ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dharmasthala Case: ಧರ್ಮಸ್ಥಳ ಪ್ರಕರಣ; ಶ್ರೀ ಕ್ಷೇತ್ರದ ಪರ ಹಿರಿಯ ನ್ಯಾಯವಾದಿ ಸಿವಿ ನಾಗೇಶ್, ಮಹೇಶ್ ಕಜೆ ವಕಾಲತ್ತು

ಇಡೀ ದೇಶದ ಗಮನ ಸೆಳೆದ, ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಹೆಣಗಳನ್ನು ಹೂತಿಡಲಾಗಿದೆ ಎಂಬ ಆರೋಪದ ʼಬುರುಡೆ ಪ್ರಕರಣʼಕ್ಕೆ ಸಂಬಂಧಿಸಿ ಹೊಸ ಬೆಳವಣಿಗೆ ನಡೆದಿದ್ದು, ಹಿರಿಯ ವಕೀಲರಾದ ಸಿ.ವಿ. ನಾಗೇಶ್ ಮತ್ತು ಮಹೇಶ್ ಕಜೆ ಅವರು ಧರ್ಮಸ್ಥಳ ಶ್ರೀ ಕ್ಷೇತ್ರದ ಪರ ವಕಾಲತ್ತು ವಹಿಸಲಿದ್ದಾರೆ. ವರದಿಗಳ ಪ್ರಕಾರ, ಇಬ್ಬರು ವಕೀಲರು ಇಂದು ಮಧ್ಯಾಹ್ನ 2:30ಕ್ಕೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಲಿದ್ದಾರೆ. ನ್ಯಾಯವಾದಿ ಸಿ.ವಿ.ನಾಗೇಶ್ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಅನುಭವಿ ವಕೀಲರಾಗಿದ್ದು, ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಖ್ಯಾತರಾಗಿದ್ದಾರೆ; ಇವರು ನಟ ದರ್ಶನ್, ಹೆಚ್.ಡಿ. ರೇವಣ್ಣ, ಮತ್ತು ಮುರುಘಾ ಮಠದ ಸ್ವಾಮೀಜಿಗಳಂತಹ ಗಣ್ಯರ ಪ್ರಕರಣಗಳಲ್ಲಿ ವಾದ ಮಂಡಿಸಿದ್ದಾರೆ.

ಧರ್ಮಸ್ಥಳ ಪರ ಖ್ಯಾತ ವಕೀಲ ಸಿವಿ ನಾಗೇಶ್ ಬೆಳ್ತಂಗಡಿ ನ್ಯಾಯಾಲಯಕ್ಕೆ ಎಂಟ್ರಿ

ಸಿವಿ ನಾಗೇಶ್, ಮಹೇಶ್‌ ಕಜೆ -

Profile
Sushmitha Jain Dec 31, 2025 2:07 PM

ಧರ್ಮಸ್ಥಳ: ಇಡೀ ದೇಶದಾದ್ಯಂತ ಸಂಚಲನ ಮೂಡಿಸಿದ್ದ ಧರ್ಮಸ್ಥಳ (Dharmasthala) ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಹೊಸ ಅಪ್‌ಡೇಟ್ ದೊರೆತಿದೆ. ಹಿರಿಯ ನ್ಯಾಯವಾದಿಗಳಾದ ಸಿ.ವಿ.ನಾಗೇಶ್ (CV Nagesh) ಹಾಗೂ ಮಹೇಶ್ ಕಜೆ (Mahesh KJ) ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ವಕಾಲತ್ತು ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ವರದಿಗಳ ಪ್ರಕಾರ, ಇಂದು ಮಧ್ಯಾಹ್ನ 2:30ಕ್ಕೆ ಸಿ.ವಿ.ನಾಗೇಶ್ ಹಾಗೂ ಮಹೇಶ್ ಕಜೆ ಅವರು ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ.

ನ್ಯಾಯವಾದಿ ಸಿ.ವಿ.ನಾಗೇಶ್ ಅವರು ಕರ್ನಾಟಕ ಹೈಕೋರ್ಟ್‌ (High Court)ನಲ್ಲಿ ಅನುಭವಿ ವಕೀಲರಾಗಿದ್ದು, ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಖ್ಯಾತರಾಗಿದ್ದಾರೆ; ಇವರು ನಟ ದರ್ಶನ್ (Darshan), ಹೆಚ್.ಡಿ. ರೇವಣ್ಣ (HD Revanna), ಮತ್ತು ಮುರುಘಾ ಮಠದ ಸ್ವಾಮೀಜಿಗಳಂತಹ ಗಣ್ಯರ ಪ್ರಕರಣಗಳಲ್ಲಿ ವಾದ ಮಂಡಿಸಿದ್ದಾರೆ

ನ್ಯಾಯವಾದಿ ಮಹೇಶ್ ಕಜೆ ಅವರು ಪುತ್ತೂರಿನ ಖ್ಯಾತ ವಕೀಲರಾಗಿದ್ದು, ವಿಶೇಷವಾಗಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯದ (ED) ಪರ ವಾದಿಸಲು ವಿಶೇಷ ಸರ್ಕಾರಿ ಅಭಿಯೋಜಕರಾಗಿ ನೇಮಕಗೊಂಡಿದ್ದಾರೆ.

