ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gubbi News: ಅನರ್ಹ ಮತಗಳ ತೆರವಿನ ಎಸ್ಐಆರ್ ಯಶಸ್ವಿಗೆ ಗುಬ್ಬಿ ಬಿಜೆಪಿ ಸಿದ್ದ

ಪಟ್ಟಣದ ಬಾವಿಮನೆ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಾಗಾರದಲ್ಲಿ ಗುಬ್ಬಿ ವಿಧಾನಸಭಾ ಕ್ಷೇತ್ರದ ಎಲ್ಲಾ ಬೂತ್ ಮಟ್ಟದ ಏಜೆಂಟ್ಸ್, ಸದಸ್ಯರು ಸ್ಥಳೀಯ ಮುಖಂಡರು ಆಗಮಿಸಿ 30 ದಿನಗಳ ಕಾಲ ವಿಶೇಷ ಮತದಾರ ಪರಿಷ್ಕರಣೆ ಹೇಗೆ ಪಾಲ್ಗೊಂಡು ಬಿಜೆಪಿ ಪರ ಮತಗಳನ್ನು ಉಳಿಸಿ ಕೊಳ್ಳುವ ಕೆಲಸ ಮಾಡಬೇಕು ಎಂಬ ಮಾಹಿತಿ ತಿಳಿಸಲಾಯಿತು.

ಅನರ್ಹ ಮತಗಳ ತೆರವಿನ ಎಸ್ಐಆರ್ ಯಶಸ್ವಿಗೆ ಗುಬ್ಬಿ ಬಿಜೆಪಿ ಸಿದ್ದ

-

Profile
Ashok Nayak Jun 25, 2026 8:14 PM

ಗುಬ್ಬಿ: ಸೂಕ್ತ ದಾಖಲಾತಿ ಇಲ್ಲದೆ ಚುನಾವಣಾ ಸಮಯದಲ್ಲಿ ಕಾಣಿಸಿಕೊಳ್ಳುವ ಮತಗಳು ಹಾಗೂ ಮೃತಪಟ್ಟವರು, ಎರಡು ಕಡೆ ಮತ ಇರುವವರು ಹೀಗೆ ಅನೇಕ ರೀತಿ ಅನರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡುವುದು ಜೊತೆಗೆ ದಾಖಲೆ ಇದ್ದೂ ಮತದಾರರ ಪಟ್ಟಿಯಿಂದ ತೆಗೆದವರನ್ನು ಮರಳಿ ಸೇರ್ಪಡೆ ಮಾಡುವ ಈ ಕಾರ್ಯಕ್ಕೆ ಬಿಎಲ್ಎ 2 ಜವಾಬ್ದಾರಿ ಹೆಚ್ಚಿರುವ ಕಾರಣ ಗುಬ್ಬಿ ಘಟಕ ಬಿಜೆಪಿ ಎಸ್ಐಆರ್(SIR) ಕುರಿತ ಕಾರ್ಯಾಗಾರ ಗುರುವಾರ ಆಯೋಜಿಸಿತ್ತು.

ಪಟ್ಟಣದ ಬಾವಿಮನೆ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಾಗಾರದಲ್ಲಿ ಗುಬ್ಬಿ ವಿಧಾನಸಭಾ ಕ್ಷೇತ್ರದ ಎಲ್ಲಾ ಬೂತ್ ಮಟ್ಟದ ಏಜೆಂಟ್ಸ್, ಸದಸ್ಯರು ಸ್ಥಳೀಯ ಮುಖಂಡರು ಆಗಮಿಸಿ 30 ದಿನಗಳ ಕಾಲ ವಿಶೇಷ ಮತದಾರ ಪರಿಷ್ಕರಣೆ ಹೇಗೆ ಪಾಲ್ಗೊಂಡು ಬಿಜೆಪಿ ಪರ ಮತಗಳನ್ನು ಉಳಿಸಿ ಕೊಳ್ಳುವ ಕೆಲಸ ಮಾಡಬೇಕು ಎಂಬ ಮಾಹಿತಿ ತಿಳಿಸಲಾಯಿತು.

