ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bhajans in middle of the road: ನಡು ರಸ್ತೆಯಲ್ಲೇ ಭಜನೆ; ರೈತರಿಂದ ಅಹೋರಾತ್ರಿ ಜಾಗರಣೆ: ದಾಸ, ತತ್ವ ಹಾಗೂ ರೈತರ ಪದಗಳ ಗಾಯನ

ಹೋರಾಟದ ಸ್ಥಳದಲ್ಲೇ ಕುಳಿತು ರೈತರು ದಾಸಪದ, ತತ್ವಪದ ಹಾಗೂ ರೈತರ ಪದಗಳನ್ನು ಹಾಡುತ್ತಾ ರಾತ್ರಿ ಕಳೆದರು. ನೂರಾರು ರೈತರು ಸಾಮೂಹಿಕವಾಗಿ ಭಜನೆ ನಡೆಸಿದ ದೃಶ್ಯ ರಾಮಮಂದಿರ ವೃತ್ತದಲ್ಲಿ ಗಮನ ಸೆಳೆಯಿತು. ಕಲಬುರಗಿ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಿಂದ ಆಗಮಿಸಿದ ರೈತರು ಹೋರಾಟದಲ್ಲಿ ಭಾಗವಹಿಸಿದ್ದರು.

ನಡು ರಸ್ತೆಯಲ್ಲೇ ಭಜನೆ; ರೈತರಿಂದ ಅಹೋರಾತ್ರಿ ಜಾಗರಣೆ

-

Profile
Ashok Nayak Oct 13, 2026 11:20 PM

ಕಲಬುರಗಿ: ಕಬ್ಬಿಗೆ (Sugarcane)ಪ್ರತಿ ಟನ್‌ಗೆ ₹5,500 ದರ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ರಾಮಮಂದಿರ ವೃತ್ತದಲ್ಲಿ ಮಂಗಳವಾರ ತಡ ರಾತ್ರಿ ಪ್ರತಿಭಟನೆ (Protest) ನಡೆಸುತ್ತಿರುವ ನೂರಾರು ರೈತರು ನಡು ರಸ್ತೆಯಲ್ಲೇ ಕುಳಿತು ಭಜನೆ ಮಾಡುವ ಮೂಲಕ ಅಹೋರಾತ್ರಿ ಜಾಗರಣೆ ನಡೆಸಿದರು.

ಹೋರಾಟದ ಸ್ಥಳದಲ್ಲೇ ಕುಳಿತು ರೈತರು ದಾಸಪದ, ತತ್ವಪದ ಹಾಗೂ ರೈತರ ಪದಗಳನ್ನು ಹಾಡುತ್ತಾ ರಾತ್ರಿ ಕಳೆದರು. ನೂರಾರು ರೈತರು ಸಾಮೂಹಿಕವಾಗಿ ಭಜನೆ ನಡೆಸಿದ ದೃಶ್ಯ ರಾಮ ಮಂದಿರ ವೃತ್ತದಲ್ಲಿ ಗಮನ ಸೆಳೆಯಿತು. ಕಲಬುರಗಿ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಿಂದ ಆಗಮಿಸಿದ ರೈತರು ಹೋರಾಟದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: Sugarcane farmers protest: ಕಬ್ಬಿಗೆ ₹5,500 ದರಕ್ಕೆ ಪಟ್ಟು; ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಕೆ: ಹೆದ್ದಾರಿ ಮೇಲೆಯೇ ಅನ್ನದಾತರ ಊಟ

ರೈತರ ಪ್ರತಿಭಟನೆಯಿಂದ ನಗರದ ರಾಮಮಂದಿರ ವೃತ್ತ ಸಂಪೂರ್ಣ ಬಂದ್ ಆಗಿದ್ದು, ಹೆದ್ದಾರಿ ಸಂಚಾರಕ್ಕೂ ಅಡ್ಡಿಯಾಯಿತು. ಬೇಡಿಕೆ ಈಡೇರುವವರೆಗೆ ಹೋರಾಟದಿಂದ ಹಿಂದೆ ಸರಿಯುವು ದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ.

ಕಬ್ಬಿಗೆ ಪ್ರತಿ ಟನ್‌ಗೆ ₹5,500 ದರ ನಿಗದಿ ಮಾಡಬೇಕು, ಸ್ವಾಮಿನಾಥನ್ ಆಯೋಗದ ಶಿಫಾರಸು ಗಳನ್ನು ಜಾರಿಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರೈತರು ಆಗ್ರಹಿಸಿದರು.

ತಡರಾತ್ರಿಯಾದರೂ ರೈತರ ಹೋರಾಟಕ್ಕೆ ಸಾರ್ವಜನಿಕರಿಂದ ಬೆಂಬಲ ವ್ಯಕ್ತವಾಯಿತು. ನಗರದ ಸುತ್ತಮುತ್ತಲಿನ ಜನರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರೊಂದಿಗೆ ಕೆಲಕಾಲ ಇದ್ದು, ಹೋರಾಟಕ್ಕೆ ಬೆಂಬಲ ಸೂಚಿಸಿದರು. ಹೀಗಾಗಿ ರಾತ್ರಿ ವೇಳೆಯಲ್ಲೂ ರಾಮಮಂದಿರ ವೃತ್ತದಲ್ಲಿ ರೈತರ ಭಜನೆ ಹಾಗೂ ಘೋಷಣೆಗಳು ಮುಂದುವರಿದವು.