ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ʻಅಗ್ನಿಪರೀಕ್ಷೆ’ ಇಂದ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟವರು ಇವರೇ?

Bigg Boss Kannada 13:10 ಮಂದಿ ಪೈಕಿ ವೀಕ್ಷಕರಿಂದ ಅತೀ ಹೆಚ್ಚು ಮತ ಪಡೆದಿರುವ 3 ಮಂದಿ ನೇರವಾಗಿ ‘ಬಿಗ್ ಬಾಸ್’ ಮನೆ ಪ್ರವೇಶಿಸಲಿದ್ದಾರೆ. ಮತ್ತೊಬ್ಬರನ್ನ ಜ್ಯೂರಿ ಸ್ಥಾನದಲ್ಲಿರುವ ಶ್ರುತಿ, ಸಂಗೀತಾ ಶೃಂಗೇರಿ, ಚಂದನ್ ಶೆಟ್ಟಿ ಹಾಗೂ ವಿನಯ್ ಗೌಡ ಆಯ್ಕೆ ಮಾಡಲಿದ್ದಾರೆ. ಸ್ಪರ್ಧಿಗಳು (Contestant) ಮನೆಯೊಳಗೆ ಕಾಲಿಡುವ ಮುನ್ನವೇ ವೀಕ್ಷಕರಿಗೆ ಹೊಸ ಮನೆಯ ಪರಿಚಯ ಮಾಡಿಕೊಡುವ ಜವಾಬ್ದಾರಿಯನ್ನು ಸುದೀಪ್ ಹೊತ್ತುಕೊಂಡಿದ್ದಾರೆ. ಬಿಗ್ ಬಾಸ್ ಕನ್ನಡ 13’ ಕಾರ್ಯಕ್ರಮಕ್ಕೆ ‘ಅಗ್ನಿಪರೀಕ್ಷೆ’ಯಿಂದ ಒಟ್ಟು 4 ಮಂದಿ ಬರ್ತಿದ್ದಾರಂತೆ. ಏನದು ಸುದ್ದಿ?

ʻಅಗ್ನಿಪರೀಕ್ಷೆ’ ಇಂದ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟವರು ಇವರೇ?

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Sep 6, 2026 9:38 AM

ಬಿಗ್‌ ಬಾಸ್ ಕನ್ನಡ ಸೀಸನ್ 13ಕ್ಕೆ (Bigg Boss Kannada 13) ಕ್ಷಣಗಣನೆ ಶುರುವಾಗಿದೆ. ಇದೇ ಸೆಪ್ಟೆಂಬರ್ 6ರ ಸಂಜೆ ಕಿಚ್ಚ ಸುದೀಪ್ ಅದ್ಧೂರಿಯಾಗಿ ಹೊಸ ಸೀಸನ್‌ಗೆ ಚಾಲನೆ ನೀಡಲಿದ್ದಾರೆ. ಒಬ್ಬೊಬ್ಬರಾಗಿ ಸ್ಪರ್ಧಿಗಳು ಬಿಗ್‌ ಬಾಸ್ ಮನೆ ಪ್ರವೇಶಿಸುವುದಕ್ಕೂ ಮುನ್ನವೇ ಕಿಚ್ಚ ಸುದೀಪ್ ಮನೆಗೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಸ್ಪರ್ಧಿಗಳು (Contestant) ಮನೆಯೊಳಗೆ ಕಾಲಿಡುವ ಮುನ್ನವೇ ವೀಕ್ಷಕರಿಗೆ ಹೊಸ ಮನೆಯ ಪರಿಚಯ ಮಾಡಿಕೊಡುವ ಜವಾಬ್ದಾರಿಯನ್ನು ಸುದೀಪ್ ಹೊತ್ತುಕೊಂಡಿದ್ದಾರೆ. ಬಿಗ್ ಬಾಸ್ ಕನ್ನಡ 13’ ಕಾರ್ಯಕ್ರಮಕ್ಕೆ ‘ಅಗ್ನಿಪರೀಕ್ಷೆ’ಯಿಂದ (Agnipariksha) ಒಟ್ಟು 4 ಮಂದಿ ಬರ್ತಿದ್ದಾರಂತೆ. ಏನದು ಸುದ್ದಿ?

ನೇರವಾಗಿ ‘ಬಿಗ್ ಬಾಸ್’ ಮನೆ ಪ್ರವೇಶ

10 ಮಂದಿ ಪೈಕಿ ವೀಕ್ಷಕರಿಂದ ಅತೀ ಹೆಚ್ಚು ಮತ ಪಡೆದಿರುವ 3 ಮಂದಿ ನೇರವಾಗಿ ‘ಬಿಗ್ ಬಾಸ್’ ಮನೆ ಪ್ರವೇಶಿಸಲಿದ್ದಾರೆ. ಮತ್ತೊಬ್ಬರನ್ನ ಜ್ಯೂರಿ ಸ್ಥಾನದಲ್ಲಿರುವ ಶ್ರುತಿ, ಸಂಗೀತಾ ಶೃಂಗೇರಿ, ಚಂದನ್ ಶೆಟ್ಟಿ ಹಾಗೂ ವಿನಯ್ ಗೌಡ ಆಯ್ಕೆ ಮಾಡಲಿದ್ದಾರೆ.

