ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಏ.11ರಂದು ಸಿದ್ದಸಿರಿ ಸಹಕಾರಿ ಬ್ಯಾಂಕ್ ನಾದ ಹಾಗೂ ತಾಂಬಾ ನೂತನ ಕಟ್ಟಡ ಉದ್ಘಾಟನಾ ಸಮಾರಂಭ: ಜಗದೀಶ ಕ್ಷತ್ರಿ

ರಾಜ್ಯಾದ್ಯಂತ 212 ಶಾಖೆಗಳಿವೆ. 20 ವರ್ಷದಲ್ಲಿ ಸಿದ್ದಸಿರಿ ಸಂಸ್ಥೆಯು ಹಲವಾರು ಅಂಗಸಂಸ್ಥೆಗಳನ್ನು ಹುಟ್ಟು ಹಾಕಿದೆ. ಸಿದ್ದಸಿರಿ ಕೋಲ್ಡ್ ಸ್ಟೋರೇಜ್ , ಸಿದ್ದಸಿರಿ ಪವರ್ ಏತನಾಲ್ ಘಟಕ ಚಿಂಚೋಳಿ, ಸಿದ್ದಸಿರಿ ಇಂಧನ ಕೇಂದ್ರ 3 ಕಡೆ, ಸಿದ್ದಸಿರಿ ಕೃಷಿ ಕೇಂದ್ರಗಳು ಒಟ್ಟು 5, ಸಿದ್ದಸಿರಿ ಸಂಸ್ಥೆಯ ಹಾಗೂ ಶ್ರೀಸಿದ್ದೇಶ್ವರ ಸಂಸ್ಥೆಯ ನಿರ್ದೇಶಕರು ಕೂಡಿಕೊಂಡು ಶ್ರೀಸಿದ್ದೇಶ್ವರ ಚಾರಿಟೇಬಲ್ ವತಿಯಿಂದ ವಿಜಯ ಪೂರದಲ್ಲಿ ಪರಮ ಪೂಜ್ಯ ಶ್ರೀಸಿದ್ದೇಶ್ವರ ಸ್ವಾಮಿಜಿಯವರ ಹೆಸರಿನಲ್ಲಿ 108 ಹಾಸಿಗೆಯ ಆಧುನಿಕ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ.

ಏ.11ರಂದು ತಾಂಬಾ ನೂತನ ಕಟ್ಟಡ ಉದ್ಘಾಟನಾ ಸಮಾರಂಭ

ಸಿದ್ದಸಿರಿ ಬ್ಯಾಂಕಿನ ನಿರ್ದೇಶಕ ಜಗದೀಶ ಕ್ಷತ್ರಿಯ -

Profile
Ashok Nayak Apr 7, 2026 9:34 PM

ಇಂಡಿ: ಏ.11, 2026ರಂದು ಶನಿವಾರ ಇಂಡಿ ತಾಲೂಕಿನ ನಾದ ಗ್ರಾಮದ ಹಾಗೂ ಸಿಂದಗಿ ತಾಲೂಕಾ ತಾಂಬಾ ಗ್ರಾಮದಲ್ಲಿ ಸಿದ್ದಸಿರಿ ಬಹುರಾಜ್ಯ ಬಹು ಉದ್ದೇಶ ಸಹಕಾರಿ ಸಂಸ್ಥೆಯ ನೂತನ ಕಟ್ಟಡ ಉದ್ಘಾಟನೆಗೊಳ್ಳಲ್ಲಿದೆ ಎಂದು ಸಿದ್ದಸಿರಿ ಬ್ಯಾಂಕಿನ ನಿರ್ದೇಶಕ ಜಗದೀಶ ಕ್ಷತ್ರಿ ತಿಳಿಸಿದ್ದಾರೆ.

