ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vote Theft: ಕಲಬುರಗಿಯಲ್ಲಿ 6,000 ಮತದಾರರ ಹೆಸರು ಡಿಲೀಟ್‌ ಮಾಡಲು ಸಂಚು: ಎಸ್‌ಐಟಿ ತನಿಖೆ ವೇಳೆ ಬಹಿರಂಗ

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದ 2023ರ ಚುನಾವಣೆಯ ಸಂದರ್ಭದಲ್ಲಿ ನಡೆದಿರುವ ಮತ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ತನಿಖೆಯನ್ನು ತೀವ್ರಗೊಳಿಸಿರುವ ಎಸ್‌ಐಟಿಗೆ ಜಿಲ್ಲೆಯ ಮಾಜಿ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ್ ಅವರ ನಿವಾಸದ ಬಳಿ ಸುಟ್ಟ ಮತದಾರರ ದಾಖಲೆಗಳ ರಾಶಿ ಪತ್ತೆಯಾಗಿದೆ ಎನ್ನಲಾಗಿದೆ.

ಮತ ಕಳ್ಳತನಕ್ಕೆ ಸಂಚು: ಮುಂದುವರಿದ ಎಸ್‌ಐಟಿ ತನಿಖೆ

-

ಕಲಬುರಗಿ: ಆಳಂದ ವಿಧಾನಸಭಾ (Aland assembly) ಕ್ಷೇತ್ರದ 2023ರ ಚುನಾವಣೆಯ (Election 2023) ಸಂದರ್ಭದಲ್ಲಿ ನಡೆದಿರುವ ಮತ ಕಳ್ಳತನ (Vote theft) ಪ್ರಕರಣಕ್ಕೆ ಸಂಬಂಧಿಸಿ ಎಸ್‌ಐಟಿ ತನಿಖೆಯನ್ನು (SIT investigation) ತೀವ್ರಗೊಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಶನಿವಾರ (ಅ. 18) ಜಿಲ್ಲೆಯ ಮಾಜಿ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ್ (BJP MLA Subhash Guttedar) ಅವರ ನಿವಾಸದ ಬಳಿ ಸುಟ್ಟ ಮತದಾರರ ದಾಖಲೆಗಳ ರಾಶಿ ಪತ್ತೆಯಾಗಿದೆ. ಇದರ ಮೂಲಕ ಸುಮಾರು 6,000 ಮತದಾರರನ್ನು ಅಳಿಸಲು ಸಂಚು ರೂಪಿಸಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಮನೆ ಬಳಿ ಸುಟ್ಟ ಮತದಾರರ ದಾಖಲೆಗಳು ಪತ್ತೆಯಾಗಿದೆ. ಈ ದಾಖಲೆಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಗುತ್ತೇದಾರ್ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ. ಇದು ಅವರ ಮನೆಗೆಲಸದ ಸಿಬ್ಬಂದಿಯ ಕಾರ್ಯವೆಂದು ಅವರು ದೂರಿದ್ದಾರೆ ಎನ್ನಲಾಗಿದೆ.

ʼʼಸ್ವಚ್ಛತಾ ಅಭಿಯಾನದ ಪ್ರಯುಕ್ತ ಮನೆಯ ಸ್ವಚ್ಛತಾ ಸಿಬ್ಬಂದಿ ಅದನ್ನು ಹೊರಗೆ ಎಸೆದು ಸುಟ್ಟು ಹಾಕಿದರು. ಯಾವುದಾದರೂ ದುರುದ್ದೇಶವಿದ್ದಿದ್ದರೆ ನಾವು ಅದನ್ನು ಮನೆಯಿಂದ ದೂರ ಸುಟ್ಟು ಹಾಕುತ್ತಿದ್ದೆವು. ಯಾರಾದರೂ ಅದನ್ನು ಮನೆಯ ಮುಂದೆ ಏಕೆ ಮಾಡುತ್ತಾರೆ? ಇದರ ಹಿಂದೆ ಯಾವುದೇ ದುರುದ್ದೇಶಗಳಿರಲಿಲ್ಲʼʼ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಗುತ್ತೇದಾರ್ ಅವರ ಪುತ್ರರು ಮತ್ತು ಚಾರ್ಟರ್ಡ್ ಅಕೌಂಟೆಂಟ್‌ಗೆ ಸಂಬಂಧಿಸಿದ ಹಲವಾರು ಸ್ಥಳಗಳ ಮೇಲೆ ಎಸ್‌ಐಟಿ ಶುಕ್ರವಾರ ದಾಳಿ ನಡೆಸಿದೆ.

