IPL 2025: ಪಂಜಾಬ್ ವಿರುದ್ಧದ ಪಂದ್ಯ ರದ್ದಾದ ನಂತರ ಕೆಕೆಆರ್ ಪ್ಲೇ-ಆಫ್ ಅವಕಾಶ ಹೇಗಿದೆ?
ಪಂಜಾಬ್ ಪರ ಆರಂಭಿಕ ಆಟಗಾರರಾದ ಪ್ರಿಯಾಂಶ್-ಪ್ರಭ್‌ಸಿಮ್ರನ್ (120) ಐಪಿಎಲ್‌ನಲ್ಲಿ ಕೆಕೆಆರ್ ವಿರುದ್ಧ ಗರಿಷ್ಠ ರನ್‌ಗಳ ಆರಂಭಿಕ ಜತೆಯಾಟದ ನೀಡಿದ ಪಂಜಾಬ್ ಜೋಡಿ ಎನಿಸಿತು. ಕೆಎಲ್ ರಾಹುಲ್-ಕ್ರಿಸ್ ಗೇಲ್ 116 ರನ್ ಸೇರಿಸಿದ್ದು ಹಿಂದಿನ ಗರಿಷ್ಠ ಎನಿಸಿತ್ತು.


ಕೋಲ್ಕತಾ: ಶನಿವಾರ ಪಂಜಾಬ್ ಕಿಂಗ್ಸ್ (PBKS) ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾದ ನಂತರ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡಕ್ಕೆ ಹಾಲಿ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) 2025 ರ ಪ್ಲೇ ಆಫ್(IPL 2025 Playoffs)ಗೆ ಅರ್ಹತೆ ಪಡೆಯುವ ಅವಕಾಶಗಳಿಗೆ ಭಾರಿ ಹೊಡೆತ ಬಿದ್ದಿದೆ. ಪಂದ್ಯ ಮಳೆಯಿಂದಾಗಿ ರದ್ದುಗೊಂಡ ಕಾರಣ ಉಭಯ ತಂಡಗಳು ತಲಾ ಒಂದು ಅಂಕ ನೀಡಲಾಯಿತು. ಕಳೆದ ಮೂರು ಪಂದ್ಯಗಳಲ್ಲಿ ಯಾವುದೇ ಗೆಲುವು ಸಾಧಿಸದ ಕೆಕೆಆರ್ ಏಳು ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ತಂಡದ ಪ್ಲೇ-ಆಫ್ ಪ್ರವೇಶದ ಲೆಕ್ಕಾಚಾರ ಹೀಗಿದೆ.
ಪ್ಲೇಆಫ್ ತಲುಪಲು ಕೆಕೆಆರ್ ತನ್ನ ಪಾಲಿನ ಉಳಿದ ಐದು ಪಂದ್ಯಗಳನ್ನು ಗೆಲ್ಲಬೇಕಾಗುತ್ತದೆ. ಐದು ಪಂದ್ಯ ಗೆದ್ದರೆ 17 ಅಂಕ ಗಳಿಸಲಿದೆ. ಆಗ ಸುಲಭವಾಗಿ ಪ್ಲೇ ಆಫ್ ಪ್ರವೇಶ ಪಡೆಯಬಹುದು. ಒಂದೊಮ್ಮೆ ಐದು ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದರೂ ಅರ್ಹತೆ ಪಡೆಯಬಹುದು. ಆದರೆ ಈ ಸನ್ನಿವೇಶದಲ್ಲಿ ತಂಡದ ರನ್ ರೇಟ್ ಮತ್ತು ಇತರ ತಂಡಗಳ ಫಲಿತಾಂಶ ಕೂಡ ಅವಲಂಬಿತವಾಗಿರುತ್ತದೆ.
Match 4⃣4⃣ between @KKRiders and @PunjabKingsIPL has been called off due to rain 🌧️
— IndianPremierLeague (@IPL) April 26, 2025
Both teams share a point each! #TATAIPL | #KKRvPBKS pic.twitter.com/mEX2eETWgh
ಈಡನ್ ಗಾರ್ಡನ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಂಜಾಬ್ ಪ್ರಭ್‌ಸಿಮ್ರನ್ ಸಿಂಗ್ (83 ರನ್, 49 ಎಸೆತ, 6 ಬೌಂಡರಿ, 6 ಸಿಕ್ಸರ್) ಹಾಗೂ ಪ್ರಿಯಾಂಶ್ ಆರ್ಯ (69 ರನ್, 35 ಎಸೆತ, 8 ಬೌಂಡರಿ, 4 ಸಿಕ್ಸರ್) ಶತಕದ ಜತೆಯಾಟ ನೆರವಿನಿಂದ 4 ವಿಕೆಟ್‌ಗೆ 201 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು.
ಇದನ್ನೂ ಓದಿ IPL 2025: ಆರೆಂಜ್, ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಆರ್‌ಸಿಬಿ ಆಟಗಾರರು
ಪ್ರತಿಯಾಗಿ ಚೇಸಿಂಗ್‌ನಲ್ಲಿ ಕೆಕೆಆರ್ ತಂಡ 1 ಓವರ್‌ಗೆ ವಿಕೆಟ್ ನಷ್ಟವಿಲ್ಲದೆ 7 ರನ್‌ಗಳಿಸಿದಾಗ ಮಳೆ ಆಡಚಣೆಯಿಂದ ಆಟ ನಿಲ್ಲಿಸಲಾಯಿತು. ಬಳಿಕ ಆಟ ಆರಂಭಿಸಲಾಗದೆ ಪಂದ್ಯವನ್ನು ರದ್ದುಗೊಳಿಸಲಾಯಿತು. ಈ ಮೂಲಕ 18ನೇ ಆವೃತ್ತಿಯಲ್ಲಿ ಫಲಿತಾಂಶವಿಲ್ಲದೇ ರದ್ದಗೊಂಡ ಮೊದಲ ಪಂದ್ಯ ಇದಾಯಿತು.
ಪಂಜಾಬ್ ಪರ ಆರಂಭಿಕ ಆಟಗಾರರಾದ ಪ್ರಿಯಾಂಶ್-ಪ್ರಭ್‌ಸಿಮ್ರನ್ (120) ಐಪಿಎಲ್‌ನಲ್ಲಿ ಕೆಕೆಆರ್ ವಿರುದ್ಧ ಗರಿಷ್ಠ ರನ್‌ಗಳ ಆರಂಭಿಕ ಜತೆಯಾಟದ ನೀಡಿದ ಪಂಜಾಬ್ ಜೋಡಿ ಎನಿಸಿತು. ಕೆಎಲ್ ರಾಹುಲ್-ಕ್ರಿಸ್ ಗೇಲ್ 116 ರನ್ ಸೇರಿಸಿದ್ದು ಹಿಂದಿನ ಗರಿಷ್ಠ ಎನಿಸಿತ್ತು.