ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Puneeth Rajkumar : ಪುನೀತ್ ರಾಜ್​​ಕುಮಾರ್ ಪುಣ್ಯಸ್ಮರಣೆ; ಮರೆಯಲಾಗದ ಅಪ್ಪು ನೆನಪು

Puneeth Rajkumar : ನಟ, 'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್ (Puneeth Rajkumar) ಅಗಲಿ ಇಂದಿಗೆ ಐದು ವರ್ಷಗಳು ಕಳೆದಿವೆ. ಅಕ್ಟೋಬರ್ 29ರ ಈ ದಿನದಂದು ರಾಜ್ಯಾದ್ಯಂತ ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸ್ಮಾರಕಕ್ಕೆ ನಮನ ಸಲ್ಲಿಸುತ್ತಿದ್ದಾರೆ (5th Death Anniversary ). ರಕ್ತದಾನ, ಅನ್ನಸಂತರ್ಪಣೆ ಮತ್ತು ಶಾಲಾ ಸಾಮಗ್ರಿಗಳ ವಿತರಣೆಯಂತಹ ಹಲವು ಸಮಾಜಮುಖಿ ಕಾರ್ಯಗಳ ಮೂಲಕ ಅಪ್ಪುವನ್ನು ಸ್ಮರಿಸುತ್ತಿದ್ದಾರೆ.

ಪುನೀತ್ ರಾಜ್​​ಕುಮಾರ್ ಪುಣ್ಯಸ್ಮರಣೆ; ಮರೆಯಲಾಗದ ಅಪ್ಪು ನೆನಪು

ಪುನೀತ್‌ ರಾಜ್‌ಕುಮಾರ್‌ -

Yashaswi Devadiga
Yashaswi Devadiga Oct 29, 2026 10:25 AM

ನಟ, 'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್ (Puneeth Rajkumar) ಅಗಲಿ ಇಂದಿಗೆ ಐದು ವರ್ಷಗಳು ಕಳೆದಿವೆ. ಅಕ್ಟೋಬರ್ 29ರ ಈ ದಿನದಂದು ರಾಜ್ಯಾದ್ಯಂತ ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸ್ಮಾರಕಕ್ಕೆ ನಮನ ಸಲ್ಲಿಸುತ್ತಿದ್ದಾರೆ (5th Death Anniversary ). ರಕ್ತದಾನ, ಅನ್ನಸಂತರ್ಪಣೆ ಮತ್ತು ಶಾಲಾ ಸಾಮಗ್ರಿಗಳ ವಿತರಣೆಯಂತಹ ಹಲವು ಸಮಾಜಮುಖಿ ಕಾರ್ಯಗಳ ಮೂಲಕ ಅಪ್ಪುವನ್ನು ಸ್ಮರಿಸುತ್ತಿದ್ದಾರೆ.

ಕೇವಲ ನಟನಾಗಿ ಮಾತ್ರವಲ್ಲದೆ, ತಮ್ಮ ಕೊಡುಗೈ ಗುಣ ಮತ್ತು ಸಾಮಾಜಿಕ ಕಳಕಳಿಯಿಂದ ಪುನೀತ್ ರಾಜ್‌ಕುಮಾರ್ ಮೆಚ್ಚುಗೆಗೆ ಪಾತ್ರರಾಗಿದ್ದರು. ರಾಜ್ಯದ ಪ್ರಮುಖ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್ ಥಿಯೇಟರ್‌ಗಳಲ್ಲಿ ಅಪ್ಪು ಅಭಿನಯದ ಸಿನಿಮಾಗಳ ವಿಶೇಷ ಪ್ರದರ್ಶನ ಇರಲಿದೆ. ಕನ್ನಡದ ಜನಪ್ರಿಯ ಟಿವಿ ಚಾನೆಲ್‌ಗಳಲ್ಲಿ ಪುನೀತ್ ಅವರ ಜೀವನ ಆಧಾರಿತ ವಿಶೇಷ ಕಾರ್ಯಕ್ರಮಗಳು, ಹಳೆಯ ಸಂದರ್ಶನಗಳು ಹಾಗೂ ಮ್ಯೂಸಿಕ್ ಕಾನ್ಸರ್ಟ್‌ಗಳು ಪ್ರಸಾರವಾಗಲಿವೆ.

ಇದನ್ನೂ ಓದಿ: Bigg Boss Kannada 13: Shetty Donನ ಇಂಪ್ರೆಸ್ ಮಾಡಲು ಗಗನ್‌-ಯಶಸ್‌ ಹರಸಾಹಸ



ಬಾಲನಟನಾಗಿ ಚಿತ್ರರಂಗಕ್ಕೆ ಪ್ರವೇಶಿಸಿ, ನಾಯಕನಾಗಿ ಅಪಾರ ಯಶಸ್ಸು ಗಳಿಸಿದ್ದ ಪುನೀತ್ ರಾಜ್‌ಕುಮಾರ್ ಕನ್ನಡಿಗರ ಪಾಲಿಗೆ ಎಂದೆಂದಿಗೂ ವಿಶೇಷ ವ್ಯಕ್ತಿ. ಅವರ ಸಿನಿಮಾಗಳು, ನಗು, ಸರಳ ವ್ಯಕ್ತಿತ್ವ ಮತ್ತು ಮಾನವೀಯ ಮೌಲ್ಯಗಳು ಇಂದಿಗೂ ಜನರಿಗೆ ಸ್ಫೂರ್ತಿಯಾಗಿವೆ. ಅಪ್ಪು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಅವರು ಸದಾ ಜೀವಂತವಾಗಿದ್ದಾರೆ.

ಸಿನಿಮಾ ವಿಚಾರಕ್ಕೆ ಬಂದರೆ 1985ರಲ್ಲಿ ಬಿಡುಗಡೆಯಾದ 'ಬೆಟ್ಟದ ಹೂವು' ಚಿತ್ರದ ರಾಮು ಪಾತ್ರಕ್ಕಾಗಿ ಅತ್ಯುತ್ತಮ ಬಾಲ ಕಲಾವಿದ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಬಾಲ್ಯದಲ್ಲೇ ಸುಮಾರು 14ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: Bigg Boss Kannada 13: ಶೆಟ್ಟಿ Don ಸ್ವಯಂವರ : ನಗುವಿನ ಅಲೆ ಎಬ್ಬಿಸಿದ ಟಾಸ್ಕ್!

2002ರಲ್ಲಿ ಬಿಡುಗಡೆಯಾದ 'ಅಪ್ಪು' ಚಿತ್ರದ ಮೂಲಕ ನಾಯಕನಾಗಿ ದೊಡ್ಡ ಮಟ್ಟದ ಯಶಸ್ಸು ಗಳಿಸಿ ಹೊಸ ಅಲೆಯನ್ನು ಸೃಷ್ಟಿಸಿದರು. ಅರಸು', 'ಮಿಲನ', 'ರಾಜಕುಮರ', 'ಜಾಕಿ', 'ಅಂಜನಿಪುತ್ರ', 'ಯುವರತ್ನ' ಮತ್ತು 'ಜೇಮ್ಸ್' ಮುಂತಾದ ಜನಪ್ರಿಯ ಹಾಗೂ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ನಟಿಸಿದ್ದಾರೆ.