ಏನಾಗಿತ್ತು?

2023ರ ರಾಜ್ಯ ಚುನಾವಣೆಗೆ ಮುಂಚಿತವಾಗಿ ಮತದಾರರ ಪಟ್ಟಿಯಿಂದ 6,000ಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಅಳಿಸಲು ಸಂಚು ರೂಪಿಸಲಾಗಿತ್ತು. ಪೊಲೀಸ್ ಮೂಲಗಳ ಪ್ರಕಾರ, ಪಟ್ಟಿಯಿಂದ ನಿಜವಾದ ಮತದಾರರನ್ನು ತೆಗೆದುಹಾಕಲು ಡೇಟಾ ಎಂಟ್ರಿ ಆಪರೇಟರ್‌ಗಳಿಗೆ ಮೂರರಿಂದ ನಾಲ್ಕು ಲಕ್ಷ ರೂಪಾಯಿಗಳನ್ನು ನೀಡಲಾಗಿತ್ತು.

ಇದನ್ನು ಮೊದಲಿಗೆ ಹೇಳಿದ್ದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ. 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಆಳಂದ ಕ್ಷೇತ್ರವನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೊಡ್ಡ ಪ್ರಮಾಣದಲ್ಲಿ 'ಮತ ಕಳ್ಳತನ' ಮಾಡಲಾಗಿದೆ ಎನ್ನುವ ಆರೋಪ ಹೊರಿಸಿದ್ದರು. ಇದರ ಬಳಿಕ ಈ ಕುರಿತು ತನಿಖೆಗೆ ಎಸ್‌ಐಟಿಯನ್ನು ರಚಿಸಲಾಯಿತು.

ಕಾಂಗ್ರೆಸ್ ಮತದಾರರ ಹೆಸರನ್ನು ಪಟ್ಟಿಯಿಂದ ಡಿಲೀಟ್‌ ಮಾಡಲು ಕೆಲವು ಮತದಾರರ ಮೂಲಕ ವಂಚನೆಯ ಫೋನ್ ಕರೆಗಳನ್ನು ಮಾಡಲಾಗಿದೆ ಎಂದು ಕೈ ಪಕ್ಷ ಆರೋಪಿಸಿತ್ತು. ಇದನ್ನು ಸರಿಯಾದ ಸಮಯದಲ್ಲಿ ಪತ್ತೆ ಹಚ್ಚಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್. ಪಾಟೀಲ್ ಗೆದ್ದು ಬಿಜೆಪಿ ಅಭ್ಯರ್ಥಿ ಸುಭಾಷ್ ಗುತ್ತೇದಾರ್ ಸೋತರು ಎನ್ನುತ್ತಾರೆ ಕಾಂಗ್ರೆಸ್ ನಾಯಕರು.

ಇದನ್ನೂ ಓದಿ: Car Accident: ಕಾರು ಡಿಕ್ಕಿ ಹೊಡೆಸಿದ್ದಲ್ಲದೇ ಜೀವ ಬೆದರಿಕೆ... ಶಾಸಕನ ಪುತ್ರನ ಅಟ್ಟಹಾಸಕ್ಕೆ ಜನ ಫುಲ್‌ ಶಾಕ್‌!

6,018 ಮತದಾರರ ಡಿಲೀಟ್‌ ಅರ್ಜಿಗಳಲ್ಲಿ 24 ಮಾತ್ರ ಮೃತ ಅಥವಾ ಸ್ಥಳಾಂತರಗೊಂಡ ಮತದಾರರದ್ದಾಗಿದೆ ಎಂಬುದು ತನಿಖೆಯಿಂದ ತಿಳಿದುಬಂದ ಬಳಿಕ ಬಿ.ಆರ್. ಪಾಟೀಲ್ ವಿರುದ್ಧ ಸೋತ ಗುತ್ತೇದಾರ್‌ಗೆ ಸಂಬಂಧಿಸಿದ ಆಸ್ತಿಗಳ ಮೇಲೆ ಎಸ್‌ಐಟಿ ದಾಳಿ ನಡೆಸಿದೆ.