ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Prestigious National Recognition: ನಿಸರ್ಗಮನೆ ವೇದ ವೆಲ್‌ನೆಸ್ ಸೆಂಟರ್ ಗೆ ರಾಷ್ಟ್ರೀಯ ಮಾನ್ಯತೆಯ ಗರಿ

ಆಯುರ್ವೇದ, ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಚಿಕಿತ್ಸೆಗಳನ್ನು ಒಂದೇ ಸೂರಿನಡಿ ಒದಗಿಸುವ ಇಲ್ಲಿನ ಹೊರ ವಲಯದ ನಿಸರ್ಗಮನೆ ವೇದ ವೆಲ್‌ನೆಸ್ ಸೆಂಟರ್‌ಗೆ ನವದೆಹಲಿಯ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವಾ ಸಂಸ್ಥೆಗಳ ರಾಷ್ಟ್ರೀಯ ಮಾನ್ಯತಾ ಮಂಡಳಿಯ (ಎನ್‌ ಎ ಬಿ ಎಚ್‌) ಪ್ರತಿಷ್ಠಿತ ಪ್ರಮಾಣಪತ್ರ ಲಭಿಸಿದೆ.

ನಿಸರ್ಗಮನೆ ವೇದ ವೆಲ್‌ನೆಸ್ ಸೆಂಟರ್ ಗೆ ರಾಷ್ಟ್ರೀಯ ಮಾನ್ಯತೆಯ ಗರಿ

-

Profile
Ashok Nayak Oct 29, 2026 10:15 AM

ಶಿರಸಿ: ಆಯುರ್ವೇದ, ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಚಿಕಿತ್ಸೆಗಳನ್ನು ಒಂದೇ ಸೂರಿನಡಿ ಒದಗಿಸುವ ಇಲ್ಲಿನ ಹೊರ ವಲಯದ ನಿಸರ್ಗಮನೆ ವೇದ ವೆಲ್‌ನೆಸ್ ಸೆಂಟರ್‌ಗೆ ನವದೆಹಲಿಯ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವಾ ಸಂಸ್ಥೆಗಳ ರಾಷ್ಟ್ರೀಯ ಮಾನ್ಯತಾ ಮಂಡಳಿಯ (ಎನ್‌ ಎ ಬಿ ಎಚ್‌) ಪ್ರತಿಷ್ಠಿತ ಪ್ರಮಾಣಪತ್ರ ಲಭಿಸಿದೆ. ಈ ಮೂಲಕ ಎನ್‌ಎಬಿಎಚ್‌ ನ ಆಯುಷ್ ಆಸ್ಪತ್ರೆ ಪ್ರಮಾಣೀಕರಣ ಪಡೆದ ಉತ್ತರ ಕನ್ನಡ ಜಿಲ್ಲೆಯ ಏಕೈಕ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಕೇಂದ್ರ ಭಾಜನವಾಗಿದೆ.

ಪ್ರಕೃತಿಯ ಮಡಿಲಲ್ಲಿ ಶಿರಸಿಗರೇ ಕಟ್ಟಿಬೆಳೆಸಿದ ನಿಸರ್ಗಮನೆ ವೇದ ವೆಲ್‌ನೆಸ್ ಸೆಂಟರ್‌ಗೆ ದೊರೆತಿರುವ ಈ ಮಾನ್ಯತೆಯು ಗುಣಮಟ್ಟದ ಆರೋಗ್ಯ ಸೇವೆ, ರೋಗಿಗಳ ಸುರಕ್ಷತೆ ಹಾಗೂ ವ್ಯವಸ್ಥಿತ ಚಿಕಿತ್ಸಾ ಪದ್ಧತಿಗೆ ಸಂದ ಗೌರವ ಇದಾಗಿದೆ.

ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ. ವೆಂಕಟರಮಣ ಹೆಗಡೆ ಈ ಕುರಿತು ಸಂತಸ ವ್ಯಕ್ತಪಡಿಸಿದ್ದು, ಆಸ್ಪತ್ರೆಗಳು ಮತ್ತು ಆರೋಗ್ಯ ಸೇವಾ ಸಂಸ್ಥೆಗಳಲ್ಲಿ ಗುಣಮಟ್ಟ ಹಾಗೂ ಸುರಕ್ಷತಾ ಮಾನದಂಡಗಳನ್ನು ಉತ್ತೇಜಿಸುವ ರಾಷ್ಟ್ರೀಯ ಮಟ್ಟದ ಮಾನ್ಯತಾ ಸಂಸ್ಥೆಯಿಂದ ಪ್ರಮಾಣಪತ್ರ ದೊರೆತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Sirsi News: ಆಧ್ಯಾತ್ಮ-ಆರೋಗ್ಯ ಹೂವು-ಪರಿಮಳದ ಸಂಬಂಧ: ವಿಭೂತಿಪುರ ಮಠದ ಶ್ರೀ

ಎನ್‌ಎಬಿಎಚ್‌ ನ ಆಯುಷ್ ಆಸ್ಪತ್ರೆ ಪ್ರಮಾಣೀಕರಣವು ರೋಗಿ ಕೇಂದ್ರಿತ ಸೇವೆ, ಸುರಕ್ಷತೆ, ನೈರ್ಮಲ್ಯ, ಚಿಕಿತ್ಸಾ ಪ್ರಕ್ರಿಯೆಗಳ ವ್ಯವಸ್ಥಿತ ನಿರ್ವಹಣೆ ಹಾಗೂ ಆರೋಗ್ಯ ಸೇವೆಯ ಗುಣಮಟ್ಟ ವನ್ನು ನಿರಂತರವಾಗಿ ಸುಧಾರಿಸಲು ಅಗತ್ಯವಾದ ಮಾನದಂಡಗಳನ್ನು ಅಳವಡಿಸಿಕೊಳ್ಳಲು ನೆರವಾಗುತ್ತದೆ. ಈ ಮಾನ್ಯತೆಯು ರೋಗಿಗಳ ಹಿತಾಸಕ್ತಿ ಮತ್ತು ಚಿಕಿತ್ಸೆಯ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲು ಪ್ರೇರಣೆಯಾಗಲಿದೆ ಎಂದು ವಿವರಿಸಿದ್ದಾರೆ.