ಇದನ್ನೂ ಓದಿ: Bigg Boss Kannada 13: ಈ ಬಾರಿಯ ಬಿಗ್‌ ಬಾಸ್‌ ಪ್ರಪಂಚ ಹೇಗೆ ಇದೆ ಗೊತ್ತಾ? ಇಲ್ಲಿದೆ ಸಣ್ಣ ಝಲಕ್‌

60 ಮಂದಿ ಪೈಕಿ 15 ಮಂದಿ ‘ಅಗ್ನಿಪರೀಕ್ಷೆ’ ಗ್ರ್ಯಾಂಡ್ ಫಿನಾಲೆ ಹಂತ ತಲುಪಿದ್ದರು. 60 ಮಂದಿ ಪೈಕಿ 15 ಮಂದಿ ‘ಅಗ್ನಿಪರೀಕ್ಷೆ’ ಗ್ರ್ಯಾಂಡ್ ಫಿನಾಲೆ ಹಂತ ತಲುಪಿದ್ದರು. ‘ಅಗ್ನಿಪರೀಕ್ಷೆ’ ಕಡೆಯಿಂದ ‘ಬಿಗ್ ಬಾಸ್’ ಮನೆಗೆ ಹೋಗುವವರು 4 ಸ್ಪರ್ಧಿಗಳು. ಈ ನಾಲ್ಕೂ ಸ್ಪರ್ಧಿಗಳು ಪುರುಷರು ಎಂಬ ಮಾಹಿತಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಕಿರಣ್ ಶಾಸ್ತ್ರಿ , ಲಿಖಿತ್‌, ಮಂಜಣ್ಣ, ಧನು ಎನ್ನಲಾಗುತ್ತಿದೆ. ಇದು ಎಲ್ಲದಕ್ಕೂ ಉತ್ತರ ಸಿಗಲಿದೆ.

ನಿಜವಾದ ಆಟ ಶುರುವಾಗುವುದು ಇಂದು ಸೆಪ್ಟೆಂಬರ್ 6ರ ಸಂಜೆಯಿಂದ. ಸುದೀಪ್ ಅವರು ಹೊಸ ಸೀಸನ್‌ನ ಸ್ಪರ್ಧಿಗಳನ್ನು ಒಬ್ಬೊಬ್ಬರಾಗಿ ಬಿಗ್‌ ಬಾಸ್ ಮನೆಗೆ ಸ್ವಾಗತಿಸಲಿದ್ದಾರೆ. ಯಾರು ಮನೆಯೊಳಗೆ ಕಾಲಿಡುತ್ತಾರೆ? ಮೊದಲ ದಿನವೇ ಏನೆಲ್ಲಾ ಟ್ವಿಸ್ಟ್‌ಗಳು ಎದುರಾಗುತ್ತವೆ? ಅನ್ನೋದು ವೀಕ್ಷಕರಲ್ಲಿ ಇರೋ ಕುತೂಹಲ.

ಇನ್ನು ಸ್ಪರ್ಧಿಗಳು ಬರುವುದಕ್ಕೂ ಮುನ್ನವೇ ಕಿಚ್ಚ ಸುದೀಪ್ ಬಿಗ್‌ ಬಾಸ್ ಮನೆಗೆ ಎಂಟ್ರಿ ಕೊಟ್ಟು ಸೀಸನ್ 13ರ ಹೈಪ್ ಹೆಚ್ಚಿಸಿದ್ದಾರೆ.

ಹೊಸ ಪ್ರೋಮೋ ಔಟ್‌ ಆಗಿದೆ. ಕಿಚ್ಚನ ಲುಕ್‌ ನೋಡಿ ವೀಕ್ಷಕರು ಫಿದಾ ಆಗಿದ್ದಾರೆ. ಮೊಟ್ಟ ಮೊದಲ ಬಾರಿಗೆ ಕನ್ನಡ ವೇದಿಕೆಯಲ್ಲಿ south ಬಿಗ್ ಬಾಸ್‍‍ನ SUPER STAR ಆಂಕರ್ಸ್‌ಗಳ ಸಮಾಗಮ ಆಗಿದೆ. ಹೌದು ದಕ್ಷಿಣ ಭಾರತದ ನಾಲ್ವರೂ ಸೂಪರ್‌ ಸ್ಟಾರ್‌ಗಳನ್ನ ಒಳಗೊಂಡಿದೆ. ಒಂದೇ ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Bigg Boss Kannada 13: ಬಿಗ್ ಬಾಸ್ ಕನ್ನಡ ವೇದಿಕೆಯಲ್ಲಿ ಕಿಚ್ಚನ ಜೊತೆ ನಾಲ್ವರು ಸೂಪರ್‌ ಸ್ಟಾರ್‌ಗಳು!

ಕಿಚ್ಚ ಸುದೀಪ್, ವಿಜಯ್ ಸೇತುಪತಿ, ನಾಗಾರ್ಜುನ ಮತ್ತು ಮೋಹನ್‌ಲಾಲ್ ಒಂದೇ ಪರದೆಯಲ್ಲಿ ರಾರಾಜಿಸಿದ್ದಾರೆ. ಹೀಗಾಗಿ ಕಿಚ್ಚ ಸುದೀಪ್‌ ವೇದಿಕೆಯಲ್ಲೇ ಇವರೆಲ್ಲರ ಜೊತೆ ಮಾತನಾಡಿದ್ದಾರೆ. ವಿಜಯ್‌ ಸೇತುಪತಿ ಅವರು ಕನ್ನಡದಲ್ಲೇ ಮಾತನಾಡಿದ್ದಾರೆ.