Dharmasthala Case: ತಿಮರೋಡಿ, ಮಟ್ಟಣ್ಣನವರ್‌ರಿಂದ ಜೀವ ಬೆದರಿಕೆ, ರಕ್ಷಣೆ ಕೊಡಿ: ಚಿನ್ನಯ್ಯ ದೂರು

ಅನಾಮಿಕ ದೂರುದಾರ ಚಿನ್ನಯ್ಯನ, ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವ ಹೂತಿರುವುದಾಗಿ ಸುಳ್ಳು ಹೇಳಿ ವಿಡಿಯೋ ಮಾಡಿ ಅಪಪ್ರಚಾರ ಮಾಡಿದ್. ಚಿನ್ನಯ್ಯನ ಜೊತೆ ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್ ಸೇರಿದಂತೆ ಆರು ಮಂದಿ ಧರ್ಮಸ್ಥಳ ಕ್ಷೇತ್ರಕ್ಕೆ ಮಸಿ ಬಳೆಯಲು ಷಡ್ಯಂತ್ರ ರೂಪಿಸಿದ್ದರು.

ಬಳಿಕ ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆಗಾಗಿ ಸರ್ಕಾರವು ವಿಶೇಷ ತನಿಖಾ ತಂಡ (ಎಸ್ಐಟಿ)ವನ್ನು ನೇಮಿಸಿತು. ಎಸ್‌ಐಟಿ ನಡೆಸಿದ ತನಿಖೆಯಲ್ಲಿ ತನಿಖೆಯಲ್ಲಿ ಇದು ಅಪಪ್ರಚಾರದ ಭಾಗವೆಂದೂ ಹಾಗೂ ಚಿನ್ನಯ್ಯನಿಗೆ ಹಣದ ಆಮಿಷ ತೋರಿಸಿ ಈ ಕೆಲಸ ಮಾಡಿಸಲಾಗಿತ್ತು ಎಂದು ತಿಳಿದುಬಂದಿದೆ. ಬಳಿಕ ಎಸ್ಐಟಿ ತನ್ನ ತನಿಖೆಯನ್ನು ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ. ಧರ್ಮಸ್ಥಳದ ಘನತೆಗೆ ಧಕ್ಕೆ ತರಲು ನಡೆದ ವ್ಯವಸ್ಥಿತ ಪಿತೂರಿಯನ್ನು ತನಿಖಾ ತಂಡವು ಬಯಲಿಗೆಳೆದಿದೆ. ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಸುಜಾತಾ ಭಟ್, ಜಯಂತ್ ಮತ್ತು ವಿಠ್ಠಲಗೌಡ ಸೇರಿದಂತೆ ಆರು ಜನರ ತಂಡವು ಧರ್ಮಸ್ಥಳಕ್ಕೆ ಮಸಿ ಬಳಿಯಲು ಅನಾಮಿಕ ದೂರುದಾರ ಚಿನ್ನಯ ಮೂಲಕ ಸುಳ್ಳು ಆರೋಪಗಳನ್ನು ಮಾಡಿತ್ತು. ಇದೀಗ ಪವಿತ್ರ ಕ್ಷೇತ್ರವೊಂದರ ವಿರುದ್ಧ ದುರುದ್ದೇಶಪೂರಿತ ಅಜೆಂಡಾ ಹೊಂದಿದ್ದ ಈ ತಂಡದ ಸಂಚು ಈಗ ಸಂಪೂರ್ಣವಾಗಿ ಪತ್ತೆಯಾಗಿದೆ.

ಇದರ ನಡುವೆ ಧರ್ಮಸ್ಥಳ ಕೇಸ್ ತನಿಖೆ ಮುಕ್ತಾಯ ಹಂತದಲ್ಲಿದ್ದು, ಶೀಘ್ರದಲ್ಲೇ ಚಾರ್ಜ್​ ಶೀಟ್​ ಕೂಡ ಸಲ್ಲಿಕೆಯಾಗುತ್ತೆ ಎನ್ನುವ ಮಾತು ಕೇಳಿ ಬಂದಿತ್ತು. ಆದ್ರೆ ಇದೀಗ ಎಸ್​ಐಟಿ ರಚಿಸಿದ ಸರ್ಕಾರ ಮುಖ್ಯಸ್ಥರಾಗಿ ಪ್ರಣಬ್ ಮೊಹಂತಿ ಅವರು, ಧರ್ಮಸ್ಥಳ ಕೇಸ್ ಇನ್ನೂ ತನಿಖಾ ಹಂತದಲ್ಲಿದೆ. ಈ ಸಲ್ಲಿಸಿರುವುದು ಕೇವಲು, ಚಾರ್ಜ್ ಶೀಟ್ ಅಲ್ಲ ಅದು," ಎಂದು ಹೇಳಿದ್ದು, ಧರ್ಮಸ್ಥಳ ಪ್ರಕರಣಕ್ಕೆ ಮತ್ತೊಂದು ಬಿಗ್​ ಟ್ವಿಸ್ಟ್ ಸಿಕ್ಕಂತಾಗಿದೆ.