ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗೋಕರ್ಣ ಕ್ಷೇತ್ರದಲ್ಲಿ ಹಲವು ಸಮಸ್ಯೆಗಳ ಆಗರ

ಗೋಕರ್ಣ ಕೇವಲ ಧಾರ್ಮಿಕ ತಾಣವಾಗಿ ಉಳಿದಿಲ್ಲ. ಇಲ್ಲಿಯ ಬೀಚ್ಗಳಿಂದಾಗಿ ಸಾಕಷ್ಟು ಪ್ರವಾಸೋ ದ್ಯಮ ಬೆಳೆದಿದೆ. ಇನ್ನು ಹೆಚ್ಚಿನ ರೀತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಿದರೆ, ಗೋಕರ್ಣ ಕೂಡ ಪ್ರವಾಸಿಗರ ನೆಚ್ಚಿನ ತಾಣ ಎನಿಸಿಕೊಳ್ಳುವುದರಲ್ಲಿ ಯಾವುದೇ ಶಂಕೆಯಿಲ್ಲ. ಆದರೆ ಕೆಲವು ಪಟ್ಟಾಭದ್ರ ಹಿತಾಸಕ್ತಿಗಳು ಗೋಕರ್ಣದ ಅಭಿವೃದ್ಧಿಗೆ ಅಡ್ಡಿಯಾಗುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಗೋಕರ್ಣ ಕ್ಷೇತ್ರದಲ್ಲಿ ಹಲವು ಸಮಸ್ಯೆಗಳ ಆಗರ

-

Ashok Nayak
Ashok Nayak Jan 20, 2026 10:55 AM

ಗೋಕರ್ಣ ಕೇವಲ ಧಾರ್ಮಿಕ ತಾಣವಲ್ಲ, ಪ್ರವಾಸಿ ತಾಣವೂ ಹೌದು

ನಾಗರಾಜ ನಾಯ್ಕ ಗೋಕರ್ಣ

ದಕ್ಷಿಣದ ಕಾಶಿ ಎಂದೇ ಖ್ಯಾತಿಯಾಗಿರುವ ಶ್ರೀ ಕ್ಷೇತ್ರ ಗೋಕರ್ಣ ಭಕ್ತರಿಗೆ ಅಚ್ಚುಮೆಚ್ಚಿನ ತಾಣ. ಆದರೆ ಇಲ್ಲಿಯ ವಾತಾವರಣ, ಒಳಚರಂಡಿ ವ್ಯವಸ್ಥೆ, ಪ್ಲಾಸ್ಟಿಕ್ ತ್ಯಾಜ್ಯಗಳು, ಪಾರ್ಕಿಂಗ್ ಸಮಸ್ಯೆ ಸೇರಿದಂತೆ ಹತ್ತಾರು ಸಮಸ್ಯೆಗಳು ಮೈಚಾಚಿ ಮಲಗಿದೆ. ಉತ್ತರ ಕನ್ನಡ, ಉಡುಪಿ, ಮಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಬೆಳೆಸಲು ಸರಕಾರ ಮುಂದಾಗಿದೆ. ಆದರೆ ಗೋಕರ್ಣ ಅಭಿವೃದ್ಧಿಯ ವಿಷಯದಲ್ಲಿ ಎಲ್ಲಿಯೂ ಉಲ್ಲೇಖವಾಗಿಲ್ಲ ಎನ್ನುವುದು ಖೇದಕರ ಸಂಗತಿ.

Screenshot_2  ಋ

ಕರಾವಳಿ ಜಿಲ್ಲೆ ಸೇರಿದಂತೆ ಒಟ್ಟು 6 ಜಿಲ್ಲೆಗಳ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಜ.10 ರಂದು ಮಂಗಳೂರಿನಲ್ಲಿ ಸಭೆ ನಡೆಸಲಾಗಿತ್ತು. ಅದರಲ್ಲಿ ಉತ್ತರ ಕನ್ನಡದ 7 ದ್ವೀಪಗಳಲ್ಲಿ 225.5 ಕೋಟಿ ಗೂ ವೆಚ್ಚದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ವಿವಿಧ ಕಂಪನಿಗಳು ಮುಂದಾಗಿವೆ. ಆದರೆ ಗೋಕರ್ಣ ಮಾತ್ರ ಪ್ರವಾಸಿ ತಾಣವೇ ಅಲ್ಲ ಎಂಬಂತೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಇದನ್ನೂ ಓದಿ: Prof R G Hegde Column: ನದಿ ನೀರು ತಿರುವಿನ ಯೋಜನೆಗಳು ಸಲ್ಲ

