ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gubbi News: ಧರ್ಮಸ್ಥಳ ಸಂಘದ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ತಾಲೂಕಿನ ಹೊಸಕೆರೆ ವಲಯದ ಹಾಗಲವಾಡಿ ಕಾರ್ಯಕ್ಷೇತ್ರದಲ್ಲಿ ಉಚಿತ ಅರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರಲ್ಲಿ ಆರ್ಥಿಕ ಸ್ವಾವಲಂಬಿ ತನ ಸೃಷ್ಟಿಸಿ ಧಾರ್ಮಿಕ ಕ್ಷೇತ್ರ ಅಭಿವೃದ್ಧಿ, ಕೆರೆಕಟ್ಟೆಯ ಅಭಿವೃದ್ದಿ ಹಾಗೂ ಬಡವರಿಗೆ ಸೂರು, ಮಾಸಾಶನ ಹೀಗೆ ಅನೇಕ ಸಾಮಾಜಿಕ ಸೇವೆ ನಡೆಸಿ ಮನೆಮಾತಾಗಿದೆ

ಧರ್ಮಸ್ಥಳ ಸಂಘದ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

-

Profile
Ashok Nayak Jun 27, 2026 8:20 PM

ಗುಬ್ಬಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ನಾಲ್ಕು ದಾನಗಳಲ್ಲಿ ಪ್ರಖ್ಯಾತಿ ಪಡೆದಿದೆ. ಈ ಪೈಕಿ ಔಷಧಿ ದಾನವು ಸಹ ಬಹಳ ಮುಖ್ಯವಾಗಿ ಚಾಲನೆಯಲ್ಲಿದೆ. ಸ್ವ ಸಹಾಯ ಸಂಘದ ಸದಸ್ಯರು  ಆರ್ಥಿಕವಾಗಿ ಸ್ವಾವಲಂಬಿಯಾಗುವುದರ ಜೊತೆಗೆ ತಮ್ಮ ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಯೋಜನಾಧಿ ಕಾರಿ ಜಯಂತಿ ತಿಳಿಸಿದರು.

ತಾಲೂಕಿನ ಹೊಸಕೆರೆ ವಲಯದ ಹಾಗಲವಾಡಿ ಕಾರ್ಯಕ್ಷೇತ್ರದಲ್ಲಿ ಉಚಿತ ಅರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರಲ್ಲಿ ಆರ್ಥಿಕ ಸ್ವಾವಲಂಬಿತನ ಸೃಷ್ಟಿಸಿ ಧಾರ್ಮಿಕ ಕ್ಷೇತ್ರ ಅಭಿವೃದ್ಧಿ, ಕೆರೆಕಟ್ಟೆಯ ಅಭಿವೃದ್ದಿ ಹಾಗೂ ಬಡವರಿಗೆ ಸೂರು, ಮಾಸಾಶನ ಹೀಗೆ ಅನೇಕ ಸಾಮಾಜಿಕ ಸೇವೆ ನಡೆಸಿ ಮನೆಮಾತಾಗಿದೆ ಎಂದರು.

ಇದನ್ನೂ ಓದಿ: Gubbi News: ಅನರ್ಹ ಮತಗಳ ತೆರವಿನ ಎಸ್ಐಆರ್ ಯಶಸ್ವಿಗೆ ಗುಬ್ಬಿ ಬಿಜೆಪಿ ಸಿದ್ದ

ಎಸ್ಎಲ್ಆರ್ ಆಸ್ಪತ್ರೆ  ವ್ಯವಸ್ಥಾಪಕ ನಿರ್ದೇಶಕ ಡಾ.ಹರೀಶ್ ಮಾತನಾಡಿ ಗ್ರಾಮೀಣ ಭಾಗದ ಜನರು ಆರೋಗ್ಯದ ಬಗ್ಗೆ ನಿರ್ಲಕ್ಷ ವಹಿಸದೆ ಸಾಂಕ್ರಾಮಿಕ ರೋಗಗಳು ಹರಡದಂತೆ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಿ. ಮಕ್ಕಳಿಗೆ ಬೇಕರಿ ತಿನಿಸುಗಳನ್ನು ದೂರವಿಡುವ ಮೂಲಕ ಆರೋಗ್ಯಕರ ಆಹಾರವನ್ನು ಕಡಿಮೆ ಸೇವಿಸಿ ಎಂದರು.

ಕಾರ್ಯಕ್ರಮದಲ್ಲಿ ಆರಕ್ಷಕ ಉಪಠಾಣಾಧಿಕಾರಿ ಪುನೀತ್, ಎಸ್ಎಲ್ಆರ್ ಆಸ್ಪತ್ರೆಯ ಡಾ.ಚಂದೇಶೇಖರ್, ಡಾ. ಭವ್ಯ, ಒಕ್ಕೂಟದ ಅಧ್ಯಕ್ಷರಾದ ವಿರೂಪಾಕ್ಷ ಮತ್ತು ವಿಜಯ್ ಕುಮಾರ್,  ಗ್ರಾಪಂ ಮಾಜಿ ಸದಸ್ಯ ಲೋಕೇಶ್ , ರೈತ ಸಂಘದ ಅಧ್ಯಕ್ಷ  ಕೃಷ್ಣ ಜೆಟ್ಟಿ,  ವಲಯದ ಮೇಲ್ವಿಚಾರಕ ಮಂಜುನಾಥ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ, ಸೇವಾಪ್ರತಿನಿಧಿ, ವಿಎಲ್ಎ ಕಾರ್ಯ ಕರ್ತರು ಇನ್ನಿತರರು ಉಪಸ್ಥಿತರಿದ್ದರು.