ಇದನ್ನೂ ಓದಿ: Gubbi News: ರೋಗಮುಕ್ತ ಸಮಾಜ ನಿರ್ಮಾಣಕ್ಕೆ ಜೂ.29ರಂದು ಜಾಗೃತಿ ಸಂವಾದ

ರಾಜ್ಯ ಬಿಜೆಪಿ ಮುಖಂಡ ಸಚ್ಚಿದಾನಂದಮೂರ್ತಿ ಎಸ್ಐಆರ್ ಬಗ್ಗೆ ಮಾತನಾಡಿ, ಗ್ರಾಮಗಳಲ್ಲಿ ಇರುವ ಮತಗಳ ಬಗ್ಗೆ ತಿಳಿದ ಬಿಎಲ್ಎ 2 ಗಳು ಅಲ್ಲಿನ ಬಿಎಲ್ಓ ಸಂಪರ್ಕ ಬೆಳೆಸಿ 2002 ಮತ್ತು 2026 ರ ಎರಡೂ ಮತಪಟ್ಟಿ ಪಡೆದು ತಮ್ಮ ಮತದಾರರ ಇರುವಿಕೆ ಹೊಸ ಮತಗಳು, ಮೃತಪಟ್ಟ ವರು, ಊರು ಬಿಟ್ಟವರು ಹೀಗೆ ಎಲ್ಲವನ್ನೂ ಗಮನಿಸಿ ಮ್ಯಾಪಿಂಗ್ ವ್ಯವಸ್ಥೆಗೆ ಸಹಕರಿಸಬೇಕು. ಮತದಾರರ ತಂದೆ ತಾತ ಹೀಗೆ ಸಂಬಂಧಿಕರ ಹೆಸರು ನಮೂದಿಸಬೇಕು, ಮೊಬೈಲ್ ನಂಬರ್ ಕಡ್ಡಾಯ ಬರೆಯಬೇಕು. ಮೂವತ್ತು ದಿನಗಳ ಸಕ್ರಿಯವಾಗಿ ಶ್ರಮಿಸಿದರೆ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ ಎಂದು ಹುರಿದುಂಬಿಸಿದರು.

ನಿಮ್ಮ ಊರಿಗೆ ಐದು ವರ್ಷಕ್ಕೆ ಒಮ್ಮೆ ಮತ ಹಾಕಲು ಬರುವವರ ಬಗ್ಗೆ ಎಚ್ಚರವಹಿಸಿ ಅಂತಹವರು ಎರಡು ಕಡೆ ಮತ ಚಲಾಯಿಸಿರುತ್ತಾರೆ. ಹೊಸ ಮುಖಗಳು ಕಂಡಲ್ಲಿ ವಿಚಾರಿಸಿ, ಒಂದೇ ಮನೆಯಲ್ಲಿ ಹತ್ತು ಹದಿನೈದು ಮತಗಳು ಇದ್ದಲ್ಲಿ ಅದನ್ನು ಮ್ಯಾಪಿಂಗ್ ವ್ಯವಸ್ಥೆಗೆ ಒಳಪಡಿಸಿ ಎಂದು ಸಲಹೆ ನೀಡಿ ಈ ಬಾರಿ ರಾಜ್ಯದಲ್ಲಿ 170 ಕ್ಕೂ ಅಧಿಕ ಸ್ಥಾನ ಗೆದ್ದು ಬಿಜೆಪಿ ಸರ್ಕಾರ ಬರಲಿದೆ. ಕಾರ್ಯ ಕರ್ತರ ಪಾರ್ಟಿ ಬಿಜೆಪಿ ಗುಬ್ಬಿಯಲ್ಲಿ ಸಹ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ ಮಾತನಾಡಿ ಪ್ರತಿ ಭಾನುವಾರ ಮನ್ ಕೀ ಬಾತ್(Mann Ki Baat) ಮೂಲಕ ವಿಚಾರಧಾರೆ ಪಡೆದು ಬೂತ್ ಮಟ್ಟದ ಸಮಿತಿ ಸಭೆ ನಡೆಸಿಕೊಂಡು ಎಸ್ಐಆರ್ ಬಗ್ಗೆ ಜಾಗೃತಿ ಮೂಡಿಸಿ ಪ್ರಶಿಕ್ಷಣ ವರ್ಗದಲ್ಲಿ ತರಬೇತಿ ಪಡೆದು ಬಿಎಲ್ಎ 2 ಸರಳ ಆ್ಯಪ್ ಮೂಲಕ ತಮ್ಮ ಮನ್ ಕೀ ಬಾತ್ ಬಗ್ಗೆ ಮಾಹಿತಿ ಹಂಚಿಕೊಳ್ಳಿ ಎಂದು ಸಲಹೆ ನೀಡಿದರು.

ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ, ಎಸ್ಐಆರ್ ಯಶಸ್ವಿಗೆ ಬೂತ್ ಸಮಿತಿ ಪ್ರತಿ ಮನೆಗೆ ತಲುಪಿ ಮ್ಯಾಪಿಂಗ್ ಬಗ್ಗೆ ಗಮನಹರಿಸಿ, ಉದ್ದೇಶವಾಗಿ ಮತಗಳನ್ನು ತೆಗೆಯುವ ಕೆಲಸ ನಡೆಯದಂತೆ ನೋಡಿಕೊಳ್ಳಿ. ಅಧಿಕಾರಿಗಳ ಬೆನ್ನುಹತ್ತಿ ನಮ್ಮ ಮತಗಳನ್ನು ಉಳಿಸಿಕೊಳ್ಳಿ. ವಿದೇಶ ದಲ್ಲಿ ವಿಧ್ಯಾಭ್ಯಾಸ ಮಾಡುವ ಯುವಕರ ಮತಗಳನ್ನು ಪೋಷಕರ ಮೂಲಕ ಉಳಿಸಿ ಕೊಳ್ಳಲು ಕಾರ್ಯಕರ್ತರು ಶ್ರಮವಹಿಸಬೇಕು ಎಂದ ಅವರು 30 ದಿನ ಬೂತ್ ಮಟ್ಟದ ಎಲ್ಲಾ ಕಾರ್ಯ ಕರ್ತರು ಒಗ್ಗೂಡಿ ಕೆಲಸ ಮಾಡಿ ಎಂದು ಕರೆ ನೀಡಿದರು.

ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಲರಾಮಯ್ಯ ಮಾತನಾಡಿ, ನರೇಂದ್ರ ಮೋದಿ ಮತ್ತು ಅಮಿತ್ ಷಾ ಜೋಡಿ ಇಟ್ಟ ದಿಟ್ಟ ಹೆಜ್ಜೆ ಎಸ್ಐಆರ್ ಆಗಿದೆ. ಕಳೆದ 24 ವರ್ಷದ ನಂತರ ನಡೆದಿರುವ ಪರಿಷ್ಕರಣೆ ಈಗಾಗಲೇ ಹಲವು ರಾಜ್ಯದಲ್ಲಿ ಕೋಟಿಗೂ ಅಧಿಕ ಮತಗಳ ತೆಗೆಯಲಾಗಿದೆ. ವಲಸಿಗರು, ಅನ್ಯ ದೇಶದವರು ನಮ್ಮಲ್ಲಿ ಮತದ ಹಕ್ಕು ಪಡೆದಿದ್ದ ಬಗ್ಗೆ ತಿಳಿದೂ ಈ ಎಸ್ಐಆರ್ ಆರಂಭಿಸಿದ್ದಾರೆ. ಕೇವಲ ನಾಲ್ಕೈದು ಸಾವಿರ ಮತದ ಅಂತರದಲ್ಲಿ ಬಿಜೆಪಿ ಸೋಲು ಕಂಡಿತ್ತು. ಈ ಪರಿಷ್ಕರಣೆ ನಮ್ಮ ಗುಬ್ಬಿ ಕ್ಷೇತ್ರ ಗೆಲ್ಲಲು ಒಂದು ಮಾರ್ಗಸೂಚಿಯಾಗಿದೆ ಎಂದರು.

ಕಾರ್ಯಾಗಾರದಲ್ಲಿ ಬಿಜೆಪಿ ಮುಖಂಡರಾದ ಎಚ್.ಎಂ.ರವೀಶ್, ಬಿಎಲ್ 1 ಪಂಚಾಕ್ಷರಿ, ಜಿಪಂ ಮಾಜಿ ಸದಸ್ಯ ಚಂದ್ರಶೇಖರಬಾಬು, ಜಕ್ಕನಹಳ್ಳಿ ರವೀಶ್, ಗಂಗಣ್ಣ, ಎಚ್.ಟಿ.ಭೈರಪ್ಪ, ಎಸ್.ನಂಜೇ ಗೌಡ, ಎಸ್.ವಿಜಯಕುಮಾರ್, ಹೊಸಹಳ್ಳಿ ಬಸವರಾಜು, ಜಿಪಂ ಮಾಜಿ ಸದಸ್ಯರಾದ ಡಾ.ನವ್ಯಾ ಬಾಬು, ಭಾರತಿ ಹಿತೇಶ್, ಚನ್ನಶೆಟ್ಟಿಹಳ್ಳಿ ಯತೀಶ್, ಎಪಿಕೆ ರಾಜು, ಶ್ರೀಧರ್, ಕಡಬ ರಾಘವೇಂದ್ರ, ಪಪಂ ಮಾಜಿ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ ಇತರರು ಇದ್ದರು.