ಗೋಕರ್ಣ ಕೇವಲ ಧಾರ್ಮಿಕ ತಾಣವಾಗಿ ಉಳಿದಿಲ್ಲ. ಇಲ್ಲಿಯ ಬೀಚ್ಗಳಿಂದಾಗಿ ಸಾಕಷ್ಟು ಪ್ರವಾ ಸೋದ್ಯಮ ಬೆಳೆದಿದೆ. ಇನ್ನು ಹೆಚ್ಚಿನ ರೀತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಿದರೆ, ಗೋಕರ್ಣ ಕೂಡ ಪ್ರವಾಸಿಗರ ನೆಚ್ಚಿನ ತಾಣ ಎನಿಸಿಕೊಳ್ಳುವುದರಲ್ಲಿ ಯಾವುದೇ ಶಂಕೆಯಿಲ್ಲ. ಆದರೆ ಕೆಲವು ಪಟ್ಟಾಭದ್ರ ಹಿತಾಸಕ್ತಿಗಳು ಗೋಕರ್ಣದ ಅಭಿವೃದ್ಧಿಗೆ ಅಡ್ಡಿಯಾಗುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಮಹಾಬಲನ ಆತ್ಮಲಿಂಗವಿರುವ ಶ್ರೀಕ್ಷೇತ್ರ ಗೋಕರ್ಣಕ್ಕೆ ಪ್ರತಿದಿನ ಸಾವಿರಾರು ಭಕ್ತರು ವಿವಿಧ ಭಾಗ ಗಳಿಂದ ಹರಿದುಬರುತ್ತಾರೆ. ಇಲ್ಲಿಯ ಕೋಟಿತೀರ್ಥ,ಮಹಾಗಣಪತಿ, ರಾಮತೀರ್ಥ, ಶ್ರೀ ಮಹಾ ಬಲೇಶ್ವರ ಮಂದಿರ, ಮುಖ್ಯ ಕಡಲತೀರ ಇದು ಭಕ್ತರ ಆಕರ್ಷಣೀಯ ತಾಣಗಳಾದರೆ, ಇನ್ನು ಉಳಿದಂತೆ ಹಲವು ಬೀಚ್ಗಳು ಪ್ರವಾಸಿ ತಾಣಗಳಾಗಿ ರೆಸಾರ್ಟ್, ಹೋಮ್‌ಸ್ಟೇ ಹೊಟೇಲ್ಗಳು ತಲೆ ಎತ್ತಿವೆ.

Screenshot_1 ಋ

ಇನ್ನು ಶ್ರೀ ಮಹಾಬಲೇಶ್ವರ ದೇವಸ್ಥಾನದ ಸಮೀಪದಲ್ಲಿಯೇ ಒಳಚರಂಡಿ ವ್ಯವಸ್ಥೆಯಿದ್ದು, ಪ್ಲಾಸ್ಟಿಕ್ ತ್ಯಾಜ್ಯದಿಂದಾಗಿ ಗಬ್ಬು ನಾರುತ್ತಿದೆ. ಹಾಗೇ ಸಾಕಷ್ಟು ಒತ್ತುವರಿ ಕೂಡ ಆಗಿದ್ದರಿಂದಾಗಿ ಇದು ಗೋಕರ್ಣಕ್ಕೆ ಕಪ್ಪುಚುಕ್ಕೆಯಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಈಗಾಗಲೇ ಸಾಕಷ್ಟು ಸಮಸ್ಯೆಗಳು ಮುಂದೆ ಬಂದಿದ್ದು, ಗೋಕರ್ಣವೂ ಕೂಡ ಅದರೊಳಗೆ ಸೇರಿಸಿದರೆ ಅಭಿವೃದ್ಧಿಯತ್ತ ಮುಖ ತೆರೆದುಕೊಳ್ಳಬಹುದಿತ್ತು. ಆದರೆ ಗೋಕರ್ಣವನ್ನು ನಿರ್ಲಕ್ಷಿಸಲಾಗಿದೆ.

ಮುಖ್ಯವಾಗಿ ಇಲ್ಲಿ ಗೋಕರ್ಣ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಬೇಕಾಗಿದೆ. ಆ ಮೂಲಕ ವಾದರೂ ಇಲ್ಲಿಯ ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಗಬಹುದೇನೋ. ಈ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕಾಗಿದೆ.

ಕ್ಷೇತ್ರದಲ್ಲಿ ಹಲವು ಸಮಸ್ಯೆಗಳು

ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಈಗಾಗಲೇ ಸಾಕಷ್ಟು ಸಮಸ್ಯೆಗಳು ಮುಂದೆ ಬಂದಿದ್ದು, ಗೋಕರ್ಣವೂ ಕೂಡ ಅದರೊಳಗೆ ಸೇರಿಸಿದರೆ ಅಭಿವೃದ್ಧಿಯತ್ತ ಮುಖ ತೆರೆದುಕೊಳ್ಳಬಹುದಿತ್ತು. ಆದರೆ ಗೋಕರ್ಣವನ್ನು ನಿರ್ಲಕ್ಷಿಸಲಾಗಿದೆ.