ಎನ್‌ ಎ ಬಿ ಎಚ್ ಮಾನ್ಯತೆಯು ಆಸ್ಪತ್ರೆಯ ಸೇವಾ ಗುಣಮಟ್ಟವನ್ನು ಗುರುತಿಸುವುದರ ಜೊತೆಗೆ ಆರೋಗ್ಯ ವಿಮಾ ವ್ಯವಸ್ಥೆಯಲ್ಲಿಯೂ ಮಹತ್ವ ಹೊಂದಿದೆ. ವಿಮಾ ಕಂಪನಿಗಳೊಂದಿಗೆ ಆಸ್ಪತ್ರೆಯ ಒಪ್ಪಂದ ಹಾಗೂ ಸಂಬಂಧಿತ ಪಾಲಿಸಿಯ ನಿಯಮಗಳಿಗೆ ಅನುಗುಣವಾಗಿ, ಆರೋಗ್ಯ ವಿಮೆಯಡಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಇದು ಅನುಕೂಲವಾಗಲಿದೆ.

ಚಿಕಿತ್ಸೆಯ ಜೊತೆಗೆ ರೋಗಿಗಳ ಸುರಕ್ಷತೆ, ಸ್ವಚ್ಛತೆ, ಸೂಕ್ತ ಮಾಹಿತಿ ಒದಗಿಸುವಿಕೆ, ವೈದ್ಯಕೀಯ ದಾಖಲೆಗಳ ಸಮರ್ಪಕ ನಿರ್ವಹಣೆ ಹಾಗೂ ಮಾನವೀಯ ಕಾಳಜಿಗೂ ಆದ್ಯತೆ ನೀಡುವುದು ಎನ್‌ಎಬಿಎಚ್ ಮಾನದಂಡಗಳ ಪ್ರಮುಖ ಆಶಯವಾಗಿದೆ. ಈ ಎಲ್ಲ ಅಂಶಗಳನ್ನು ಅಳವಡಿಸಿ ಕೊಂಡು ಜನರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ನಿಸರ್ಗಮನೆ ವೇದ ವೆಲ್‌ನೆಸ್ ಸೆಂಟರ್‌ನ ಪ್ರಯತ್ನಕ್ಕೆ ಈ ಮಾನ್ಯತೆ ಮತ್ತಷ್ಟು ಬಲ ನೀಡಿದೆ.

ಈ ಸಾಧನೆಗೆ ಸಹಕರಿಸಿದ ವೈದ್ಯರು, ಸಿಬ್ಬಂದಿ ಹಾಗೂ ಹಿತೈಷಿಗಳಿಗೆ ಆಸ್ಪತ್ರೆಯ ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸಿದೆ. ಈಗಾಗಲೇ ರಾಜ್ಯ ಸರ್ಕಾರಿ ನೌಕರರ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳ ಮತ್ತು ಬೆಸ್ಕಾಂ ಸಿಬ್ಬಂದಿಗಳ ಚಿಕಿತ್ಸಾ ವೆಚ್ಚ ಮರುಪಾವತಿ ಸೌಲಭ್ಯ ಹೊಂದಿದೆ.‌ ಇನ್ನು ಈ ಸಂಸ್ಥೆಯು ಮುಂದಿನ ದಿನಗಳಲ್ಲಿಯೂ ರೋಗಿಗಳ ಹಿತ, ಸುರಕ್ಷತೆ ಮತ್ತು ಗುಣಮಟ್ಟದ ಆರೋಗ್ಯ ಸೇವೆಯನ್ನು ಕೇಂದ್ರವಾಗಿಟ್ಟುಕೊಂಡು ಕಾರ್ಯನಿರ್ವಹಿಸುವ ಸಂಕಲ್ಪ ವನ್ನು ವ್ಯಕ್ತಪಡಿಸಿದೆ ಎಂದು ಪ್ರಕಟಣೆ ತಿಳಿಸಿದೆ.

image

ಎನ್ಎಬಿಎಚ್ ಪ್ರಮಾಣ ಪತ್ರದಲ್ಲಿ ನಮ್ಮ ಸಂಸ್ಥೆಯ ಆಯುರ್ವೇದ, ಪಂಚಕರ್ಮ, ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಈ ನಾಲ್ಕೂ ಸೇವೆಗಳಿಗೆ ಮಾನ್ಯತೆ ಲಭಿಸಿದ್ದು ಕರ್ನಾಟಕದಲ್ಲೇ ಪ್ರಥಮ ಎಂಬುದು ಸಂತಸದ ವಿಷಯ.

-ಡಾ. ವೆಂಕಟರಮಣ ಹೆಗಡೆ, ಮುಖ್ಯ ವೈದ್ಯಕೀಯ ಅಧೀಕ್ಷಕರು, ನಿಸರ್ಗಮನೆ, ಶಿರಸಿ.