ಇಂಡಿ ತಾಲೂಕಿನಲ್ಲಿ ಇವಾಗಲೇ 8 ಸ್ವಂತ ಕಟ್ಟಡಗಳು ಹೊಂದಿವೆ ತಾಲೂಕಿನಲ್ಲಿ 15 ಶಾಖೆಗಳು ಹೊಂದಿವೆ, ಒಟ್ಟು 484 ಕೋಟಿ 88 ಲಕ್ಷ ಠೇವಣಿ ಹೊಂದಿದೆ. ಹಾಗೂ ಸಿದ್ದ ಸಿರಿ ಎಲ್ಲಾ ಶಾಖೆಗಳ ಒಳಗೊಂಡು 5 ಸಾವಿರದಾ 2 ನೂರಾ 20 ಕೋಟಿ 25 ಲಕ್ಷ ಇರುತ್ತದೆ.

ಇದನ್ನೂ ಓದಿ: Indi News: ಸತ್ಸಂಗದ ಸಂಸ್ಕಾರ ಮಠಗಳ ಕೊಡುಗೆ: ಮುರಗೇಂದ್ರ ಶ್ರೀಗಳು

ರಾಜ್ಯಾದ್ಯಂತ 212 ಶಾಖೆಗಳಿವೆ. 20 ವರ್ಷದಲ್ಲಿ ಸಿದ್ದಸಿರಿ ಸಂಸ್ಥೆಯು ಹಲವಾರು ಅಂಗಸಂಸ್ಥೆ ಗಳನ್ನು ಹುಟ್ಟು ಹಾಕಿದೆ. ಸಿದ್ದಸಿರಿ ಕೋಲ್ಡ್ ಸ್ಟೋರೇಜ್ , ಸಿದ್ದಸಿರಿ ಪವರ್ ಏತನಾಲ್ ಘಟಕ ಚಿಂಚೋಳಿ, ಸಿದ್ದಸಿರಿ ಇಂಧನ ಕೇಂದ್ರ 3 ಕಡೆ , ಸಿದ್ದಸಿರಿ ಕೃಷಿ ಕೇಂದ್ರಗಳು ಒಟ್ಟು 5, ಸಿದ್ದಸಿರಿ ಸಂಸ್ಥೆಯ ಹಾಗೂ ಶ್ರೀಸಿದ್ದೇಶ್ವರ ಸಂಸ್ಥೆಯ ನಿರ್ದೇಶಕರು ಕೂಡಿಕೊಂಡು ಶ್ರೀಸಿದ್ದೇಶ್ವರ ಚಾರಿಟೇಬಲ್ ವತಿಯಿಂದ ವಿಜಯಪೂರದಲ್ಲಿ ಪರಮ ಪೂಜ್ಯ ಶ್ರೀಸಿದ್ದೇಶ್ವರ ಸ್ವಾಮಿಜಿಯವರ ಹೆಸರಿನಲ್ಲಿ 108 ಹಾಸಿಗೆಯ ಆಧುನಿಕ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ.

20 ವರ್ಷಗಳಿಂದ ಈ ಸಂಸ್ಥೆಯು ಹೆಮ್ಮರವಾಗಿ ಬೆಳೆಯುವದಕ್ಕೆ ಮಾಜಿ ಕೆಂದ್ರ ಸಚಿವರಾದ ಮಾನ್ಯ ಶ್ರೀಬಸವನಗೌಡ ಪಾಟೀಲ ಯತ್ನಾಳ ಅವರ ನೈತೃತ್ವದಲ್ಲಿ ಬೆಳೆಸುವುದಕ್ಕಾಗಿ ಮೂಲ ಕಾರಣಕರ್ತ ರಾಗಿದ್ದಾರೆ. ಇವರ ನೈತೃತ್ವದಲ್ಲಿ ಕನಿಷ್ಠ 5 ಸಾವಿರ ಜನರಿಗೆ ಉದ್ಯೋಗ ಸೃಷ್ಠಿ ಮಾಡಿದ್ದಾರೆ ಎಂದು ಸಿದ್ದಸಿರಿ ಬ್ಯಾಂಕಿನ ನಿರ್ದೇಶಕ ಶ್ರೀಜಗದೀಶ ಕ್ಷತ್ರಿ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.