ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

KSRTC: ವೇತನ ಪರಿಷ್ಕರಣೆ ಸಮಿತಿ ಮೂಲಕ ನಿರ್ಧಾರ : ಕೆಎಸ್ಆರ್ಟಿಸಿ ನಿಗಮ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್

ಗುಬ್ಬಿ ತಾಲೂಕಿನ ಅಡಗೂರು, ಧೂಳನಹಳ್ಳಿ ಪಾಳ್ಯ, ಕಕ್ಕೆನಹಳ್ಳಿ, ಕೊಪ್ಪ , ಸುರಿಗೇನಹಳ್ಳಿ, ತೊಂಗನಹಳ್ಳಿ, ಸಿಂಗೊನಳ್ಳಿ ಗ್ರಾಮಗಳಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ಅವರು, ಒಂದು ವಿಚಾರವಾಗಿ ಸರ್ಕಾರ ಮತ್ತು ನೌಕರರ ನಡುವೆ ಕೆಲವೊಂದು ಗೊಂದಲಗಳಿವೆ. ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು ಬಗೆಹರಿಸ ಲಿದ್ದಾರೆ

ವೇತನ ಪರಿಷ್ಕರಣೆ ಸಮಿತಿ ಮೂಲಕ ನಿರ್ಧಾರ: ಎಸ್.ಆರ್.ಶ್ರೀನಿವಾಸ್

-

Ashok Nayak
Ashok Nayak Feb 18, 2026 11:06 PM

ಗುಬ್ಬಿ: ವೇತನ ಪರಿಷ್ಕರಣೆ ಕುರಿತಂತೆ ಬಿಜೆಪಿ ಸರ್ಕಾರ ಇದ್ದಾಗ 2023ಕ್ಕೆ ನಡೆದಿತ್ತು. ನಂತರ 2027 ನಡೆಯಬೇಕಿದೆ. ಹಿಂದಿನ ಸರ್ಕಾರ ವೇತನ ಪರಿಷ್ಕರಣಿಗೆ ಸಂಬಂಧಿಸಿದಂತೆ ಕಮಿಟಿ ಕೂಡಾ ರಚಿಸಿತ್ತು. ಅದರ ಮೂಲಕ ನಿರ್ಣಯ ಕೈಗೊಂಡು ಪರಿಷ್ಕರಣೆ ನಿರ್ಧರಿಸ ಲಾಗುತ್ತದೆ. ಅಗ್ರಿಮೆಂಟ್ ಪ್ರಕಾರ 2027 ಕ್ಕೆ ಪರಿಷ್ಕರಣೆ ಮಾಡಬೇಕಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್(Karnataka State Road Transport Corporation Chairman and MLA S.R.Srinivas) ತಿಳಿಸಿದರು.

ಗುಬ್ಬಿ ತಾಲೂಕಿನ ಅಡಗೂರು, ಧೂಳನಹಳ್ಳಿ ಪಾಳ್ಯ, ಕಕ್ಕೆನಹಳ್ಳಿ, ಕೊಪ್ಪ , ಸುರಿಗೇನಹಳ್ಳಿ, ತೊಂಗನಹಳ್ಳಿ, ಸಿಂಗೊನಳ್ಳಿ ಗ್ರಾಮಗಳಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ಅವರು, ಒಂದು ವಿಚಾರವಾಗಿ ಸರ್ಕಾರ ಮತ್ತು ನೌಕರರ ನಡುವೆ ಕೆಲವೊಂದು ಗೊಂದಲಗಳಿವೆ. ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು ಬಗೆಹರಿಸ ಲಿದ್ದಾರೆ ಎಂದರು.

ಇದನ್ನೂ ಓದಿ: Gubbi News ಮಾದಾರ ಮಹಾಸಭಾದ ಕಡಬ ಹೋಬಳಿ ಘಟಕದ ಅಧ್ಯಕ್ಷರಾಗಿ ಲಕ್ಷ್ಮಣ್ ಉಪಾಧ್ಯಕ್ಷರಾಗಿ ಸುರೇಶ್ ಆಯ್ಕೆ

ನಾನು ಯಾವ ಪಕ್ಷದಲ್ಲಿ ಬೇಕಾದರೂ ಟಿಕೆಟ್ ತರುವ ಯೋಗ್ಯತೆ ಉಳಿಸಿಕೊಂಡಿದ್ದೇನೆ.

ಇರುವ ಕಡೆ ಆತ್ಮ ಗೌರವಕ್ಕೆ ದಕ್ಕೆ ಬರುವಂತ ಸಂದರ್ಭದಲ್ಲಿ ಸೋಲು ಗೆಲುವು ಮುಖ್ಯ ಅಂದುಕೊಂಡಿಲ್ಲ. ರಾಜಕೀಯದಲ್ಲಿ ಬದ್ಧತೆ ಇಟ್ಟುಕೊಂಡು ಕೆಲಸ ಮಾಡುತ್ತೇನೆ. ಜನ ಸೇವೆ ಮುಖ್ಯ ಮಾತನಾಡುವವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಸರ್ಕಾರ ಮತ್ತು ಮಂತ್ರಿಗಳ ಸಹಕಾರದಿಂದ ಕೆಎಸ್ಆರ್‌ಟಿಸಿಯಲ್ಲಿ ತಮ್ಮ ಕೆಲಸ ಮಾಡುತ್ತಿದ್ದೇವೆ ಎಂದ ಅವರು ರಾಜ್ಯದಿಂದ ಅತಿ ಹೆಚ್ಚು ತೆರಿಗೆ ತೆಗೆದುಕೊಂಡು ಕೇಂದ್ರ ಸರ್ಕಾರ ಜನರಿಗೆ ಅನ್ಯಾಯ ಮಾಡುತ್ತಿದೆ. ರಾಜಕಾರಣಿಗಳು ರಾಜ್ಯದ ಜನತೆಯ ವಿಚಾರ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಕೆ.ಆರ್.ವೆಂಕಟೇಶ್, ಚನ್ನಬಸವೇಗೌಡ, ರಾಜಣ್ಣ, ಶ್ರೀನಿವಾಸ್, ಕರೀತಿಮ್ಮಯ್ಯ, ಚಿಕ್ಕೋಡಪ್ಪ, ವೆಂಕಟೇಶ್ ಮೂರ್ತಿ, ಕುಮಾರ್ , ಶಿವಪ್ಪ, ಕಳ್ಳಿಪಾಳ್ಯ ರಾಜು ಮುಂತಾದವರು ಇದ್ದರು.