ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial: ಗೌತಮ್ ಎದುರು ಪ್ರತಿರೂಪಗಳು; ಶಕುಂತಲಾ ಮುಖವಾಡ ಕೂಡ ಬಯಲು!

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (Amruthadhaare serial) ರೋಚಕ ಟ್ವಿಸ್ಟ್‌ ಪಡುದಕೊಂಡಿದೆ. ಅಷ್ಟೇ ಅಲ್ಲ ಗೌತಮ್‌ ಎದುರು ಎರಡು ಸತ್ಯಗಳು ರಿವೀಲ್‌ ಆಗಿವೆ. ಗೌತಮ್‌ಗೆ ತನ್ನ ಮನೆಯಲ್ಲಿರೋದು ಭೂಮಿಕಾ ಅಲ್ಲ, ದೀಪಿಕಾ (Deepika) ಅನ್ನೋ ಸತ್ಯ ಬಹಿರಂಗಗೊಂಡಿದೆ. ಹಾಗೆಯೇ ತಾಯಿ ಶಕುಂತಲಾ (Shhankuntala) ಬದಲಾಗಿಲ್ಲ ಎಂದ ವಿಷಯವೂ ಗೌತಮ್ ಮುಂದೆ ರಿವೀಲ್ ಆಗಿದೆ. ಒಟ್ಟಾರೆಯಾಗಿ ಧಾರಾವಾಹಿ ಅಂತ್ಯ ಹಾಡೋದು ಫಿಕ್ಸ್‌ ಆದಂತಿದೆ.

ಗೌತಮ್ ಎದುರು ಪ್ರತಿರೂಪಗಳು; ಶಕುಂತಲಾ ಮುಖವಾಡ ಕೂಡ ಬಯಲು!

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Oct 29, 2026 11:18 AM

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (Amruthadhaare serial) ರೋಚಕ ಟ್ವಿಸ್ಟ್‌ ಪಡುದಕೊಂಡಿದೆ. ಅಷ್ಟೇ ಅಲ್ಲ ಗೌತಮ್‌ ಎದುರು ಎರಡು ಸತ್ಯಗಳು ರಿವೀಲ್‌ ಆಗಿವೆ. ಗೌತಮ್‌ಗೆ ತನ್ನ ಮನೆಯಲ್ಲಿರೋದು ಭೂಮಿಕಾ ಅಲ್ಲ, ದೀಪಿಕಾ (Deepika) ಅನ್ನೋ ಸತ್ಯ ಬಹಿರಂಗಗೊಂಡಿದೆ. ಹಾಗೆಯೇ ತಾಯಿ ಶಕುಂತಲಾ (Shhankuntala) ಬದಲಾಗಿಲ್ಲ ಎಂದ ವಿಷಯವೂ ಗೌತಮ್ ಮುಂದೆ ರಿವೀಲ್ ಆಗಿದೆ. ಒಟ್ಟಾರೆಯಾಗಿ ಧಾರಾವಾಹಿ ಅಂತ್ಯ ಹಾಡೋದು ಫಿಕ್ಸ್‌ ಆದಂತಿದೆ.

ಪತ್ನಿಯಲ್ಲಾದ ಬದಲಾವಣೆಗೆ ಕಾರಣ ಏನು ಎಂದು ತಿಳಿದುಕೊಳ್ಳಲು ಸೋದರ ಪಾರ್ಥ ಜೊತೆ ಕೈ ಜೋಡಿಸಿ ಅಂತೂ ದೀಪಿಕಾ ವಿಚಾರ ತಿಳಿದುಕೊಂಡಿದ್ದಾನೆ ಗೌತಮ್‌. ಪಾರ್ಥ ಹೇಳಿದಂತೆ ಆಸ್ಪತ್ರೆಗೆ ಬಂದ ಗೌತಮ್‌ಗೆ ಭೂಮಿಕಾ ಜೊತೆಯಲ್ಲಿ ದೀಪಿಕಾ ಇರೋದನ್ನು ನೋಡಿದ್ದಾನೆ. ಭೂಮಿಕಾ ಕೂಡ ಗೌತಮ್‌ ಕಂಡು ಸಂತೋಷಗೊಂಡಿದ್ದಾಳೆ.

ಅಷ್ಟೇ ಅಲ್ಲ ದೀಪಿಕಾಳನ್ನ ಕರೆದುಕೊಂಡು ಬಂದಿದ್ದು, ಜೈದೇವ್‌ ಹಾಗೂ ಶಾಕುಂತಲಾ ಎಂದು ಭೂಮಿ ಹೇಳಿದ್ದಾಳೆ. ಶಕುಂತಲಾ ಅಮ್ಮ ಇನ್ನೂ ಬದಲಾಗಿಲ್ವಾ? ಅಂತ ಗೌತಮ್‌ ಆಶ್ಚರ್ಯ ಪಟ್ಟಿದ್ದಾನೆ. ಅತ್ತ ಮಂದಾಕಿನಿ ತನಗೆ ಅವಳಿ ಮಕ್ಕಳು ಜನಿಸಿದ್ದ ವಿಷಯವನ್ನು ಸೊಸೆ ಮಹಿಮಾ ಮುಂದೆ ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ: Bigg Boss Kannada 13: Shetty Donನ ಇಂಪ್ರೆಸ್ ಮಾಡಲು ಗಗನ್‌-ಯಶಸ್‌ ಹರಸಾಹಸ

ಗೌತಮ್ ಮುಂದೆ ಜೈದೇವ್ ಜೊತೆಯಲ್ಲಿ ತಾಯಿ ಶಕುಂತಲಾಳ ಮುಖವಾಡ ಬಯಲಾಗಿದೆ. ಅಕ್ಕ-ತಂಗಿಯನ್ನು ಒಂದಾಗಿಸಿ, ತಾಯಿ-ಮಗನ ಪಾತ್ರವನ್ನು ಹೇಗೆ ಅಂತ್ಯ ಮಾಡಲಾಗುತ್ತೆ ಎನ್ನೋದು ವೀಕ್ಷಕರಲ್ಲಿ ಇರೋ ಕುತೂಹಲ.



ಇದನ್ನೂ ಓದಿ: Bigg Boss Kannada 13: ಕುಮಾರಿ ಸ್ನಾನಾನೇ ಮಾಡಲ್ಲ! ಲಕ್ಷ್ಮೀ ಗೌಡ ಶಾಕಿಂಗ್​ ಸ್ಟೇಟ್​ಮೆಂಟ್​

ಕೊನೆಗೂ ಭೂಮಿಕಾ ವೇಷದಲ್ಲಿ ಇರುವುದು ದೀಪಿಕಾ ಎನ್ನುವುದನ್ನು ಪತ್ತೆ ಮಾಡುವಲ್ಲಿ ಗೌತಮ್ ದಿವಾನ್ ಯಶಸ್ವಿಯಾಗಿದ್ದಾನೆ.ಕೊನೆಗೂ ಕೇಡಿಗಳ ತಂತ್ರಕ್ಕೆ ಬ್ರೇಕ್ ಬಿದ್ದಂತೆ ಆಗಿದೆ. ಕೇಡಿ ಜೈದೇವ್ ಮುಂದೇನು ಮಾಡಲಿದ್ದಾನೆ ಎನ್ನುವ ಕುತೂಹಲ ಇದೀಗ ಹೆಚ್ಚಾಗಿದೆ

ಅಮೃತಧಾರೆʼ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.