆ. ಜೆಡಿಎಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತನಾದ ನಾನು ಪಕ್ಷಕ್ಕಾಗಿ ದುಡಿದಿದ್ದೆ, ಆದರೆ ಚುನಾವಣೆಯ ಕೊನೆಯ ಕ್ಷಣ ದಲ್ಲಿ ನನಗೆ ಟಿಕೆಟ್ ಕೈ ತಪ್ಪಿತ್ತು. ಆದ ಕಾರಣ ನಾನು ಚುನಾವಣೆಯಿಂದ ಹಿಂದೆ ಸರಿಯ ಬೇಕಾಯ್ತು. ಈ ಬಾರಿ ನಾನು ಯಾವುದೇ ಕಾರಣಕ್ಕೂ ಚುನಾವಣಾ ಕಣದಿಂದ ಹಿಂದೆ ಸರಿಯುವುದಿಲ್ಲ ಎಂದರು.
ಇದನ್ನೂ ಓದಿ: Gudibande News: ಕಾಮಗಾರಿ ಬಿಲ್ ಮಾಡಲು 3.5 ಲಕ್ಷ ಲಂಚ: ಗುಡಿಬಂಡೆ ಪಿಡಿಒ ವೀಡಿಯೋ ವೈರಲ್
ಇನ್ನೂ ಈ ಬಾರಿ ನಾನು ಯಾವುದೇ ಪಕ್ಷದಿಂದ ಸ್ಪರ್ಧೆ ಮಾಡುವುದಿಲ್ಲ. ಬದಲಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿರುತ್ತೇನೆ. ಆದರೆ ಕ್ಷೇತ್ರದಲ್ಲಿ ಕೆಲವೊಂದು ಮಾತು ಗಳು ಕೇಳಿಬರುತ್ತಿದ್ದು, ಅದರಂತೆ ನಾನು ಈ ಬಾರಿ ಸಿಪಿಎಂ ಪಕ್ಷದಿಂದ ಸ್ಪರ್ಧೆ ಮಾಡು ವಂತೆ ಹಲವರು ಮಾತನಾಡುತ್ತಿದ್ದಾರೆ. ಪಕ್ಷದಲ್ಲೂ ಸಹ ಈ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದ್ದು, ಒಂದು ವೇಳೆ ಸಿಪಿಎಂ ಪಕ್ಷದಿಂದ ಅವಕಾಶ ಸಿಕ್ಕರೇ ಸ್ಪರ್ಧೆ ಮಾಡಲು ಸಿದ್ದನಿರುತ್ತೇನೆ. ಕೆಲವೊಂದು ವೈಯುಕ್ತಿಕ ಕಾರಣಗಳಿಂದ ನಾನು ಕ್ಷೇತ್ರದಲ್ಲಿ ಸರಿಯಾಗಿ ಕಾಣಿಸಿಕೊಂಡಿಲ್ಲ, ಇನ್ನೂ ಸದಾ ಕ್ಷೇತ್ರದ ಜನತೆಯ ಸಮಸ್ಯೆಗಳಿಗೆ ಸ್ಪಂದನೆ ನೀಡುತ್ತೇನೆ ಎಂದರು.
ಇನ್ನೂ ಕ್ಷೇತ್ರದಲ್ಲಿ ಹಾಲಿ ಶಾಸಕರು ಸಾಕಷ್ಟು ಅಕ್ರಮಗಳನ್ನು ಮಾಡಿದ್ದಾರೆ. ಅವರ ವಿರುದ್ದ ನಾನು ಹೋರಾಟ ಮಾಡುತ್ತೇನೆ. ಅವರು ಯಾವುದೇ ಅಕ್ರಮಗಳನ್ನು ಮಾಡಿಲ್ಲ ಎಂದು ಸಾಬೀತು ಮಾಡಲಿ ಅಥವಾ ಒಂದೇ ವೇದಿಕೆಗೆ ಬರಲಿ ನಾನು ಚರ್ಚೆ ಮಾಡಲು ಸಿದ್ದನಿದ್ದೇನೆ. ಅವರ ವಿರುದ್ದ ಸಿಬಿಐ ತನಿಖೆ ಮಾಡಲು ನಾನು ಒತ್ತಾಯಿಸುತ್ತೇನೆ. ಕ್ಷೇತ್ರದಲ್ಲಿ ಸಾಕಷ್ಟು ಎಕರೆಗಳು ಜಮೀನನ್ನು ಅಕ್ರಮವಾಗಿ ಖರೀದಿ ಮಾಡಿದ್ದಾರೆ. ಅವರ ವಿರುದ್ದ ಅಕ್ರಮಗಳನ್ನು ಹಂತ ಹಂತವಾಗಿ ಬಯಲು ಮಾಡುತ್ತೇನೆ. ನಾನು ಸ್ವಚ್ಛ ರಾಜಕಾರಣ ಮಾಡಲು ರಾಜಕಾರಣಕ್ಕೆ ಬಂದಿದ್ದೇನೆ ಹೊರತು ಹಣ ಅಥವಾ ಆಸ್ತಿ ಸಂಪಾದನೆ ಮಾಡುವುದಕ್ಕಲ್ಲ ಎಂದರು.
ಈ ವೇಳೆ ಡಿ.ಜೆ.ನಾಗರಾಜರೆಡ್ಡಿಯವರ ಬೆಂಬಲಿಗರಾದ ಸೀತಾರಾಮಪ್ಪ, ವರ್ಲಕೊಂಡ ದೇವರಾಜು ಸೇರಿದಂತೆ ಹಲವರು ಹಾಜರಿದ್ದರು.